ಕೊಡಗಿನ 167 ಹಾಡಿಗಳ ಆದಿವಾಸಿಗಳಿಗೆ ಆಧಾರ್‌ ಭಾಗ್ಯ

Team Udayavani, Jul 17, 2019, 5:46 AM IST

ಮಡಿಕೇರಿ: ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಹಾಡಿಯ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಆಧಾರ್‌ ಗುರುತಿನ ಚೀಟಿ ಕಡ್ಡಾಯವಾಗಿ ಅಗತ್ಯವಿರುವ ಹಿನ್ನೆಲೆ ಪ್ರತಿಯೊಬ್ಬ ಗಿರಿಜನ ಕುಟುಂಬದವರಿಗೆ ಆಧಾರ್‌ ಗುರುತಿನ ಚೀಟಿ ನೋಂದಾಯಿಸಲು 15 ದಿನಗಳ ಕಾಲ ಮೊಬೈಲ್‌ ಸಂಚಾರಿ ವಾಹನದ ಮೂಲಕ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಹಾಡಿಗಳಿಗೆ ತೆರಳಿ ಆಧಾರ್‌ ನೋಂದಣಿ ಮಾಡುವ ಪ್ರಕ್ರಿಯೆಗೆ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರು ಸೋಮವಾರ ಚಾಲನೆ ನೀಡಿದರು.

ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಆಧಾರ್‌ ನೋಂದಣಿ ಅಭಿಯಾನಕ್ಕೆ ಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಪ್ರಥಮ ಬಾರಿಗೆ ಹಾಡಿಗಳಿಗೆ ತೆರಳಿ ಆಧಾರ್‌ ನೋಂದಣಿ ಮಾಡಲಾಗುತ್ತಿದೆ. ಜಿಲ್ಲೆಯ ಮೂರು ತಾಲ್ಲೂಕಿನ ಸುಮಾರು 167 ಹಾಡಿಗಳಿಗೆ ಆಧಾರ್‌ ಕಿಟ್ಟುಗಳನ್ನು ತೆಗೆದುಕೊಂಡು ಹೋಗಿ ನೋಂದಣಿ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು. ದಿನಕ್ಕೆ 60 ಜನರಿಗೆ ಆಧಾರ್‌ ನೋಂದಣಿ ಮಾಡುವ ಗುರಿ ಇದೆ. ಗಿರಿಜನರು ಆಧಾರ್‌ ನೋಂದಣಿ ಮಾಡಿಸಿ ಸೌಲಭ್ಯ ಪಡೆಯಲು ಮುಂದಾಗಬೇಕಿದೆ ಎಂದರು.

ಜಿಲ್ಲೆಯಲ್ಲಿ 15 ದಿನಗಳ ಕಾಲ ತಾಲ್ಲೂಕಿಗೆ ಒಂದರಂತೆ ಮೂರು ಸಂಚಾರಿ ವಾಹನಗಳನ್ನು ನಿಯೋಜಿಸಲಾಗಿದ್ದು, ಸಂಚಾರಿ ವಾಹನದಲ್ಲಿ ಆಧಾರ್‌ ಕಿಟ್‌ ಒಳಗೊಂಡ ಸಲಕರಣೆಗಳು ಇರಲಿದ್ದು, ಆಫ್ಲೈನ್‌ ಮೂಲಕ ಆಧಾರ್‌ ನೋಂದಣಿ ಮಾಡಲಾಗುತ್ತದೆ ಎಂದು ಆಧಾರ್‌ ನೋಂದಣಿ ವಿಭಾಗದ ಪ್ರಶಾಂತ್‌ ಹಾಗೂ ರಾಕೇಶ್‌ ಮಾಹಿತಿ ನೀಡಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್‌, ಐಟಿಡಿಪಿ ಅಧಿಕಾರಿ ಚಂದ್ರಶೇಖರ್‌, ಸಮಾಜ ಕಲ್ಯಾಣಾಧಿ ಕಾರಿಗಳಾದ ಚಿಕ್ಕಬಸವಯ್ಯ, ಶೇಖರ್‌, ದೇವರಾಜು ಇತರರು ಉಪಸ್ಥಿತರಿದ್ದರು.

ಆಧಾರ್‌ ಕಡ್ಡಾಯ
ವಸತಿ ಸೇರಿದಂತೆ ವೈಯಕ್ತಿಕ ಸೌಲಭ್ಯ ಪಡೆಯುವಂತಾಗಲು ಆಧಾರ್‌ ಕಡ್ಡಾಯವಾಗಿದ್ದು, ಕೆಲವು ಕುಟುಂಬದವರು ಇನ್ನೂ ಆಧಾರ್‌ ನೋಂದಣಿ ಮಾಡಿಸದೆ ಸರ್ಕಾರದ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಇದನ್ನು ಮನಗಂಡು ಹಾಡಿಗಳಿಗೆ ತೆರಳಿ ಆಧಾರ್‌ ನೋಂದಣಿ ಮಾಡಿಸಲು ಮುಂದಾಗಲಾಗಿದೆ ಎಂದು ಐಟಿಡಿಪಿ ಇಲಾಖೆ ಅಧಿಕಾರಿ ಸಿ.ಶಿವಕುಮಾರ್‌ ಅವರು ತಿಳಿಸಿದರು. ಜಿಲ್ಲೆಯಲ್ಲಿ ಸುಮಾರು 65 ಸಾವಿರ ಆದಿವಾಸಿ ಜನರಿದ್ದು, ಇವರಿಗೆ ಸರ್ಕಾರದ ವೈಯಕ್ತಿಕ ಸೌಲಭ್ಯಗಳು ಮರೀಚಿಕೆ ಯಾಗಿದೆ ಆದರೆ ಬಳಸಿಕೊಳ್ಳಲು ಮುಂದೆ ಬಂದರೂ ಆಧಾರ್‌ ಚೀಟಿ ಇಲ್ಲದಿರುವುದರಿಂದ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಹಾವೇರಿ: ಇತ್ತೀಚೆಗೆ ಜಿಲ್ಲೆಯಲ್ಲಿ ಸೃಷ್ಟಿಯಾದ ನೆರೆ ಹಾಗೂ ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಅಂದಾಜು ಒಂದು ನೂರು ಕೋಟಿ ರೂ.ಗಳಷ್ಟು ಬೆಳೆ ಹಾನಿಯಾಗಿದೆ. ಕೃಷಿ...

  • ಬಸವನಬಾಗೇವಾಡಿ: ಒಂದು ಕಾಲದಲ್ಲಿ ಶಿಕ್ಷಣದಿಂದ ಕೆಲವರು ವಂಚಿತರಾಗಿದ್ದರು. ಆದರೆ ಇಂದು ಪ್ರತಿಯೊಬ್ಬರಿಗೂ ಶಿಕ್ಷಣ ದೊರಕುವಂತ ಕೆಲಸವಾಗುತ್ತಿದ್ದು ಇದರ ಜೊತೆಯಲ್ಲೇ...

  • ಗದಗ: ನಿರುದ್ಯೋಗ ಸಮಸ್ಯೆ ಎಂಬುದು ವಿಶ್ವಕ್ಕೆ ಕಾಡುತ್ತಿರುವ ಬಹು ದೊಡ್ಡ ಸಮಸ್ಯೆಯಾಗಿದೆ. ಆದರೆ, ಕೈಗಾರಿಕೆ ಮತ್ತು ಉತ್ಪಾದನಾ ವಲಯ ಹೆಚ್ಚುವುದರಿಂದ ಪ್ರತಿಯೊಬ್ಬರಿಗೂ...

  • ಗಜೇಂದ್ರಗಡ: ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ಹಾಗೂ ಮಾಹಿತಿ ನೀಡುವ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆಯು ಸ್ಟೂಡೆಂಟ್ ಪೊಲೀಸ್‌ ಕೆಡೆಟ್ ಕಾರ್ಯಕ್ರಮ ಹಮ್ಮಿಕೊಂಡಿದೆ....

  • ಗದಗ: ಮಲಪ್ರಭೆ ನದಿಯಿಂದ ಕೂಗಳತೆ ದೂರದಲ್ಲಿರುವ ವಾಸನ ಹಾಗೂ ಲಖಮಾಪುರ ಗ್ರಾಮಗಳಿಗೆ ಮಳೆಗಾಲದಲ್ಲಿ ಸದಾ ಪ್ರವಾಹ ಭೀತಿ ಕಾಡುತ್ತಿರುತ್ತದೆ. ಈ ಬಾರಿ ಉಂಟಾಗಿರುವ...