- Wednesday 11 Dec 2019
ಮಡಿಕೇರಿಯಲ್ಲಿ ಕಾಂಗ್ರೆಸ್, ಜೆಡಿಎಸ್ ಜಂಟಿ ಪ್ರತಿಭಟನೆ
ಡಿಕೆಶಿ ಬಂಧನಕ್ಕೆ ಖಂಡನೆ
Team Udayavani, Sep 6, 2019, 5:30 AM IST
ಮಡಿಕೇರಿ: ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿರುವ ಕ್ರಮವನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ನಗರದಲ್ಲಿ ಜಂಟಿಯಾಗಿ ಪ್ರತಿಭಟನೆ ನಡೆಸಿದರು.
ಸುರಿಯುತ್ತಿದ್ದ ಧಾರಾಕಾರ ಮಳೆಯ ನಡುವೆಯೇ ನಗರದ ಗಾಂಧಿ ಮಂಟಪದಿಂದ ಜನರಲ್ ತಿಮ್ಮಯ್ಯ ವೃತ್ತದವರೆಗೆ ಮೆರವಣಿಗೆ ನಡೆಸಿದ ಕಾರ್ಯಕರ್ತರು ರಸ್ತೆ ತಡೆ ಪ್ರತಿಭಟನೆ ನಡೆಸಿ ಬಿಜೆಪಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಕಾರರು ಬಿಜೆಪಿ ಸರಕಾರ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.
ಈ ಸಂದರ್ಭ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್, ಬಿಜೆಪಿ ಸರ್ಕಾರ ಸಂವಿಧಾನ ವಿರೋಧಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೊಲೆಯಾಗುತ್ತಿದೆ ಎಂದು ಟೀಕಿಸಿದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರು ದೇಶದಲ್ಲಿ ವಿರೋಧ ಪಕ್ಷವೇ ಇರಬಾರದೆನ್ನುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಮಾತನಾಡಿ, ಇದೊಂದು ರಾಜಕೀಯ ದುರಂತವಾಗಿದ್ದು, ನಾವು ಎಂದೂ ಕಂಡರಿಯದಂತಹ ದ್ವೇಷದ ರಾಜಕಾರಣವನ್ನು ಬಿಜೆಪಿ ಸರ್ಕಾರದಿಂದ ಕಾಣುತ್ತಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
2017ರಲ್ಲಿ ನಡೆದ ದಾಳಿಯ ಬಗ್ಗೆ ಉದ್ದೇಶಪೂರ್ವಕವಾಗಿ ಈಗ ವಿಚಾರಣೆ ನಡೆಸಲಾಗುತ್ತಿದೆ. ಇದು ದ್ವೇಷದ ರಾಜಕಾರಣ ಎಂಬುದು ಸಾಮಾನ್ಯ ನಾಗರೀಕನಿಗೂ ತಿಳಿದಿದೆ. ಡಿ.ಕೆ.ಶಿವಕುಮಾರ್ ಅವರು ತಪ್ಪು ಮಾಡಿದ್ದರೆ ಕೇವಲ ಒಂದು ತಿಂಗಳೊಳಗೆ ವಿಚಾರಣೆ ಪೂರ್ಣಗೊಳಿಸಬಹುದಿತ್ತು. ಆದರೆ ಎರಡು ವರ್ಷಗಳ ಅನಂತರ ಸಂವಿಧಾನಕ್ಕೆ ವಿರುದ್ಧವಾಗಿ ಬಂಧನ ಮಾಡಿರುವುದು ರಾಜಕೀಯ ಪ್ರೇರಿತವಾಗಿದೆ ಎಂದು ಆರೋಪಿಸಿದರು.
ಇಂದು ಕಾಂಗ್ರೆಸ್‌ಗೆ ಅನ್ಯಾಯ ವಾಗಿದೆ, ನಾಳೆ ಬೇರೆ ಪಕ್ಷಗಳಿಗೂ ಇಂತಹ ಅನ್ಯಾಯವಾಗುವ ಸಾಧ್ಯತೆ ಇದೆ. ಆದ್ದರಿಂದ ಜಾತ್ಯತೀತ ಮನೋಭಾವದ ಎಲ್ಲ ಪಕ್ಷಗಳು ದ್ವೇಷದ ರಾಜಕಾರಣವನ್ನು ಖಂಡಿಸುವ ಆವಶ್ಯಕತೆ ಇದೆ ಎಂದು ಗಣೇಶ್ ಅಭಿಪ್ರಾಯಪಟ್ಟರು.
ಮಾತಿನ ಚಕಮಕಿ
ಇದೇ ಸಂದರ್ಭ ರಸ್ತೆ ತಡೆ ಮಾಡಲು ಹೊರಟ ಪ್ರತಿಭಟನಕಾರರನ್ನು ಪೊಲೀಸರು ತಡೆದರು. ಇದರಿಂದ ಕೆಲಕಾಲ ಪ್ರತಿಭಟನಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.
ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಕೆ.ಎ. ಯಾಕುಬ್, ಕಾಂಗ್ರೆಸ್ ಅಲ್ಪಸಂಖ್ಯಾಕರ ಘಟಕದ ಜಿಲ್ಲಾಧ್ಯಕ್ಷ ಎ.ಕೆ. ಹ್ಯಾರಿಸ್, ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ರು ರವೀಂದ್ರ, ನಗರಾಧ್ಯಕ್ಷ ಅಬ್ದುಲ್ ರಜಾಕ್, ಪ್ರಮುಖರಾದ ಕಾವೇರಮ್ಮ ಸೋಮಣ್ಣ, ಚುಮ್ಮಿ ದೇವಯ್ಯ ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಈ ವಿಭಾಗದಿಂದ ಇನ್ನಷ್ಟು
-
ಮಡಿಕೇರಿ: ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳ ವಿಪರೀತವಾಗಿದ್ದು, ಕಾಡಾನೆ ಹಾವಳಿಯಿಂದಾಗಿ ಮಾನವ ಪ್ರಾಣ ಹಾನಿ, ಬೆಳೆ ಹಾನಿ ಉಂಟಾಗುತ್ತಿದ್ದು, ಜನರು ಭಯ ಭೀತಿಯಿಂದ...
-
ಕಾಸರಗೋಡು : ಈಗ ದಿನಾ ಅತ್ಯಾಚಾರ, ಲೈಂಗಿಕ ಕಿರುಕುಳ, ಹಿಂಸೆ ಇವುಗಳದ್ದೇ ಸುದ್ದಿ. ದೇಶದ ಮೂಲೆ ಮೂಲೆಯಲ್ಲೂ ಲೈಂಗಿಕ ಕಿರುಕುಳ ಸುದ್ದಿಯಾಗುತ್ತಿರುವಂತೆ ಕೇರಳದಲ್ಲೂ...
-
ಸೋಮವಾರಪೇಟೆ : ಉಪ ಚುನಾವಣೆ ಫಲಿತಾಂಶದಿಂದ ರಾಜ್ಯ ಬಿಜೆಪಿ ಸರ್ಕಾರ ಸುಭದ್ರವಾಗಿದೆ ಎಂದು ಹರ್ಷ ವ್ಯಕ್ತಪಡಿಸಿರುವ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮುಂದಿನ ದಿನಗಳಲ್ಲಿ...
-
ಕಾಸರಗೋಡು: 2020ನೇ ಇಸವಿಯ ಡಿಸೆಂಬರ್ ತಿಂಗಳಲ್ಲಿ ಮನೆ ಯಿಲ್ಲದ ಎಲ್ಲರಿಗೂ ವಸತಿ ಭಾಗ್ಯ ಒದಗಲಿದೆ ಎಂದು ಸ್ಥಳೀಯಾಡಳಿತ ಸಚಿವ ಎ.ಸಿ. ಮೊಯ್ದಿನ್ ಭರವಸೆ ನೀಡಿದರು. ವೆಸ್ಟ್...
-
ಮಡಿಕೇರಿ: ಉತ್ತಮ ಸಮಾಜ ನಿರ್ಮಿಸುವಲ್ಲಿ ಸಂಘ ಸಂಸ್ಥೆಗಳ ಪಾತ್ರ ಅಪಾರವಾದದ್ದು, ಜಿಲ್ಲೆ ಅತಿವೃಷ್ಟಿಗೆ ಸಿಲುಕಿದಾಗ ವಿವಿಧ ಸಂಘ, ಸಂಸ್ಥೆಗಳು ನಿರೀಕ್ಷೆಗೂ ಮೀರಿ...
ಹೊಸ ಸೇರ್ಪಡೆ
-
ರಾವಲ್ಪಿಂಡಿ: ದಶಕದ ಬಳಿಕ ತವರಲ್ಲಿ ಟೆಸ್ಟ್ ಸಂಭ್ರಮ ಆಚರಿಸುತ್ತಿರುವ ಪಾಕಿಸ್ಥಾನ, ಪ್ರವಾಸಿ ಲಂಕಾ ವಿರುದ್ಧ ಮೊದಲ ದಿನದಾಟದಲ್ಲಿ ಮೇಲುಗೈ ಸಾಧಿಸಿದೆ. ಬೆಳಕಿನ...
-
ಕರಾಚಿ: ದಶಕದ ಬಳಿಕ ತಾಯ್ನಾಡಿನಲ್ಲಿ ಟೆಸ್ಟ್ ಪಂದ್ಯ ಆಯೋಜಿಸಿದ ಸಂಭ್ರಮದಲ್ಲಿರುವ ಪಾಕಿಸ್ಥಾನ, ಮುಂದಿನ ವರ್ಷಾರಂಭದಲ್ಲಿ ಬಾಂಗ್ಲಾದೇಶ ವಿರುದ್ಧ ಹಗಲು-ರಾತ್ರಿ...
-
ಪುತ್ತೂರು: ವಿಜ್ಞಾನ ಕಷ್ಟ ಎನಿಸಿದರೂ ಆಟದ ರೀತಿಯಲ್ಲಿ ವಿನಿ ಯೋಗಿಸಿದರೆ ಉತ್ತಮ ಅನ್ವೇಷಣೆ ಮಾಡ ಬಹುದು. ಈ ನಿಟ್ಟಿನಲ್ಲಿ ಮಕ್ಕಳು ಅನ್ವೇಷಣೆ ಯಲ್ಲಿ ಪಾಲ್ಗೊಳ್ಳಬೇಕೆಂದು...
-
ಮುಂಬಯಿ: ಭಾರತದ ಭಾರೀ ಮೊತ್ತಕ್ಕೆ ಜವಾಬು ನೀಡುವಲ್ಲಿ ಎಡವಿದ ಟಿ20 ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್ ಮುಂಬಯಿಯ 3ನೇ ಹಾಗೂ ಅಂತಿಮ ಪಂದ್ಯವನ್ನು 67 ರನ್ನುಗಳಿಂದ...
-
ಹಾಸನ: ರಾಜ್ಯ ವಿಧಾನಸಭೆಯ 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಒಳಒಪ್ಪಂದ ಮಾಡಿಕೊಂಡಿದ್ದರಿಂದಾಗಿ ಜೆಡಿಎಸ್ ಅಭ್ಯರ್ಥಿಗಳು...