Udayavni Special

ನಾಯಕನಿಗೆ ಇರಬೇಕಾದ ಅರ್ಹತೆ ರಾಹುಲ್‌ಗಿಲ್ಲ : ಡಿ.ವಿ.ಎಸ್‌. 


Team Udayavani, May 7, 2018, 7:55 AM IST

Z-SADANANDA-GOWDA.jpg

ಮಡಿಕೇರಿ: ನರೇಂದ್ರ ಮೋದಿಯವರು ಪ್ರಧಾನಿಯಾದ ಅನಂತರ ದೇಶಾದ್ಯಂತ ಬಿಜೆಪಿ ಪ್ರಬಲ ಪಕ್ಷವಾಗಿ ಬೆಳವಣಿಗೆಯನ್ನು ಕಂಡಿದ್ದು, ಕರ್ನಾಟಕದಲ್ಲಿ ಕೂಡ ಭಾರತೀಯ ಜನತಾ ಪಕ್ಷ ಮಿಷನ್‌-150 ಗುರಿಯನ್ನು ಮೀರಿ ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಅಧಿಕಾರ ಹಿಡಿಯಲಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕುಶಾಲನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಆಡಳಿತದಲ್ಲಿ ರಾಜ್ಯದಲ್ಲಿ ಜಾತಿ, ಧರ್ಮಗಳನ್ನು ಒಡೆಯುವ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲಾಗಿದೆ ಎಂದು ಆರೋಪಿಸಿದರು. ಕಾಂಗ್ರೆಸ್‌ ಪಕ್ಷದ ನಾಯಕ ರಾಹುಲ್‌ ಗಾಂಧಿಯವರ ಬಗ್ಗೆ ಹೇಳುವುದಾದರೆ ಅವರು ಬಿಹಾರದ ಚುನಾವಣೆಗಳ ಪ್ರಚಾರಕ್ಕೆ ಹೋದರು. ಅಲ್ಲಿ ಕಾಂಗ್ರೆಸ್‌ ಡಬಲ್‌ ಡಿಜಿಟ್‌ನಿಂದ ಸಿಂಗಲ್‌ ಡಿಜಿಟ್‌ಗೆ ಬಂತು. ಅದೇ ರೀತಿ ಉತ್ತರ ಪ್ರದೇಶದಲ್ಲಿ ಅವರ ಸಾಧನೆ ಶೂನ್ಯ ಸಂಪಾದನೆಯಾಯಿತು. ಈ ಹಿನ್ನೆಲೆಯಲ್ಲಿ ಪಕ್ಷದ ನಾಯಕನಿಗೆ ಇರಬೇಕಾದ ಅರ್ಹತೆಗಳು  ಅವರಿಗಿದ್ದಂತೆ ಕಾಣುತ್ತಿಲ್ಲ. ರಾಜಕೀಯವಾಗಿ ಅವರು ಕಲಿಯಬೇಕಾದ್ದು ಬಹಳಷ್ಟಿದೆ. ಭಾರತೀಯ ಜನತಾಪಕ್ಷದ ಪರವಾಗಿ ನರೇಂದ್ರ ಮೋದಿಯವರು ಪ್ರಚಾರದಲ್ಲಿ ಇನ್ನೂ 15 ರ್ಯಾಲಿಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಇವರ ಪ್ರವೇಶದಿಂದ ಚುನಾವಣಾ ಫ‌ಲಿತಾಂಶದಲ್ಲಿ ಸಾಕಷ್ಟು ಬದಲಾವಣೆಯಾಗಲಿದೆ ಎಂದರು.

1991ರಿಂದ ಕೊಡಗು ಜಿಲ್ಲೆ ಭಾರತೀಯ ಜನತಾ ಪಕ್ಷವನ್ನು ಕೈಬಿಟ್ಟಿಲ್ಲ. ಇಲ್ಲಿ ಪಕ್ಷದ ನಾಯಕರಲ್ಲಿ ಅಲ್ಪಸ್ವಲ್ಪ ಭಿನ್ನಾಭಿಪ್ರಾಯಗಳಿದ್ದರೂ, ವ್ಯಕ್ತಿಗಿಂತ ಪಕ್ಷ ಮುಖ್ಯ ಎಂಬ ಸಿದ್ಧಾಂತದಡಿಯಲ್ಲಿ ಭಾರತೀಯ ಜನತಾಪಕ್ಷಕ್ಕೆ ಪ್ರತಿ ಬಾರಿಯೂ ಉತ್ತಮ ಫ‌ಲಿತಾಂಶವನ್ನು ನೀಡಲಾಗಿದೆ. ಅದೇ ರೀತಿ ಈ ಬಾರಿ ಕೂಡ ಭಾರತೀಯ ಜನತಾ ಪಕ್ಷದ ಪರ ಉತ್ತಮ ವಾತಾವರಣ ಕಂಡು ಬಂದಿದೆ ಎಂದು ಹೇಳಿದರು.

ಕೊಡಗಿನ ಜನತೆ ಶಾಂತಿ, ಶಿಸ್ತು, ಸಂಸ್ಕೃತಿ, ಸಂಸ್ಕಾರ, ದೇಶಪ್ರೇಮ ಇವುಗಳಿಗೆ ಆದ್ಯತೆ ಕೊಡುತ್ತಾರೆ. ಅದೇ ರೀತಿ ಯಾವುದೇ ಜಾತಿ ಧರ್ಮಗಳ ಓಲೈಕೆಯ ರಾಜಕಾರಣ ಮಾಡುವುದಿಲ್ಲ. ಒಟ್ಟಾರೆ ರಾಜ್ಯದಲ್ಲಿ ಪರಿವರ್ತನೆಯ ಗಾಳಿ ಬೀಸುತ್ತಿದೆ. ಕಳೆದ ಚುನಾವಣೆಗಳಲ್ಲಿ ಮೂರನೇ ಸ್ಥಾನದಲ್ಲಿ ಭಾರತೀಯ ಜನತಾ ಪಕ್ಷ ಮತಗಳನ್ನು ಪಡೆದಿದ್ದರೂ ಕೊಡಗು ಜಿಲ್ಲೆ ಅದಕ್ಕೆ ಹೊರತಾಗಿ ಉತ್ತಮ ಫ‌ಲಿತಾಂಶವನ್ನು ಕೊಟ್ಟಿದೆ. ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ಸೋಲಿನ ಹತಾಶೆಯಿಂದ ಸಮ್ಮಿಶ್ರ ಸರ್ಕಾರಗಳ ಚಿಂತನೆಯಲ್ಲಿ ಮುಳುಗಿವೆ. ಅದೆಲ್ಲವನ್ನೂ ಹುಸಿಗೊಳಿಸಿ ಭಾಜಪ ಸಂಪೂರ್ಣ ಬಹುಮತದೊಂದಿಗೆ ಸ್ವತಂತ್ರವಾಗಿಸರ್ಕಾರ ರಚಿಸುತ್ತದೆ ಎಂದರು.

ಭಾರತೀಯ ಜನತಾ ಪಕ್ಷ 224 ಕ್ಷೇತ್ರಗಳಲ್ಲಿ ಪರಿವರ್ತನಾ ರ್ಯಾಲಿ ನಡೆಸಿದಾಗ ರಾಜ್ಯದ ಜನತೆ ಅಭೂತ ಪೂರ್ವಸ್ಪಂದನೆ ನೀಡಿದ್ದಾರೆ. ಅದೇ ರೀತಿ ಕೊಡಗು ಜಿಲ್ಲೆಯಲ್ಲೂ ಉತ್ತಮ ವಾತಾವರಣ ವ್ಯಕ್ತವಾಗಿದೆ. ಪ್ರಧಾನಮಂತ್ರಿ ನರೇಂದ್ರಮೋದಿಯವರು ರಾಜ್ಯಕ್ಕೆ ಭೇಟಿ ನೀಡಿದ ಚುನಾವಣಾ ಪ್ರಚಾರ ಸಭೆಗಳಲ್ಲಿ ನಿರೀಕ್ಷೆಗಿಂತ ಹೆಚ್ಚಾಗಿನ ಭೂತೋನ ಭವಿಷ್ಯತಿ ಎಂಬಂತೆ ಜನರ ಪ್ರತಿಕ್ರಿಯೆ ನಮ್ಮ ಪಕ್ಷಕ್ಕೆ ಸ್ಫೂರ್ತಿ ನೀಡಿದೆ. ಕೊಡಗು ಜಿಲ್ಲೆಗೆ ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿದ್ದ ಅವಧಿಯಲ್ಲಿ ಪ್ರತಿವರ್ಷವೂ ವಿಶೇಷ ಪ್ಯಾಕೇಜ್‌ ಪಡೆದುಕೊಂಡಿರುವುದು ಐತಿಹಾಸಿಕವಾಗಿದ್ದು, ಈ ಹಿನ್ನೆಲೆಯಲ್ಲಿ ನಮ್ಮ ಪಕ್ಷದ ಸರ್ಕಾರ ಮತ್ತು ನಮ್ಮ ಶಾಸಕರ ಸಾಧನೆಗಳು ಈ ಚುನಾವಣೆಯಲ್ಲಿ ಉತ್ತಮ ಫ‌ಲಿತಾಂಶವನ್ನು ತಂದುಕೊಡಲಿವೆ ಎಂದರು.

ಈ ಸಂದರ್ಭ ವಿಧಾನ ಪರಿಷತ್‌ ಮಾಜಿ ಸದಸ್ಯ ಎಸ್‌.ಜಿ. ಮೇದಪ್ಪ, ಪಕ್ಷದ ಅಧ್ಯಕ್ಷ ಬಿ.ಬಿ. ಭಾರತೀಶ್‌, ಉಪಾಧ್ಯಕ್ಷ ಗಣಿಪ್ರಸಾದ್‌, ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್‌, ಪಕ್ಷದ ಮುಖಂಡರಾದ ಕುಮಾರಪ್ಪ, ಪಟ್ಟೆಮನೆ ಕೆ. ಶೇಷಪ್ಪ, ಅಭಿಮನ್ಯುಕುಮಾರ್‌, ಪ. ಪಂ. ಅಧ್ಯಕ್ಷೆ ರೇಣುಕಾ, ಸದಸ್ಯರಾದ ಚರಣ್‌, ಗೌಡ ಸಮಾಜದ ಅಧ್ಯಕ್ಷ ಕೇಚಪ್ಪನ ಮೋಹನ್‌, ನೂರಾರು ಸಂಖ್ಯೆಯ ಪಕ್ಷದ ಕಾರ್ಯಕರ್ತರು, ಗೌಡ ಸಮಾಜದ ಗಣ್ಯರು ಹಾಜರಿದ್ದರು. 

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಸಿಕ್ಕ ಮೊದಲ ಅವಕಾಶದಲ್ಲೇ ಅರ್ಧ ಶತಕ ಬಾರಿಸಿದ ಪಡಿಕ್ಕಲ್

ಸಿಕ್ಕ ಮೊದಲ ಅವಕಾಶದಲ್ಲೇ ಅರ್ಧ ಶತಕ ಬಾರಿಸಿದ ಪಡಿಕ್ಕಲ್

CSKಧೋನಿ – ಸ್ಮಿತ್‌ ತಂಡಗಳ ಮೇಲಾಟ

ಧೋನಿ – ಸ್ಮಿತ್‌ ತಂಡಗಳ ಮೇಲಾಟ

ಪಡಿಕ್ಕಲ್ ಅರ್ಧ ಶತಕದ ಆಟ ಕೊನೆಯಲ್ಲಿ ಮಿಂಚಿದ ಎಬಿಡಿ : ಹೈದರಾಬಾದ್ ಗೆ 160 ರ ಗುರಿ

ಪಡಿಕ್ಕಲ್ ಅರ್ಧ ಶತಕದ ಆಟ ; ಕೊನೆಯಲ್ಲಿ ಮಿಂಚಿದ ಎಬಿಡಿ : ಹೈದರಾಬಾದ್ ಗೆ 164 ರ ಗುರಿ

50ಕ್ಕೂ ಹೆಚ್ಚು ಮನೆಗಳ ಸಂಪರ್ಕ ಕಡಿತ; ಎಕರೆಗಟ್ಟಲೆ ಗದ್ದೆ ಜಲಾವೃತ

ನೆರೆಗೆ ದ್ವೀಪವಾದ ನಾವುಂದದ ಸಾಲ್ಪುಡಾ; ಜನಜೀವನ ಸ್ತಬ್ಧ

ಹುಣಸೂರು: ಜಿಂಕೆ ಮಾಂಸ ಅಕ್ರಮ ಸಾಗಾಟ; ಇಬ್ಬರ ಬಂಧನ

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನ; ಜಿಂಕೆ ಮಾಂಸ ಅಕ್ರಮ ಸಾಗಾಟ; ಇಬ್ಬರ ಬಂಧನ

ಹೆಚ್ಚುತ್ತಲೇ ಇದೆ ಆನ್‌ಲೈನ್‌ ವಂಚನೆ-ಸೈಬರ್‌ಕ್ರೈಂ

ಹೆಚ್ಚುತ್ತಲೇ ಇದೆ ಆನ್‌ಲೈನ್‌ ವಂಚನೆ-ಸೈಬರ್‌ಕ್ರೈಂ

ಪಶ್ಚಿಮಘಟ್ಟದಲ್ಲಿ ಧಾರಾಕಾರ ಮಳೆ ; ಕಮಲಶಿಲೆ ದೇವಸ್ಥಾನಕ್ಕೆ ನುಗ್ಗಿದ ಕುಬ್ಜಾ ನದಿಯ ನೀರು

ಪಶ್ಚಿಮಘಟ್ಟದಲ್ಲಿ ಧಾರಾಕಾರ ಮಳೆ ; ಕಮಲಶಿಲೆ ದೇವಸ್ಥಾನಕ್ಕೆ ನುಗ್ಗಿದ ಕುಬ್ಜಾ ನದಿಯ ನೀರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪೆರುಂಬಳ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡದ ಉದ್ಘಾಟನೆ

ಪೆರುಂಬಳ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡದ ಉದ್ಘಾಟನೆ

ಮಾಯಿಪ್ಪಾಡಿ ಡಯಟ್‌ ನೂತನ ಕಟ್ಟಡ ಕಾಮಗಾರಿ ಉದ್ಘಾಟನೆ

ಮಾಯಿಪ್ಪಾಡಿ ಡಯಟ್‌ ನೂತನ ಕಟ್ಟಡ ಕಾಮಗಾರಿ ಉದ್ಘಾಟನೆ

ಮಡಿಕೈ ಗ್ರಾಮ ಪಂಚಾಯತ್‌ನ ಅಭಿವೃದ್ಧಿ ದಾಖಲೆ ಬಿಡುಗಡೆ

ಮಡಿಕೈ ಗ್ರಾಮ ಪಂಚಾಯತ್‌ನ ಅಭಿವೃದ್ಧಿ ದಾಖಲೆ ಬಿಡುಗಡೆ

ಸಚಿವ, ಶಾಸಕರ ರಾಜೀನಾಮೆಗೆ ಬಿಜೆಪಿ ಪಂಜಿನ ಮೆರವಣಿಗೆ

ಸಚಿವ, ಶಾಸಕರ ರಾಜೀನಾಮೆಗೆ ಬಿಜೆಪಿ ಪಂಜಿನ ಮೆರವಣಿಗೆ

ಕಾಸರಗೋಡು: ಜನಪರ ಹೊಟೇಲ್‌ಗ‌ಳ ಉದ್ಘಾಟನೆ

ಕಾಸರಗೋಡು: ಜನಪರ ಹೊಟೇಲ್‌ಗ‌ಳ ಉದ್ಘಾಟನೆ

MUST WATCH

udayavani youtube

ಪ್ರವಾಹದಲ್ಲಿ ಡೋಣಿ ನದಿ ದಾಟಲು ಮುಂದಾದ ವ್ಯಕ್ತಿಯ ಹುಚ್ಚು ಸಾಹಸ

udayavani youtube

ಬೆಳೆ ಹಾನಿ ತಡೆಗೆ ಪಟಾಕಿ ಸಿಡಿಸುವ ಕೋವಿ ತಯಾರಿ

udayavani youtube

ಕಬ್ಬಿನ ಬೆಳೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

Dr.Harsha Kamath : ಕಾರ್ಕಳದ ಈ Doctor ಕಲಾ ಕುಸುರಿಯ Master | Udayavani

udayavani youtube

ಮುಂಬೈಯಿಂದ ಡ್ರಗ್ಸ್‌ ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು: ನಗರ ಪೊಲೀಸ್ ಆಯುಕ್ತಹೊಸ ಸೇರ್ಪಡೆ

ಸಿಕ್ಕ ಮೊದಲ ಅವಕಾಶದಲ್ಲೇ ಅರ್ಧ ಶತಕ ಬಾರಿಸಿದ ಪಡಿಕ್ಕಲ್

ಸಿಕ್ಕ ಮೊದಲ ಅವಕಾಶದಲ್ಲೇ ಅರ್ಧ ಶತಕ ಬಾರಿಸಿದ ಪಡಿಕ್ಕಲ್

CSKಧೋನಿ – ಸ್ಮಿತ್‌ ತಂಡಗಳ ಮೇಲಾಟ

ಧೋನಿ – ಸ್ಮಿತ್‌ ತಂಡಗಳ ಮೇಲಾಟ

ಪಡಿಕ್ಕಲ್ ಅರ್ಧ ಶತಕದ ಆಟ ಕೊನೆಯಲ್ಲಿ ಮಿಂಚಿದ ಎಬಿಡಿ : ಹೈದರಾಬಾದ್ ಗೆ 160 ರ ಗುರಿ

ಪಡಿಕ್ಕಲ್ ಅರ್ಧ ಶತಕದ ಆಟ ; ಕೊನೆಯಲ್ಲಿ ಮಿಂಚಿದ ಎಬಿಡಿ : ಹೈದರಾಬಾದ್ ಗೆ 164 ರ ಗುರಿ

50ಕ್ಕೂ ಹೆಚ್ಚು ಮನೆಗಳ ಸಂಪರ್ಕ ಕಡಿತ; ಎಕರೆಗಟ್ಟಲೆ ಗದ್ದೆ ಜಲಾವೃತ

ನೆರೆಗೆ ದ್ವೀಪವಾದ ನಾವುಂದದ ಸಾಲ್ಪುಡಾ; ಜನಜೀವನ ಸ್ತಬ್ಧ

ಮೆಸೇಜ್‌ ಮಾಡಿ ಕಾಸು ಕೇಳ್ತಾರೆ, ಹುಷಾರ್‌

ಮೆಸೇಜ್‌ ಮಾಡಿ ಕಾಸು ಕೇಳ್ತಾರೆ, ಹುಷಾರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.