ಕಾರುಗಳು ಢಿಕ್ಕಿ: ಇಬ್ಬರ ಸಾವು

Team Udayavani, Jun 14, 2019, 9:49 AM IST

ಮಡಿಕೇರಿ: ಎರಡು ಕಾರುಗಳು ಮುಖಾಮುಖೀ ಢಿಕ್ಕಿ ಹೊಡೆದು ಒಂದೇ ಕುಟುಂಬದ ಇಬ್ಬರು ಮೃತಪಟ್ಟ ಘಟನೆ ಮಡಿಕೇರಿ – ಮೈಸೂರು ರಾ.ಹೆದ್ದಾರಿಯ ಆನೆಕಾಡು ಬಳಿ ಸಂಭವಿಸಿದೆ.

ಪಿರಿಯಾಪಟ್ಟಣ ತಾಲೂಕಿನ ಮೆಲ್ಲಳ್ಳಿಯ ಸತೀಶ್‌ (42) ಮತ್ತು ಸಹೋದರಿ ಜ್ಯೋತಿ (36) ಮೃತರು. ಆಲ್ಟೋ ಕಾರಿನಲ್ಲಿ ಮಡಿಕೇರಿ ಕಡೆಗೆ ಬರುತ್ತಿದ್ದಾಗ ಐ-20 ಕಾರು ಢಿಕ್ಕಿ ಹೊಡೆದಿದೆ. ಪರಿಣಾಮ ಅಲ್ಟೋ ಕಾರು ರಸ್ತೆಯಿಂದ ಕಾಡಿಗೆ ಎಸೆಯಲ್ಪಟ್ಟು ಸತೀಶ್‌ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ತೀವ್ರ ಗಾಯಗೊಂಡಿದ್ದ ಜ್ಯೋತಿ ಅವರು ಕುಶಾಲನಗರ ಆಸ್ಪತ್ರೆ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಡಿಕೇರಿ ಕಡೆಯಿಂದ ತೆರಳುತ್ತಿದ್ದ ಕಾರಿನಲ್ಲಿದ್ದ ಬೆಂಗಳೂರಿನ ಓರ್ವ ಪುರುಷ ಹಾಗೂ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದೆ.

ಮೃತ ಸತೀಶ್‌ ಮತ್ತು ಜ್ಯೋತಿ ಅವರು ಮೆಲ್ಲೇನಹಳ್ಳಿಯ ಶಿವಲಿಂಗೇಗೌಡ ಅವರ ಮಕ್ಕಳು. ಸತೀಶ್‌ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಜ್ಯೋತಿಗೆ ಓರ್ವ ಪುತ್ರಿಯಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ