ಗೋಪಾಲಪುರ ಸಂತ ಅಂಥೋಣಿ ಚರ್ಚ್‌ ಫಾದರ್‌ ವರ್ಗಾವಣೆ

Team Udayavani, Jun 10, 2019, 6:09 AM IST

ಶನಿವಾರಸಂತೆ: ಸಮಿಪದ ಗೋಪಾಲಪುರ ಸಂತ ಅಂಥೋಣಿ ಅವರ ಚರ್ಚಿನಲ್ಲಿ ಕಳೆದ ಮೂರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಫಾ| ಡೇವಿಡ್‌ ಸಗಾಯಿ ರಾಜ್‌ ಅವರು ಪೊನ್ನಂಪೇಟೆ ಧರ್ಮಕ್ಷೇತ್ರಕ್ಕೆ ವರ್ಗಾವಣೆಗೊಂಡಿದ್ದಾರೆ, ಮೈಸೂರು ಪ್ರಾಂತದ ಧರ್ಮಾಧ್ಯಕ್ಷರ ಆದೇಶದಂತೆ ಅವರನ್ನು ವರ್ಗಾವಣೆ ಮಾಡಲಾಗಿದ್ದ ಹಿನ್ನಲೆಯಲ್ಲಿ ಫಾ| ಡೇವಿಡ್‌ ಸಗಾಯಿ ಅವರಿಗೆ ಚರ್ಚಿನಲ್ಲಿ ಬೀಳ್ಕೊಡೊಗೆ ಮತ್ತು ಸಮ್ಮಾನ ಸಮಾರಂಭವನ್ನು ಏರ್ಪಡಿಸಲಾಗಿತು.

ಈ ಸಂದರ್ಭದಲ್ಲಿ ಮಡಿಕೇರಿ ಸಂತ ಮೈಕಲ್‌ ಚರ್ಚಿನ ಫಾ||ಜಾನ್‌ ಮೆಂಡೋನ್ಸಾ ಮಾತನಾಡಿ, ಮಾನವರು ಪ್ರಕೃತಿ ನಿಯಮವನ್ನು ಪಾಲಿಸಿಕೊಂಡು ಧರ್ಮ ಪರಿಪಾಲನೆಯನ್ನು ಮಾಡುವ ಮೂಲಕ ದೇವರ ದರ್ಶನ ಮಾಡು ವಂತಾಗಬೇಕೆಂದರು. ಪ್ರತಿಯೊಬ್ಬರು ಕ್ಷಣಿಕ ಸುಖಕ್ಕಾಗಿ ಹಣದ ಹಿಂದೆ ಹೋಗದೆ ದೇವರ ಮತ್ತು ಆಧ್ಯಾತ್ಮಿಕತೆಯ ಮೋರೆ ಹೋಗಬೇಕು, ಆಧ್ಯಾತ್ಮಿಕ ಜ್ಞಾನವನ್ನು ಪಡೆದು ಸಮಾಜದಲ್ಲಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಾಗ ಮಾತ್ರ ಜೀವನ ಸಾರ್ಥಕವಾಗಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ವಿವಿಧ, ಪೂಜಕಾರ್ಯ, ದೇವರನಾಮ ಸ್ತುತಿ, ಗೀತಗಾಯನ ಮುಂತಾದ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಸದರಿ ಚರ್ಚಿಗೆ ನೂತನವಾಗಿ ಆಗಮಿಸಿದ ಫಾ||ಜೇಕಬ್‌ ಕೊಲನ್ನೂರ್‌ ಅವರಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಫಾ|| ಸುಪ್ರಿತ್‌ ಮಿನೇಜಸ್‌ ಪ್ರಮುಖರಾದ ರೋಜಿ ಜಾಕೋಲ, ಎಂಡ್ರಿ ಪೆರೇರ, ಇಮ್ಯುನೆಲ್‌ ಪಿಂಟೋ, ವಿನ್ಸಂಟ್‌ಲೊàಬೋ, ಜೇರಾಲ್ಟ್, ರೋಡ್ರಿಗಸ್‌, ಲಾರೆನ್ಸ್‌ ಮಿನೇಜಸ್‌, ಜಾರ್ಜ್‌, ಎಲಿಜಬೆತ್‌, ಕ್ಲೀಟಸ್‌ ಮುಂತಾದವರಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ