ಮಾನವರ ಅಂತಿಮ ಗುರಿ ಮುಕ್ತಿ

ಅಹಂಕಾರ-ಮಮಕಾರ ತೊಲಗಬೇಕಾದರೆ ಗುರುವಿನ ಉಪದೇಶವೇ ಮುಖ್ಯ

Team Udayavani, Dec 18, 2019, 3:51 PM IST

18-Decemebr-11

ಕೆಂಭಾವಿ: ಜನ್ಮತಾಳಿದ ಪ್ರತಿಯೊಬ್ಬ ಮನುಷ್ಯನ ಜೀವನದ ಅಂತಿಮ ಗುರು ಮುಕ್ತಿಯಾಗಿದೆ. ಮುಕ್ತಿ ಪಡೆಯಲು ಶ್ರವಣ ಭಕ್ತಿ ಅತ್ಯಂತ ಶ್ರೇಷ್ಠ ಸಾಧನವಾಗಿದೆ ಎಂದು ಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ಮುದನೂರ ಕಂಠಿ ಹನುಮಾನ ದೇವರ 21ನೇ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಧರ್ಮಸಭೆ ಉದ್ಘಾಟಿಸಿ ಸ್ವಾಮೀಜಿ ಮಾತನಾಡಿದರು. ಮುಕ್ತಿ ಸಾಧನಗಳಲ್ಲಿ ಭಕ್ತಿ ಪ್ರಮುಖವಾಗಿದೆ. 9 ವಿಧಾನಗಳ ಭಕ್ತಿಯಲ್ಲಿ ಶ್ರವಣ ಭಕ್ತಿಯೇ ಶ್ರೇಷ್ಠವಾಗಿದೆ.

ಜನ್ಮ ತಾಳಿದ ಪ್ರತಿಯೊಬ್ಬ ಜೀವಿಗೆ 12ನೇ ದಿನಕ್ಕೆ ನಾಮಕರಣ ಸಂಸ್ಕಾರ ಮಾಡುತ್ತಾರೆ. ಅಂದು ಆ ಮಗುವಿಗೆ ಒಂದು ಅಂಕಿತನಾಮ ಕೊಡಲಾಗುತ್ತದೆ. ಪ್ರತಿಯೊಂದು ಮಗುವಿಗೆ ಅದೇ ನಾಮ ಬಳಸಲಾಗುತ್ತದೆ. ಆದ್ದರಿಂದ ಮಗು ಆ ನಾಮದ ಅಭಿಮಾನ ಮಾಡಿಕೊಳ್ಳುತ್ತ ಹೋಗುತ್ತದೆ. ತನ್ನ ಬಂಧು ಪರಿವಾರ ಸಂಬಂಧವನ್ನು ಕಿವಿಗಳ ಮೂಲಕ ಕೇಳುತ್ತ ಅವುಗಳ ಮೇಲೆ ನನ್ನದು ಎಂಬ ಅಭಿಮಾನ ಮಾಡುವುದು. ಅಹಂಕಾರ ಮಮಕಾರಗಳು ಜೀವಿಗಳ ಬಂಧನಕ್ಕೆ ಕಾರಣವಾಗುವವು. ಅನೇಕ ಜನ್ಮಗಳಿಂದ ಬಂದಿರುವ ಅನಾದಿ ಅಹಂಕಾರ ಮಮಕಾರಗಳು ತೊಲಗಬೇಕಾದರೆ ಗುರುವಿನ ಉಪದೇಶವೇ ಮುಖ್ಯವಾಗಿದೆ. ಸದ್ಗುರು ಉಪದೇಶದ ಮೂಲಕ ಮನುಷ್ಯನಲ್ಲಿ ಬಂದಿರುವ ನಾನು ಮತ್ತು ನನ್ನದು ಎಂಬ ತಪ್ಪು ತಿಳಿವಳಿಕೆ ದೂರ ಮಾಡುತ್ತಾರೆ. ಹೀಗೆ ಗುರುವಿನ ಉಪದೇಶದ ಮೂಲಕ ಶ್ರವಣವೇ ಮುಕ್ತಿ ಸಾಧನವಾಗಿದೆ ಎಂದು ಹೇಳಿದರು.

ಎಸ್‌. ಸಿ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗನಗೌಡ ಪಾಟೀಲ ಕಂಠಿ ಮಠದ ಮಹತ್ವದ ಕುರಿತು ವಿವರಿಸಿದರು. ಪೀಠಾಧಿಪತಿ ಸಿದ್ದಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಬ್ರಹ್ಮ ಮಠದ ಗಿರಿಧರ ಶಿವಾಚಾರ್ಯರು, ಕಾಂತೇಶ್ವರ ಮಠದ ಚನ್ನಬಸವ ಶಿವಾಚಾರ್ಯರು, ಯಡ್ರಾಮಿ ಹಿರೇಮಠದ ಗುರುಶಾಂತ ಮೂರ್ತಿ ಶಿವಾಚಾರ್ಯರು, ಭೀಮರಾಯ ಸಾಹು ಹೊಟ್ಟಿ, ಪ್ರಭುಗೌಡ ಹರನಾಳ, ಚನ್ನಪ್ಪಗೌಡ ಬೆಕಿನಾಳ, ಬಸವರಾಜ ಹೊಸಮನಿ, ಬಾಬುಗೌಡ ಪಾಟೀಲ, ಸಿದ್ಧಣ್ಣ ಹೊಟ್ಟಿ, ಜಿಪಂ ಮಾಜಿ ಸದಸ್ಯ ಎಚ್‌.ಸಿ. ಪಾಟೀಲ, ಸಿಪಿಐ ವೀರಭದ್ರಯ್ಯಸ್ವಾಮಿ ಕಾಚಾಪುರ, ಪಿಎಸ್‌ಐ ಸುದರ್ಶನರೆಡ್ಡಿ ಸೇರಿದಂತೆ ಸುತ್ತಮುತ್ತಲಿನ ಭಕ್ತರು ಇದ್ದರು.

ಶರಣುಕುಮಾರ ಯಾಳಗಿ, ಯಮನೇಶ ಯಾಳಗಿ ಹಾಗೂ ಈಶ್ವರ ಬಡಿಗೇರ ಅವರಿಂದ ಸಂಗೀತ ಸೇವೆ ನೆಡಯಿತು. ಮಡಿವಾಳಯ್ಯ ಶಾಸ್ತ್ರಿಗಳು ನಿರೂಪಿಸಿದರು. ಶಾಂತರೆಡ್ಡಿ ಚೌದ್ರಿ ಸ್ವಾಗತಿಸಿ, ವಂದಿಸಿದರು.

ಟಾಪ್ ನ್ಯೂಸ್

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.