ದರ್ಶನ ನೀಡದ ಸಿಎಂ

Team Udayavani, May 12, 2019, 11:04 AM IST

ಕಾಪು: ಎಚ್‌. ಡಿ. ದೇವೇಗೌಡ ಅವರು ಆಯುರ್ವೇದ ವೈದ್ಯ ಡಾ| ತನ್ಮಯ ಗೋಸ್ವಾಮಿ ಅವರ ಸಲಹೆಯಂತೆ ವಿವಿಧ ಚಿಕಿತ್ಸೆಗಳನ್ನು ಪಡೆಯುತ್ತಿದ್ದಾರೆ.

ಮಡಿಕೇರಿ: ನಗರದ ಹೊರಭಾಗದಲ್ಲಿರುವ ಇಬ್ಬನಿ ರೆಸಾರ್ಟ್‌ನಲ್ಲಿ ತಂಗಿರುವ ಸಿಎಂ ಕುಮಾರಸ್ವಾಮಿ ಮತ್ತು ಕುಟುಂಬ ವರ್ಗ ಶನಿವಾರವೂ ಯಾರನ್ನು ಭೇಟಿ ಮಾಡಲಿಲ್ಲ.

ಮುಂಜಾನೆ ಎದ್ದು ರೆಸಾರ್ಟ್‌ನ ಪರಿಸರದಲ್ಲಿ ವಾಕಿಂಗ್‌ ಮಾಡಿದ್ದು ಬಿಟ್ಟರೆ ಇನ್ನುಳಿದಂತೆ ಸಿಎಂ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಮಾಧ್ಯಮದವರಿಗೂ ಅವರ ದರ್ಶನವಾಗಿಲ್ಲ. ಜನತಾದರ್ಶನದ ಮೂಲಕ ಗಮನ ಸೆಳೆದಿದ್ದ ಸಿಎಂ ಕಷ್ಟಕ್ಕೆ ಸ್ಪಂದಿಸುತ್ತಾರೆ ಎನ್ನುವ ಭಾವನೆಯಿಂದ ಸಮಸ್ಯೆ ಹೇಳಿಕೊಳ್ಳಲು ಬಂದಿದ್ದ ಕೆಲವರು ನಿರಾಶೆಯಿಂದ ತೆರಳುತ್ತಿದ್ದ ದೃಶ್ಯ ಕಂಡುಬಂತು.

ದುಬಾರಿ ರೆಸಾರ್ಟ್‌ನಲ್ಲಿ ಸಿಎಂ ವಾಸ್ತವ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗುತ್ತಿದೆ. ಆದರೆ ಸಿಎಂ ಜತೆಗೆ ಆಗಮಿಸಿದ್ದ ಸಚಿವ ಸಾ.ರಾ. ಮಹೇಶ್‌ ಸಿಎಂ ರೆಸಾರ್ಟ್‌ ವಾಸ್ತವ್ಯವನ್ನು ಸಮರ್ಥಿಸಿ ಕೊಂಡಿದ್ದಾರೆ. ಅಲ್ಲದೆ ಹಿಂದೆ ಸಿದ್ದರಾಮಯ್ಯ ಉಳಿದಿದ್ದ ರೆಸಾರ್ಟ್‌ಗೆ ಕುಮಾರಸ್ವಾಮಿ ಕೂಡ ಬಂದಿರುವುದು ಕೊಡಗು ಸುರಕ್ಷಿತ ಎಂಬ ಸಂದೇಶ ಸಾರಲು ಎಂದಿದ್ದಾರೆ. ಇದಕ್ಕೆ ಮುನ್ನ ಅವರು ಸಿಎಂ ಸೂಚನೆಯಂತೆ ಚುನಾವಣ ಆಯೋಗದ ಅನುಮತಿ ಪಡೆದು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು. ಇದೇವೇಳೆ ಸಚಿವ ಸಿ.ಎಸ್‌. ಪುಟ್ಟರಾಜು ಕೂಡ ಪತ್ರಕರ್ತರ ಜತೆಗೆ ಮಾತನಾಡಿ ಸಿಎಂ ವಾಸ್ತವ್ಯವನ್ನು ಸಮರ್ಥಿಸಿಕೊಂಡಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ