ಕುಶಾಲನಗರ, ಕೊಪ್ಪ ಭಾಗದಲ್ಲಿ 500ಕ್ಕೂ ಹೆಚ್ಚು ಮನೆಗಳು ಜಲಾವೃತ

Team Udayavani, Aug 13, 2019, 5:15 AM IST

ಮಡಿಕೇರಿ: ಕುಶಾಲನಗರ ಹಾಗೂ ಕೊಪ್ಪ ವ್ಯಾಪ್ತಿಯಲ್ಲಿ ಕಾವೇರಿಯ ಪ್ರವಾಹದ ಅಬ್ಬರಕ್ಕೆ ಸುಮಾರು 500ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದು, ಕುಶಾಲನಗರದಲ್ಲಿ ಕಾವೇರಿ ನದಿ ನೀರಿನ ಪ್ರವಾಹದಿಂದಾಗಿ ರವಿವಾರವೂ ರಾಷ್ಟ್ರೀಯ ಹೆದ್ದಾರಿ ಬಂದ್‌ ಅಗಿತ್ತು.ಕೊಪ್ಪ ಮತ್ತು ಕುಶಾಲನಗರ ಕಡೆಗೆ ಜನರನ್ನು ಬೋಟ್‌ ಮೂಲಕ ಸಾಗಿಸುವ ಕಾರ್ಯ ನಡೆಯುತ್ತಿದೆ.

ಕುಶಾಲನಗರ ಸಮೀಪದ ತಾವರೆಕರೆ ಹತ್ತಿರ ಬಳಿ ರಸ್ತೆ ಮೇಲೆ ಭಾರೀ ಪ್ರಮಾಣದಲ್ಲಿ ನೀರು ನಿಂತಿದ್ದರೂ, ಶನಿವಾರ ರಾತ್ರಿ ಚಾಲಕನೊಬ್ಬ ಬಸ್‌ನ್ನು ದಾಟಿಸಲು ಮುಂದಾಗಿ ನೀರಿನಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ. ಬಳಿಕ ಕುಶಾಲನಗರ ಡಿವೈಎಸ್‌ಪಿ ಮುರಳೀಧರ್‌ ಮತ್ತು ತಂಡದವರು ಬಸ್‌ನಲ್ಲಿದ್ದ ಪ್ರಯಾಣಿಕರನ್ನು ಅಪಾಯದಿಂದ ಪಾರು ಮಾಡಿದರು.ಕಳೆದ ಮೂರು ದಿನಗಳಿಂದ ಸುರಿದ ಮಳೆಯಿಂದಾಗಿ ಕಾವೇರಿ- ಹಾರಂಗಿ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿ ಕೂಡಿಗೆ, ಕೂಡೂÉರು, ಮುಳ್ಳಸೋಗೆ ಕೂಡುಮಂಗಳೂರು, ಹೆಬ್ಟಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 350ಕ್ಕೂ ಹೆಚ್ಚು ಮನೆಗಳು ಜಲಾವೃತ ಗೂಂಡಿವೆ.

ಕೂಡುಮಂಗಳೂರು ಗ್ರಾಮ ಪಂಚಾಯತಿಯ ವಿವೇಕಾನಂದ ಬಡಾವಣೆಯ 50 ಮನೆಗಳು, ಕೂಡೂರು ಬಡಾವಣೆ 36ಮನೆ, ಕೂಡಿಗೆಯಲ್ಲಿ ಹಾರಂಗಿ ತಟದಲ್ಲಿರುವ 60ಮನೆಗಳು, ಮುಳ್ಳಸೋಗೆ ಗ್ರಾಮ ಪಂಚಾಯತಿಯ 3 ಬಡಾವಣೆ ಗಳು ಸೇರಿದಂತೆ 150ಕ್ಕೂ ಹೆಚ್ಚು ಮನೆಗಳು ಶನಿವಾರ ಜಲಾವೃತಗೊಂಡಿದ್ದು, ಭಾನುವಾರವೂ ಪ್ರವಾಹ ಪರಿಸ್ಥಿತಿ ಮುಂದುವರಿದಿತ್ತು.

ಈ ಜಲಾವೃತಗೊಂಡ ಪ್ರದೇಶದ ಜನರಿಗೆ ಕೂಡಿಗೆ ಸರಕಾರಿ ಪ್ರಾಥಮಿಕ ಶಾಲೆ ಯಲ್ಲಿ ಪರಿಹಾರ ಕೇಂದ್ರವನ್ನು ತೆರೆಯಲಾಗಿದೆ.

ಆಯಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಪರಿಹಾರ ಕೇಂದ್ರಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ಜಿ.ಪಂ. ಸದಸ್ಯರ ಮನೆಗೆ ಹಾನಿ
ಕೊಡಗು ಜಿಲ್ಲಾ ಪಂಚಾಯತ್‌ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ಕೆ,ಪಿ. ಚಂದ್ರಕಲಾ ಅವರ ಮನೆ ಕಾವೇರಿ ನದಿ ನೀರಿನಿಂದ ಆವೃತವಾಗಿದೆ. ಗುಮ್ಮನಕೂಲ್ಲಿ ಗ್ರಾಮಕ್ಕೆ ಕಾವೇರಿ ನದಿ ನೀರು ನುಗ್ಗಿದ ಪರಿಣಾಮ ಚಂದ್ರಕಲಾ ಅವರ ಮನೆ ಮತ್ತು ಅವರಿಗೆ ಸೇರಿದ ತೋಟ ಮುಳುಗಡೆಗೊಂಡಿದೆ.

ನೀರು ಅತಿ ವೇಗವಾಗಿ ನುಗ್ಗಿದ ಪರಿಣಾಮ ಮನೆಯ ಯಾವುದೇ ಸಾಮಗ್ರಿಗಳನ್ನು ಸಾಗಾಟ ಮಾಡಲು ಸಾದ್ಯವಾಗಲಿಲ್ಲ ಎಂದು ಚಂದ್ರಕಲಾ ತಿಳಿಸಿದ್ದಾರೆ.
ಗೊಬ್ಬರ ಗೋದಾಮಿಗೂ ಹಾನಿ: ಹಾರಂಗಿ ನದಿ ತಟದಲ್ಲಿರುವ ಕೂಡಿಗೆಯ ಕೂಡುಮಂಗಳೂರು ರಾಮೇಶ್ವರ ಸಹಕಾರ ಸಂಘದ ಗೊಬ್ಬರದ ಗೂದ್ದಮು ನೀರಿನಿಂದ ಜಲಾವೃತಗೊಂಡಿದೆ. ಈ ಬಾರಿ ಕಾವೇರಿ- ಹಾರಂಗಿ ಸಂಗಮ ಸ್ಥಳದಲ್ಲಿ ನೀರು ಅಧಿಕಗೊಂಡು ಕೂಡಿಗೆ ಸೇತುವೆ ಕಡೆಗೆ ತಳ್ಳಲ್ಪಟ್ಟ ಹಿನ್ನೆಲೆಯಲ್ಲಿ ಗೊಬ್ಬರ ಸಂಗ್ರಹ ಮಾಡಿದ ಗೋದಾಮಿಗೆ ಒಂದೇ ಸಮನೆ ನೀರು ನುಗ್ಗಿ ಗೋದಾಮಿನಲ್ಲಿದ್ದ ಗೊಬ್ಬರದ ಮೂಟೆಗಳು ನೀರಿನಲ್ಲಿ ಮುಳುಗಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

ಸೇತುವೆಗೆ ಹಾನಿ
ಕಣಿವೆಯ ರಾಮಲಿಂಗೇಶ್ವರ ದೇವಾಲಯದ ಬಳಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ತೂಗು ಸೇತುವೆ ಕಾವೇರಿ ನದಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ ಕಾವೇರಿ- ಹಾರಂಗಿ ನದಿಗಳಲ್ಲಿ ನೀರಿನ ಮಟ್ಟ ಹೆ‌ಚ್ಚಾಗಿ ತೂಗು ಸೇತುವೆಯ ಮೇಲೆ ಹರಿಯುತ್ತಿತ್ತು. ಶನಿವಾರ ಅಪರಾಹ್ನ ನೀರು ಹೆಚ್ಚಾದ ಪರಿಣಾಮವಾಗಿ ತೂಗು ಸೇತುವೆಯ ಮೆಟ್ಟಿಲುಗಳು ನೀರಿನಲ್ಲಿ ಕೊಚ್ಚಿಹೋಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ