“ವನ್ಯಜೀವಿ ಸಂಕುಲ ಉಳಿಸುವುದು ಎಲ್ಲರ ಜವಾಬ್ದಾರಿ’

Team Udayavani, Oct 6, 2019, 5:31 AM IST

ಮಡಿಕೇರಿ:ಪರಿಸರದ ಸಮತೋಲನ ಕಾಯ್ದುಕೊಳ್ಳಲು ವನ್ಯಜೀವಿಗಳ ಸಂರಕ್ಷಣೆ ಅಗತ್ಯವೆಂದು ಪರಿಸರ ಜಾಗೃತಿ ಆಂದೋಲನದ ಜಿಲ್ಲಾ ಸಂಚಾಲಕ ಟಿ.ಜಿ.ಪ್ರೇಮಕುಮಾರ್‌ ತಿಳಿಸಿದ್ದಾರೆ.

ಪದವಿ ಪೂರ್ವ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ, ರಾಷ್ಟ್ರೀಯ ಹಸಿರು ಪಡೆಯ ಕೊಡಗು ಜಿಲ್ಲಾ ಇಕೋ ಕ್ಲಬ್‌, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್‌ಎಸ್‌ಎಸ್‌ ಘಟಕ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಘಟಕದ ಸಂಯುಕ್ತಾಶ್ರಯದಲ್ಲಿ ಮೇಕೇರಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಇಕೋ ಕ್ಲಬ್‌ ಹಾಗೂ ಅರಣ್ಯ ಇಲಾಖೆಯ ಅರಣ್ಯ ವಲಯಾಧಿಕಾರಿಗಳ ಕಚೇರಿಯ ಸಹಯೋಗದೊಂದಿಗೆ ಮೇಕೇರಿ ಗ್ರಾಮದಲ್ಲಿ 65 ನೇ ವನ್ಯಜೀವಿ ಸಪ್ತಾಹ 2019 ಅಂಗವಾಗಿ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಕುರಿತು ಪರಿಸರ ಜಾಗೃತಿ ನಡೆಯಿತು.

ಅರಣ್ಯ ಮತ್ತು ವನ್ಯ ಜೀವಿಗಳ ಸಂರಕ್ಷಣೆ ಕುರಿತು ಅಭಿಯಾನದಲ್ಲಿ ಮಾಹಿತಿ ನೀಡಿದ ಇಕೋ ಕ್ಲಬ್‌ನ ನೋಡಲ್‌ ಅಧಿಕಾರಿಯೂ ಆದ ಪ್ರೇಮ್‌ ಕುಮಾರ್‌ ಅವರು ಪ್ರಕೃತಿಯ ಒಂದು ಪ್ರಮುಖ ಭಾಗವಾದ ಅರಣ್ಯ ಮತ್ತು ವನ್ಯ ಜೀವಿಗಳ ರಕ್ಷಣೆ ಮಾಡುವ ಮಹತ್ವದ ಹೊಣೆಗಾರಿಕೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.

ಸುಸ್ಥಿರ ಅಭಿವೃದ್ಧಿ ಎಂದರೆ ವಿನಾಶ ರಹಿತ ಅಭಿವೃದ್ಧಿಯಾಗಿದ್ದು, ನಾವು ನಮ್ಮ ಜೀವಿ ಸಂಕುಲದ ಉಳಿವಿನ ಜೊತೆಗೆ ಅಭಿವೃದ್ಧಿಯಲ್ಲಿ ತೊಡಗಬೇಕಿದೆ. ವನ್ಯ ಜೀವಿಗಳು ಮತ್ತು ಅರಣ್ಯಗಳು ಪರಿಸರ ಸಮತೋಲನ ಕಾಪಾಡುವಲ್ಲಿ ಅತ್ಯಂತ ಮಹತ್ತರ ಪಾತ್ರ ವಹಿಸುತ್ತವೆ. ಎಂದು ಪ್ರೇಮಕುಮಾರ್‌ ಅವರು ಹೇಳಿದರು. ಡಿಆರ್‌ಎಫ್ಒ ಬಾಬು ರಾಥೋಡ್‌, ಪ್ರಭಾರ ಗಾರ್ಡ್‌ ವಾಸುದೇವ್‌, ಎಸ್‌ಡಿಎಂಸಿ ಅಧ್ಯಕ್ಷರಾದ ರಫೀಕ್‌ ಖಾನ್‌, ಎನ್‌ಎಸ್‌ಎಸ್‌ ಅಧಿಕಾರಿ ಬಿ.ಡಿ.ರವೀಶ್‌, ಉಪನ್ಯಾಸಕರಾದ ಎಸ್‌.ನಂದೀಶ್‌, ದ ರಾಜಸುಂದರಂ, ಹೆಬ್ಟಾಲೆ ನಮ್ರತ್‌, ಶಿಕ್ಷಕ‌ ಪ್ರಸನ್ನ ಕುಮಾರ್‌, ಕೆ.ಎಂ.ಸಬಿತಾ, ಸಿ.ಪುಷ್ಪ, ಶ್ರೀ ಲತಾ, ಸಿಬಂದಿ ‌ ಎ.ಪಿ.ಸುಧಾ, ಮಂದಪ್ಪ ಉಪಸ್ಥಿತರಿದ್ದರು.

“ಸಂರಕ್ಷಣೆ ಅಗತ್ಯ
ಪ್ರಾಂಶುಪಾಲ ಪಿ.ಆರ್‌.ವಿಜಯ್‌ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ ಕುರಿತು ತಿಳಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಎಂ.ಬಿ.ಕುಸುಮಾವತಿ, ವಿದ್ಯಾರ್ಥಿಗಳು ತಮ್ಮ ಅರಣ್ಯ ಮತ್ತು ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳುಬೇಕು ಎಂದರು. ವಿನಾಶದಂಚಿನತ್ತ ಸಾಗುತ್ತಿರುವ ಅರಣ್ಯ, ವನ್ಯಜೀವಿಗಳು ಮತ್ತು ಪರಿಸರವನ್ನು ಉಳಿಸುವತ್ತ ಗಮನಹರಿಸದಿದ್ದಲ್ಲಿ ಮುಂದಿನ ಪೀಳಿಗೆಗೆ ಇವುಗಳನ್ನು ನೋಡುವ ಅವಕಾಶ ಇಲ್ಲದಂತಾಗುತ್ತದೆ. ಅರಣ್ಯ ಮತ್ತು ವನ್ಯ ಜೀವಿಗಳ ಉಳಿಸಿ ಬೆಳೆಸುವುದು ಕರ್ತವ್ಯವಾಗಿದೆ ಎಂದರು. ಶಿಬಿರಾರ್ಥಿಗಳು ಮತ್ತು ವಿದ್ಯಾರ್ಥಿಗಳು ಜಾಥಾ ನಡೆಸುವ ಮೂಲಕ ಅರಣ್ಯ, ಪರಿಸರ ವನ್ಯಜೀವಿ ಸಂರಕ್ಷಣೆ ಜಾಗೃತಿ ಮೂಡಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ