ಕೊಡಗಿನ ಇಬ್ಬರು ಸೈನಿಕರಿಗೆ ರಾಜ್ಯೋತ್ಸವ ಪ್ರಶಸ್ತಿಯ ಗರಿ

Team Udayavani, Oct 30, 2019, 4:19 AM IST

ಮಡಿಕೇರಿ: ಕೊಡಗು ಜಿಲ್ಲೆಯ ಇಬ್ಬರು ಸೈನಿಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಸುಬೇದಾರ್‌ (ನಿ) ಚೇನಂಡ ಎ. ಕುಟ್ಟಪ್ಪ ಮತ್ತು ಲೆಫ್ಟಿನೆಂಟ್‌ ಜನರಲ್‌ (ನಿ) ಬಿ.ಎನ್‌. ಬಿ.ಎಂ. ಪ್ರಸಾದ್‌ ಅವರು ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬಾಕ್ಸಿಂಗ್‌ ಕ್ರೀಡೆಯಲ್ಲಿ ಮಾಡಿದ ಸಾಧನೆಗಾಗಿ ಚೇನಂಡ ಎ. ಕುಟ್ಟಪ್ಪ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿನ ಸಾಧನೆಗಾಗಿ ಬಿಎಂ ಪ್ರಸಾದ್‌ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಇಬ್ಬರು ಸಾಧಕರು ಭಾರತೀಯ ಭೂ ಸೇನೆಯ ವೀರ ಯೋಧರೆಂಬುದು ವಿಶೇಷ.

ನಿರೀಕ್ಷೆ ಇರಲಿಲ್ಲ
ರಾಜ್ಯೋತ್ಸವ ಪ್ರಶಸ್ತಿಯ ನಿರೀಕ್ಷೆಯೇ ಇರಲಿಲ್ಲ, 40 ವರ್ಷ ಪ್ರಾಯಕ್ಕೆ ಪ್ರತಿಷ್ಠಿತ ಪ್ರಶಸ್ತಿ ದೊರಕಿದ್ದು ಸಂತೋಷ ತಂದಿದೆ ಎಂದು ಚೇನಂಡ ಕುಟ್ಟಪ್ಪ ಪ್ರತಿಕ್ರಿಯಿಸಿದರು.

ಸೇನೆಗೆ ಅರ್ಪಣೆ
ತಮಗೆ ರಾಜ್ಯೋತ್ಸವ ಪ್ರಶಸ್ತಿ ಬಂದಿರುವ ಬಗ್ಗೆ ಮಾತನಾಡಿದ ಬಿಳಿಗೇರಿ ಮಹಾವೀರ ಪ್ರಸಾದ್‌, ತಮ್ಮ ಸೇವೆಯನ್ನು ಸರಕಾರ ಪರಿಗಣಿಸಿರುವುದು ತುಂಬಾ ಸಂತಸ ತಂದಿದೆ, ಇದು ಭಾರತೀಯ ಸೇನೆಗೆ ಸಂದ ಗೌರವ ಎಂದು ಹೇಳಿದರು. ಇಂದು ಕೇಂದ್ರ ಸರಕಾರ ಯೋಧರ ಯೋಗ ಕ್ಷೇಮಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ನನಗೆ ಬಂದಿರುವ ಪ್ರಶಸ್ತಿಯನ್ನು ಭಾರತೀಯ ಸೇನೆಗೆ ಅರ್ಪಿಸುತ್ತಿರುವುದಾಗಿ ಹೇಳಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ