ಡಿ. 9- 16 ಟೂರ್‌ ಆಫ್ ನೀಲಗಿರೀಸ್‌: ವಿಶ್ವದ 110 ಮಂದಿ ಭಾಗಿ


Team Udayavani, Dec 7, 2018, 12:17 PM IST

7-december-6.gif

ಮಡಿಕೇರಿ: ರೈಡ್‌ ಎ ಸೈಕಲ್‌ ಪ್ರತಿಷ್ಠಾನದ ವತಿಯಿಂದ ಆಯೋಜಿತ 11ನೇ ಆವೃತ್ತಿಯ ಟೂರ್‌ ಆಫ್ ನೀಲಗಿರೀಸ್‌ ನಲ್ಲಿ ಈ ಬಾರಿ ಸೈಕ್ಲಿಸ್‌ rಗಳು ಕುಶಾಲಗರ ಮೂಲಕ ಕೊಡಗು ಪ್ರವೇಶಿಸಲಿದ್ದು, 950 ಕಿಲೋ ಮೀಟರ್‌ ಗೂ ಅಧಿಕ ದೂರವನ್ನು ತಮ್ಮ ಸೈಕಲ್‌ ಯಾತ್ರೆಯ ಸಂದರ್ಭ ಕ್ರಮಿಸಲಿದ್ದಾರೆ.

ಕರ್ನಾಟಕ, ಕೇರಳ ಹಾಗೂ ತಮಿಳುನಾಡುಗಳಲ್ಲಿ ವ್ಯಾಪಿಸಿರುವ ಪಶ್ಚಿಮಘಟ್ಟದ, ನೀಲಗಿರೀಸ್‌ ಜೀವವೈವಿಧ್ಯತೆಯ ತಾಣಗಳಲ್ಲಿ ಈ ಸೈಕಲ್‌ ಪ್ರಯಾಣ ಸಾಗಲಿದೆ. ವಿಶ್ವದ 110 ಸೈಕಲ್‌ ಸವಾರರು 2018ರ ಟೂರ್‌ ಆಫ್ ನೀಲಗಿರೀಸ್‌ ನ ಪ್ರಯಾಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಪೈಕಿ 13 ದೇಶಗಳ 29 ಅಂತಾರಾಷ್ಟ್ರೀಯ ರೈಡರ್‌ ಗಳು (23 ಪುರುಷ ಹಾಗೂ 6 ಮಹಿಳೆಯರು) ಹಾಗೂ 17 ಮಹಿಳಾ ರೈಡರ್‌ ಗಳು ಭಾಗವಹಿಸಲಿದ್ದಾರೆ.

ಮೈಸೂರಿನಲ್ಲಿ ಆರಂಭವಾಗಲಿರುವ ಸೈಕಲ್‌ ಯಾತ್ರೆ ಹಾಸನ, ಕುಶಾಲನಗರ, ಸುಲ್ತಾನ್‌ ಬತ್ತೇರಿ, ಊಟಿ , ಕಲ್ಪೆಟ್ಟ ಮಾರ್ಗವಾಗಿ ಸಾಗಿ ಮೈಸೂರಿಗೆ ಮರಳುವುದರೊಂದಿಗೆ ಸಮಾಪನಗೊಳ್ಳಲಿದೆ. ಸೈಕಲಿಂಗ್‌ ನ 4ನೇ ದಿನ ಸುಲ್ತಾನ್‌ ಬತ್ತೇರಿಯಿಂದ ಊಟಿಗೆ ಹೋಗುವ ಮಾರ್ಗದಲ್ಲಿ ಸೈಕ್ಲಿಸ್ಟ್‌ಗಳು ಕಡಿದಾದ ಕಲ್ಹಟ್ಟಿ ಘಾಟ್‌ ಏರಬೇಕಿರುತ್ತದೆ. ಇದು ವಿಶ್ವದ ಅತ್ಯಂತ ಕಠಿಣ ಸೈಕ್ಲಿಂಗ್‌ ಆರೋಹಣಗಳಲ್ಲಿ ಒಂದಾಗಿದೆ. ಡಿಸೆಂಬರ್‌ 10 ರಂದು ಹಾಸನದಿಂದ ಪ್ರಾರಂಭವಾಗಿ ಸಕಲೇಶಪುರ ಹಾಗೂ ಸೋಮವಾರಪೇಟೆ ಮೂಲಕ 143 ಕಿ.ಮೀ ಕ್ರಮಿಸಿ ಸಂಜೆ 6 ಗಂಟೆಗೆ ಸೈಕಲಿಸ್ಟ್‌ ಗಳು ಕುಶಾಲನಗರ ತಲುಪಲಿದ್ದಾರೆ.

ಡಿಸೆಂಬರ್‌ 11ರಂದು ಬೆಳಗ್ಗೆ ಕುಶಾಲನಗರದಿಂದ ದುಬಾರೆ ಆನೆ ಶಿಬಿರ, ಗೋಣಿಕೊಪ್ಪಲು, ಕುಟ್ಟ ಹಾಗೂ ತೋಲ್ಪಟ್ಟಿ ಅರಣ್ಯ ಮೂಲಕ 145 ಕಿ.ಮೀ ಕ್ರಮಿಸಿ ಸುಲ್ತಾನ್‌ ಬತೇರಿಯನ್ನು ಸೈಕಲ್‌ ಸವಾರರು ತಲುಪಲಿದ್ದಾರೆ.

ಎಂಟು ದಿನಗಳ ಸೈಕ್ಲಿಂಗ್‌ ಪ್ರಯಾಣದಲ್ಲಿ (ಡಿಸೆಂಬರ್‌ 9 ರಿಂದ 16 ) ಸೈಕ್ಲಿಸ್ಟ್‌ ಗಳು ಹಲವಾರು ನೈಸರ್ಗಿಕ ತಾಣಗಳನ್ನು ವೀಕ್ಷಿಸಲಿದ್ದಾರೆ. ಕಡಿದಾದ ಕಣಿವೆಗಳು, ಕಾಫಿ-ಟೀ ಸಸ್ಯರಾಶಿಗಳು, ಮೂರು ವನ್ಯಜೀವಿ ಅಭಯಾರಣ್ಯಗಳು ಹಾಗೂ ಗಿರಿಶಿಖರಗಳನ್ನೂ ಹಾದುಹೋಗಲಿದ್ದಾರೆ .

ಸೈಕಲ್‌ ಮೂಲಕ ಪ್ರಕೃತಿಯ ಅನುಭವ ಪಡೆಯುವ ಅಪೂರ್ವ ಅವಕಾಶವೇ ಟೂರ್‌ ಆಫ್ ನೀಲಗಿರೀಸ್‌ ಆಗಿದ್ದು ಎಂದು ಹೇಳುವ ಈ ಸೈಕಲ್‌ ಯಾತ್ರೆಯ ಆಯೋಜಕ ಸಂಸ್ಥೆಯಾದ ರೈಡ್‌ ಎ ಸೈಕಲ್‌ ಪ್ರತಿಷ್ಠಾ ನದ ಸಹ ಸಂಸ್ಥಾಪಕ ದೀಪಕ್‌ ಮಾಜಿ ಪಾಟೀಲ್‌, ಪ್ರತಿ ಆವೃತ್ತಿಯ ಟಿಎಫ್ಎನ್‌ ಕೂಡ ರೈಡರ್‌ ಗಳ ನೆನಪಿನಲ್ಲಿ ಉಳಿಯುತ್ತದೆ. ಮತ್ತೊಮ್ಮೆ ನಿಸರ್ಗದ ಅನುಭವ ಪಡೆಯುವ ಸಲುವಾಗಿ ಮರಳಿ ಬರುತ್ತಾರೆ ಎಂದು ಹೇಳಿದರು.

ಈ ವರ್ಷ ಉಳಿದೆಲ್ಲಾ ವರ್ಷಗಳ ದಾಖಲೆಯ ಅಂತಾರಾಷ್ಟ್ರೀಯ ರೈಡರ್‌ ಗಳನ್ನು ಟಿಎಫ್ಎನ್‌ ಆಕರ್ಷಿಸುವುದರೊಂದಿಗೆ, ದೇಶ ಹಾಗೂ ವಿದೇಶದಿಂದ 17 ಮಹಿಳಾ ಸೈಕ್ಲಿಸ್ಟ್‌ ಗಳು ಸ್ಪಧಿ9ಸುತ್ತಿದ್ದಾರೆ ಎಂದು ದೀಪಕ್‌ ಮಾಜಿ ಪಾಟೀಲ್‌ ಮಾಹಿತಿ ನೀಡಿದ್ದಾರೆ. ಸಾಮಾನ್ಯ ರೀತಿಯಲ್ಲಿ ಆರಂಭ ಪಡೆದುಕೊಂಡಿದ್ದ ಟಿಎಫ್ಎನ್‌, ಭಾರತದ ಅತಿದೊಡ್ಡ ಹಾಗೂ ಪ್ರೀತಿ ಪಾತ್ರ ಬೈಕ್‌ ಟೂರ್‌ ಎನಿಸಿಕೊಂಡಿದೆ. ಆ ಮೂಲಕ ಸೈಕ್ಲಿಂಗ್‌ ಭೂಪಟದಲ್ಲಿ ಭಾರತದ ಹೆಸರೂ ಕಾಣಿಸಿಕೊಳ್ಳುವಂತೆ ಮಾಡಿದ ಹಿರಿಮೆ ಹೊಂದಿದೆ.

ಸಾಹಸದ ಅನುಭವ ನೀಡುವ ಸೈಕ್ಲಿಂಗ್‌ ಅನ್ನು ವೃತ್ತಿಪರವಾಗಿ ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಉತ್ಸಾಹಿಗಳ ಪಾಲಿಗೆ ಟಿಎಫ್ಎನ್‌ ಇತ್ತೀಚಿನ ವರ್ಷಗಳಲ್ಲಿ ಉತ್ತಮ ಆಯ್ಕೆ ಎನಿಸಿಕೊಂಡಿದೆ. ಈ ಬಾರಿಯ ಯಾತ್ರೆಯಲ್ಲಿ ಕಿರಣ್‌ ಕುಮಾರ್‌ ರಾಜು, ಪ್ರಸಕ್ತ ಇಂಡಿಯಾ ಎಂಟಿಬಿ ಚಾಂಪಿಯನ್‌ ಮತ್ತು ನವೀನ್‌ ಜಾನ್‌, ಪ್ರಸಕ್ತ ಇಂಡಿಯಾ ರೋಡ್‌ ಮಾಜಿ ಚಾಂಪಿಯನ್‌ ಸೇರಿದಂತೆ ಪ್ರಸಿದ್ಧ ಸೈಕ್ಲಿಸ್ಟ್‌ ಗಳು ಟಿಎಫ್ಎನ್‌ 2018ರಲ್ಲಿ ಪೆಡಲ್‌ ಮಾಡಲಿದ್ದಾರೆ.

1984ರ ಒಲಿಂಪಿಕ್‌ ಸೈಕ್ಲಿಂಗ್‌ ನಲ್ಲಿ ಚಿನ್ನದ ಪದಕ ವಿಜೇತರಾಗಿದ್ದ ಅಲೆಕ್ಸಿಗ್ರೇವಲ್‌ – ಟಿಎಫ್ಎನ್‌ 2017ರಲ್ಲಿ ಪೆಡಲ್‌ ಮಾಡಿದ್ದ ಅಲೆಕ್ಸಿಗ್ರೇವಲ್‌ ಈ ಆವೃತ್ತಿಯಲ್ಲಿ ಸ್ವಯಂ ಸೇವಕರಾಗಿದ್ದು , ಮಹತ್ತರ ಗುರಿಯೊಂದಿಗೆ ಭಾಗವಹಿಸುತ್ತಿರುವ ಯುವ ಪ್ರತಿಭಾನ್ವಿತ ಸವಾರರಿಗೆ ಸಲಹೆಗಾರರಾಗಲಿರುವುದು ವಿಶೇಷ ಎಂದು ರೈಡ್‌ ಎ ಸೈಕಲ್‌ ಪ್ರತಿಷ್ಠಾನದ ಹೇಳಿಕೆಯಲ್ಲಿ ಮಾಹಿತಿ ನೀಡಲಾಗಿದೆ. 

ಭಾರತೀಯ ಸೈಕ್ಲಿಸ್ಟ್‌ ಗಳು ಮಾತ್ರವಲ್ಲದೆ, ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿ ಸೈಕ್ಲಿಸ್ಟ್‌ ಗಳು ಈ ಪ್ರಯಾಣದಲ್ಲಿ ಪಾಲ್ಗೊಳ್ಳಲೆಂದೇ ಭಾರತಕ್ಕೆ ಆಗಮಿಸುತ್ತಿದ್ದಾರೆ. ಡೆನ್ಮಾರ್ಕ್‌ನಿಂದ 7 ಸೈಕ್ಲಿಸ್ಟ್‌ ಗಳು, ಅಮೆರಿಕದಿಂದ 4, ಆಸ್ಟ್ರೇಲಿಯಾ, ಜರ್ಮನಿ ಹಾಗೂ ಇಂಗ್ಲೆಂಡ್‌ ನಿಂದ ತಲಾ ಮೂರು, ಬೆಲ್ಜಿಯಂ ಮತ್ತು ಕೆನಡಾದಿಂದ ತಲಾ 2, ಆಸ್ಟ್ರಿಯಾ, ಗ್ರೀಸ್‌, ಮಲೇಷ್ಯಾ, ಫಿಲಿಫೈನ್ಸ್‌ ಮತ್ತು ಪೋಲೆಂಡ್ನಿಂದ ತಲಾ ಒಬ್ಬ ಸೈಕ್ಲಿಸ್ಟ್‌ ಗಳು ಈ ಬಾರಿ ಪಾಲ್ಗೊಳ್ಳಲಿದ್ದಾರೆ. 

ಟಾಪ್ ನ್ಯೂಸ್

ನವರಾತ್ರಿ ಸಂಭ್ರಮ ಕಳೆದ ಬೆನ್ನಲ್ಲೇ ಪಶ್ಚಿಮಬಂಗಾಳದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳ

ನವರಾತ್ರಿ ಸಂಭ್ರಮ ಕಳೆದ ಬೆನ್ನಲ್ಲೇ ಪಶ್ಚಿಮಬಂಗಾಳದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳ

1-22f

ಕಾಶ್ಮೀರದಲ್ಲಿ ಬುಲೆಟ್ ಪ್ರೂಫ್ ಶೀಲ್ಡ್ ತೆಗೆಸಿ ಭಾಷಣ ಮಾಡಿದ ಗೃಹ ಸಚಿವ ಶಾ!

ಬೆಳಗಾವಿಯಲ್ಲಿ ರಾಂಗ್ ರನ್ ವೇ ಮೇಲೆ ವಿಮಾನ ಲ್ಯಾಂಡ್: ತಪ್ಪಿದ ದುರಂತ

ಬೆಳಗಾವಿಯಲ್ಲಿ ರಾಂಗ್ ರನ್ ವೇ ಮೇಲೆ ವಿಮಾನ ಲ್ಯಾಂಡ್: ತಪ್ಪಿದ ದುರಂತ

ಶಿವಮೊಗ್ಗ: ಮಕ್ಕಳು ಬಂದರೂ ಶಾಲೆಗೆ ಬಾರದ ಶಿಕ್ಷಕರು!

ಶಿವಮೊಗ್ಗ: ಮಕ್ಕಳು ಬಂದರೂ ಶಾಲೆಗೆ ಬಾರದ ಶಿಕ್ಷಕರು!

Untitled-1

ಬ್ಯಾಡಗಿ ಮೆಣಸಿನಕಾಯಿ ಬೆಳೆದ ಅಡಕೆ ಕೃಷಿಕ

ಮಡಿಕೇರಿ: ಪಾಕ್ ವಿರುದ್ಧ ಭಾರತಕ್ಕೆ ಸೋಲು; ಹೃದಯಾಘಾತದಿಂದ ಕ್ರೀಡಾಭಿಮಾನಿ ಸಾವು

ಮಡಿಕೇರಿ: ಪಾಕ್ ವಿರುದ್ಧ ಭಾರತಕ್ಕೆ ಸೋಲು; ಹೃದಯಾಘಾತದಿಂದ ಕ್ರೀಡಾಭಿಮಾನಿ ಸಾವು

Untitled-1

ಕಡಬ: ನೂಜಿಬಾಳ್ತಿಲ ಶಾಲೆಯಲ್ಲಿ ಗ್ಯಾಸ್ ಸೋರಿಕೆ; ತಪ್ಪಿದ ದುರಂತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಡಿಕೇರಿ: ಪಾಕ್ ವಿರುದ್ಧ ಭಾರತಕ್ಕೆ ಸೋಲು; ಹೃದಯಾಘಾತದಿಂದ ಕ್ರೀಡಾಭಿಮಾನಿ ಸಾವು

ಮಡಿಕೇರಿ: ಪಾಕ್ ವಿರುದ್ಧ ಭಾರತಕ್ಕೆ ಸೋಲು; ಹೃದಯಾಘಾತದಿಂದ ಕ್ರೀಡಾಭಿಮಾನಿ ಸಾವು

“ನದಿ ಮೂಲ ಉಳಿದರೆ ಮನುಕುಲದ ಉಳಿವು’

“ನದಿ ಮೂಲ ಉಳಿದರೆ ಮನುಕುಲದ ಉಳಿವು’

6 ಕೋ.ರೂ. ತಿಮಿಂಗಲ ವಾಂತಿ ವಶ; ಇಬ್ಬರ ಬಂಧನ

6 ಕೋ.ರೂ. ತಿಮಿಂಗಲ ವಾಂತಿ ವಶ; ಇಬ್ಬರ ಬಂಧನ

ಮಡಿಕೇರಿ: ವಿಷ ಸೇವಿಸಿ ನಾಲ್ಕು ದಿನದ ಬಳಿಕ ಸಾವೀಗೀಡಾದ ಗ್ರಾಮ ಪಂಚಾಯತ್ ಸದಸ್ಯೆ.!

ಮಡಿಕೇರಿ: ವಿಷ ಸೇವಿಸಿ ನಾಲ್ಕು ದಿನದ ಬಳಿಕ ಸಾವಿಗೀಡಾದ ಗ್ರಾಮ ಪಂಚಾಯತ್ ಸದಸ್ಯೆ.!

ಕುಬಣೂರು ಸೇತುವೆ ಕುಸಿತ; ಸಂಪರ್ಕ ರಸ್ತೆ ತಡೆ

ಕುಬಣೂರು ಸೇತುವೆ ಕುಸಿತ; ಸಂಪರ್ಕ ರಸ್ತೆ ತಡೆ

MUST WATCH

udayavani youtube

ಶಾಲಾ ಪ್ರಾರಂಭೋತ್ಸವ : ಕಾಜಾರಗುತ್ತು ಪ್ರಾಥಮಿಕ ಶಾಲೆಯಲ್ಲಿ ಚಿಣ್ಣರ ಕಲರವ

udayavani youtube

ಕಾಪು ಮತ್ತು ಕರಂದಾಡಿ ಶಾಲೆಯಲ್ಲಿ ಅದ್ದೂರಿಯ ಶಾಲಾ ಪ್ರಾರಂಭೋತ್ಸವ

udayavani youtube

ದಾಂಡೇಲಿ ನಗರದಲ್ಲಿ ಸಕ್ರೀಯಗೊಳ್ಳುತ್ತಿದೆ ಪೆಟ್ರೋಲ್ ಕಳ್ಳರ ಹಾವಳಿ

udayavani youtube

ಕಾಳಿ ನದಿ ದಂಡೆಯಿಂದ ಬಾಲಕನನ್ನು ಎಳೆದೊಯ್ದ ಮೊಸಳೆ : ಆತಂಕದಲ್ಲಿ ಸ್ಥಳೀಯರು

udayavani youtube

ರಸ್ತೆ ಬದಿ ಮಲಗಿದ್ದ ಗೋವು ಕಳ್ಳತನ : ಘಟನೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಬಯಲು

ಹೊಸ ಸೇರ್ಪಡೆ

20kannada

ಅನ್ಯಭಾಷಿಕರಿಗೆ ಕನ್ನಡ ಕಲಿಸಿ: ಮಹಾದೇವ ಮುರಗಿ

ನವರಾತ್ರಿ ಸಂಭ್ರಮ ಕಳೆದ ಬೆನ್ನಲ್ಲೇ ಪಶ್ಚಿಮಬಂಗಾಳದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳ

ನವರಾತ್ರಿ ಸಂಭ್ರಮ ಕಳೆದ ಬೆನ್ನಲ್ಲೇ ಪಶ್ಚಿಮಬಂಗಾಳದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳ

16 ಪದವಿ ಕಾಲೇಜುಗಳ ಬಿಕಾಂ ಫಲಿತಾಂಶಕ್ಕೆ ತಡೆ

16 ಪದವಿ ಕಾಲೇಜುಗಳ ಬಿಕಾಂ ಫಲಿತಾಂಶಕ್ಕೆ ತಡೆ

ಟ್ರೇಲರ್‌ನಲ್ಲಿ ‘ಪೆದ್ದು ನಾರಾಯಣ’ ದರ್ಶನ

ಟ್ರೇಲರ್‌ನಲ್ಲಿ ‘ಪೆದ್ದು ನಾರಾಯಣ’ ದರ್ಶನ

1-22f

ಕಾಶ್ಮೀರದಲ್ಲಿ ಬುಲೆಟ್ ಪ್ರೂಫ್ ಶೀಲ್ಡ್ ತೆಗೆಸಿ ಭಾಷಣ ಮಾಡಿದ ಗೃಹ ಸಚಿವ ಶಾ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.