ದಸರಾ ಜಂಬೂಸವಾರಿ ಆನೆಗಳಿಗೆ ದುಬಾರೆಯಿಂದ ಬೀಳ್ಕೊಡುಗೆ

Team Udayavani, Aug 22, 2019, 6:27 AM IST

ಮಡಿಕೇರಿ: ಮೈಸೂರು ದಸರಾ ಗಜಪಯಣದಲ್ಲಿ ಪಾಲ್ಗೊಳ್ಳಲು ದುಬಾರೆ ಶಿಬಿರದ 3 ಆನೆಗಳನ್ನುಹುಣಸೂರು ವೀರನ ಹೊಸಳ್ಳಿ ಶಿಬಿರಕ್ಕೆ ಬುಧವಾರ ಕಳುಹಿಸಿಕೊಡಲಾಯಿತು. ದುಬಾರೆ ಶಿಬಿರದ ಆನೆಗಳಾದ ಧನಂಜಯ (47), ಈಶ್ವರ (51), ವಿಜಯ (56) ಆನೆಗಳಿಗೆ ಪೂಜೆ ಸಲ್ಲಿಸಿ ಅರಣ್ಯ ಇಲಾಖೆ ಅಧಿಕಾರಿ, ಸಿಬಂದಿ ಬೀಳ್ಕೊಟ್ಟರು.

ಪೂಜೆಯ ಅನಂತರ ಮಡಿಕೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್‌. ಪ್ರಭಾಕರನ್‌, ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ. ನೆಹರು, ಉಪ ಅರಣ್ಯ ವಲಯಾಧಿಕಾರಿಗಳಾದ ಕನ್ನಂಡ ರಂಜನ್‌, ಅನಿಲ್ ಮತ್ತು ಸಿಬಂದಿ ಬೆಲ್ಲ, ಕಬ್ಬು ತಿನ್ನಿಸಿ ಆನೆಗಳನ್ನು ಬೀಳ್ಕೊಡಲಾಯಿತು. ಆನೆ ಜತೆಗೆ ಮಾವುತ, ಕವಾಡಿಗರ ಕುಟುಂಬ ಸದಸ್ಯರು ತೆರಳಿದ್ದಾರೆ.

ಎರಡನೇ ತಂಡ ಸೆಪ್ಟಂಬರ್‌ ತಿಂಗಳಲ್ಲಿ ಮೈಸೂರಿಗೆ ಮತ್ತೆ 3 ಆನೆಗಳನ್ನು ಕಳುಹಿಸಿಕೊಡಲಾಗುವುದು ಎಂದು ಕುಶಾಲನಗರ ಅರಣ್ಯ ವಲಯಾಧಿಕಾರಿ ಸಿ.ಆರ್‌.ಅರುಣ್‌ ಮಾಹಿತಿ ನೀಡಿದರು.

ಮುಂದಿನ ವಾರ ತೆರಳುವ ಮತ್ತೂಂದು ತಂಡದ ಮೂರು ಆನೆಗಳು ಈ ಸಂದರ್ಭ ಜತೆಗಿದ್ದವು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ