ಸಹಪಾಠಿ ತಂದೆಗೆ ಅನಾರೋಗ್ಯ ವಿದ್ಯಾರ್ಥಿಗಳಿಂದ ನಿಧಿ ಸಂಗ್ರಹ

Team Udayavani, Jul 18, 2019, 5:45 AM IST

ಶನಿವಾರಸಂತೆ: ಸೋಮವಾರಪೇಟೆ ತಾಲೂಕಿನ ಮಾದಪುರ ಗ್ರಾಮದ ನಿವಾಸಿ ಹರೀಶ್‌ ಎಂಬುವರು ಇತ್ತೀಚಿಗೆ ಹಾಸನಕ್ಕೆ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆಯಲ್ಲಿ ಸಕಲೇಶಪುರದ ಆನೆಮಾಲು ಗ್ರಾಮದ ಬಳಿ ಎದುರಿಗೆ ಬರುತ್ತಿದ್ದ ಬಸ್ಸೊಂದಕ್ಕೆ ಢಿಕ್ಕಿ ಸಂಭವಿಸಿದ ಪರಿಣಾಮ ಹರೀಶ್‌ ತೀವ್ರವಾಗಿ ಗಾಯಗೊಂಡು ಹಾಸನದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳು ಹರೀಶ್‌ ಚಿಕಿತ್ಸೆಗಾಗಿ 6 ಲಕ್ಷ ರೂ ವೆಚ್ಚವಾಗುವುದ್ದರಿಂದ ಬಡ ಕುಟುಂಬದ ಹರೀಶ್‌ ಕುಟುಂಬ ಚಿಕಿತ್ಸೆಗಾಗಿ ಸಾರ್ವಜನಿಕರಿಂದ ಧನ ಸಹಾಯ ಕೋರಿತು. ಹರೀಶ್‌ ಚಿಕಿತ್ಸೆಗಾಗಿ ಇನ್ನು 3 ಲಕ್ಷ ರು ಬೇಕಾಗುವ ಹಿನ್ನೆಲೆಯಲ್ಲಿ ಮಾದಪುರ ಪದವಿ ಪೂರ್ವ ಕಾಲೇಜ್‌ವೊಂದರಲ್ಲಿ ಪ್ರಥಮ ವರ್ಷದ ಪಿಯುಸಿ ವಿದ್ಯಾರ್ಥಿನಿಯಾಗಿರುವ ಹರೀಶ್‌ ಪುತ್ರಿ ಲೇಖನ ತನ್ನ ಸಹಪಾಠಿಗಳೊಂದಿಗೆ ಕಾಲೇಜಿನ ಆಡಳಿತ ಮಂಡಳಿ ಅನುಮತಿ ಪಡೆದುಕೊಂಡು ಸೋಮವಾರಪೇಟೆ ತಾಲೂಕಿನ ಕೆಲವು ಹೋಬಳಿ ಕೇಂದ್ರಗಳಿಗೆ ತೆರಳಿ ಸಾರ್ವಜನಿಕರಿಂದ ತಂದೆಯ ಚಿಕಿತ್ಸೆಗಾಗಿ ಧನ ಸಂಗ್ರಹ ಮಾಡುತ್ತಿದ್ದಾರೆ.

ಹರೀಶ್‌ ಪುತ್ರಿ ಲೇಖನ ಮತ್ತು ಸಹಪಾಠಿಗಳು ತಾಲೂಕಿನ ಶುಂಠಿ ಕೊಪ್ಪ, ಕುಶಾಲನಗರ, ಸೋಮ ವಾರಪೇಟೆ, ಕೊಡ್ಲಿಪೇಟೆ ಮತ್ತು ಶನಿವಾರಸಂತೆ ಪಟ್ಟಣಗಳಿಗೆ ತೆರಳಿ ನಿಧಿ ಸಂಗ್ರಹಿಸಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ