ಕೊಡಚಾದ್ರಿ ಗಿರಿ ತಪ್ಪಲಿನಲ್ಲಿ ನೂತನ ಅತಿಥಿ ಗೃಹ ನಿರ್ಮಾಣ

Team Udayavani, May 12, 2019, 3:34 PM IST

ಹೊಸನಗರ: ತಾಲೂಕಿನ ಗೌರಿಕೆರೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಅತಿಥಿಗೃಹದ ನೋಟ.

ಹೊಸನಗರ: ಮಲೆನಾಡ ಸೊಬಗಿನ ಐಸಿರಿ ಎಂಬ ಖ್ಯಾತಿ ಹೊತ್ತ ಪಶ್ಚಿಮ ಘಟ್ಟದ ಶೃಂಗ ಶ್ರೇಣಿಯಾದ ಕೊಡಚಾದ್ರಿ ಬೆಟ್ಟಕ್ಕೆ ಬೇಟಿ ನೀಡುವ ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಅತಿಥಿಗೃಹವೊಂದು ತಲೆ ಎತ್ತಿ ನಿಂತಿದೆ. ಕೊಡಚಾದ್ರಿ ಬೆಟ್ಟದ ತಪ್ಪಲು ಪ್ರದೇಶದಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ನಿರ್ಮಾಣಗೊಂಡ ನೂತನ ಅತಿಥಿ ಗೃಹ ಸಮುಚ್ಚಯ ಗುರುವಾರ ಲೋಕಾರ್ಪಣೆಗೊಂಡಿದೆ.

ತಾಲೂಕಿನ ನಿಟ್ಟೂರು ಗ್ರಾಪಂ ವ್ಯಾಪ್ತಿಯ ಕೊಡಚಾದ್ರಿ ಬೆಟ್ಟದ ಹಿಂಬದಿಯ ತಪ್ಪಲು ಪ್ರದೇಶ ಗೌರಿಕೆರೆ ಎಂಬಲ್ಲಿ ಸುಮಾರು 5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಅತಿಥಿ ಗೃಹವನ್ನು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಉದ್ಘಾಟಿಸಿದ್ದು ಸಾರ್ವಜನಿಕರಿಗೆ ಮುಕ್ತಗೊಳಿಸಿದ್ದಾರೆ.

ಅತಿಥಿ ಗೃಹದಲ್ಲಿ ಪ್ರವಾಸಿಗರು ತಂಗಲು ವಸತಿ ಮತ್ತು ಊಟೋಪಚಾರದ ರೆಸ್ಟೋರೆಂಟ್ ವ್ಯವಸ್ಥೆ ಇರುತ್ತದೆ ಎನ್ನಲಾಗಿದೆ. ಕೊಡಚಾದ್ರಿ ಗಿರಿಗೆ ಬೇಟಿ ನೀಡಲಿರುವ ಪ್ರವಾಸಿಗರಿಗೆ ಸುಲಭ ಧರದಲ್ಲಿ ಅನುಕೂಲಕರ ವ್ಯವಸ್ಥೆ ಮಾಡಿಕೊಡುವುದು ಇಲಾಖೆಯ ಯೋಜನೆ ಆಗಿದೆ. ಅತಿಥಿ ಗೃಹ ಶುಕ್ರವಾರದಿಂದ ಸಾರ್ವಜನಿಕರಿಗೆ ಲಭ್ಯವಾಗಿದೆ.

ಉಲ್ಲಾಸಕರ ಪ್ರದೇಶದಲ್ಲಿ ಅತಿಥಿಗೃಹ
ನಿಸರ್ಗ ಸಿರಿಯ ರಮ್ಯತಾಣವಾದ ಕೊಡಚಾದ್ರಿ ಗಿರಿಯ ಸೊಬಗನ್ನು ಸವಿಯಲು ಬರುವ ಪರಿಸರ ಪ್ರೇಮಿ ಪ್ರವಾಸಿಗರಿಗೆ ಈ ಅತಿಥಿಗೃಹದಿಂದ ಬಹಳಷ್ಟು ಅನುಕೂಲವಾಗಲಿದೆ. ಇಲ್ಲಿ ಪರಿಸರ ಪ್ರೇಮಿಗಳ ಸುಗಮ ಪ್ರವಾಸಕ್ಕೆ ಅವಕಾಶವಿದೆ. ಅಲ್ಲದೆ ಅತಿಥಿ ಗೃಹ ನಿರ್ಮಾಣಗೊಂಡ ಪ್ರದೇಶವು ಕೊಡಚಾದ್ರಿ ತಪ್ಪಲು ಪ್ರದೇಶದಲ್ಲಿದೆ. ಇಲ್ಲಿಂದಲೇ ಗಿರಿಯನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಅತಿಥಿಗೃಹ ಸುತ್ತಲೂ ನೈಸರ್ಗಿಕ ರಮಣೀಯ ಉಲ್ಲಾಸಕರ ವಾತವರಣ ಇದೆ ಎನ್ನುತ್ತಾರೆ ಸ್ಥಳೀಯರಾದ ಉದಯ್‌ ನಿಟ್ಟೂರು.


ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ಸಮಸ್ಯೆಗೆ ಸೂಚಿಸಿದ ಪರಿಹಾರವೇ ಸಮಸ್ಯೆಯಾಗಿ ಪರಿಣಮಿಸಿದರೆ ಏನಾಗಬಹುದು? ಇದನ್ನು ತಿಳಿಯಲು ನೀವು ಒಮ್ಮೆ ಕೆ.ಆರ್‌.ಪುರದ ಟಿನ್‌ ಫ್ಯಾಕ್ಟರಿ ರಸ್ತೆಯಲ್ಲಿ...

  • ಬೆಂಗಳೂರು: ರೈತರ ಸಮಸ್ಯೆ, ನೆಲ, ಜಲಕ್ಕೆ ಸಂಬಂಧಿಸಿದ ಕನ್ನಡ ಪರ ಹೋರಾಟಗಳ ಸಂದರ್ಭದಲ್ಲಿ ಚಿತ್ರರಂಗ ಒಂದಾಗುತ್ತದೆ ಎಂದು ಚಿತ್ರನಟ ಶಿವರಾಜ್‌ಕುಮಾರ್‌ ಹೇಳಿದರು. ಕನ್ನಡ...

  • ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅಲೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದು, ರಾಜ್ಯದಲ್ಲೂ ಪಕ್ಷ ಇಟ್ಟುಕೊಂಡಿದ್ದ ಗುರಿ ತಲುಪಲು ಶ್ರಮಿಸಿದ...

  • ಬೆಂಗಳೂರು: ಚುನಾವಣೆ ಫ‌ಲಿತಾಂಶ ಹೊರ ಬಿದ್ದು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೆ ಅಧಿಕಾರ ಹಿಡಿದಿದೆ. ಈ ಸಂದರ್ಭದಲ್ಲಿ ದೇಶ, ರಾಜ್ಯ ಹಾಗೂ ನನ್ನ ಕ್ಷೇತ್ರದ...

  • ಬೆಂಗಳೂರು: ಬಿಬಿಎಂಪಿ ವತಿಯಿಂದ ನಗರದಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಮಳೆಗಾಲ ಆರಂಭವಾಗುವಷ್ಟರಲ್ಲಿ ಪೂರ್ಣಗೊಳಿಸುವಂತೆ ಮೇಯರ್‌ ಗಂಗಾಂಬಿಕೆ ಅಧಿಕಾರಿಗಳಿಗೆ...

ಹೊಸ ಸೇರ್ಪಡೆ