ಶನಿವಾರಸಂತೆ: ದುಂಡಳ್ಳಿ ಮಾದರೆ ಗ್ರಾಮದಲ್ಲಿ ವಿಶೇಷ ಅರಿವು

Team Udayavani, May 16, 2019, 6:12 AM IST

ಶನಿವಾರಸಂತೆ: ಸುಪದ ದುಂಡಳ್ಳಿ ಗ್ರಾ.ಪಂ.ವ್ಯಾಪ್ತಿಯ ಮಾದರೆ ಗ್ರಾಮದಲ್ಲಿ ಕುಶಾಲನಗರ ಚೈಲ್ಡ್‌ ಲೈನ್‌ ಸಂಸ್ಥೆ ಮತ್ತು ಶನಿವಾರಸಂತೆ ಪೊಲೀಸ್‌ ಠಾಣೆ ವತಿುಂದ ಸ್ತ್ರೀಶಕ್ತಿ ಸಂಘದ ಸದಸ್ಯರಿಗೆ ಮತ್ತು ಗ್ರಾಮಸ್ಥರಿಗೆ ವಿಶೇಷ ಅರಿವು ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.

ಶನಿವಾರಸಂತೆ ಎಎಸ್‌ಐ ಬೋಪಣ್ಣ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕುರಿತಾಗಿ ಮಾಹಿತಿ ನೀಡಿ-ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ, ಲೈಗಿಂಕ ದೌರ್ಜನ್ಯವನ್ನು ತಡೆಗಟ್ಟುವ ಸಲುವಾಗಿ 2012 ರಲ್ಲಿ ಆಗಿನ ಕೇಂದ್ರ ಸರಕಾರ ಪೋಕೊÕ ಕಾಯಿದೆಯನ್ನು ಜಾರಿಗೊಳಿಸಿದೆ ಎಂದರು. ಮಕ್ಕಳ ಮೇಲೆ ಯಾವುದೆ ರೀತಿಯ ಲೈಗಿಂಕ ದೌರ್ಜನ್ಯ ನಡೆಯುವ ಸಂದರ್ಭದಲ್ಲಿ ಸಾರ್ವಜನಿಕರು ಹತ್ತಿರದ ಪೊಲೀಸರಿಗೆ ಮತ್ತು ಮಕ್ಕಳ ಸಹಾಯವಾಣಿ ಕೇಂದ್ರಕ್ಕೆ ಮಾಹಿತಿ ನೀಡಬೇಕು, ಮಕ್ಕಳನ್ನು ಲೈಗಿಂಕ ದೌರ್ಜನ್ಯದಿಂದ ರಕ್ಷಣೆ ಮಾಡುವಲ್ಲಿ ಸಾರ್ವಜನಿಕರ ಪಾತ್ರವೂ ಮುಖ್ಯವಾಗಿರುತ್ತದೆ, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುವ ಪ್ರಕರಣಗಳ ಬಗ್ಗೆ ಪೊಲೀಸರಿಗೆ ಮಾತಿ ನೀಡಿದ ಪೊಲೀಸರು ಆರೋಪಿಗಳ ರುದ್ದ ಪ್ರಕರಣ ಕ್ರಮಕೈಗೊಂಡು ಪೋಕೊÕà ಕಾುದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂದಿಸಲಾಗುತ್ತದೆ ಮತ್ತು ಈ ಪ್ರಕರಣದಲ್ಲಿ ಆರೋಪಿಗೆ ನ್ಯಾಯಾಲಯ ಕಠಿನ ಶಿಕ್ಷೆ ವಿಧಿಸುತ್ತದೆ ಎಂದರು.

ಬಾಲಕಾರ್ಮಿಕ ತಡೆ ಕಾುದೆ ಕುರಿತು ಕುಶಾಲನಗರ ಚೈಲ್ಡ್‌ಲೈನ್‌ ಸಂಸ್ಥೆ ತಾಲೂಕು ಕಾರ್ಯಕರ್ತೆ ಬಿ.ಆರ್‌. ಕುಮಾರಿ ಮಾಹಿತಿ ನೀಡಿ-ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳುವುದು ಅಪರಾಧವಾಗುತ್ತದೆ, 14 ವರ್ಷದ ಒಳಗಿನ ಮಕ್ಕಳನ್ನು ಮನೆ ಕೆಲಸದಲ್ಲಿ, ಗದ್ದೆ ತೋಟಗಳಲ್ಲಿ ಹೊಟೇಲು ಕ್ಯಾಂಟೀನುಗಳಲ್ಲಿ, ಕಾರ್ಖಾನೆಗಳಲ್ಲಿ ಮಾಲಕರು ದುಡಿಸಿಕೊಳ್ಳುವುದು ಅಪರಾಧವಾಗುತ್ತದೆ ಇದರ ಮಕ್ಕಳನ್ನು ದುಡಿಸಿಕೊಳ್ಳುವುದನ್ನು ದುಡಿಸಿಕೊಳ್ಳಖುವುದನ್ನು ತಡೆಗಟ್ಟುವ ಉದ್ದೇಶದಿಂದ ಸರಕಾರ ಬಾಲ ಕಾುìಕ ನಿಷೇಧ ಕಾಯಿದೆಯನ್ನು ಅನುಷ್ಠಾನಗೊಳಿಸಿದೆ ಎಂದರು. ಬಿûಾಟನೆ ಮಾಡುವ ಮಕ್ಕಳು, ಅನಾಥ ಮಕ್ಕಳನ್ನು ರಕ್ಷಣೆ ಮಾಡಲು ಚೈಲ್ಡ್‌ ಲೈನ್‌ ಸಂಸ್ಥೆ ಕಾರ್ಯನಿರ್ವಸುತ್ತಿದೆ, ಬಾಲ ಕಾರ್ಮಿಕರು ಸೇರಿದಂತೆ ಮಕ್ಕಳನ್ನು ರಕ್ಷಣೆ ಮಾಡಿ ಅವರಿಗೆ ಶಿಕ್ಷಣ ಕೊಡಿಸುವ ಗುರುತರ ಜವಾಬ್ದಾರಿ ಸಾರ್ವಜನಿಕರ ಮೇಲಿದೆ ಈ ಕಾರ್ಯದಲ್ಲಿ ಧ ಸಂಘ-ಸಂಸ್ಥೆಯವರು ಕೈಜೋಡಿಸುವಂತೆ ಮನವಿಮಾಡಿದರು.

ಚೈಲ್ಡ್‌ ಲೈನ್‌ ಸಂಸ್ಥೆಯ ಮಂಜುಳ ಮಕ್ಕಳ ಸಹಾಯವಾಣಿ ಕುರಿತು ಮಾತನಾಡಿ-ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಬಾಲ ಕಾರ್ಮಿಕರು, ಅನಾಥ ಮಕ್ಕಳು ಸಹಿತ ಮಕ್ಕಳ ರಕ್ಷಣೆ ಮಾಡುವ ಉದ್ದೇಶದಿಂದ ಪ್ರತಿ ಜಿಲ್ಲಾ ಕೇಂದ್ರದಲ್ಲಿ ಮಕ್ಕಳ ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದರು. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಪ್ರಕರಣಗಳು ಕಂಡುಬಂದ ಕೂಡಲೇ ಸಾರ್ವಜನಿಕರು ಚೈಲ್ಡ್‌ಲೈನ್‌ ಸಂಸ್ಥೆ-1098 ಸಂಖ್ಯೆಗೆ ಉಚಿತ ಕರೆ ಮಾಡಿ ಮಾಹಿತಿ ನೀಡುವಂತೆ ಮನವಿ ಮಾಡಿದರು. ಪೊಲೀಸ್‌ ಸಿಬಂದಿ ಗೋವಿಂದ, ಸರಿತಾ ಮಾಹಿತಿ ನೀಡಿದರು. ಚೈಲ್ಡ್‌ ಲೈನ್‌ ಸಂಸ್ಥೆಯ ಕುಸುಮಾ, ಸ್ತ್ರೀಶಕ್ತಿ ಸಂಘದ ಸದಸ್ಯರು, ಅಂಗನವಾಡಿ ಶಿಕ್ಷಕಿಯರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ