ಕೊಡಗಿನಲ್ಲಿ ಮಳೆಯ ಅಬ್ಬರ : ವಿವಿಧೆಡೆ ಹಾನಿ, ಇಂದು ಶಾಲೆಗಳಿಗೆ ರಜೆ

Team Udayavani, Aug 6, 2022, 7:29 AM IST

ಕೊಡಗಿನಲ್ಲಿ ಮಳೆಯ ಅಬ್ಬರ : ವಿವಿಧೆಡೆ ಹಾನಿ, ಇಂದು ಶಾಲೆಗಳಿಗೆ ರಜೆ

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಮುಂದುವರಿದಿದ್ದು, ಗ್ರಾಮೀಣ ಭಾಗ ಮತ್ತು ಬೆಟ್ಟ, ಗುಡ್ಡ ವ್ಯಾಪ್ತಿಯಲ್ಲಿ ಆತಂಕ ಸೃಷ್ಟಿಯಾಗಿದೆ. ಜಿಲ್ಲೆಯಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದ್ದು, ಮುಂಜಾಗ್ರತ ಕ್ರಮವಾಗಿ ಆ. 6ರಂದು ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಚೆಂಬು ವೃತ್ತದ ಊರುಬೈಲು, ಚೆಂಬು, ದಬ್ಬಡ್ಕ, ಮೇಲ್‌ ಚೆಂಬು ಮತ್ತು ಪೆರಾಜೆ ಗ್ರಾಮಗಳಲ್ಲಿ ಹೆಚ್ಚಿನ ಮಳೆಯಾಗುತ್ತಿದೆ. ದಬ್ಬಡ್ಕ ಭಾಗದಲ್ಲಿ ಜಲಸ್ಫೋಟದೊಂದಿಗೆ ಗುಡ್ಡ ಕುಸಿಯುತ್ತಲೇ ಇದ್ದು, ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಮನೆ ಮತ್ತು ರಸ್ತೆಗಳಿಗೆ ಹಾನಿಯಾಗಿದೆ. ಮದೆನಾಡು ಗ್ರಾ.ಪಂ. ವ್ಯಾಪ್ತಿಯ ಬೆಟ್ಟತ್ತೂರು ಭಾಗದಲ್ಲೂ ಬೃಹತ್‌ ಬರೆ ಕುಸಿದಿದ್ದು, ಮಣ್ಣು ತೆರವು ಸಂದರ್ಭ ಜೆಸಿಬಿ ಯಂತ್ರ ಮಗುಚಿದ ಘಟನೆಯೂ ನಡೆದಿದೆ. ಚಾಲಕ ಅಪಾಯದಿಂದ ಪಾರಾಗಿದ್ದಾರೆ.

ಮಾರ್ಪಡ್ಕ ಸೇತುವೆ, ಆನೆಹಳ್ಳ ಸೇತುವೆ ಹಾಗೂ ದಬ್ಬಡ್ಕ ಸೇತುವೆಗಳು ಕೊಚ್ಚಿ ಹೋಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ.

ಭೂಕುಸಿತದಿಂದ ಹಾನಿ
ಕೆದಮುಳ್ಳೂರು ಗ್ರಾ.ಪಂ. ವ್ಯಾಪ್ತಿಯ ತೋರ ಗ್ರಾಮದಲ್ಲಿ ಭೂಕುಸಿತದಿಂದ ಹಾನಿಯಾಗಿದೆ. ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದ್ದು, 34 ಮಂದಿ ಸ್ಥಳಾಂತರಗೊಂಡಿದ್ದಾರೆ. ಸಂತ್ರಸ್ತರಿಗೆ ಶಾಸಕ ಕೆ.ಜಿ. ಬೋಪಯ್ಯ ಪರಿಹಾರ ವಿತರಿಸಿದರು.

ತಡೆಗೋಡೆ ಕುಸಿತ
ಮಡಿಕೇರಿ ನಗರದಲ್ಲಿ ಎರಡು ಮನೆಗಳ ತಡೆಗೋಡೆ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು, ಮಣ್ಣು ಜರಿಯುತ್ತಲೇ ಇರುವುದರಿಂದ ಮನೆಗಳು ಬೀಳುವ ಹಂತದಲ್ಲಿವೆ. ತಿತಿಮತಿ ರಸ್ತೆಯಲ್ಲಿ ಬೃಹತ್‌ ಮರ ಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಸೋಮವಾರಪೇಟೆ ರಸ್ತೆಯಲ್ಲೂ ಮರ ಬಿದ್ದು ವಾಹನ ಸಂಚಾರ ವ್ಯತ್ಯಯಗೊಂಡಿತ್ತು.

ಸಂಪಾಜೆಯಲ್ಲಿ ಮಳೆ ಕಡಿಮೆ
ಪ್ರವಾಹದಲ್ಲಿ ಮುಳುಗಿದ್ದ ಸಂಪಾಜೆ, ಕಲ್ಲುಗುಂಡಿ ಮತ್ತು ಕೊಯನಾಡು ಭಾಗದಲ್ಲಿ ಮಳೆಯ ರಭಸ ಕಡಿಮೆಯಾಗಿದೆ. ಕೊಯನಾಡು ಮತ್ತು ದೇವರಕೊಲ್ಲಿ ಬಳಿ ರಸ್ತೆಗೆ ಹಾನಿಯಾಗಿರುವುದರಿಂದ ಬಸ್‌, ಲಘು ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

ಬರೆ ಬಿದ್ದು ಹಾನಿ ಅಪಾಯದಂಚಿನಲ್ಲಿ ಮನೆ
ಚೆಟ್ಟಳ್ಳಿ : ಭಾರೀ ಮಳೆಗೆ ಬರೆ ಮತ್ತು ಮರ ಬಿದ್ದು ಮನೆಗೆ ಹಾನಿಯಾಗಿರುವ ಘಟನೆ ಚೆಟ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯ ಪೊನ್ನತ್‌ ಮೊಟ್ಟೆಯಲ್ಲಿ ಸಂಭವಿಸಿದೆ.

ಅಜೀಜ್‌ ಅವರ ಮನೆಯ ಹಿಂಬದಿಯ ಬರೆ ಕುಸಿದ ಪರಿಣಾಮ ಬರೆಯಲ್ಲಿದ್ದ ಮರವೊಂದು ಮನೆ ಮೇಲೆ ಬಿದ್ದು ಹಾನಿಯಾಗಿದೆ. ಕಳೆದ ತಿಂಗಳು ಸುರಿದ ಮಳೆಗೆ ಮನೆಯ ಹಿಂಬದಿಯಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಈ ಕಾರಣದಿಂದ ಮನೆಯಲ್ಲಿದ್ದವರನ್ನು ಪೊನ್ನತ್‌ ಮೊಟ್ಟೆ ಶಾಲೆಯ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು.

ಟಾಪ್ ನ್ಯೂಸ್

ಒಳನಾಡು ಮೀನುಗಾರಿಕೆಗೆ ಉತ್ತೇಜನ: ಸಚಿವ ಅಂಗಾರ

ಒಳನಾಡು ಮೀನುಗಾರಿಕೆಗೆ ಉತ್ತೇಜನ: ಸಚಿವ ಅಂಗಾರ

1-ddad

ಅನುರಾಗ್ ಕಶ್ಯಪ್ ವಿರುದ್ಧ ವಿವೇಕ್ ರಂಜನ್ ಅಗ್ನಿಹೋತ್ರಿ ಕಿಡಿ

ಉಚಿತ ಕೊಡುಗೆ: ಪಕ್ಷಗಳಿಗೆ ತಡೆ ಸಾಧ್ಯವಿಲ್ಲ: ಸುಪ್ರೀಂಕೋರ್ಟ್‌

ಉಚಿತ ಕೊಡುಗೆ: ಪಕ್ಷಗಳಿಗೆ ತಡೆ ಸಾಧ್ಯವಿಲ್ಲ: ಸುಪ್ರೀಂಕೋರ್ಟ್‌

ಪ್ಯಾರಾ ಏಷ್ಯನ್‌ ಗೇಮ್ಸ್‌ :ಪರಿಷ್ಕೃತ ದಿನಾಂಕ ಪ್ರಕಟ

ಪ್ಯಾರಾ ಏಷ್ಯನ್‌ ಗೇಮ್ಸ್‌ :ಪರಿಷ್ಕೃತ ದಿನಾಂಕ ಪ್ರಕಟ

ಚಂದ್ರಕಾಂತ್‌ ಪಂಡಿತ್‌ ಕೋಲ್ಕತಾ ನೈಟ್‌ರೈಡರ್ ತಂಡದ ನೂತನ ಕೋಚ್‌

ಚಂದ್ರಕಾಂತ್‌ ಪಂಡಿತ್‌ ಕೋಲ್ಕತಾ ನೈಟ್‌ರೈಡರ್ ತಂಡದ ನೂತನ ಕೋಚ್‌

ಲಾರ್ಡ್ಸ್‌ ಟೆಸ್ಟ್‌ ಪಂದ್ಯ: ಇಂಗ್ಲೆಂಡ್‌ ಬ್ಯಾಟಿಂಗ್‌ ಕುಸಿತ

ಲಾರ್ಡ್ಸ್‌ ಟೆಸ್ಟ್‌ ಪಂದ್ಯ: ಇಂಗ್ಲೆಂಡ್‌ ಬ್ಯಾಟಿಂಗ್‌ ಕುಸಿತ

ಹಾಸ್ಪಿಟಾಲಿಟಿ ಕ್ಷೇತ್ರಕ್ಕೆ ನೆರವು ವಿಸ್ತರಣೆ: ಸಚಿವ ಅನುರಾಗ್‌ ಠಾಕೂರ್‌

ಹಾಸ್ಪಿಟಾಲಿಟಿ ಕ್ಷೇತ್ರಕ್ಕೆ ನೆರವು ವಿಸ್ತರಣೆ: ಸಚಿವ ಅನುರಾಗ್‌ ಠಾಕೂರ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಒಳನಾಡು ಮೀನುಗಾರಿಕೆಗೆ ಉತ್ತೇಜನ: ಸಚಿವ ಅಂಗಾರ

ಒಳನಾಡು ಮೀನುಗಾರಿಕೆಗೆ ಉತ್ತೇಜನ: ಸಚಿವ ಅಂಗಾರ

dr-sdk

ರಿಪೋರ್ಟ್‌ ಕಾರ್ಡ್‌ ಜನರ ಮುಂದಿಡುವ ಸಮಯ ಬಂದಿದೆ: ಡಾ| ಸುಧಾಕರ್‌

bjp-congress

ಬಿಜೆಪಿ ಜನೋತ್ಸವ ಮತ್ತೆ ಮುಂದೂಡಿಕೆ; ಕಾಂಗ್ರೆಸ್‌ ಲೇವಡಿ

1-sddasd

ಧರ್ಮ ಸಂಘರ್ಷ ಶೀಘ್ರ ಇನ್ನಷ್ಟು ಉಲ್ಬಣ, ರಾಜಕೀಯ ಪಕ್ಷಗಳು ಇಬ್ಭಾಗ: ಕೋಡಿಮಠ ಶ್ರೀ

ರಾಜ್ಯದಲ್ಲಿಂದು 886 ಕೋವಿಡ್‌ ಪಾಸಿಟಿವ್‌: ಮೂವರು ಸಾವು

ರಾಜ್ಯದಲ್ಲಿಂದು 886 ಕೋವಿಡ್‌ ಪಾಸಿಟಿವ್‌: ಮೂವರು ಸಾವು

MUST WATCH

udayavani youtube

udayavani youtube

ಸಂಸದೀಯ ಮಂಡಳಿ, ಚುನಾವಣಾ ಸಮತಿಯಲ್ಲಿ BSYಗೆ ಮಹತ್ವದ ಸ್ಥಾನ

udayavani youtube

ಈ ನಡಿಗೆಯನ್ನು ಇಡೀ ದೇಶವೇ ಹಿಂತಿರುಗಿ ನೋಡಿತು!!

udayavani youtube

ಆಳವಾದ ಕಂದಕಕ್ಕೆ ಬಸ್ ಉರುಳಿ ಬಿದ್ದು, ಐಟಿಬಿಪಿಯ 6 ಯೋಧರು ಸಾವು

udayavani youtube

ಈ ನಡಿಗೆಯನ್ನು ಇಡೀ ದೇಶವೇ ಹಿಂತಿರುಗಿ ನೋಡಿತು!!

ಹೊಸ ಸೇರ್ಪಡೆ

ಒಳನಾಡು ಮೀನುಗಾರಿಕೆಗೆ ಉತ್ತೇಜನ: ಸಚಿವ ಅಂಗಾರ

ಒಳನಾಡು ಮೀನುಗಾರಿಕೆಗೆ ಉತ್ತೇಜನ: ಸಚಿವ ಅಂಗಾರ

1-ddad

ಅನುರಾಗ್ ಕಶ್ಯಪ್ ವಿರುದ್ಧ ವಿವೇಕ್ ರಂಜನ್ ಅಗ್ನಿಹೋತ್ರಿ ಕಿಡಿ

ಉಚಿತ ಕೊಡುಗೆ: ಪಕ್ಷಗಳಿಗೆ ತಡೆ ಸಾಧ್ಯವಿಲ್ಲ: ಸುಪ್ರೀಂಕೋರ್ಟ್‌

ಉಚಿತ ಕೊಡುಗೆ: ಪಕ್ಷಗಳಿಗೆ ತಡೆ ಸಾಧ್ಯವಿಲ್ಲ: ಸುಪ್ರೀಂಕೋರ್ಟ್‌

ಪ್ಯಾರಾ ಏಷ್ಯನ್‌ ಗೇಮ್ಸ್‌ :ಪರಿಷ್ಕೃತ ದಿನಾಂಕ ಪ್ರಕಟ

ಪ್ಯಾರಾ ಏಷ್ಯನ್‌ ಗೇಮ್ಸ್‌ :ಪರಿಷ್ಕೃತ ದಿನಾಂಕ ಪ್ರಕಟ

ಚಂದ್ರಕಾಂತ್‌ ಪಂಡಿತ್‌ ಕೋಲ್ಕತಾ ನೈಟ್‌ರೈಡರ್ ತಂಡದ ನೂತನ ಕೋಚ್‌

ಚಂದ್ರಕಾಂತ್‌ ಪಂಡಿತ್‌ ಕೋಲ್ಕತಾ ನೈಟ್‌ರೈಡರ್ ತಂಡದ ನೂತನ ಕೋಚ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.