ರೆಸಾರ್ಟ್‌ನಿಂದ ಸಿಎಂ ನಿರ್ಗಮನ

Team Udayavani, May 13, 2019, 6:10 AM IST

ಮಡಿಕೇರಿ: ಇಲ್ಲಿನ ರೆಸಾರ್ಟ್‌ನಲ್ಲಿ ಎರಡು ದಿನ ತಂಗಿದ್ದ ಸಿಎಂ ಕುಮಾರಸ್ವಾಮಿ ಅವರು ರವಿವಾರ ಮಡಿಕೇರಿಯಿಂದ ನಿರ್ಗಮಿಸಿದ್ದಾರೆ.
ಪುತ್ರ ನಿಖೀಲ್‌ ಪ್ರಯಾಣಿಸಿದ ಕೆಲವು ತಾಸುಗಳ ಅನಂತರ ಸಿಎಂ ಮತ್ತು ಪತ್ನಿ ಅನಿತಾ ಕುಮಾರಸ್ವಾಮಿ ಮಂಡ್ಯ ಕಡೆಗೆ ಪ್ರಯಾಣ ಬೆಳೆಸಿದರು.

ಮುಖ್ಯಮಂತ್ರಿಗಳು ಮದ್ದೂರಿನಲ್ಲಿ ಬೀಗರ ಔತಣ ಮುಗಿಸಿ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಸಚಿವ ಸಾ.ರಾ. ಮಹೇಶ್‌ ತಿಳಿಸಿದರು. ಇಂದು ಕೂಡ ಸಿಎಂ ಎಚ್‌ಡಿಕೆ ಮಾಧ್ಯಮಗಳೊಂದಿಗೆ ಮಾತನಾಡಲಿಲ್ಲ.

ಸಾ.ರಾ. ಮಹೇಶ್‌ ಅಸಮಾಧಾನ
ಸಿಎಂ ನಿರ್ಗಮನದ ಬಳಿಕ ಮಾಧ್ಯಮಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಸಾ.ರಾ. ಮಹೇಶ್‌, ಜೆಡಿಎಸ್‌ ನಾಯಕರಿಂದಲೇ ಟಿವಿ ಮಾಧ್ಯಮಗಳಿಗೆ ಟಿಆರ್‌ಪಿ ಹೆಚ್ಚುತ್ತಿದೆ. ಕೆಲವು ಮಾಧ್ಯಮಗಳಿಗೆ ಜೆಡಿಎಸ್‌ ನಾಯಕರ ಸುದ್ದಿ ಬಿಟ್ಟರೆ ಬೇರೆ ಇಲ್ಲ. ಕೆಲವು ಮಾಧ್ಯಮಗಳು ಸಿಎಂ ತಂಗಿದ್ದ ರೆಸಾರ್ಟ್‌ನ ದರವನ್ನು ಮನಸ್ಸಿಗೆ ತೋಚಿದಂತೆ ಪ್ರಸಾರಿಸುತ್ತಿವೆ. ಆದರೆ ವಾಸ್ತವ ಬೇರೆಯೇ. ಬೇಕಿದ್ದರೆ ಆನ್‌ಲೈನ್‌ನಲ್ಲಿ ಟಾರಿಫ್ ತೆಗೆದು ನೋಡಿ ಎಂದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ