ಸಂಚಾರ ನಿಯಮ ಉಲ್ಲಂಘನೆ: ಮಾಜಿ ಸಚಿವ ನಾಣಯ್ಯರಿಗೆ ದಂಡ
Team Udayavani, May 31, 2019, 6:10 AM IST
ಮಡಿಕೇರಿ: ನೋ ಪಾರ್ಕಿಂಗ್ ಸ್ಥಳದಲ್ಲಿ ಕಾರು ನಿಲ್ಲಿಸಿದ ಮಾಜಿ ಕಾನೂನು ಸಚಿವ ಎಂ.ಸಿ ನಾಣಯ್ಯ ಅವರಿಗೆ ಮಡಿಕೇರಿ ಟ್ರಾಫಿಕ್ ಪೊಲೀಸರು ದಂಡ ವಿಧಿಸಿದ್ದಾರೆ.
ನಗರದ ಚೌಕಿ ರಸ್ತೆಯಲ್ಲಿ ನಾಣಯ್ಯ ಅವರು ತಮ್ಮ ಕಾರನ್ನು ನಿಲ್ಲಿಸಿದ್ದ ವೇಳೆ ಪೊಲೀಸರು ವೀಲ್ಲಾಕ್ ಅಳವಡಿಸಿ ದಂಡ ವಿಧಿಸಿದ್ದಾರೆ. ಅನಂತರ ನಾಣಯ್ಯ ಅವರು ದಂಡ ಪಾವತಿಸಿ ತೆರಳಿದರು.