ಸೋಮವಾರ ರಾಜ್ಯ ಹೆದ್ದಾರಿ ಕಾಗಡಿಕಟ್ಟೆ ತಿರುವಿನಲ್ಲಿ ಸಮಸ್ಯೆ

Team Udayavani, Aug 31, 2019, 5:22 AM IST

ಸೋಮವಾರಪೇಟೆ: ಪೈಪ್‌ ಅಳವಡಿಸಲು ರಾಜ್ಯ ಹೆದ್ದಾರಿಯನ್ನು ಅಗೆದು, ಅದನ್ನು ಸೂಕ್ತ ರೀತಿಯಲ್ಲಿ ಸರಿಪಡಿಸದ ಹಿನ್ನೆಲೆ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ.
ಸೋಮವಾರಪೇಟೆ, ಶನಿವಾರಸಂತೆ, ರಾಜ್ಯಹೆದ್ದಾರಿಯ ಕಾಗಡಿಕಟ್ಟೆ ತಿರುವಿನಲ್ಲಿ ಪೈಪ್‌ ಅಳವಡಿಸಲು ರಸ್ತೆಯನ್ನು ಅಗೆದಿದ್ದು, ಗುಂಡಿಯಾದ ಜಾಗದಲ್ಲಿ ಡಾಮರೀಕರಣ ಮಾಡದೆ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ.

ದಿನಂಪ್ರತಿ ನೂರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಸಮಸ್ಯೆಯಾಗಿದೆ ಎಂದು ವಾಹನ ಚಾಲಕರು ತಿಳಿಸಿದ್ದಾರೆ. ಕಳೆದ ಎರಡು ತಿಂಗಳಿನಿಂದ ಸಮಸ್ಯೆಯಿದ್ದು, ಲೋಕೋಪಯೋಗಿ ಇಲಾಖೆ ರಸ್ತೆಯಲ್ಲಿರುವ ಗುಂಡಿಯನ್ನು ಸರಿಪಡಿಸಿಲ್ಲ. ಕೂಗೇಕೋಡಿ ಗ್ರಾಮದ ಸಮೀಪದಲ್ಲೂ ರಸ್ತೆಯನ್ನು ಅಗೆದು ಸರಿಪಡಿಸಿಲ್ಲ.
ರಾಜ್ಯ ಹೆದ್ದಾರಿ ನಿರ್ವಹಣೆಗೆ ಬಿಡುಗಡೆಯಾಗಿರುವ ಅನುದಾನ ಎಲ್ಲಿಗೆ ಸೇರುತ್ತಿದೆ ಎಂದು ಕೃಷಿಕ ಚಂದ್ರಶೇಖರ್‌ ಪ್ರಶ್ನಿಸಿದ್ದಾರೆ. ಕೂಡಲೆ ಲೋಕೋಪಯೋಗಿ ಇಲಾಖೆ ಗುಂಡಿಮುಚ್ಚುವ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ