ಸೋಮವಾರಪೇಟೆ: ಮಳೆಹಾನಿ ಸಂತ್ರಸ್ತರಿಗೆ ಸಹಾಯಧನ ವಿತರಣೆ

Team Udayavani, Jun 19, 2019, 5:57 AM IST

ಸೋಮವಾರಪೇಟೆ :ಬೆಂಗಳೂರಿನ ಮಲೆನಾಡು ಗೆಳೆಯರ ಸಂಘದ ವತಿಯಿಂದ ಇಲ್ಲಿನ ಪತ್ರಿಕಾಭವನದಲ್ಲಿ ಕಳೆದ ಸಾಲಿನ ಮಳೆಹಾನಿ ಸಂತ್ರಸ್ತರಿಗೆ ಸಹಾಯಧನ ವಿತರಿಸಲಾಯಿತು.

ಕಳೆದ ಆಗಸ್ಟ್‌ನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಆಸ್ತಿ, ಮನೆ ಕಳೆದುಕೊಂಡು, ದಾಖಲೆ ಇಲ್ಲದೆ ಸರಕಾರದ ಸೌಲಭ್ಯಗಳಿಂದ ವಂಚಿತ ರಾಗಿದ್ದ, ಆಯ್ದ ಬಡ ಫ‌ಲಾನುಭವಿಗಳಿಗೆ ಸಹಾಯಧನವನ್ನು ನೀಡಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್‌.ಮುತ್ತಣ್ಣ ಮಾತನಾಡಿ, ಕಳೆದ ವರ್ಷ ಸುರಿದ ಧಾರಾಕಾರ ಮಳೆ ಮತ್ತು ಭೂ ಕುಸಿತ ಸಂಭವಿಸಿದ ಸಂದರ್ಭ ಸಂಕಷ್ಟಕ್ಕೆ ಸಿಲುಕಿದ ಗ್ರಾಮೀಣ ಭಾಗದ ಜನರು, ಜೀವ ಭಯದಿಂದ ಪಟ್ಟಣಕ್ಕೆ ಬಂದರು. ಸಂತ್ರಸ್ತರಿಗೆ ಒಕ್ಕಲಿಗರ ಸಂಘ ಹಾಗೂ ಕೊಡವ ಸಮಾಜದಲ್ಲಿ ಆಶ್ರಯ ಕಲ್ಪಿಸಲಾಗಿತ್ತು. ರಾಜ್ಯದ ಬಹುತೇಕ ಕಡೆಗಳಿಂದ ಜನರು ಸಂತ್ರಸ್ಥರಿಗೆ ಸಹಾಯಹಸ್ತ ನೀಡಿದರು. ಮಲೆನಾಡು ಗೆಳೆಯರ ಸಂಘದವರು ಈ ಹಿಂದೆಯೂ ಸಂತ್ರಸ್ತರಿಗೆ ಸಹಾಯ ಮಾಡಿದ್ದಾರೆ. ಈಗಲೂ ಸಹಾಯ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಜಿ.ಪಂ. ಸದಸ್ಯ ಬಿ.ಜೆ.ದೀಪಕ್‌ ಮಾತನಾಡಿ, ಪ್ರಕೃತಿ ವಿಕೋಪದಿಂದ ಆಸ್ತಿ ಪಾಸ್ತಿ ಕಳೆದಕೊಂಡ ಅನೇಕ ಸಂತ್ರಸ್ತರಿಗೆ ಸೂಕ್ತ ಆಸ್ತಿ ದಾಖಲೆ ಇಲ್ಲದಿದ್ದರೂ ಮಾನವೀಯ ದೃಷ್ಟಿಯಿಂದ ಸರಕಾರ‌ ಪರಿಹಾರ ಒದಗಿಸಬೇಕು. ಸರಕಾರೇತರ ಸಂಸ್ಥೆಗಳು ಇಂತಹವರಿಗೆ ಸಹಾಯ ಮಾಡಬೇಕಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಸಹಕಾರ ನೀಡಬೇಕಾಗಿದೆ ಎಂದರು.

ಬೆಂಗಳೂರಿನಲ್ಲಿ ವಿವಿಧ ಸಂಸ್ಥೆಗಳಲ್ಲಿ ನೌಕರಿ ಮಾಡುತ್ತಿರುವ ಮಲೆನಾಡು ಗೆಳೆ ಯರ ಸಮಿತಿಯವರು ತಮ್ಮ ಕೈಲಾದಷ್ಟು ಹಣವನ್ನು ನೀಡಿದ್ದಾರೆ. ಸಂಗ್ರಹವಾದ ಹಣವನ್ನು ಕಷ್ಟದ ಲ್ಲಿರುವವರಿಗೆ ಸಹಾಯ ಮಾಡುತ್ತ, ಸಮಾಜಮುಖೀ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದೇವೆ ಎಂದು ಗೆಳೆಯರ ಸಂಘದ ಅಧ್ಯಕ್ಷ ಚಿನ್ನೇಗೌಡ ಹೇಳಿದರು. ವೇದಿಕೆಯಲ್ಲಿ ಮಾಜಿ ಸೈನಿಕ ಎಸ್‌.ಎಂ.ಬೆಳ್ಳಿಯಪ್ಪ, ಕಾರ್ಮಿಕ ಮುಖಂಡ ಟಿ.ಜೆ.ಗಣೇಶ್‌, ಗುರುರಾಜ್‌, ಶಶಿ, ಗೌತಮ್‌ ಕಿರಗಂದೂರು ಉಪಸ್ಥಿತರಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಹೊನ್ನಾಳಿ: ಪಟ್ಟಣದಲ್ಲಿ ರಸ್ತೆ ನಿಯಮಗಳನ್ನು ಉಲ್ಲಂಘಿಸುವ ದ್ವಿಚಕ್ರ ಹಾಗೂ ಇತರ ವಾಹನ ಸವಾರರಿಗೆ ದಂಡ ವಿಧಿಸುವ ಮೂಲಕ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ. ಸೋಮವಾರ...

  • ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಯ ಸುಮಾರು 1800 ಹೊರಗುತ್ತಿಗೆ ಪೌರಕಾರ್ಮಿಕರನ್ನು ನೇರ ನೇಮಕಾತಿ ಅರ್ಹತೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಪೌರಕಾರ್ಮಿಕರ...

  • ಧಾರವಾಡ: ಎಲ್ಲೆಂದರಲ್ಲಿ ಸತ್ತು ಬೀಳುತ್ತಿವೆ ಕಪ್ಪೆ, ಇಲಿ, ಹಾವು, ಪಕ್ಷಿಗಳು, ಸುರಿಯುವ ಮಳೆಯಲ್ಲೂ ಸುಟ್ಟು ಹೋಗುತ್ತಿದೆ ಹಸಿರು ಹುಲ್ಲು, ತಿಳಿಯದೇ ಎರಡು ಹಿಡಿ...

  • ಕೊರಟಗೆರೆ: ಸರ್ಕಾರದಿಂದ 1 ಲಕ್ಷ ರೂ. ಸಹಾಯಧನ ಕೂಡಿಸುವುದಾಗಿ ನಂಬಿಸಿ ತಾಲೂಕಿನ 650 ಸ್ತ್ರೀ ಶಕ್ತಿ ಸಂಘಗಳಿಂದ ಕೋಟ್ಯಾಂತರ ರೂ. ಪಡೆದು ಕೊರಟಗೆರೆ ವಲಯ ಮೇಲ್ವಿಚಾರಕ...

  • ಚಿಕ್ಕನಾಯಕನಹಳ್ಳಿ: ಸಣ್ಣ ವಹಿವಾಟಿನ ವ್ಯಾಪಾರಿಗಳು ಹಾಗೂ ಗ್ರಾಹಕರಿಗೆ ಚಿಲ್ಲರೆ ಸಮಸ್ಯೆ ಯಾಗುವುದು ಸಾಮಾನ್ಯ. ಇದರಿಂದ ವ್ಯಾಪಾರಿಗಳಿಗೆ ನಷ್ಟ ಅಥವಾ ಗ್ರಾಹಕರು...

  • ಮಾಗಡಿ: ಒಂದು ವರ್ಷದಲ್ಲಿ ಒಂದು ಕೋಟಿ ಸಸಿ ನೆಡಲು ರೋಟರಿ ಮಾಗಡಿ ಸೆಂಟ್ರಲ್ ಸಂಸ್ಥೆ ತೀರ್ಮಾನ ಮಾಡಿದೆ ಎಂದು ರೋಟರಿ ಮಾಗಡಿ ಸೆಂಟ್ರಲ್ ಅಧ್ಯಕ್ಷ ಡಿ.ಎನ್‌. ಸಿದ್ದಲಿಂಗಯ್ಯ...