ಮಡಿಕೇರಿ: ದಂಪತಿ ಆತ್ಮಹತ್ಯೆಗೆ ಶರಣು

Team Udayavani, Apr 2, 2019, 6:30 AM IST

ಮಡಿಕೇರಿ: ಪತಿ-ಪತ್ನಿ ಜಗಳ ಸಾವಿನಲ್ಲಿ ಅಂತ್ಯವಾಗಿರುವ ಘಟನೆ ಮಡಿಕೇರಿ ನಗರದ ಪಂಪಿನ ಕೆರೆ ಬಡಾವಣೆಯಲ್ಲಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ದಂಪತಿ ನೇಣಿಗೆ ಶರಣಾ ಗಿದ್ದು, ಹೆಣ್ಣು ಮಗು ಅನಾಥವಾಗಿದೆ.

ನಗರದ ಖಾಸಗಿ ಶಾಲೆಯೊಂದರಲ್ಲಿ ಗಣಿತ ಶಿಕ್ಷಕರಾಗಿದ್ದ ಚೇತನ್‌ (34), ವಾಣಿ (27) ಆತ್ಮಹತೈಗೆ ಶರಣಾದ ದಂಪತಿ. ಚೇತನ್‌ ಮೂಲತಃ ತಿಪಟೂರು ನಿವಾಸಿಯಾಗಿದ್ದು, 4 ವರ್ಷಗಳ ಹಿಂದೆ ತುಮಕೂರು ಮೂಲದ ವಾಣಿ ಅವರನ್ನು ವಿವಾಹ ವಾಗಿದ್ದರು. ಅವರಿಗೆ 3 ವರ್ಷದ ಮಗುವಿದ್ದು, ಕೆಲವು ದಿನಗಳ ಹಿಂದೆ ದಂಪತಿ ನಡುವೆ ಕ್ಷುಲ್ಲಕ ವಿಚಾರಕ್ಕೆ ಮನಸ್ತಾಪವಾಗಿ, ಬಳಿಕ ಎರಡೂ ಕುಟುಂಬಗಳ ಸದಸ್ಯರು ಬಗೆ ಹರಿಸಿ ದ್ದರು ಎನ್ನಲಾಗಿದೆ.

ಪೋಷಕರಿಗೆ ತಿಳಿಸಿ ಕೃತ್ಯ
ಎ. 1ರ ಮಧ್ಯಾಹ್ನ ವೇಳೆಯಲ್ಲಿ ವಾಣಿ ತನ್ನ ಹೆತ್ತವರಿಗೆ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಳು ಎನ್ನಲಾಗಿದೆ. ಆಕೆಯ ಹೆತ್ತವರು ತತ್‌ಕ್ಷಣ ಚೇತನ್‌ಗೆ ಕರೆ ಮಾಡಿ ಈ ವಿಚಾರವನ್ನು ತಿಳಿ ಸಿದ್ದು, ಆತ ಮನೆಗೆ ಬಂದಾಗ ಆಕೆ ಸಾವನ್ನಪ್ಪಿರುವುದು ಕಂಡು ಬಂದಿದೆ. ಇದರಿಂದ ಆಘಾತಗೊಂಡ ಚೇತನ್‌ ಮನೆಯ ಹೊರಗೆ ಪ್ಲಾಸ್ಟಿಕ್‌ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದರು. ಸಾಯುವ ಮುನ್ನ ಚೇತನ್‌ ತನ್ನ ಹೆತ್ತವರಿಗೆ ಕರೆ ಮಾಡಿ ಪತ್ನಿ ಆತ್ಮಹತ್ಯೆಗೈದಿರುವ ವಿಚಾರ ತಿಳಿಸಿ ತಾನೂ ಆತ್ಮಹತ್ಯೆ ಮಾಡಿ ಕೊಳ್ಳುತ್ತಿರುವುದಾಗಿ ಹೇಳಿದ್ದರು. ತತ್‌ಕ್ಷಣ ಚೇತನ್‌ ಹೆತ್ತವರು ಮಡಿಕೇರಿ ನಗರ ಪೊಲೀಸರಿಗೆ ಮಾಹಿತಿ ನೀಡಿದರು. ಆದರೆ ಪೊಲೀಸರು ಸ್ಥಳಕ್ಕೆ ಬರುವ ಮೊದಲೇ ಇಬ್ಬರೂ ಮೃತಪಟ್ಟಿದ್ದರು. ನಗರ ಠಾಣಾಧಿಕಾರಿ ಷಣ್ಮುಗ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ