ಕೂಗೂರು ಗ್ರಾಮದಲ್ಲಿ ಪರಿಸರ ದಿನ: ಗಿಡ ನಾಟಿ

Team Udayavani, Jun 8, 2019, 6:00 AM IST

ಶನಿವಾರಸಂತೆ: ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸೋಮವಾರಪೇಟೆ ತಾಲೋಕು ಯೋಜನೆ ವತಿಯಿಂದ ಗೌಡಳ್ಳಿ ಸಮಿಪ ಕೂಗೂರು ಗ್ರಾಮದಲ್ಲಿ ವಿಶ್ವ ಪರಿಸರ ಕಾರ್ಯಕ್ರಮದನ್ವಯ ಪರಿಸರ ಸಂರಕ್ಷಣೆ ಮಾಹಿತಿ ಮತ್ತು ಗಿಡಗಳನ್ನು ನಾಟಿ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ತಾಲೋಕು ಯೋಜನಾಧಿಕಾರಿ ವೈ.ಪ್ರಕಾಶ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ-ಪ್ರತಿಯೊಬ್ಬರೂ ಪರಿಸರದಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವುದರ ಜೊತೆಯಲ್ಲಿ ವರ್ಷಕ್ಕೊಂದು ಪರಿಸರ ಉಪಯುಕ್ತ ಗಿಡವನ್ನು ನಾಟಿ ಮಾಡಿ ಅದನ್ನು ಪೋಷಿಸುವ ಹೊಣೆಗಾರಿಕೆಯನ್ನಾಗಿ ಮಾಡಿಕೊಳ್ಳಬೇಕೆಂದರು.

ಉತ್ತಮ ಹಸಿರು ಪರಿಸರದಿಂದ ಪ್ರಕೃತಿ ಅಭಿವೃದ್ದಿಯಾಗುತ್ತದೆ ಇದರಿಂದ ಮನುಕುಲಕ್ಕೆ ಉತ್ತಮ ಆರೋಗ್ಯ ಲಭ್ಯವಾಗುತ್ತದೆ, ಇತ್ತೀಚೆಗೆ ಮನೆಗಳಲ್ಲಿ ಶೋಕಿಗಾಗಿ ಪ್ಲಾಸ್ಟಿಕ್‌ ಗಿಡಗಳನ್ನು ಸಂತೋಷ ಪಡುತ್ತಾರೆ ಇದರ ಬದಲಿಗೆ ಮನೆಯ ಖಾಲಿ ಜಾಗದಲ್ಲಿ ಗಿಡಗಳನ್ನು ನೆಟ್ಟು ಬೆಳೆಸಿ ಸಂತೋಷ ಪಡಬೇಕು ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಉತ್ತಮ ಆರೋಗ್ಯ ಜೀವನಕ್ಕಾಗಿ ಗಿಡಮರಗಳನ್ನು ನೆಟ್ಟು ಪೋಷಿಸುವ ಕಾರ್ಯದಲ್ಲಿ ಮುಂದಾಗುವಂತೆ ಅವರು ಮನವಿ ಮಾಡಿದರು.

ಕೂಗೂರು ಪಂಚಲಿಂಗೇಶ್ವರ ಯುವಕ ಸಂಘದ ಅಧ್ಯಕ್ಷ ಮೋಹನ್‌ ಮಾತನಾಡಿ-ಪರಿಸರ ದಿನದಂದು ಮಾತ್ರ ಗಿಡವನ್ನು ನೆಟ್ಟರೆ ಸಾಕಾಗುವುದಿಲ್ಲ, ಪರಿಸರ ನಿರಂತರವಾಗಿರುವುದ್ದರಿಂದ ಎಲ್ಲಾರೂ ಪ್ರತಿ ದಿನ ಪರಿಸರ ಮಹತ್ವದ ಬಗ್ಗೆ ತಿಳಿದುಕೊಂಡಿರಬೇಕು ಗಿಡಗಳನ್ನು ನೆಟ್ಟು ಪೋಷಿಸಿ ನಿರಂತವಾಗಿ ಪರಿಸರ ವೃದ್ದಿಸುವಂತೆ ನೋಡಿಕೊಳ್ಳಬೇಕೆಂದರು.

ಕಾರ್ಯಕ್ರಮದಲ್ಲಿ ಶ್ರೀ ಪಂಚಲಿಂಗೇಶ್ವರ ದೇವಾಸ್ಥಾನದ ಅಧ್ಯಕ್ಷ ಕೆ.ಎಂ.ಚಿಣ್ಣಪ್ಪ, ಕಾರ್ಯದರ್ಶಿ ರಾಜಪ್ಪ, ಒಕ್ಕೂಟ್‌ ಅಧ್ಯಕ್ಷ ವಾಸುದೇವ, ವಲಯ ಮೇಲ್ವಿಚಾರಕ ರವಿಪ್ರಸಾದ್‌ ಅಲಾಜಿ, ಸೇವಾ ಪ್ರತಿನಿಧಿಗಳಾದ ಉಷರಾಣಿ, ತಾರಮಣಿ ಮುಂತಾದವರು ಉಪಸ್ಥಿತರಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ