ಸ್ಪ್ರೇ ಯಂತ್ರ ಕಳವು: ಇಬ್ಬರ ಬಂಧನ
Team Udayavani, Jul 2, 2019, 10:24 AM IST
ಸೋಮವಾರಪೇಟೆ: ಸ್ಪ್ರೇ ಯಂತ್ರವನ್ನು ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಸೋಮವಾರಪೇಟೆ ಪೊಲೀಸರು ಇಬ್ಬರನ್ನು ಬಂಧಿಸಿ, ಕಳವು ಮಾಡಲಾಗಿದ್ದ ಯಂತ್ರವನ್ನು ಅವರಿಂದ ವಶಪಡಿಸಿಕೊಂಡಿದ್ದಾರೆ.
ಕೆಂಚಮ್ಮನಬಾಣೆ ನಿವಾಸಿ ಚಿನ್ನಪ್ಪ ಅವರ ಪುತ್ರ ಯಶವಂತ್ ಅಲಿಯಾಸ್ ಯಶು ಹಾಗೂ ಅದೇ ಗ್ರಾಮದ ಮಂಜುನಾಥ ಅವರ ಪುತ್ರ ಕೆ.ಸಿ. ವೇಣುಕುಮಾರ್ ಅಲಿಯಾಸ್ ರೇಣು ಬಂಧಿತರು.
ಕಳೆದ ಡಿಸೆಂಬರ್‌ನಲ್ಲಿ ಬಸವನಕಟ್ಟೆ ನಿವಾಸಿ ಸುರೇಶ್ ಅವರಿಗೆ ಸೇರಿದ 19,500 ರೂ. ಮೌಲ್ಯದ ಹೋಂಡಾ ಸ್ಪ್ರೇ ಯಂತ್ರವನ್ನು ಕಳವು ಮಾಡಿದ್ದ ಆರೋಪ ಇವರ ಮೇಲಿದೆ. ಯಂತ್ರ ಹಾಗೂ ಕಳವಿಗೆ ಬಳಸಿದ್ದ ಬೈಕನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಡಿವೈಎಸ್‌ಪಿ ಮುರಳೀಧರ್ ಮತ್ತು ವೃತ್ತ ನಿರೀಕ್ಷಕ ನಂಜುಂಡೇಗೌಡ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಶಿವಶಂಕರ್, ಪ್ರೊಬೆಷನರಿ ಎಸ್. ಐ. ಮೋಹನ್‌ರಾಜ್, ಸಿಬಂದಿ ವರ್ಗದ ಮಧು, ಪ್ರವೀಣ್, ಜಗದೀಶ್, ನವೀನ್, ಅನೀಸ್, ರಾಜೇಶ್ ಅವರು ಭಾಗವಹಿಸಿದ್ದರು.