ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ : ವಕೀಲರ ಪ್ರತಿಭಟನೆ 


Team Udayavani, Feb 14, 2019, 1:00 AM IST

vivida-bedike.jpg

ಮಡಿಕೇರಿ: ವಕೀಲರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಮಡಿಕೇರಿ ಬಾರ್‌ ಅಸೋಸಿಯೇಷನ್‌ ನಗರದಲ್ಲಿ ಪ್ರತಿಭಟನೆ ನಡೆಸಿತು. ಮಡಿಕೇರಿ ಕೋರ್ಟ್‌ ಆವರಣದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಮೌನ ಮೆರವಣಿಗೆ ಸಾಗಿದ ವಕೀಲರು ಜಿಲ್ಲಾಡಳಿತದ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. 

ದೇಶದ ವಿವಿಧ ನ್ಯಾಯಾಲಯ ಗಳಲ್ಲಿರುವ ವಕೀಲರಿಗೆ ಕೇಂದ್ರ ಸರಕಾರ ತನ್ನ ಬಜೆಟ್‌ನಲ್ಲಿ ವಕೀಲರ ಕ್ಷೇಮಾಭಿವೃದ್ದಿಗಾಗಿ ಕನಿಷ್ಟ 5 ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಡಬೇಕು, ದೇಶದಲ್ಲಿರುವ ಪ್ರತಿ ನ್ಯಾಯಾಲಯದಲ್ಲೂ ವಕೀಲರಿಗೆ ಪ್ರತ್ಯೇಕ ಕಚೇರಿ, ಅತ್ಯುತ್ತಮ ಪೀಠೊಪಕರಣಗಳು, ವಿಶ್ರಾಂತಿ ಗೃಹ, ಗ್ರಂಥಾಲಯ, ಇ-ಗ್ರಂಥಾಲಯ, ಪುರುಷ ಮತ್ತು ಮಹಿಳಾ ವಕೀಲರಿಗೆ ಪ್ರತ್ಯೇಕ ಕಚೇರಿ ಹಾಗೂ ಶೌಚಾಲಯ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು.    ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅನೀಸ್‌ ಕಣ್ಮಣಿ ಜಾಯ್ಸ, ಕೊಡಗು ಜಿಲ್ಲೆ ಭೌಗೋಳಿಕವಾಗಿ ಚಿಕ್ಕದಾಗಿದ್ದರೂ, ಭೂ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ 700 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 200 ಪ್ರಕರಣಗಳು ಮಾತ್ರ ವಿಚಾರಣೆಗೆ ಬಂದಿದ್ದು, ಉಳಿದ ಪ್ರಕರಣಗಳು ಬಗೆಹರಿಯಲು ಬಾಕಿ ಉಳಿದಿವೆ. ಹೀಗಾಗಿ ತ್ವರಿತಗತಿಯಲ್ಲಿ ವಿಚಾರಣೆ ನಡೆಸಲು ವಾರದಲ್ಲಿ ಎರಡು ದಿನ ಜಿಲ್ಲಾ ದಂಡಾಧಿಕಾರಿಗಳ ನ್ಯಾಯಾಲಯ ಕಲಾಪ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು. ಈ ಬೇಡಿಕೆಯನ್ನು ಮುಂದಿನ ದಿನಗಳಲ್ಲಿ ಪರಿಶೀಲನೆ ನಡೆಸುವುದಾಗಿ ಅವರು ವಕೀಲರ ನಿಯೋಗಕ್ಕೆ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಮಡಿಕೇರಿ ಬಾರ್‌ ಅಸೋಷಿಯೇಶನ್‌ ಅಧ್ಯಕ್ಷ ಕೆ.ಎಸ್‌. ಕವನ್‌, ಕಾರ್ಯದರ್ಶಿ ಡಿ.ಜಿ. ಕಿಶೋರ್‌, ಉಪಾಧ್ಯಕ್ಷ ಪ್ರೀತಂ, ಖಜಾಂಚಿ ದೇವಿ, ಜಂಟಿ ಕಾರ್ಯದರ್ಶಿ ಕೇಶವ್‌, ಹಿರಿಯ ವಕೀಲರಾದ ಕೆ.ಪಿ. ಬಾಲಸುಬ್ರಮಣ್ಯ, ಕೆ.ಎ. ಕುಟ್ಟಪ್ಪ, ಶ್ರೀಧರನ್‌ ನಾಯರ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

ವಿನಾಯಕ ನಗರದ ಮೃತ ಬಾಲಕನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಎಸ್.ಎಲ್.ಘೋಟ್ನೇಕರ್

ವಿನಾಯಕ ನಗರದ ಮೃತ ಬಾಲಕನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಎಸ್.ಎಲ್.ಘೋಟ್ನೇಕರ್

hgjghgfd

ಎರಡೂ ಉಪ ಚುನಾವಣೆ ಬಿಜೆಪಿ ಗೆಲುವುದು ನಿಶ್ಚಿತ : ನಾರಾಯಣಸ್ವಾಮಿ

ಪ್ರಧಾನಿ ನರೇಂದ್ರ ಮೋದಿ ಸಾಮಾನ್ಯ ವ್ಯಕ್ತಿಯಲ್ಲ, ಸರ್ವಶಕ್ತನ ಅವತಾರ: ಸಚಿವ ತಿವಾರಿ

ಪ್ರಧಾನಿ ನರೇಂದ್ರ ಮೋದಿ ಸಾಮಾನ್ಯ ವ್ಯಕ್ತಿಯಲ್ಲ, ಸರ್ವಶಕ್ತನ ಅವತಾರ: ಸಚಿವ ತಿವಾರಿ

ತಮಿಳುನಾಡು: ಪಟಾಕಿ ಅಂಗಡಿಯಲ್ಲಿ ಸ್ಫೋಟ, ಮಾಲೀಕ ಸೇರಿ ಐವರು ಸಾವು, ಹಲವರಿಗೆ ಗಾಯ

ತಮಿಳುನಾಡು: ಪಟಾಕಿ ಅಂಗಡಿಯಲ್ಲಿ ಸ್ಫೋಟ, ಮಾಲೀಕ ಸೇರಿ ಐವರು ಸಾವು, ಹಲವರಿಗೆ ಗಾಯ

gjhgfd

ಬಂಟ್ವಾಳ : ಬಿಜೆಪಿ ಮುಖಂಡ ಬೆಳ್ಳೂರು ನಿವಾಸಿ‌ ಪ್ರಕಾಶ್ ಮೇಲೆ ಹಲ್ಲೆ

ತಿರುಚ್ಚಿ – ಹುಬ್ಬಳ್ಳಿ ಏರ್‌ಪೋರ್ಟ್‌ ವಿಲೀನ?

ತಿರುಚ್ಚಿ – ಹುಬ್ಬಳ್ಳಿ ಏರ್‌ಪೋರ್ಟ್‌ ವಿಲೀನ?

hfjhgfds

ಟೊಪ್ಪಿ ಹಾಕಲು ಯಾರಿಗೆ ಹುಟ್ಟಿರಬೇಕು? : ಸಿದ್ದರಾಮಯ್ಯ ವಿರುದ್ಧ C.T ರವಿ ಟ್ವೀಟ್





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಡಿಕೇರಿ: ಪಾಕ್ ವಿರುದ್ಧ ಭಾರತಕ್ಕೆ ಸೋಲು; ಹೃದಯಾಘಾತದಿಂದ ಕ್ರೀಡಾಭಿಮಾನಿ ಸಾವು

ಮಡಿಕೇರಿ: ಪಾಕ್ ವಿರುದ್ಧ ಭಾರತಕ್ಕೆ ಸೋಲು; ಹೃದಯಾಘಾತದಿಂದ ಕ್ರೀಡಾಭಿಮಾನಿ ಸಾವು

“ನದಿ ಮೂಲ ಉಳಿದರೆ ಮನುಕುಲದ ಉಳಿವು’

“ನದಿ ಮೂಲ ಉಳಿದರೆ ಮನುಕುಲದ ಉಳಿವು’

6 ಕೋ.ರೂ. ತಿಮಿಂಗಲ ವಾಂತಿ ವಶ; ಇಬ್ಬರ ಬಂಧನ

6 ಕೋ.ರೂ. ತಿಮಿಂಗಲ ವಾಂತಿ ವಶ; ಇಬ್ಬರ ಬಂಧನ

ಮಡಿಕೇರಿ: ವಿಷ ಸೇವಿಸಿ ನಾಲ್ಕು ದಿನದ ಬಳಿಕ ಸಾವೀಗೀಡಾದ ಗ್ರಾಮ ಪಂಚಾಯತ್ ಸದಸ್ಯೆ.!

ಮಡಿಕೇರಿ: ವಿಷ ಸೇವಿಸಿ ನಾಲ್ಕು ದಿನದ ಬಳಿಕ ಸಾವಿಗೀಡಾದ ಗ್ರಾಮ ಪಂಚಾಯತ್ ಸದಸ್ಯೆ.!

ಕುಬಣೂರು ಸೇತುವೆ ಕುಸಿತ; ಸಂಪರ್ಕ ರಸ್ತೆ ತಡೆ

ಕುಬಣೂರು ಸೇತುವೆ ಕುಸಿತ; ಸಂಪರ್ಕ ರಸ್ತೆ ತಡೆ

MUST WATCH

udayavani youtube

ಆಧುನಿಕ ಪದ್ಧತಿಯೊಂದಿಗೆ ಬ್ಯಾಡಗಿ ಮೆಣಸಿನಕಾಯಿ ಕೃಷಿಗೆ ಮುಂದಾದ ಅಡಕೆ ಕೃಷಿಕ

udayavani youtube

ಬಸ್ ಕಂಡಕ್ಟರ್‌ನಿಂದ ಸೂಪರ್ ಸ್ಟಾರ್ ಆದ ರಜನಿಕಾಂತ್ ಕಥೆ

udayavani youtube

ಈ ಪ್ರೌಢ ಶಾಲೆಯಲ್ಲಿ ಒಂದಲ್ಲ, ಎರಡಲ್ಲ ಹಲವಾರು ಸಮಸ್ಯೆಗಳು!

udayavani youtube

ಪಾಕಿಸ್ಥಾನದ ವಿಜಯವನ್ನು ಸಂಭ್ರಮಿಸಿದ ರಾಜಸ್ಥಾನದ ಟೀಚರ್

udayavani youtube

ಸಾಮಾಜಿಕ ಸಂದೇಶ ಹೊತ್ತು 3500 ಕಿ.ಮೀ ಸೈಕಲ್ ಪ್ರಯಾಣ!

ಹೊಸ ಸೇರ್ಪಡೆ

ವಿನಾಯಕ ನಗರದ ಮೃತ ಬಾಲಕನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಎಸ್.ಎಲ್.ಘೋಟ್ನೇಕರ್

ವಿನಾಯಕ ನಗರದ ಮೃತ ಬಾಲಕನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಎಸ್.ಎಲ್.ಘೋಟ್ನೇಕರ್

3kannada

ಅದ್ದೂರಿ ರಾಜ್ಯೋತ್ಸವಕ್ಕೆ ಒತ್ತಾಯ

2life

ಆದರ್ಶ ನಂಬಿದ ಬದುಕು ಮಾದರಿ: ಡಾ|ಅಪ್ಪ

Road accident

ರಸ್ತೆ ಅಪಘಾತ: ವರ್ಷಕ್ಕೆ 2.91 ಲಕ್ಷ ಕೋಟಿ ನಷ್ಟ!

1election

ಚಿತ್ತಾಪುರ ಎಂಎಲ್‌ಎ ಸೋಲಿಸಲು ರಣತಂತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.