Heavy Rain ಹಾರಂಗಿಯಿಂದ ಹೆಚ್ಚುವರಿ ನೀರು ನದಿಗೆ ಬಿಡುಗಡೆ
ಸುರಕ್ಷಿತ ಸ್ಥಳಗಳಿಗೆ ತೆರಳಲು ನದಿ ಪಾತ್ರದ ಜನರಿಗೆ ಸೂಚನೆ
Team Udayavani, Jul 14, 2024, 7:20 PM IST


ಮಡಿಕೇರಿ: ಹಾರಂಗಿ ಜಲಾನಯನ (Harangi Dam) ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಿದ್ದರಿಂದ 5 ಸಾವಿರ ಕ್ಯುಸೆಕ್ ನೀರನ್ನು ಭಾನುವಾರ ಸಂಜೆ ನದಿಗೆ ಹರಿಬಿಡಲಾಯಿತು.
ಜಲಾಶಯದ ಗರಿಷ್ಠ ಮಟ್ಟ 2859 ಅಡಿಗಳಾಗಿದ್ದು, ಇಂದಿನ ಮಟ್ಟ 2854.65 ಅಡಿಗಳಾಗಿದ್ದು, ಸಂಜೆಯ ವೇಳೆ ಜಲಾಶಯದ ಒಳಹರಿವಿನ ಪ್ರಮಾಣ 6820 ಕ್ಯುಸೆಕ್‌ಗಳಿಗೆ ಏರಿಕೆಯಾದ ಹಿನ್ನೆಲೆಯಲ್ಲಿ ಹೆಚ್ಚುವರಿ ನೀರನ್ನು ನದಿಗೆ ಹರಿ ಬಿಡಲಾಗಿದೆಯೆಂದು ಜಲಾಶಯದ ಕಾರ್ಯಪಾಲಕ ಇಂಜಿನಿಯರ್ ಪುಟ್ಟಸ್ವಾಮಿ ಐ.ಕೆ. ತಿಳಿಸಿದ್ದಾರೆ.
ಭಾನುವಾರ ಮಧ್ಯಾಹ್ನದ ವೇಳೆ 4500 ಕ್ಯುಸೆಕ್ ನೀರು ಹರಿದು ಬರುತ್ತಿದ್ದರೆ, ಸಂಜೆಯ ವೇಳೆ ಈ ಪ್ರಮಾಣ ಏರಿಕೆಯಾಗಿದೆ.
ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜಲಾನಯನ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಶೀಘ್ರವೇ ಜಲಾಶಯದ ನೀರಿನ ಮಟ್ಟ ಗರಿಷ್ಠ ಮಿತಿಯನ್ನು ತಲುಪಬಹುದೆಂದು ಹಾರಂಗಿ ಜಲಾಶಯದ ಕಾರ್ಯಪಾಲಕ ಇಂಜಿನಿಯರ್ ಪುಟ್ಟಸ್ವಾಮಿ ಐ.ಕೆ. ತಿಳಿಸಿದ್ದಾರೆ.
ಈ ಹಿನ್ನೆಲೆ ಕಾವೇರಿ ನದಿ ಪಾತ್ರದಲ್ಲಿ ನೆಲೆಸಿರುವವರು ತಮ್ಮ ಆಸ್ತಿ ಹಾಗೂ ಜಾನುವಾರುಗಳ ರಕ್ಷಣೆಗೆ ಮುನ್ನೆಚ್ಚರಿಕೆ ವಹಿಸಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಕೋರಿದ್ದಾರೆ.
Ad
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು


Kasaragod: ತಡೆಗೋಡೆಗೆ ಕಾರು ಢಿಕ್ಕಿ: ನಾಲ್ವರಿಗೆ ಗಾಯ


Kasaragod: ವೈದ್ಯನೆಂದು ನಂಬಿಸಿ ಮಹಿಳೆಗೆ ಕಿರುಕುಳ; ಆರೋಪಿ ವಶಕ್ಕೆ; ನ್ಯಾಯಾಲಯಕ್ಕೆ ಅರ್ಜಿ


Kasaragod: ಶಾಲೆಯ ಅಭಿವೃದ್ಧಿ ನಿಧಿ ವಂಚನೆ; ಮಾಜಿ ಪ್ರಭಾರ ಪ್ರಾಂಶುಪಾಲರ ವಿರುದ್ಧ ದೂರು


Kasaragod: ಯುವಕನನ್ನು ಅಪಹರಿಸಿ ಸುಲಿಗೆ ಪ್ರಕರಣ; ಸೂತ್ರಧಾರನ ಬಂಧನ


ಕೊಡಗಿನಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ: ಮುನ್ನೆಚ್ಚರ ವಹಿಸಲು ಸಚಿವರ ಸೂಚನೆ