ರಸ್ತೆ ಕಳಪೆಯಾಗದಂತೆ ಸ್ಥಳೀಯರೇ ಮುತುವರ್ಜಿ ವಹಿಸಿ: ಬೋಪಯ್ಯ

Team Udayavani, Jun 16, 2019, 5:10 AM IST

ಮಡಿಕೇರಿ: ಇಲ್ಲಿಗೆ ಸಮೀಪದ ಮೇಕೇರಿ ಗ್ರಾಮಪಂಚಾಯತ್‌ ಮತ್ತು ಹಾಕತ್ತೂರು ಗ್ರಾಮ ಪಂಚಾಯತ್‌ವ್ಯಾಪ್ತಿಯ ನಾನಾ ರಸ್ತೆ ಕಾಮಗಾರಿಗಳಿಗೆ ಶಾಸಕ‌ ಕೆ.ಜಿ.ಬೋಪಯ್ಯ ಅವರು ಗುರುವಾರ ಚಾಲನೆ ನೀಡಿದರು.
ಸುಮಾರು 20 ಲಕ್ಷ ರೂ.ವೆಚ್ಚದಲ್ಲಿ ನಡೆಯಲಿರುವ ಹಾಕತ್ತೂರು ಬಿಳಿಗೇರಿ ತೋರಮಣ ರಸ್ತೆ ಕಾಮಗಾರಿಯನ್ನು ರಿಬ್ಬನ್‌ ತುಂಡು ಮಾಡುವ ಮೂಲಕ ಉದ್ಘಾಟಿಸಿದರು.

ಹಾಕತ್ತೂರು ತೊಂಬತ್ತುಮನೆ ರಸ್ತೆ ಕಾಮಗಾರಿಯನ್ನು ಮತ್ತು ಮೇಕೇರಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ನವ ಗ್ರಾಮ ರಸ್ತೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸುವದರ ಮೂಲಕ ಚಾಲನೆ ನೀಡಿದರು.

ಮುತುವರ್ಜಿ ವಹಿಸಿ
ಈ ಸಂದರ್ಭ ಮಾತನಾಡಿದ ಶಾಸಕರಾದ ಕೆ.ಜಿ.ಬೋಪಯ್ಯಅವರು, ರಸ್ತೆಯ ಕಾಮಗಾರಿಗಳು ಗುಣ ಮಟ್ಟದಿಂದ ನಡೆದರೆ ಮಾತ್ರ ಅಂತಹ ರಸ್ತೆಗಳು ದೀರ್ಘ‌ಕಾಲ ಸುಸ್ಥಿತಿ ಯಲ್ಲಿರುತ್ತವೆ. ಆದುದರಿಂದ ರಸ್ತೆ ಕಾಮಗಾರಿಗಳು ಕಳಪೆಯಾಗದಂತೆ ಸ್ಥಳೀಯರೇ ಮುತುವರ್ಜಿ ವಹಿಸಿ ಗಮನಹರಿಸುವಂತೆ ಅವರು ಮನವಿ ಮಾಡಿದರು.

ಜಿಲ್ಲಾ ಪಂಚಾಯತ್‌ ಅಧ್ಯಕ್ಷ ಬಿ.ಎ.ಹರೀಶ್‌, ತಾಲೂಕು ಪಂಚಾಯತ್‌ಸದಸ್ಯೆ ಕುಮುದ, ಹಾಕತ್ತೂರು ಗ್ರಾಮ ಪಂಚಾಯತ್‌ ಅಧ್ಯಕ್ಷರಾದ ಶಾರದ, ಮೇಕೇರಿ ಗ್ರಾಮ ಪಂಚಾಯತ್‌ ಅಧ್ಯಕ್ಷರಾದ ಜಯಂತಿ, ಮೇಕೇರಿ ಮತ್ತು ಹಾಕತ್ತೂರು ಗ್ರಾಮ ಪಂಚಾಯತ್‌ಸದಸ್ಯರುಗಳು, ಬಿಜೆಪಿಯ ಗ್ರಾಮ ಸಮಿತಿ ಪದಾಧಿಕಾರಿಗಳು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ