ಜನರಲ್‌ ತಿಮ್ಮಯ್ಯ ಸ್ಮಾರಕ ಭವನ ವರ್ಷಾಂತ್ಯಕ್ಕೆ ಲೋಕಾರ್ಪಣೆ

Team Udayavani, Nov 11, 2019, 5:05 AM IST

ಮಡಿಕೇರಿ: ಭಾರತೀಯ ಭೂಸೇನೆಯ ತರಬೇತಿ ವಿಭಾಗದ ಮುಖ್ಯಸ್ಥ ಲೆಫ್ಟಿನೆಂಟ್‌ ಜನರಲ್‌ ಪಿ.ಸಿ.ತಿಮ್ಮಯ್ಯ, ಪಿವಿಎಸ್‌ಎಂ, ವಿಎಸ್‌ಎಂ ಅವರು ಸ್ಮಾರಕ ಭವನವಾಗಿ ಅಭಿವೃದ್ಧಿ ಹೊಂದುತ್ತಿರುವ ಪದ್ಮಭೂಷಣ ಜನರಲ್‌ ಕೆ.ಎಸ್‌.ತಿಮ್ಮಯ್ಯ ಅವರ ಮಡಿಕೇರಿ ಮನೆಯನ್ನು ವೀಕ್ಷಿಸಿ ಕಾಮಗಾರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನೆಯನ್ನು ಮ್ಯೂಸಿಯಂ ಅಥವಾ ಸ್ಮಾರಕವನ್ನಾಗಿ ಬದಲಾಯಿಸುವುದು ಒಂದು ಸವಾಲಿನ ಕೆಲಸವಾಗಿದೆ. ಆದರೆ, ಈ ಕಾರ್ಯದಲ್ಲಿ ಸಂಬಂಧಿತ ವ್ಯಕ್ತಿಗಳು ಮತ್ತು ಸಂಸ್ಥೆ ಯಶಸ್ವಿಯಾಗಿರುವುದು ಶ್ಲಾಘನೀಯವೆಂದರು. ಕೊಡಗಿಗೆ ಸಂಬಂಧಿಸಿದ ಹೊಸ ವಿಷಯಗಳು, ಜನರಲ್‌ ತಿಮ್ಮಯ್ಯ ಅವರ ಸೇನಾ ದಿನಗಳು, ಯುದ್ಧ ಕೌಶಲ್ಯಗಳು ಮೊದಲಾದವುಗಳನ್ನು ವಿನೂತನ ಮಾದರಿಯಲ್ಲಿ ಸ್ಮಾರಕದಲ್ಲಿ ಪ್ರದರ್ಶನಕ್ಕಿಡುವಂತ್ತಾಗಬೇಕು ಎಂದರು.

ತಿಮ್ಮಯ್ಯ ಅವರ ಭೇಟಿ ಸಂದರ್ಭ ಹಾಜರಿದ್ದ ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ, ಜನರಲ್‌ ತಿಮ್ಮಯ್ಯ ಫೋರಂನ ಸಂಚಾಲಕ ಮೇಜರ್‌ ಬಿ.ಎ.ನಂಜಪ್ಪ, ಸನ್ನಿ ಸೈಡ್‌ ಜನರಲ್‌ ತಿಮ್ಮಯ್ಯ ಅವರ ಸ್ಮಾರಕವಾಗಿ ರೂಪುಗೊಂಡ ಬಗ್ಗೆ ನಡೆದಿರುವ ಕಾಮಗಾರಿ ದಾಖಲೆ ಮತ್ತು ಫೋಟೋ ಸಂಗ್ರಹದ ಕುರಿತು ಲೆ.ಜ ತಿಮ್ಮಯ್ಯ ಅವರಿಗೆ ಮಾಹಿತಿ ನೀಡಿದರು. ಜನರಲ್‌ ತಿಮ್ಮಯ್ಯ ಅವರ ಸಮವಸ್ತ್ರ ಮತ್ತು ಇನ್ನಷ್ಟೂ ಯುದ್ಧ ಸಲಕರಣೆಗಳು, ಸೇನಾ ಸಮವಸ್ತ್ರಗಳನ್ನು ಒದಗಿಸಿಕೊಡಬೇಕೆಂದು ಮೇಜರ್‌ ನಂಜಪ್ಪ ಮನವಿ ಮಾಡಿದರು.

ಜ. ತಿಮ್ಮಯ್ಯ ಅವರ ಕುಮಾಂವೋ ರೆಜಿಮೆಂಟ್‌ನಲ್ಲಿ ಕೆಲಸ ಮಾಡಿದ 102 ವರ್ಷದ ಯೋಧರೊಬ್ಬರು ಜೈಪುರದಲ್ಲಿ ನೆಲೆಸಿದ್ದು, ಅವರಿಂದ ಕೂಡ ಜ.ತಿಮ್ಮಯ್ಯ ಮತ್ತು ಆ ಕಾಲದ ರೆಜಿಮೆಂಟ್‌ ಹಾಗೂ ಯುದ್ಧದ ಸ್ಥಿತಿಗತಿಗಳನ್ನು ತಿಳಿದುಕೊಳ್ಳಲು ಸಾಧ್ಯವಿದೆ. ಸ್ಮಾರಕವಾದ ಒಳಾಂಗಣ ಕೆಲಸಗಳನ್ನು ಮಾಡುತ್ತಿರುವವರು ಜೈಪುರಕ್ಕೆ ಬಂದಲ್ಲಿ ಯೋಧರನ್ನು ಭೇಟಿ ಮಾಡಿಸುವ ಜವಾಬ್ದಾರಿ ತಮ್ಮದು ಎಂದು ಲೆ.ಜ ತಿಮ್ಮಯ್ಯ ಹೇಳಿದರು.

ಮ್ಯೂಸಿಯಂ ಯಾವ ರೀತಿ ಬರಬೇಕು, ಏನನ್ನೂ ಅಳವಡಿಸಿಕೊಂಡರೆ ಇನ್ನಷ್ಟು ಆಕರ್ಷಣಿಯವಾಗಿ ಮಾಡಬಹುದು ಎನ್ನುವುದರ ಬಗ್ಗೆ ಸಲಹೆಗಳನ್ನು ನೀಡಿದ್ದು ವಿಶೇಷವಾಗಿತ್ತು.

ಈಗಾಗಲೇ ವರದಿಯಾಗಿರುವಂತೆ ಜನರಲ್‌ ತಿಮ್ಮಯ್ಯ ಅವರ ನಿವಾಸ ಸನ್ನಿಸೈಡ್‌ ಯುದ್ಧ ಸ್ಮಾರಕವನ್ನು ಒಳಗೊಂಡು ಜನರಲ್‌ ತಿಮ್ಮಯ್ಯ ಅವರ, ಜೀವನಾಧರಿತ ಮ್ಯೂಸಿಯಂ ಆಗಿ ಪರಿವರ್ತನೆಯಾಗುತ್ತಿದೆ. ಕಾಮಗಾರಿ ಶೇ.80 ರಷ್ಟು ಪೂರ್ಣಗೊಂಡಿದ್ದು, ವರ್ಷಾಂತ್ಯದ ವೇಳೆಗೆ ಲೋಕಾರ್ಪಣೆಗೆ ಸಿದ್ಧವಾಗಲಿದೆ ಎಂದು ಮೇ. ನಂಜಪ್ಪ ಇದೇ ಸಂದರ್ಭ ಮಾಹಿತಿ ನೀಡಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ