ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಪೂರ್ವಭಾವಿ ಸಭೆ

Team Udayavani, Jun 11, 2019, 5:30 AM IST

ಮಡಿಕೇರಿ: ಮಡಿಕೇರಿ ನಗರಸಭಾ ಚುನಾವಣೆಗೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆಯು ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ‌ ಕೆ.ಕೆ ಮಂಜುನಾಥ್‌ ಕುಮಾರ್‌, 23 ವಾರ್ಡ್‌ ಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಾರ್ಯತಂತ್ರ ರೂಪಿಸಲು ಕಾರ್ಯಕರ್ತರು ಸಿದ್ಧರಾಗಬೇಕೆಂದು ಕರೆ ನೀಡಿದರು.
ಪ್ರತಿ ವಾರ್ಡ್‌ ಗಳಲ್ಲಿ ಕಾರ್ಯಕರ್ತರು ಸಕ್ರೀಯರಾಗಲು ಮಂಜುನಾಥ್‌ ಕುಮಾರ್‌,ಸಲಹೆ ನೀಡಿದರು.

ನಗರ ಕಾಂಗ್ರೆಸ್‌ ಅಧ್ಯಕ್ಷರಾದ ಅಬ್ದುಲ್‌ ರಜಾಕ್‌, ಮಾಜಿ ನಗರಸಭಾ ಅಧ್ಯಕ್ಷರಾದ ಹೆಚ್‌ ಎಂ ನಂದಕುಮಾರ್‌, ಚುಮ್ಮಿ ದೇವಯ್ಯ, ಪ್ರಭು ರೈ, ಜಫ್ರುಲ್ಲಾ, ಟಿಎಂ ಅಯ್ಯಪ್ಪ ಸೇರಿದಂತೆ ಮುಖಂಡರು ಸೂಕ್ತ ಸಲಹೆ ನೀಡಿದರು.

ಸಭೆಯಲ್ಲಿ ವಿಧಾನ ಪರಿಷತ್‌ ಸದಸ್ಯರಾದ ವೀಣಾ ಅಚ್ಚಯ್ಯ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ ಚಂದ್ರಕಲಾ, ಜಿಲ್ಲಾ ಪಂಚಾಯತ್‌ ಸದಸ್ಯೆ ಕುಮುದ ಧರ್ಮಪ್ಪ, ಯುವ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹನಿಫ್ ಸಂಪಾಜೆ, ಡಿಸಿಸಿ ಉಪಾಧ್ಯಕ್ಷ ಸುನಿಲ್‌ ಪತ್ರಾವೋ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಪಿ ಸುರೇಶ್‌ ಉಪಸ್ಥಿತರಿದ್ದರು.

ಪಂಚಾಯತ್‌ ರಾಜ್‌ ಸಂಘಟನೆ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ, ಬ್ಲಾಕ್‌ ಪ್ರಧಾನ ಕಾರ್ಯದರ್ಶಿ ವೆಂಕಟೇಶ್‌, ಜಿಲ್ಲಾ ಕಾಂಗ್ರೆಸ್‌ ವಕ್ತಾರರಾದ ಟಿ.ಈ ಸುರೇಶ್‌, ಕೊಡಗು ಜಿಲ್ಲಾ ಸಾಮಾಜಿಕ ಜಾಲತಾಣದ ಸೂರಜ್‌ ಹೊಸೂರು, ಮಡಿಕೇರಿ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಫ್ಯಾನ್ಸಿ ಪಾರ್ವತಿ, ಯುವ ಕಾಂಗ್ರೆಸ್‌ ಅಧ್ಯಕ್ಷ ಸದಾ ಮುದ್ದಪ್ಪ, ಹೆಚ್‌. ಎಸ್‌ ಯತೀಶ್‌ ಕುಮಾರ್‌, ಪ್ರಮುಖರಾದ ಮುನೀರ್‌, ಸ್ವರ್ಣಲತಾ, ಪ್ರೇಮ ಕೃಷ್ಣಪ್ಪ, ಸುನಿಲ್‌ ನಂಜಪ್ಪ, ಪುಲಿಯಂಡ ಜಗದೀಶ್‌, ಗಿಲ್ಬರ್ಟ್‌ ಲೋಬೋ, ಜಗದೀಶ್‌, ಪ್ರಕಾಶ್‌ ಆಚಾರ್ಯ, ಮೋಹನ್‌ ಕುಮಾರ್‌, ಪ್ಯಾಟ್ರಿಕ್‌ ಲೋಬೋ, ಹಿದಯತ್‌, ಮುದ್ದುರಾಜ್‌, ರಿಯಾಜ್‌, ಮಿನಜ್‌ ಪ್ರವೀನ್‌, ಕೌಸರ್‌ ಭಾಗವಹಿಸಿದ್ದರು.ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳುಸಭೆಯಲ್ಲಿ ಹಾಜರಿದ್ದರು.

 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ