ನಿಸ್ವಾರ್ಥ ಸೇವೆಯೇ ಸಂದೀಪನಿಗೆ ಕೊಡುವ ಗೌರವ: ಉಣ್ಣಿಕೃಷ್ಣನ್‌

ಮೇಜರ್‌ ಸಂದೀಪ್‌ ಸ್ಮಾರಕ ಸಭಾಭವನ ನಿರ್ಮಾಣಕ್ಕೆ ಶಿಲಾನ್ಯಾಸ

Team Udayavani, Nov 3, 2019, 4:05 AM IST

ವಿದ್ಯಾನಗರ: ಸ್ಪರ್ಧಾ ಮನೋಭಾವವನ್ನು ತೊರೆದು ಬೇಧ ಭಾವ ತೋರದೆ ಸಮಾಜದ ಅಗತ್ಯಗಳಿಗೆ ಸ್ಪಂದಿಸುವುದೇ ನಿಜವಾದ ದೇಶ ಸೇವೆ. ಅಡೆತಡೆಗಳನ್ನು ಹಿಮ್ಮೆಟ್ಟಿ, ಕಷ್ಟ ನಷ್ಟಗಳಿಗೆ ತಲೆಬಾಗದೆ ಧೆ„ರ್ಯದಿಂದ ಸ್ಪಷ್ಟವಾದ ಧ್ಯೇಯವಿಟ್ಟು ಮಾಡುವ ಯಾವುದೇ ಕಾರ್ಯಕ್ಕೂ ಜಯವಿದೆ. ಜನರ ಪ್ರೀತಿಯನ್ನು ಗಳಿಸಬೇಕೆ ಹೊರತು ಶತ್ರುತ್ವವನ್ನಲ್ಲ ಎಂಬ ಅಲಿಖೀತ ತತ್ವವನ್ನು ಪಾಲಿಸಿ ನಿಸ್ವಾರ್ಥ ಭಾವದಿಂದ ಮಾಡುವ ಸೇವೆಯ ಮೂಲಕ ಜಗತ್ತಿಗೆ ಮಾದರಿಯಾದರೆ ಅದೇ ಸಂದೀಪನಿಗೆ ಕೊಡುವ ಯಥಾರ್ಥ ಗೌರವ ಎಂದು ಮುಂಬೆ„ ದಾಳಿಯಲ್ಲಿ ವೀರಮೃತ್ಯು ಗಳಿಸಿದ ಮೇಜರ್‌ ಸಂದೀಪ್‌ ಉಣ್ಣಿಕೃಷ್ಣನ್‌ ಅವರ ತಂದೆ ಉಣ್ಣಿಕೃಷ್ಣನ್‌ ನುಡಿದರು. ಅವರು ಸಂತೋಷ್‌ ಆರ್ಟ್ಸ್ ಆಂಡ್‌ ನ್ಪೋರ್ಟ್ಸ್ ಕ್ಲಬ್‌, ಮೇಜರ್‌ ಸಂದೀಪ್‌ ನಗರ ಸೀತಾಂಗೋಳಿಯಲ್ಲಿ ಮೇಜರ್‌ ಸಂದೀಪ್‌ ಸ್ಮಾರಕ ಸಭಾಭವನ ನಿರ್ಮಾಣಕ್ಕೆ ಶಿಲಾನ್ಯಾಸ ಗೈದು ಮಾತನಾಡಿದರು.

ದೇಶಸೇವೆ ಮಾಡಲು ಮಿಲಿಟರಿಗೆ ಸೇರಿಯೇ ಆಗಬೇಕೆಂದಿಲ್ಲ ದೇಶದ ಹಿತದೃಷ್ಠಿಯಿಂದ ಮಾಡುವ ಯಾವುದೇ ಕಾರ್ಯವೂ ದೇಶಸೇವೆಯೇ. ದೇಶರಕ್ಷಣೆ ನಮ್ಮ ಆದ್ಯ ಕರ್ತವ್ಯ. ಅದಕ್ಕಾಗಿ ಪ್ರಾಣಕೊಡಲೂ ನಾವು ಸಿದ್ಧರಿರಬೇಕು ಎಂದರು.

ಸಂಘದ ಅಧ್ಯಕ್ಷ ನ್ಯಾಯವಾದಿ ಥೋಮಸ್‌ ಡಿ,ಸೋಜರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ ಬೇಳ ಚರ್ಚಿನ ಧರ್ಮಗುರು ವಿ.ರೆವರೆಂಡ್‌ ಫಾ.ಜೋನ್‌ ವಾಸ್‌ ಮಾತನಾಡಿ ಮನಸು ಮಿತ ಭಾವದಿಂದ ಮೌನವಾಗಿದೆ. ಯುವ ದೇಶಭಕ್ತನ ಅಕಾಲಿಕ ನಿರ್ಗಮನ ಮನಸನ್ನು ದುಃಖ ತಪ್ತವಾಗಿಸುತ್ತದೆ. ಆದರೆ ಹೆತ್ತವರ ಮನೋಸ್ಥೆರ್ಯ ಕಂಡಾಗ ಅವರ ಬಗ್ಗೆ ಅತ್ಯಂತ ಅಭಿಮಾನ ಮೂಡುತ್ತದೆ ಹಾಗೆಯೇ ಇಲ್ಲಿ ಸಂದೀಪನ ಹೆಸರಲ್ಲಿ ನಡೆಯುತ್ತಿರುವ ಶುಭಕಾರ್ಯ ಮನಸಿಗೆ ಸಂತೋಷ ನೀಡುತ್ತಿದೆ ಎಂದು ಗದ್ಗದಿತರಾಗಿ ನುಡಿದರು. ಇನ್ನೋರ್ವ ಅತಿಥಿ ಪುತ್ತಿಗೆ ಗ್ರಾಮ ಪಂಚಾಯತ್‌ ಸದಸ್ಯ ಇ.ಕೆ.ಮೊಹಮ್ಮದ್‌ ಕುಂಞಿ ಕ್ಲಬ್‌ನ ಸದಸ್ಯರು ಸಂದೀಪನ ಕಟ್ಟಾ ಅಭಿಮಾನಿಗಳು. ಅವರ ಅಭಿಮಾನ ಇಲ್ಲಿನ ಜನತೆಯನ್ನೂ ಸಂದೀಪ್‌ ಅಭಿಮಾನಿಗಳನ್ನಾಗಿ ಬದಲಾಯಿಸುವಲ್ಲಿ ಯಾಶಸ್ವಿಯಾಗಿದೆ. ಸೀತಾಂಗೋಳಿ ಪೇಟೆಯ ಅಂದ ಹೆಚ್ಚಿಸಿದ ಮೇಜರ್‌ ಸಂದೀಪ್‌ ಹೆಸರಲ್ಲಿ ನಿರ್ಮಿಸಲಾದ ಎರಡು ಪ್ರಯಾಣಿಕರ ತಂಗುದಾಣಗಳು ಸಂತೋಷ್‌ ಕ್ಲಬ್‌ ಸದಸ್ಯರಿಗೆ ದೇಶಕ್ಕಾಗಿ ಪ್ರಾಣತೆತ್ತ ಯೋಧನ ಮೇಲಿರುವ ಪ್ರೀತಿ ಗೌರವವನ್ನು ಎತ್ತಿಹಿಡಿಯುತ್ತದೆ. ಮೇಜರ್‌ ಹೆಸರನ್ನು ಚಿರಸ್ಥಾಯಿಗೊಳಿಸುವ ಕ್ಲಬ್‌ ಸದಸ್ಯರ ಪ್ರಯತ್ನ ಶ್ಲಾಘನೀಯ. ಎಲ್ಲಾ ಜಾತಿ, ಮತದ ಸದಸ್ಯರಿರುವ ಈ ಸಂಘವು ನಮ್ಮ ದೇಶದಂತೆ ವಿವಿಧತೆಯಲ್ಲಿ ಏಕತೆಯನ್ನು ಸಾರುವ, ದೇಶಸೇವೆಯ, ದೇಶಪ್ರೇಮದ ಸಂದೇಶವನ್ನು ಸಾರುವ, ದೇಶಕ್ಕಾಗಿ ಪ್ರಾಣವನ್ನರ್ಪಿಸಿದ ವೀರ ಯೋಧನನ್ನು ಮಾದರಿಯಾಗಿಟ್ಟು ಕೆಲಸ ಮಾಡುವ ಏಕೈಕ ಮಾದರಿ ಸಂಘ ಎಂದರೂ ಅತಿಶಯೋಕ್ತಿಯಲ್ಲ ಎಂದು ಅಭಿಪ್ರಯ ವ್ಯಕ್ತಪಡಿಸಿದರು.

ಮೇಜರ್‌ ಸಂದೀಪ್‌ ತಾಯಿ ಧನಲಕ್ಷ್ಮಿ ಮಗನ ನೆನಪುಗಳನ್ನು ಹಂಚಿಕೊಂಡರು. ಶ್ರೀದೇವಿ ಭಜನಾ ಮಂದಿರದ ಅಧ್ಯಕ್ಷ ಜಯಂತ ಪಾಟಾಳಿ ಪೆರ್ಣೆ, ಸೀತಾಂಗೋಳಿ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಉಪಾಧ್ಯಕ್ಷ ಸುಕುಮಾರ ಕುದ್ರೆಪ್ಪಾಡಿ ಶುಭ ಹಾರೈಸಿದರು.

ಸಂಘಸ ಚರಿತ್ರೆಯಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬಹು ದಾದ ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರು ಹಾಗೂ ಸದಸ್ಯರು ಧನಲಕ್ಷ್ಮಿ ಉಣ್ಣಿಕೃಷ್ಣನ್‌ ದಂಪತಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಮಾತ್ರವಲ್ಲದೆ ಖ್ಯಾತ ಚಿತ್ರಕಲಾವಿದ ಕಿರಣ್‌ ಪೆನ್ಸಿಲ್‌ನಿಂದ ರಚಿಸಿದ ಸಂದೀಪ್‌ ಅವರ ಬಾವಚಿತ್ರವನ್ನೂ ಈ ಸಂದರ್ಭದಲ್ಲಿ ಅವರಿಗೆ ಹಸ್ತಾಂತರಿಸಲಾಯಿತು.

ಪ್ರಾಕಾಶ್‌ ಭಟ್‌, ಮೃಣಾಲ್‌ ಮೋಹನ್‌, ಅನಂತಕೃಷ್ಣ ಭಟ್‌, ಅನುರಾಧ, ಪುರುಷೋತ್ತಮ ಭಟ್‌ ಉಪಸ್ಥಿರಿದ್ದರು. ಸಂಘದ ಮಾಜಿ ಉಪಾಧ್ಯಕ್ಷ ಮಹಾಲಿಂಗ.ಕೆ ಸ್ವಾಗತಿಸಿ ಕಲಾ ಕಾರ್ಯದರ್ಶಿ ಅಪ್ಪಣ್ಣ.ಎಸ್‌ ವಂದಿಸಿದರು. ಗುರುರಾಜ್‌ ಸಿ.ಎಸ್‌ ಕಾರ್ಯಕ್ರಮ ನಿರೂಪಿಸಿದರು

ಸಂದೀಪ್‌ ನಮಗೆ ಆದರ್ಶ
1977ರಲ್ಲಿ ಪ್ರಾರಂಭಗೊಂಡ ಸಂತೋಷ್‌ ಆರ್ಟ್ಸ್ ಆಂಡ್‌ ನ್ಪೋರ್ಟ್ಸ್ ಕ್ಲಬ್‌ ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸುವ ಮೂಲಕ ಸಮಾಜ ಸೇವೆಗೆ ಮಾಡುತ್ತಿದೆ. ಕಲಾ, ಸಾಂಸ್ಕೃತಿಕ, ಕ್ರೀಡಾ ಪ್ರತಿಭೆಗಳನ್ನೂ ಪ್ರೊತ್ಸಾಹಿನೀಡಿದೆ.ಸಂಘದಲ್ಲಿರು ವ ಒಗ್ಗಟ್ಟೇ ಬಲ, ಸಂದೀಪ್‌ ನಮಗೆ ಆದರ್ಶ
ಥೋಮಸ್‌ ಡಿ”ಸೋಜಾ
ಅಧ್ಯಕ್ಷರು ಆರ್ಟ್ಸ್ ಆಂಡ್‌ ಸ್ಪೋರ್ಟ್ಸ್ ಕ್ಲಬ್‌

ಅತ್ಯಂತ ಹೆಚ್ಚು ಗೌರವ
ಸೀತಾಂಗೋಳಿಯು ಸಂದೀಪನಿಗೆ ಅತ್ಯಂತ ಹೆಚ್ಚು ಗೌರವ ನೀಡಿದೆ. ‌ ಸಂದೀಪನ ಹೆಸರಲ್ಲಿ ಇಲ್ಲಿ ನಡೆಯುವ ಸತ್ಕಾರ್ಯಗಳೇ ನಮ್ಮನ್ನು ಇಲ್ಲಿಗೆ ಬರುವಂತೆ ಪ್ರೇರೇಪಿಸಿದೆ. ಸಂದೀಪ್‌ ಫ್ಯಾನ್ಸ್‌ ಅಸೋಶಿಯೇಷನ್‌ ಸದಸ್ಯರನ್ನು ಕಂಡಾಗ ಹಲವಾರು ಸಂದೀಪಂದಿರು ನನ್ನ ಸುತ್ತಮುತ್ತ ಓಡಾಡುತ್ತಿರುವಂತೆ ಭಾಸವಾಗುತ್ತದೆ.
 -ಧನಲಕ್ಷ್ಮೀ
ಮೇಜರ್‌ ಸಂದೀಪ್‌ ತಾಯಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ