Udayavni Special

ಲೋಕಸಭಾ ಚುನಾವಣೆ : ಕೊಡಗಿನಲ್ಲಿ  56 ತಂಡಗಳ ರಚನೆ


Team Udayavani, Mar 13, 2019, 1:00 AM IST

loka-sabha-chunavane.png

ಮಡಿಕೇರಿ: ಕೊಡಗು ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಎ..18ರಂದು ಚುನಾವಣೆ ನಡೆಯಲಿದ್ದು, ಈ ಸಂಬಂಧ ರವಿವಾರ ಸಂಜೆಯಿಂದಲೇ ನೀತಿಸಂಹಿತೆ ಜಾರಿಯಲ್ಲಿದ್ದು, ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ತಡೆಯುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ 56 ತಂಡಗಳನ್ನು ರಚಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಟಿ. ಯೋಗೇಶ್‌ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಚುನಾವಣಾ ಆಯೋಗ ಕಟ್ಟುನಿಟ್ಟಿನ ನಿರ್ದೇಶ‌ ನೀಡಿದೆ ಎಂದು ಹೇಳಿದರು.

ಆ ನಿಟ್ಟಿನಲ್ಲಿ ಓರ್ವ ಕೆಮರಾಮನ್‌ ಸಹಿತ ನಾಲ್ವರನ್ನು ಒಳಗೊಂಡ ಒಟ್ಟು 56 ತಂಡಗಳನ್ನು ರಚಿಸಲಾಗಿದೆ. ತಂಡದಲ್ಲಿ ಓರ್ವ ಮ್ಯಾಜಿಸ್ಟ್ರೇಟ್‌ ದರ್ಜೆಯ ಅಧಿಕಾರಿಯೂ ಇರಲಿದ್ದಾರೆ ಎಂದು ತಿಳಿಸಿದರು.

ಚುನಾವಣೆಗೆ ಸಂಬಂಧಿಸಿದಂತೆ 41 ಸೆಕ್ಟರ್‌ ಆಫೀಸರ್‌ಗಳು, 42 ಸ್ಥಿರ ಕಣ್ಗಾವಲು ತಂvಗಳು‌ ಹಾಗೂ 14 ಫ್ಲೈಯಿಂಗ್‌ ಸ್ಕ್ವಾಡ್‌ಗಳನ್ನು ನೇಮಿಸಲಾಗಿದ್ದು, 3 ಅಂತರ ರಾಜ್ಯ ಚೆಕ್‌ಪೋಸ್ಟ್‌ ಸೇರಿದಂತೆ 14 ಚೆಕ್‌ಪೋಸ್ಟ್‌ ಗಳನ್ನು ಆರಂಭಿಸಲಾಗಿದೆ. 

ಶೇ.3 ಮತದಾರರ ಹೆಚ್ಚಳ
ಕಳೆದ (2014) ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 2,10,092 ಮಂದಿ ಪುರುಷರು, 2,11,072 ಮಂದಿ ಮಹಿಳೆಯರು ಮತ್ತು 22 ಮಂದಿ ಇತರರು ಸೇರಿದಂತೆ ಒಟ್ಟು 4,21,186 ಮಂದಿ ಮತದಾರರಿದ್ದರೆ, ಈ ಬಾರಿ 2,17,231 ಮಂದಿ ಪುರುಷರು 2,18,298 ಮಂದಿ ಮಹಿಳೆಯರು ಹಾಗೂ 25 ಮಂದಿ ಇತರರು ಸೇರಿದಂತೆ ಮತದಾರರ ಸಂಖ್ಯೆ 4,35,554ಕ್ಕೆ ಏರಿಕೆಯಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ ಈ ಬಾರಿ ಶೇ.3ರಷ್ಟು ಮತದಾರರ ಹೆಚ್ಚಳವಾಗಿದೆ ಎಂದು ವಿವರಿಸಿದರು.

ಜಿಲ್ಲೆಯಲ್ಲಿ ಈ ಬಾರಿ 18-19ವರ್ಷದ 7,080 ಮಂದಿ ಮತದಾರರನ್ನು ಗುರುತಿಸಲಾಗಿದ್ದು, ಕಳೆದ 15 ದಿನಗಳಲ್ಲಿ 2ಸಾವಿರ ಹೊಸ ಮತದಾರರ ನೋಂದಣಿಯಾಗಿದೆ. ಮತದಾರರ ನೋಂದಣಿ ಪ್ರಕ್ರಿಯೆ ಇನ್ನೂ ಜಾರಿಯಲ್ಲಿದೆ ಎಂದು ಅವರು ತಿಳಿಸಿದರು.

ಶೇ.75ಕ್ಕಿಂತ ಅಧಿಕ ಮತದಾನ ಗುರಿ: ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಮುಂದುವರಿದಿದೆ. 

ಇದರೊಂದಿಗೆ ಎಲ್ಲ ಬೂತ್‌ ಮಟ್ಟಗಳಲ್ಲಿ ಮತಯಂತ್ರಗಳ ಬಳಕೆಯ ಬಗ್ಗೆಯೂ ಮತದಾರರಿಗೆ ಅರಿವು ಮೂಡಿಸಲಾಗುತ್ತಿದೆ. ಆ ಮೂಲಕ ಜಿಲ್ಲೆಯಲ್ಲಿ ಶೇ.75ಕ್ಕಿಂತ ಅಧಿಕ ಮತದಾನ ಮಾಡಿಸುವ ಗುರಿ ಹೊಂದಲಾಗಿದೆ. ಕಳೆದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ.71.88ರಷ್ಟು ಮತದಾನವಾಗಿತ್ತು ಎಂದು ಹೇಳಿದರು.

ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 543 ಮತಗಟ್ಟೆಗಳನ್ನು ತೆರೆಯಲಾಗುವುದು.ಇದಕ್ಕಾಗಿ ಈಗಾಗಲೇ 815 ಮತಯಂತ್ರ ಹಾಗೂ 734 ವಿವಿ ಪ್ಯಾಟ್‌ ಯಂತ್ರಗಳನ್ನು ತರಿಸಿ ಪ್ರಥಮ ಹಂತದ ತಪಾಸಣೆ ಮುಗಿಸಲಾಗಿದೆ ಎಂದರು.  ಚುನಾವಣೆಗಾಗಿ ಒಟ್ಟು 2608 ಮಂದಿ ಸಿಬಂದಿಯನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು

ವಾಹನ ಸೌಲಭ್ಯಜಿಲ್ಲೆಯ ಒಟ್ಟು 4,35,554 ಮತದಾರರಿಗೂ ಗುರು ತಿನ ಚೀಟಿ ವಿತರಿಸಲಾಗುತ್ತಿದ್ದು,  2769 ಅಂಗವಿಕಲ  ಮತದಾರರನ್ನು ಗುರುತಿಸಲಾಗಿದೆ. ಇನ್ನೂ ಬಿಟ್ಟು ಹೋಗಿರುವ ಅಂಗವಿಕಲ ಮತದಾರರನ್ನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ. ಈ ಹಿಂದೆೆ ಮತಗಟ್ಟೆಗಳಲ್ಲಿ ರ್‍ಯಾಂಪ್‌ ಹಾಗೂ ವೀÇಚೇರ್‌ ಸೌಲಭ್ಯ ವಿರುತ್ತಿದ್ದರೆ, ಈ ಬಾರಿ ಮನೆಯಿಂದ ಮತಗಟ್ಟೆಗೆ ಕರೆತಲು ವಾಹನ ವ್ಯವಸ್ಥೆ ಮಾಡಲಾ ಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದರು. ಚುನಾವಣೆಗೆ ಸಂಬಂಧಿ ಸಿದ ಮಾಹಿತಿ ಹಾಗೂ ದೂರುಗಳಿಗಾಗಿ 24 ಗಂಟೆ ಕಾರ್ಯಾ ಚರಿಸುವ ಕಂಟ್ರೋಲ್‌ ರೂಂ ತೆರೆಯಲಾಗಿದ್ದು, 1950 ಸಂಖ್ಯೆಗೆ ಕರೆ ಮಾಡಬಹುದು ಎಂದು ತಿಳಿಸಿದರು.

ಟಾಪ್ ನ್ಯೂಸ್

ಕೇರಳದಲ್ಲಿ ಮತ್ತೆ ಮಳೆ

ಕೇರಳದಲ್ಲಿ ಮತ್ತೆ ಮಳೆ

ನಾಲಗೆ ಬಿಗಿ ಹಿಡಿಯಿರಿ: ನೇತಾರರಿಗೆ ಚುನಾವಣ ಆಯೋಗ ಸೂಚನೆ

ನಾಲಗೆ ಬಿಗಿ ಹಿಡಿಯಿರಿ: ನೇತಾರರಿಗೆ ಚುನಾವಣ ಆಯೋಗ ಸೂಚನೆ

ಬೆಂಗಳೂರಿನ ವಿಜ್ಞಾನಿಗಳ ಮಹತ್ವದ ಸಂಶೋಧನೆ: ಬಸವನಹುಳು ಹೊಸ ಪ್ರಭೇದ ಪತ್ತೆ

ಬೆಂಗಳೂರಿನ ವಿಜ್ಞಾನಿಗಳ ಮಹತ್ವದ ಸಂಶೋಧನೆ: ಬಸವನಹುಳು ಹೊಸ ಪ್ರಭೇದ ಪತ್ತೆ

ಭಾರತ, ತಾಲಿಬಾನ್‌ ಪ್ರತಿನಿಧಿಗಳ ಚರ್ಚೆ

ಭಾರತ, ತಾಲಿಬಾನ್‌ ಪ್ರತಿನಿಧಿಗಳ ಚರ್ಚೆ

Untitled-1

100 ಕೋಟಿ ಡೋಸ್‌ ದಾಖಲೆ: ಹೊಸ ಮೈಲಿಗಲ್ಲು; ದೇಶಾದ್ಯಂತ ಸಂಭ್ರಮ

ಶತಕೋಟಿ  ಡೋಸ್‌ ದಾಖಲೆ

ಶತಕೋಟಿ ಡೋಸ್‌ ದಾಖಲೆ

ಜನರ ಒಗ್ಗಟ್ಟಿನಿಂದಲೇ ಶತಕೋಟಿ ಸಾಧನೆ

ಜನರ ಒಗ್ಗಟ್ಟಿನಿಂದಲೇ ಶತಕೋಟಿ ಸಾಧನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಡಿಕೇರಿ: ವಿಷ ಸೇವಿಸಿ ನಾಲ್ಕು ದಿನದ ಬಳಿಕ ಸಾವೀಗೀಡಾದ ಗ್ರಾಮ ಪಂಚಾಯತ್ ಸದಸ್ಯೆ.!

ಮಡಿಕೇರಿ: ವಿಷ ಸೇವಿಸಿ ನಾಲ್ಕು ದಿನದ ಬಳಿಕ ಸಾವಿಗೀಡಾದ ಗ್ರಾಮ ಪಂಚಾಯತ್ ಸದಸ್ಯೆ.!

ಕುಬಣೂರು ಸೇತುವೆ ಕುಸಿತ; ಸಂಪರ್ಕ ರಸ್ತೆ ತಡೆ

ಕುಬಣೂರು ಸೇತುವೆ ಕುಸಿತ; ಸಂಪರ್ಕ ರಸ್ತೆ ತಡೆ

ಸೀತಾರಾಮ ಕೆದಿಲಾಯ ಅವರ ಗ್ರಾಮಯಾತ್ರೆಯ ವಿಶೇಷ ಸಾಕ್ಷ್ಯಚಿತ್ರ ‘ಪರಿಕ್ರಮ ಸಂತ’ ಅನಾವರಣ

ಸೀತಾರಾಮ ಕೆದಿಲಾಯ ಅವರ ಗ್ರಾಮಯಾತ್ರೆಯ ವಿಶೇಷ ಸಾಕ್ಷ್ಯಚಿತ್ರ ‘ಪರಿಕ್ರಮ ಸಂತ’ ಅನಾವರಣ

Untitled-1

ಕಾಂಗ್ರೆಸ್ ಮಾಡಿದ ಅಭಿವೃದ್ಧಿಯನ್ನು ಬಿಜೆಪಿ ಮಾರಾಟ ಮಾಡುತ್ತಿದೆ : ಸಂಸದ ಡಿ.ಕೆ.ಸುರೇಶ್ ಆರೋಪ

ಮಂಗಳೂರು-ಕಾಸರಗೋಡು: ರಾ.ಹೆ. 66ರ ಷಟ್ಪಥ ಕಾಮಗಾರಿ ಆರಂಭ

ಮಂಗಳೂರು-ಕಾಸರಗೋಡು: ರಾ.ಹೆ. 66ರ ಷಟ್ಪಥ ಕಾಮಗಾರಿ ಆರಂಭ

MUST WATCH

udayavani youtube

Video Viral : ಜಾನಪದ ಶೈಲಿಯ ಹಾಡಿನ ಮೂಲಕ ಒಡ್ಡೋಲಗದ ಆಮಂತ್ರಣ

udayavani youtube

ದುಬಾರಿ ಗಿಫ್ಟ್ ಗಳನ್ನು ಮಾರಿ ತಿಂದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ?

udayavani youtube

Brazilian Golden Spoon Cherry ಸುಲಭವಾಗಿ ಬೆಳೆಸಿ ಕೈತುಂಬಾ ಸಂಪಾದಿಸಿ

udayavani youtube

ಶ್ರೀರಂಗಪಟ್ಟಣ ಬಾರಿ ಮಳೆಗೆ ಕೊಚ್ಚಿ ಹೋದ ರೈತರ ಬದುಕು

udayavani youtube

ಅಬ್ಬಾ ಬದುಕಿದೆ ಬಡ ಜೀವ ! ಚಿರತೆ ಬಾಯಿಯಿಂದ ತಪ್ಪಿಸಿಕೊಂಡ ಶ್ವಾನದ ಕಥೆ

ಹೊಸ ಸೇರ್ಪಡೆ

ಕೇರಳದಲ್ಲಿ ಮತ್ತೆ ಮಳೆ

ಕೇರಳದಲ್ಲಿ ಮತ್ತೆ ಮಳೆ

ನಾಲಗೆ ಬಿಗಿ ಹಿಡಿಯಿರಿ: ನೇತಾರರಿಗೆ ಚುನಾವಣ ಆಯೋಗ ಸೂಚನೆ

ನಾಲಗೆ ಬಿಗಿ ಹಿಡಿಯಿರಿ: ನೇತಾರರಿಗೆ ಚುನಾವಣ ಆಯೋಗ ಸೂಚನೆ

ಬೆಂಗಳೂರಿನ ವಿಜ್ಞಾನಿಗಳ ಮಹತ್ವದ ಸಂಶೋಧನೆ: ಬಸವನಹುಳು ಹೊಸ ಪ್ರಭೇದ ಪತ್ತೆ

ಬೆಂಗಳೂರಿನ ವಿಜ್ಞಾನಿಗಳ ಮಹತ್ವದ ಸಂಶೋಧನೆ: ಬಸವನಹುಳು ಹೊಸ ಪ್ರಭೇದ ಪತ್ತೆ

ಭಾರತ, ತಾಲಿಬಾನ್‌ ಪ್ರತಿನಿಧಿಗಳ ಚರ್ಚೆ

ಭಾರತ, ತಾಲಿಬಾನ್‌ ಪ್ರತಿನಿಧಿಗಳ ಚರ್ಚೆ

12 ವರ್ಷದ ಬಾಲಕಿಯಿಂದ ಸ್ಕಾಟ್ಲೆಂಡ್‌ ಜೆರ್ಸಿ ವಿನ್ಯಾಸ!

12 ವರ್ಷದ ಬಾಲಕಿಯಿಂದ ಸ್ಕಾಟ್ಲೆಂಡ್‌ ಜೆರ್ಸಿ ವಿನ್ಯಾಸ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.