ಕಾಡಾನೆ ಹಾವಳಿ: ಬಿಟ್ಟಂಗಾಲ ಗ್ರಾಮಸ್ಥರ ಪ್ರತಿಭಟನೆ

Team Udayavani, Sep 28, 2019, 5:09 AM IST

ಮಡಿಕೇರಿ: ಬಿಟ್ಟಂಗಾಲ ಗ್ರಾಮ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷದಿಂದ ನಿರಂತರ ಕಾಡಾನೆ ಹಾವಳಿಯಿಂದ ರೈತರುಕಂಗಾಲಾಗಿದ್ದರೂ, ಅರಣ್ಯ ಇಲಾಖೆ ಅಧಿಕಾರಿಗಳು ಆನೆ ಹಾವಳಿ ತಡೆಗಟ್ಟದೆ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಗ್ರಾಮಸ್ಥರು ಪಟ್ಟಣದ ಗಡಿಯಾರ ಕಂಬದ ಬಳಿಯಿಂದಗಾಂಧಿನಗರದಲ್ಲಿರುವಅರಣ್ಯ ಭವನದವರಗೆ ಮೆರವಣಿಗೆ ನಡೆಸಿದರಲ್ಲದೆ, ಇಲಾಖೆಯ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮಸ್ಥರ ಪರವಾಗಿ ಮಾತನಾಡಿದ ಪುಡಿಯಂಡ ರಾಮಚ್ಚ ಅವರು , ಬಿಟ್ಟಂಗಾಲ ಗ್ರಾಮದಲ್ಲಿಇಂದು ಕೂಡ ಐದಾರು ಕಾಡಾನೆಗಳು ನಿರಂತರ ಬೆಳೆ ಹಾನಿ ಮಾಡುತ್ತಿದ್ದು ಭತ್ತದ ಕೃಷಿ, ಕಾಫಿ ಗಿಡ, ಅಡಿಕೆ, ಬಾಳೆ ಗಿಡ ಮತ್ತು ಫ‌ಸಲು ನಾಶವಾಗಿದೆ. ಇದರಿಂದಾಗಿ ಮುಂದೆ ಯಾವ ಕೃಷಿ ಮಾಡಬೇಕು ಮತ್ತು ಮುಂದಿನ ಭವಿಷ್ಯದ ಬಗ್ಗೆ ಚಿಂತಿಸುವ ಸ್ಥಿತಿ ಬಂದಿದೆ ಎಂದರು.

ಕಳೆದ ಜೂನ್‌ ತಿಂಗಳಲ್ಲಿ ಶಾಲೆಗೆ ತೆರಳುತ್ತಿದ್ದ ಬಾಲಕನ ಮೇಲೆ ಕಾಡಾನೆ ದಾಳಿ ನಡೆಸಿ ಬಾಲಕ ಗಾಯಗೊಂಡಿದ್ದು, ಆತನಿಗೆಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೂ ಅರಣ್ಯ ಅಧಿಕಾರಿಗಳು ಕಾಡಾನೆ ಹಾವಳಿ ತಡೆಗಟ್ಟುವಲ್ಲಿಕಾಳಜಿ ತೋರುತ್ತಿಲ್ಲ ಎಂದು ಪುಡಿಯಂಡ ರಾಮಚ್ಚ ಅವರು ಆರೋಪಿಸಿದರು.

ಪ್ರತಿಭಟನಾಕಾರರಿಂದ ಮನವಿ ಸ್ವಿಕರಿಸಿದ ಅರಣ್ಯ ವಲಯಧಿಕಾರಿ ಗೋಪಾಲ್‌ ಅವರು ಮಾತನಾಡಿ, ಕಾಡಾನೆಗಳನ್ನು ಓಡಿಸಲು ಅಗತ್ಯ ಕ್ರಮ ಕೈಗೊಂಡಿದ್ದೇವೆ. ಆದರೆ ಅವುಗಳನ್ನು ಓಡಿಸುವಲ್ಲಿ ಅನೇಕ ಅಡೆ ತಡೆ ಎದುರಾಗುತ್ತಿದೆ.ಆದ್ದರಿಂದ ಶಾಲಾ ಬಾಲಕನ ಮೇಲೆ ಆನೆ ದಾಳಿ ಬಳಿಕ ಹಿರಿಯ ಅಧಿಕಾರಿಗಳ ಮೂಲಕ ನಾವು ಸರಕಾರಕ್ಕೆ ಮನವಿ ಸಲ್ಲಿಸಿ ಆನೆಗಳ ಸ್ಥಳಾಂತರಕ್ಕೆಮನವಿ ಮಾಡಿದ್ದೇವೆ. ಸರಕಾರ ಸ್ಥಳಾಂತರಕ್ಕೆ ಒಪ್ಪಿಗೆ ನೀಡಿದರೆ ಮಾತ್ರ ಅದಕ್ಕೆ ಪರಿಹಾರಕಂಡು ಹಿಡಿಯಲು ಸಾಧ್ಯ ಎಂದು ಹೇಳಿದರು.

ಬಿಟ್ಟಂಗಾಲ, ಕೊಳತೋಡು, ನಲ್ವತ್ತೂಕ್ಲು ಗ್ರಾಮದಗಳಲ್ಲಿ ಓಡಾಡುವ ಐದಾರು ಆನೆಗಳನ್ನು ಸ್ಥಳಾಂತರ ಮಾಡುವ ವಿಚಾರದಲ್ಲಿಸ್ಥಳೀಯ ಶಾಸಕರ ಗಮನಕ್ಕೂ ತರಲಾಗಿದೆ ಎಂದ ಗೋಪಾಲ್‌ ಅವರು, ಪರಿಹಾರ ವಿತರಣೆ ಆಗಿಲ್ಲ ಎಂಬ ವಿಚಾರ ಸರಿಯಲ್ಲ. ಸರಕಾರದಿಂದ ಹಣ ಬಿಡುಗಡೆಯಾದಂತೆ ಪರಿಹಾರ ವಿತರಣೆ ಮಾಡಲಾಗುತ್ತಿದೆ. ಅನುಮತಿ ದೊರೆಯುವವರಗೆ ರೈತರು ಸಹಕಾರ ನೀಡಬೇಕೆಂದು ಅವರು ವಿನಂತಿಸಿದರು

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ