ಆಲೂರುಸಿದ್ದಾಪುರ ಬಂಡಿಯಮ್ಮ ದೇವರ ವಾರ್ಷಿಕ ಉತ್ಸವ ಸಂಪನ್ನ

Team Udayavani, May 13, 2019, 6:23 AM IST

ಶನಿವಾರಸಂತೆ: ಸಮೀಪದ ಆಲೂರುಸಿದ್ದಾಪುರ ಗ್ರಾ.ಪಂ.ಗೆ ಸೇರಿದ ಸಿದ್ದಾಪುರ ಗ್ರಾಮದಲ್ಲಿರುವ ಶ್ರೀ ಬಂಡಿಯಮ್ಮ ದೇವರ ವಾರ್ಷಿಕ ಪೂಜಾಮಹೋತ್ಸವ ಸಂಪನ್ನಗೊಂಡಿತು. ಶುಕ್ರವಾರ ರಾತ್ರಿ 7-30 ಗಂಟೆಯಿಂದ ಪ್ರಾರಂಭಗೊಂಡ ಶ್ರೀ ಬಂಡಿಯಮ್ಮ ದೇವರ ಪೂಜಾಮಹೋತ್ಸವವು ಶನಿವಾರ ಬೆಳಗ್ಗೆ 6 ಗಂಟೆಗೆ ವರೆಗೆ ನೆರವೇರಿತು.

ಹಿನ್ನೆ°ಲೆ:ಗ್ರಾಮದಲ್ಲಿ ನೂತನವಾಗಿ ವಿವಾಹವಾಗಿರುವ ದಂಪತಿಗಳನ್ನು ಬಣ್ಣಬಣ್ಣದ ಹೂವುಗಳಿಂದ ಶೃಂಗರಿಸಿ ಬಾಳೆಕಂದು, ಮಾವಿನ ಎಲೆಗಳಿಂದ ಅಲಂಕಾರಗೊಳಿಸಿದ ಎತ್ತಿನ ಬಂಡಿಯಲ್ಲಿ ಕುಳ್ಳಿರಿಸುತ್ತಾರೆ ಎತ್ತಿನ ಬಂಡಿಯಲ್ಲಿರುವ ನವ ದಂಪತಿಗಳನ್ನು ಗ್ರಾಮಸ್ಥರು ಸೇರಿಕೊಂಡು ಶ್ರೀಬಂಡಿಯಮ್ಮ ದೇವರ ಸನ್ನಿಧಿಯವರೆಗೆ ಎಳೆಯುತ್ತಾರೆ, ಅನಂತರ ನವ ದಂಪತಿಗಳು ತಮ್ಮ ಮನೆಯಿಂದ ಪ್ರಸಾದರೂಪದಲ್ಲಿ ತಯಾರು ಮಾಡಿದ ಕಿಚಡಿ, ಪಾಯಸ, ಕೊತ್ತಂಬರಿ ಚಟ್ನಿಯನ್ನು ಬಂಡಿಯಮ್ಮ ದೇವರಿಗೆ ನೈವೇದ‌Âವಾಗಿ ಸಲ್ಲಿಸುತ್ತಾರೆ ಈ ವಿಶೇಷ ಸಂಪ್ರದಾಯದ ಹಿನ್ನೆಲೆಯಲ್ಲಿ ಇದನ್ನು ಶ್ರೀಬಂಡಿಯಮ್ಮ ಉತ್ಸವ ಎಂದು ಕರೆಯುತ್ತಾರೆ.

ಬೆಳಗ್ಗೆನ ಜಾವ 4 ಗಂಟೆಗೆ ನವ ದಂಪತಿಗಳ ಬಂಡಿ ಎಳೆಯುವ ಕಾರ್ಯ ಕ್ರಮ ನಡೆಯುತ್ತಿರುವುದು ಹಲವಾರು ವರ್ಷಗಳಿಂದ ನಡೆದುಕೊಂಡು ಬರುತ್ತಿ ರುವ ಈ ಗ್ರಾಮದ ವಾಡಿಕೆಯಾಗಿದೆ.

ಬಂಡಿಯಮ್ಮ ದೇವರ ವಾರ್ಷಿಕ ಪೂಜಾ ಮಹೋತ್ಸವದ ಅಂಗವಾಗಿ ದೇವರಿಗೆ ವಿಶೇಷ ಪೂಜಾ ವಿಧಿ ವಿಧಾನ ನೆರವೇರಿಸಲಾಯಿತು. ಶನಿವಾರ ಬೆಳಗ್ಗೆ 6 ಗಂಟೆಗೆ ಮಹಾ ಮಂಗಳಾರತಿಯೊಂದಿಗೆ ಪೂಜಾ ಮಹೋತ್ಸವ ಕೊನೆಗೊಂಡಿತು. ಶುಕ್ರವಾರ ರಾತ್ರಿ ದೇವಾಲಯ ಸಮಿತಿ ಯಿಂದ ಭಕ್ತರಿಗೆೆ ಅನ್ನದಾನವನ್ನು ಏರ್ಪಡಿಸಲಾಗಿತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ