ಮೂರು ತಾಲೂಕುಗಳ ಆಧಾರ್‌ ನೋಂದಣಿ ದಿನಾಂಕ, ಹಾಡಿ ವಿವರ

Team Udayavani, Jul 17, 2019, 5:32 AM IST

ಮಡಿಕೇರಿ: ಆಧಾರ್‌ ನೋಂದಣಿ ದಿನಾಂಕ ಮತ್ತು ಹಾಡಿ ವಿವರ
ವಿರಾಜಪೇಟೆ ತಾಲೂಕು ಜು.16 ರಂದು ನಾಣಚ್ಚಿಗದ್ದೆ ಹಾಡಿ, ಕೇಮ್‌ಕೊಲ್ಲಿ, ಚಂದನಕೆರೆ ಹಾಡಿಗಳ ಜನರಿಗೆ ನಾಣಚ್ಚಿಗದ್ದೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನೋಂದಣಿ ಮಾಡಲಾಗಿದೆ.

ಜು. 17ರಂದು ನಾಗರಹೊಳೆ, ಗೋಣಿಗದ್ದೆ ಹಾಡಿ ಜನತೆಗೆ ನಾಗರಹೊಳೆ ಆಶ್ರಮ ಶಾಲೆ, ಜು. 18 ರಂದು ನಿಟ್ಟೂರು, ತಟ್ಟೆಕೆರೆ, ದಾಳಿಂಬೆ ತೋಟ, ಬೆಂಡೆಗುತ್ತಿ, ಕೊಲ್ಲಿಹಾಡಿ ಭಾಗದ ಜನರಿಗೆ ನಿಟ್ಟೂರು ಆಶ್ರಮ ಶಾಲೆ.ಜುಲೈ 19 ರಂದು ಕೋತೂರು, ಬ್ರಹ್ಮಗಿರಿ ಹಾಡಿಯವರಿಗೆ ಕೋತೂರು ಆಶ್ರಮ ಶಾಲೆ, ಜು. 20 ರಂದು ಬಣ್ಣ ಮೊಟ್ಟೆ, ವೆಸ್ಟ್‌ ನೆಮ್ಮಲೆ, ಈಸ್ಟ್‌ ನೆಮ್ಮಲೆ, ತಾವಳಗೇರಿ, ಹರಿಹರ ಹಾಡಿಗೆ ಶ್ರೀಮಂಗಲ ಸರ್ಕಾರಿ ಶಾಲೆಯಲ್ಲಿ ನೋಂದಣಿ ನಡೆಯಲಿದೆ.

ಜು. 22ರಂದು ಬಿರುಣಾನಿ, ತೆರಾಲು, ಪರಕಟಗೇರಿ, ಬಾಡಗರಕೇರಿ, ಪೊರಾಡು, ಹೈಸೊಡೂÉ$Éರು ಟೀ ಎಸ್ಟೇಟ್‌, ಕೋಣಗೇರಿ, ಚೀಣಿವಾಡ, ಬೇಗೂರು ಲೈನ್‌ ಮನೆಗಳಿಗೆ ಆಧಾರ್‌ ನೋಂದಣಿ ಕಾರ್ಯಕ್ರಮವು ಹುದಿಕೇರಿಯಲ್ಲಿ ನಡೆಯಲಿದೆ.

ಜು. 23ರಂದು ಸೀತಾರಾಮ ಕಾಲೋನಿ, ಕುಂಬಾರ ಕಟ್ಟೆ, ಪಾಲದಳ ಇವರಿಗೆ ಬಾಳೆಲೆ ಸರ್ಕಾರಿ ಪ್ರಾಥಮಿಕ ಶಾಲೆ, ಜು. 24 ರಂದು ಮಜ್ಜಿಗೆ ಹಳ್ಳ, ಆನೆ ಕ್ಯಾಂಪ್‌, ಕಾರೆಕಂಡಿ, ದೇವಮಚ್ಚಿ ಇವರಿಗೆ ಮರೂರು ತಿತಿಮತಿ ಆಶ್ರಮ ಶಾಲೆ, ಜುಲೈ, 25 ರಂದು ಚಿನಿಹಡ್ಲು, ಮರಪಾಲ, ಬೊಂಬುಕಾಡು, ಜಂಗಲ ಹಾಡಿ ಇವರಿಗೆ ತಿತಿಮತಿಯ ಗಿರಿಜನ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ನೋಂದಣಿ ಕಾರ್ಯಕ್ರಮ ನಡೆಯಲಿದೆ.

ದೊಡ್ಡ ರೇಷ್ಮೆ ಹಡ್ಲು ಮತ್ತು ಚಿಕ್ಕ ರೇಷ್ಮೆ ಹಡ್ಲು ಇವರಿಗೆ ದೊಡ್ಡ ರೇಷ್ಮೆ ಹಡ್ಲು ಸರ್ಕಾರಿ ಪ್ರಾಥಮಿಕ ಶಾಲೆ, ಜುಲೈ, 26 ರಂದು ದಯ್ಯದ, ಮೇಕೂರು, ಪಾಲಿಬೆಟ್ಟ, ಮೇಕೂರು ಹೊಸಕೇರಿ ಈ ಲೈನ್‌ ಮನೆಗಳಿಗೆ ಪಾಲಿಬೆಟ್ಟ ಗಿರಿಜನ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ನೋಂದಣಿ ಕಾರ್ಯ ನಡೆಯಲಿದೆ.

ಜು. 27ರಂದು ದಿಡ್ಡಳ್ಳಿ, ತಟ್ಟಳ್ಳಿ, ಚೊಟ್ಟೆಪಾರೆ, ಗೇಟ್‌ ಹಾಡಿ, ಹಣ್ಣಿನ ತೋಟ ಈ ಗ್ರಾಮದ ಹಾಡಿ ಜನರಿಗೆ ಚೆನ್ನಂಗಿ ಬಸವನಹಳ್ಳಿ ಆಶ್ರಮ ಶಾಲೆಯಲ್ಲಿ, ಜುಲೈ, 29 ರಂದು ಬಸವನಹಳ್ಳಿ, ಅವರೆಗುಂದ ಈ ಹಾಡಿಯ ಜನರಿಗೆ ಅವರೆಗುಂದ ಸಮುದಾಯ ಭವನದಲ್ಲಿ, ಜುಲೈ, 30 ರಂದು ಅರುವತ್ತೋಕ್ಲು, ಜನತಾ ಕಾಲೋನಿ, ಹಳ್ಳಿಗಟ್ಟು, ಸೀತಾ ಕಾಲೋನಿ, ಮೈಸೂರಮ್ಮ ಕಾಲೋನಿ, ಬಲ್ಯಮಂಡೂರು, ಮುಗುಟಗೇರಿ ಇವರಿಗೆ ಪೊನ್ನಂಪೇಟೆಯ ಅರುವತ್ತೋಕ್ಲುನಲ್ಲಿ ಹಾಗೂ ಜು. 31 ರಂದು ಹೊಸೂರು, ಕಳತ್ಮಾಡು ಇಲ್ಲಿನ ಜನರಿಗೆ ಗೋಣಿಕೊಪ್ಪ ಸರ್ಕಾರಿ ಪ್ರೌಢ ಶಾಲೆಯಲ್ಲಿ ಆಧಾರ್‌ ನೋಂದಣಿ ನಡೆಯಲಿದೆ.

ಆಗಸ್ಟ್‌, 1 ರಂದು ಕೊಳತೋಡು, ಬೈಗೋಡು, ಕುಂದ, ಬಸವೇಶ್ವರ ಕಾಲೋನಿ, ಅತ್ತೂರು, ಈಚೂರು ವ್ಯಾಪ್ತಿಯ ಜನರಿಗೆ ಹಾತೂರು ಸರ್ಕಾರಿ ಮಾದರಿ ಶಾಲೆ, ಆ.2 ರಂದು ಎರಡನೇ ರುದ್ರೆಗುಪ್ಪೆ, ಒಂದನೇ ರುದ್ರೆಗುಪ್ಪೆ, ವಿ.ಬಾಡಗ, ಬಿಟ್ಟಂಗಾಲ, ನಾಂಗಾಲ, ಕಂಡಂಗಾಲ, ಅಂಬಟ್ಟಿ, ಬಾಳುಗೋಡು, ಅಂಬಟ್ಟಿ-1 ಭಾಗದ ಜನರಿಗೆ ಬಿಟ್ಟಂಗಾಲ ಸರ್ಕಾರಿ ಮಾದರಿ ಶಾಲೆಯಲ್ಲಿ ನೋಂದಣಿ ನಡೆಯಲಿದೆ.

ಸೋಮವಾರಪೇಟೆ ತಾಲೂಕು
ಆ. 3ರಂದು ವಾಲೂ°ರು ತ್ಯಾಗತ್ತೂರು, ಬಾಳೆಗುಂಡಿ ಜನರಿಗೆ ವಾಲೂ°ರು ತ್ಯಾಗತ್ತೂರು ಸರ್ಕಾರಿ ಶಾಲೆಯಲ್ಲಿ, ಆ.5 ರಂದು ಮಾವಿನಹಳ್ಳ, ರಂಗಸಮುದ್ರ, ಹೊಸಪಟ್ಟಣ, ಕಬ್ಬಿನಗದ್ದೆ, ಕಟ್ಟೆಹಾಡಿ ನಂಜರಾಯಪಟ್ಟಣ ಸರ್ಕಾರಿ ಶಾಲೆಯಲ್ಲಿ, ಆ. 6ರಂದು ಹೆಬ್ಬೆಟ್ಟಗೇರಿ, ಚಿಕ್ಕಬೆಟ್ಟಗೇರಿ, ಹೊಸಕಾಡು ಹಾಡಿ ಜನರಿಗೆ ಬಸವಹಳ್ಳಿ ಆಶ್ರಮ ಶಾಲೆ, ಆ.7 ರಂದು ನಾಕೂರು ಶಿರಂಗಾಲ, ಕಲ್ಲೂರು ಜನರಿಗೆ ಹೇರೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ, ಆ. 8 ರಂದು ಗಂಧದ ಹಾಡಿ, ಸೀತಾ ಕಾಲೋನಿ, ಕೂಪಾಡಿ, ಸೂಳೆಬಾವಿ, ರಂಗನ ಹಾಡಿ, ಸಜ್ಜಳ್ಳಿ ಹಾಡಿಯವರಿಗೆ ಯಡವನಾಡು ಆಶ್ರಮ ಶಾಲೆಯಲ್ಲಿ ನೋಂದಣಿ ನಡೆಯಲಿದೆ.

ಆ.9ರಂದು ಹುಣಸೆಪಾರೆ, ಯಲಕ ನೂರುಹೊಸಹಳ್ಳಿ, ಚೀನ್ನೆಹಳ್ಳಿ, ಹೆಗ್ಗಡಳ್ಳಿ ಹಾಡಿ ಜನರಿಗೆ ಬ್ಯಾಡಗುಟ್ಟ ಪುನರ್ವಸತಿ ಬಡಾವಣೆಯಲ್ಲಿ, ಆ. 13 ರಂದು ಹಿತ್ತಲಮಕ್ಕಿ, ಚಿಕ್ಕ ಅಬ್ಬೂರು, ವಳಗುಂದ, ಆಡಿನಾಡೂರು, ಹಳೇ ಮದಲಾಪುರ ಅಬ್ಬೂರು ಕಟ್ಟೆಯಲ್ಲಿ, ಆ.14ರಂದು ಗಣಗೂರು ಎಡುಂಡೆ, ಊಂಜಿಗನಹಳ್ಳಿ, ಬಾಣಾವಾರ, ಸಂಗಯ್ಯನಪುರ, ಗೋಣಿ ಮರೂರು ಹಾಡಿಗಳಿಗೆ ಸಂಬಂಧಿಸಿದಂತೆ ಗಣಗೂರು ಪಂಚಾಯಿತಿಯಲ್ಲಿ ನಡೆಯಲಿದೆ
ಆ. 16ರಂದು ಮಾಲಂಬಿ, ಪಳಗೋಟು ಹಾಡಿ, ಕಡ್ಲೆಮಕ್ಕಿ, ಆಲೂರು ಸಿದ್ಧಾಪುರಕ್ಕೆ ಸಂಬಂಧಿಸಿದಂತೆ ಮಾಲಂಬಿ ಆಶ್ರಮ ಶಾಲೆ, ಆ.17 ರಂದು ಅರೆ ಹೊಸ್ಸೂರು, ಬ್ಯಾಡಗುಟ್ಟ, ಕಟ್ಟೆಪುರ ಹಾಡಿಗಳಿಗೆ ದೊಡ್ಡಳ್ಳಿ ಸರ್ಕಾರಿ ಶಾಲೆಯಲ್ಲಿ ಹಾಗೂ ಆ. 19 ರಂದು ಗರಂಗದೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.

ಮಡಿಕೇರಿ ತಾಲೂಕು
ಆ. 20ರಂದು ಬೆಟ್ಟತ್ತೂರು, ಜೋಡುಪಾಲ, ದೇವರಕೊಲ್ಲಿ ವ್ಯಾಪ್ತಿ ಜನರಿಗೆ ಮದೆನಾಡು ಗ್ರಾಮ ಪಂಚಾಯಿತಿಯಲ್ಲಿ, ಆ. 21 ರಂದು ಕೊಯನಾಡು, ಮಂಗಳಪಾರೆ, ಕುಂಟಿಕಾನ, ಅರೆಕಲ್ಲು ಜನರಿಗೆ ಸಂಪಾಜೆ ಗ್ರಾಮ ಪಂಚಾಯಿತಿ, ಆ. 22 ರಂದು ಕಟ್ಟಪಳ್ಳಿ, ಕುದ್ರೆಪಾಯ ವ್ಯಾಪ್ತಿ ಜನರಿಗೆ ಬಾಲಂಬಿ ಗ್ರಾಮ ಪಂಚಾಯಿತಿಯಲ್ಲಿ, ಆ.23 ರಂದು ನಿಡ್ಯಮಲೆ, ಕುಂಡಾಡು ಭಾಗದ ಜನರಿಗೆ ಪೆರಾಜೆ ಕಂಬಳಚೇರಿ ಸರ್ಕಾರಿ ಪ್ರಾಥಮಿ ಕ ಶಾಲೆಯಲ್ಲಿ ನಡೆಯಲಿದೆ.

ಆ.24 ರಂದು ಚೆತ್ತುಕಾಯ, ಎಳ್ಳುಕೊಚ್ಚಿ, ಕುಂಡತ್ತಿಕಾನ ಹಾಡಿಗಳಿಗೆ ಕರಿಕೆ ಆಶ್ರಮ ಶಾಲೆ, ಆ. 26 ರಂದು ಯವಕಪಾಡಿ, ಚೇಲಾವರ ಜನರಿಗೆ ಚೆಯ್ಯಂಡಾಣೆ ಸರ್ಕಾರಿ ಪ್ರಾಥಮಿಕ ಶಾಲೆ, ಆ. 27 ರಂದು ತಣ್ಣಿಮಾನಿ, ಕೋಪಟ್ಟಿ, ಚೇರಂಗಾಲ, ಕೋರಂಗಾಲ ಭಾಗದ ಜನರಿಗೆ ಬಾಲಂಬಿ ಗ್ರಾಮ ಪಂಚಾಯಿತಿ, ಆ.28 ರಂದು ಗಾಳಿಬೀಡು, ಎರಡನೇ ಮೊಣ್ಣಂಗೇರಿ ಜನರಿಗೆ ಗಾಳಿಬೀಡು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನೋಂದಣಿ ನಡೆಯಲಿದೆ ಎ,ದು ಪ್ರಕಟನೆ ತಿಳಿಸಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ