ಶಿಕ್ಷಣದ ಮೂಲಕ ಉನ್ನತ ಹುದ್ದೆಗೇರಲು ಯುವ ಸಮೂಹಕ್ಕೆ ಸಲಹೆ

ಇಗ್ಗುತಪ್ಪ ಕೊಡವಕೇರಿಯಿಂದ ಕೈಲ್‌ ಮುಹೂರ್ತ

Team Udayavani, Sep 12, 2019, 5:48 AM IST

ಮಡಿಕೇರಿ: ಕೊಡವ ಸಮುದಾಯದ ಯುವ ಸಮೂಹ ಉನ್ನತ ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಎತ್ತರದ ಹುದ್ದೆಗಳನ್ನು ಅಲಂಕರಿಸಲು ಮುಂದಾಗಬೇಕು ಎಂದು ಲೀಡ್‌ ಬ್ಯಾಂಕ್‌ ನಿವೃತ್ತ ವ್ಯವಸ್ಥಾಪಕ ಕೆ.ಎ.ದೇವಯ್ಯ ಸಲಹೆ ನೀಡಿದ್ದಾರೆ.

ನಗರದ ಕೊಡವ ಸಮಾಜದಲಿ ಇಗ್ಗುತಪ್ಪ ಕೊಡವ ಕೇರಿ ವತಿಯಿಂದ ನಡೆದ ಕೈಲ್‌ ಮುಹೂರ್ತ ಹಬ್ಬ ಹಾಗೂ ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸರಕಾರದ ಉನ್ನತ ಹುದ್ದೆ ಹಾಗೂ ಬ್ಯಾಂಕ್‌ಗಳಲ್ಲಿ ಕಾರ್ಯನಿರ್ವಹಿಸಲು ಕೊಡವ ಯುವ ಪೀಳಿಗೆ ಹಿಂದೇಟು ಹಾಕುತ್ತಿದೆ. ಐಪಿಎಸ್‌, ಐಎಎಸ್‌, ಕೆಎಎಸ್‌ ಹಾಗೂ ಬ್ಯಾಂಕ್‌ ಪರೀಕ್ಷೆಗಳನ್ನು ಎದುರಿಸುವಲ್ಲಿ ಕೊಡವರು ಹಿಂದುಳಿದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಸ್ವಯಂ ಉದ್ಯೋಗಕ್ಕೂ ಉತ್ತಮ ಅವಕಾಶಗಳಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ದೇವಯ್ಯ ಕಿವಿಮಾತು ಹೇಳಿದರು.

ಕೊಡಗು ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಕೃಷಿಯೊಂದಿಗೆ ಸ್ವಯಂ ಉದ್ಯೋಗವನ್ನು ಅಳವಡಿಸಿಕೊಂಡರೆ ಆರ್ಥಿಕವಾಗಿ ಪ್ರಗತಿ ಸಾಧಿಸಬಹುದು. ಯುವ ಸಮೂಹದ ಅಭ್ಯುದಯಕ್ಕಾಗಿಯೇ ಬ್ಯಾಂಕ್‌ಗಳು ಸಾಲದ ಯೋಜನೆಗಳ ಮೂಲಕ ಪೋ›ತ್ಸಾಹ ನೀಡುತ್ತಿದೆ. ಬ್ಯಾಂಕ್‌ ನೀಡುವ ಸಾಲ ಸೌಲಭ್ಯಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸಬಲರಾಗುವಂತೆ ತಿಳಿಸಿದರು.ಸಂಘಟನೆಯ ಜೊತೆ ಜೊತೆಯಲ್ಲೇ ಕೊಡವ ಭಾಷೆ, ಸಂಸ್ಕೃತಿ, ಆಚಾರ-ವಿಚಾರವನ್ನು ಉಳಿಸಿ ಬೆಳೆಸುವ ಕಾರ್ಯ ಆಗಬೇಕಿದೆ ಎಂದು ದೇವಯ್ಯ ಕರೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ಕೊಡಗಿನಲ್ಲಿ ಕೊಡವರ ಸಂಖ್ಯೆ ಕ್ಷೀಣಿಸುತ್ತಿದೆ. ಹೊರ ಜಿಲ್ಲೆ, ರಾಜ್ಯ ಅಥವಾ ವಿದೇಶಗಳಲ್ಲಿ ಕೊಡವರು ಹೆಚ್ಚು ನೆಲಸುತ್ತಿದ್ದಾರೆ. ಇವರಲ್ಲಿಯೂ ಕೊಡಗಿನ ಸಂಸ್ಕೃತಿ ಉಳಿಯಬೇಕಾಗಿದ್ದು, ಸಂಘ ಸಂಸ್ಥೆಗಳು ನೆರವಾಗಬೇಕು ಎಂದರು.

ಕೊಡವ ಕೇರಿ ಅಧ್ಯಕ್ಷೆ ಕಾವೇರಿ ಪೂಣಚ್ಚ ಮಾತನಾಡಿ, ಕೊಡವರ ಕೇರಿಯೆಂದರೆ ಒಂದು ಸಂಸಾರವಿದ್ದಂತೆ. ಕೇರಿ ವ್ಯಾಪ್ತಿಯಲ್ಲಿ ಏನೇ ಕಷ್ಟ ನಷ್ಟಗಳು ಸಂಭವಿಸಿದರೆ ಎಲ್ಲರೂ ಸ್ಪಂದಿಸುವಂತಾಗಬೇಕು ಎಂದರು.

ಸಮುದಾಯ ಬಾಂಧವರು ಸದಸ್ಯತ್ವವನ್ನು ಪಡೆದುಕೊಂಡು ಸಂಘದ ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತಿರುವುದು ಉತ್ತಮ ಬೆಳವಣಿಗೆ. ಮುಂದೆ ಸಂಘದ ವತಿಯಿಂದ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡು ಸಂಘಟನೆಯನ್ನು ಬಲಗೊಳಿಸುವಂತೆ ಕರೆ ನೀಡಿದರು.

ಕೇರಿಯ ಖಜಾಂಚಿ ಪಿ.ಹರೀಶ್‌ ಮುತ್ತಪ್ಪ ಲೆಕ್ಕ ಪತ್ರ ಮಂಡಿಸಿದರು. ಕಾರ್ಯದರ್ಶಿ ಬೊಳ್ಳಚಂಡ ಲೀಲಾ ಸುಬ್ಬಯ್ಯ ಅವರು ವಾರ್ಷಿಕ ವರದಿ ಓದಿದರು.

10ನೇ ತರಗತಿ ಸಿಬಿಎಸ್‌ಸಿ ಪರೀಕ್ಷೆಯಲ್ಲಿ ಶೇ. 95 ರಷ್ಟು ಅಂಕಗಳಿಸಿದ ಬಿದೀಶ್‌ ಹಾಗೂ ಅಸಾಧಾರಣ ಪ್ರತಿಭೆಗಾಗಿ ವಿದ್ಯಾರ್ಥಿ ಕಾರ್ತಿಕ್‌ ಕುಟ್ಟಪ್ಪ ಅವರನ್ನು ಸಮ್ಮಾನಿಸಲಾಯಿತು .

ವಿವಿಧ ಸ್ಪರ್ಧೆ
ಸಭಾ ಕಾರ್ಯಕ್ರಮಕ್ಕೂ ಮೊದಲು ಕೈಲ್‌ ಮುಹೂರ್ತ ಹಬ್ಬದ ಪ್ರಯುಕ್ತ ಬೆಳಗ್ಗೆಯಿಂದಲೇ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ತೆಂಗಿನಕಾಯಿಗೆ ಕಲ್ಲು ಹೊಡೆಯುವುದು, ಓಟ, ನಿಂಬೆ ಚಮಚದ ಓಟ, ಮಕ್ಕಳಿಗೆ ಕಾಳು ಹೆಕ್ಕುವ ಸ್ಪರ್ಧೆ, ಮ್ಯೂಸಿಕಲ್‌ ಚೇರ್‌ ಮತ್ತಿತರ ಸ್ಪರ್ಧೆಗಳಲ್ಲಿ ಸಮುದಾಯ ಬಾಂಧವರು ಉತ್ಸಾಹದಿಂದ ಪಾಲ್ಗೊಂಡರು. ವೇದಿಕೆಯಲ್ಲಿ ಇಗ್ಗುತಪ್ಪ ಕೊಡವ ಕೇರಿ ಪದಾಧಿಕಾರಿಗಳಾದ ನಂಜಪ್ಪ, ಕುಮಾರ್‌, ಬಿ. ಪ್ರಕಾಶ್‌ ಹಾಜರಿದ್ದರು. ಕೊಡವರ ಆಹಾರ ಪದ್ಧತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ಮೇಳದ ಸಂದರ್ಭ ವಿಶಿಷ್ಟ ಖಾದ್ಯಗಳ ಆಹಾರ ಪ್ರದರ್ಶನವನ್ನು ಆಯೋಜಿಸಲಾಗಿತ್ತು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಪ್ರಿಸ್ಕೂಲ್‌ ನಡೆಸುವ ಗೆಳತಿ, ಎರಡು ದಿನ ರಜೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಆಗದೆ ಒದ್ದಾಡ್ತೀರ. ನಾವು ವಾರಪೂರ್ತಿ ಅವರನ್ನು ನೋಡಿಕೊಳ್ತೀವಲ್ಲ, ನಮ್ಮ...

  • ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸಿರುವ ಭಾರೀ ದಂಡ ಪ್ರಮಾಣವನ್ನು ತಗ್ಗಿಸಲು ರಾಜ್ಯ ಸರಕಾರ ಮುಂದಾಗಿದ್ದರೂ ಕಾಯ್ದೆಯಲ್ಲಿ ನಾಲ್ಕೆ „ದು ಪ್ರಕರಣಗಳನ್ನು...

  • ಹೊಸದಿಲ್ಲಿ: ಕರ್ನಾಟಕದ 17 ಅನರ್ಹ ಶಾಸಕರ ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆಯಾಗಿದೆ. ಸುಪ್ರೀಂ ಕೋರ್ಟ್‌ನ ನ್ಯಾಯಪೀಠದಲ್ಲಿದ್ದ, ಕರ್ನಾಟಕ ಮೂಲದ ನ್ಯಾ| ಮೋಹನ ಎಂ....

  • ಚಾಂಗ್‌ಝು (ಚೀನ): ಭಾರತದ ಮಿಕ್ಸೆಡ್‌ ಡಬಲ್ಸ್‌ ತಾರೆಯರಾದ ಸಾತ್ವಿಕ್‌ಸಾಯಿರಾಜ್‌ ರಾಂಕಿರೆಡ್ಡಿ ಮತ್ತು ಅಶ್ವಿ‌ನಿ ಪೊನ್ನಪ್ಪ ಅವರು ಚೀನ ಓಪನ್‌ ಬ್ಯಾಡ್ಮಿಂಟನ್‌...

  • ನವದೆಹಲಿ: ಏರ್‌ಸೆಲ್‌- ಮ್ಯಾಕ್ಸಿಸ್‌ ಡೀಲ್‌ಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳು ಹಾಗೂ 2ಜಿ ತರಂಗಾಂತರ ಹಂಚಿಕೆಗೆ ಸಂಬಂಧಿಸಿದ ಎಲ್ಲ ಕೇಸುಗಳನ್ನೂ ನ್ಯಾಯಾಧೀಶ...