Udayavni Special

ಅಶೋಕ ನಗರ ರಸ್ತೆಗೆ ಮತ್ತೆ ಕಂಟಕ ಆರಂಭ

ಎಂ.ಜಿ.ವೃತ್ತದವರೆಗಿನ ಜೋಡಿ ರಸ್ತೆ ಕಾಮಗಾರಿಗೆ ಚಾಲನೆ • ಆಸ್ತಿ ಕಳೆದುಕೊಳ್ಳುವವರಲ್ಲಿ ನಡುಕ

Team Udayavani, May 20, 2019, 12:23 PM IST

kolar-tdy-3..

ಕೆಜಿಎಫ್ ಅಶೋಕನಗರದ ರಸ್ತೆಯಲ್ಲಿ ಅರ್ಧ ಒಡೆದ ಕಟ್ಟಡಗಳ ಅವಶೇಷಗಳು.

ಕೆಜಿಎಫ್: ಹಲವು ವರ್ಷಗಳಿಂದ ರಸ್ತೆ ಅಗಲೀಕರಣವಾಗಬೇಕಾಗಿದ್ದ ಅಶೋಕ ನಗರ ರಸ್ತೆಗೆ ಮತ್ತೆ ಕಂಟಕ ಶುರುವಾಗಿದೆ. ಸ್ಕೂಲ್ ಆಫ್ ಮೈನ್ಸ್‌ನಿಂದ ಎಂ.ಜಿ.ವೃತ್ತದವರೆಗೂ ಜೋಡಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಆಸ್ತಿ ಕಳೆದುಕೊಳ್ಳುವವರಲ್ಲಿ ನಡುಕ ಹುಟ್ಟಿದೆ.

ಅಶೋಕ ನಗರದಿಂದ ಎಂ.ಜಿ.ರಸ್ತೆ ಅಭಿವೃದ್ಧಿಗೆ 2013-14ರಲ್ಲಿ 3 ಕೋಟಿ ರೂ. ಮಂಜೂರಾಗಿತ್ತು. ರಸ್ತೆ ಅಗಲೀಕರಣಕ್ಕಾಗಿ ಎರಡೂ ಬದಿಯಲ್ಲಿರುವ ಮನೆಗಳನ್ನು ಲೋಕೋಪಯೋಗಿ ಇಲಾಖೆ ತೆರವುಗೊಳಿಸಿತ್ತು. ಆದರೆ, ಬಡವರ ಮನೆಗಳನ್ನು ತೆರವುಗೊಳಿಸಲು ತೋರಿದ ತಾಕತ್ತನ್ನು ಬಲಾಡ್ಯರ ಮತ್ತು ಹಣವಂತರ ಬಳಿ ತೋರದ ಕಾರಣ, ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿ. ರಸ್ತೆ ಅಗಲೀಕರಣ ನನೆಗುದಿಗೆ ಬಿದ್ದಿದೆ.

ರಸ್ತೆ ಬದಿಯಲ್ಲಿರುವ ಕೆಲವು ವರ್ತಕರು ಹೈಕೋರ್ಟ್‌ ಮೆಟ್ಟಿಲೇರಿ, ನಾವುಗಳು ನಗರಸಭೆಯಿಂದ ಎಲ್ಲಾ ದಾಖಲೆಗಳು ಹೊಂದಿದ್ದೇವೆ. ನಮಗೆ ಸೂಕ್ತ ಪರಿಹಾರ ನೀಡದೆ ತೆರವುಗೊಳಿಸಲು ಆಗುವುದಿಲ್ಲ ಎಂಬ ವಾದವನ್ನು ಮಂಡಿಸಿದ್ದರು. ಹಲವು ವರ್ತಕರು ಸದರಿ ರಸ್ತೆ ರಾಜ್ಯದ ಮುಖ್ಯರಸ್ತೆ ಅಲ್ಲ. ಪಕ್ಕದ ರಸ್ತೆಯನ್ನು ತಪ್ಪಾಗಿ ತೋರಲಾಗುತ್ತಿದೆ ಎಂದು ಪ್ರತಿಪಾದಿ ಸಿದ್ದರು.

ವಾದಗಳನ್ನು ಆಲಿಸಿದ್ದ ಹೈಕೋರ್ಟ್‌ ವಿಚಾರದ ಇತ್ಯರ್ಥಕ್ಕೆ ಜಿಲ್ಲಾಧಿಕಾರಿಗಳಿಗೆ ನೀಡಿತ್ತು. ಜಿಲ್ಲಾಧಿಕಾರಿಗಳು ಪ್ರತಿಯೊಬ್ಬ ಅರ್ಜಿದಾರರ ಅಹವಾಲನ್ನು ಕೇಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿತ್ತು. ಹಲವು ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ್ದರೂ, ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ಅಗಲೀಕರಣ ನನೆಗುದಿಗೆ ಬಿದ್ದಿದೆ.

ರಸ್ತೆ ಮಧ್ಯದಿಂದ 12 ಮೀಟರ್‌ ಎರಡೂ ಕಡೆಗಳಲ್ಲಿ ವಿಸ್ತರಣೆಆಗಬೇಕು. ಈಗ 27 ಮಂದಿ ನ್ಯಾಯಾಲಯಕ್ಕೆ ಹೋಗಿದ್ದಾರೆ. ಹೈಕೋರ್ಟ್‌ ರಜಾ ಮುಗಿದ ನಂತರ ತೀರ್ಪು ಬರುವ ಸಂಭವ ಇದೆ. ನ್ಯಾಯಾಲಯದ ಆದೇಶದಂತೆ ರಸ್ತೆಯ ಸರ್ವೆ ಮಾಡಿದ್ದೇವೆ. ನ್ಯಾಯಾಲಯದಲ್ಲಿ ಇಲ್ಲದ ಕಟ್ಟಡಗಳನ್ನು ತೆರವು ಮಾಡಬೇಕಾಗಿದೆ. ಆದರೆ, ಕಟ್ಟಡಗಳು ಜಂಟಿಯಾಗಿರುವುದರಿಂದ ಒಂದು ಕಟ್ಟಡ ಬಿದ್ದರೆ, ಉಳಿದ ಕಟ್ಟಡಕ್ಕೂ ತೊಂದರೆ ಯಾಗುವ ಸಂಭವ ಇದೆ. ಇದು ನ್ಯಾಯಾಲಯ ನಿಂಧನೆಗೆ ಒಳಗಾಗಬಹುದು ಎಂಬ ಭೀತಿಯನ್ನು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಈಚೆಗೆ ಪಿಡಬ್ಲ್ಯೂಡಿ ಕಾರ್ಯಪಾಲಕ ಎಂಜಿನಿಯರ್‌ ಅವರನ್ನು ಕೋಲಾರದ ಕಚೇರಿಯಲ್ಲಿ ತರಾಟೆಗೆ ತೆಗೆದುಕೊಂಡಿದ್ದ ಶಾಸಕಿ ಎಂ.ರೂಪಕಲಾ, ಅಧಿಕಾರಿಗಳ ತಾತ್ಸಾರದಿಂದಾಗಿ ಕಾಮಗಾರಿ ನನೆಗುದಿಗೆ ಬಿದ್ದಿದೆ. ಕೂಡಲೇ ರಸ್ತೆ ತೆರವು ಮಾಡಿ ಕಾಮಗಾರಿ ಶುರು ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಮರುದಿನವೇ ಸೂಚನೆ ನೀಡಿದ ಕಾರ್ಯಪಾಲಕ ಎಂಜಿನಿಯರ್‌, ಕೆಳಗಿನ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಆದರೆ, ಅಧಿಕಾರಿಗಳ ಮತ್ತು ವರ್ತಕರ ನಡುವಿನ ಗೊಂದಲದಿಂದ ಸಾರ್ವಜನಿಕರು ರಸ್ತೆಯಲ್ಲಿ ಕಷ್ಟಪಟ್ಟು ತಿರುಗಾಟ ನಡೆಸಬೇಕಾದ ಅನಿವಾರ್ಯತೆ ಉಂಟಾಗಿದೆ.

● ಬಿ.ಆರ್‌.ಗೋಪಿನಾಥ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಪ್ಲಾಸ್ಮಾವನ್ನು ದಾನ ಮಾಡಿದ ಕೋವಿಡ್-19 ಸೋಂಕಿತ

ಪ್ಲಾಸ್ಮಾವನ್ನು ದಾನ ಮಾಡಿದ ಕೋವಿಡ್-19 ಸೋಂಕಿತ

ವಿಶ್ವ ಆರೋಗ್ಯ ದಿನ

ವಿಶ್ವ ಆರೋಗ್ಯ ದಿನ

ಕೋವಿಡ್-19 ಗೆ ಬಲಿಯಾದ ದಾಖಲೆಗಳ ಸರದಾರ, ಫುಟ್ ಬಾಲ್ ತಾರೆ ಟಾಮ್ ಡೆಂಮ್ಸೆ

ಕೋವಿಡ್-19 ಗೆ ಬಲಿಯಾದ ದಾಖಲೆಗಳ ಸರದಾರ, ಫುಟ್ ಬಾಲ್ ತಾರೆ ಟಾಮ್ ಡೆಂಮ್ಸೆ

covid-19-in-china

ಜನವರಿ ನಂತರ, ಮೊದಲ ಬಾರಿಗೆ ಚೀನಾದಲ್ಲಿ ಸೋಂಕಿನಿಂದ ಯಾರೂ ಮೃತರಾಗಿಲ್ಲ: ವರದಿ

borish-jhonson

ಕೋವಿಡ್-19: ತೀವ್ರ ಹದಗೆಟ್ಟ ಬ್ರಿಟನ್ ಪ್ರಧಾನಿ ಆರೋಗ್ಯ: ಐಸಿಯುಗೆ ದಾಖಲು

donald-trump

ಔಷಧಿ ರಫ್ತು ನಿಷೇಧ: ಭಾರತದ ಮೇಲೆ ಅಮೆರಿಕಾ ಪ್ರತೀಕಾರದ ಎಚ್ಚರಿಕೆ! ಟ್ರಂಪ್ ಹೇಳಿದ್ದೇನು ?

ಅಮೆರಿಕಕ್ಕೀಗ ಪರ್ಲ್ ಹಾರ್ಬರ್‌ ಸ್ಥಿತಿ ; ದೊಡ್ಡಣ್ಣನಿಗೆ ಈ ವಾರ ನಿರ್ಣಾಯಕ

ಅಮೆರಿಕಕ್ಕೀಗ ಪರ್ಲ್ ಹಾರ್ಬರ್‌ ಸ್ಥಿತಿ ; ದೊಡ್ಡಣ್ಣನಿಗೆ ಈ ವಾರ ನಿರ್ಣಾಯಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Water is a problem in Channakallu village

ಚನ್ನಕಲ್ಲು ಗ್ರಾಮದಲ್ಲಿ ನೀರಿಗೆ ಸಮಸ್ಯೆ

ಲಾಠಿ ಹಿಡಿದ ಕೈಯಲ್ಲಿ ಹೊಲಿಗೆ ಯಂತ್ರ

ಲಾಠಿ ಹಿಡಿದ ಕೈಯಲ್ಲಿ ಹೊಲಿಗೆ ಯಂತ್ರ

ಕೋರ್ಟ್‌ನಿಂದ ಕೋವಿಡ್ 19 ಬಗ್ಗೆ  ಜಾಗೃತಿ ಅಭಿಯಾನ

ಕೋರ್ಟ್‌ನಿಂದ ಕೋವಿಡ್ 19 ಬಗ್ಗೆ ಜಾಗೃತಿ ಅಭಿಯಾನ

ರಾಮನವಮಿಗೂ ಕೋವಿಡ್ 19 ಭೀತಿ

ರಾಮನವಮಿಗೂ ಕೋವಿಡ್ 19 ಭೀತಿ

ಊಟವಿಲ್ಲದೇ ನರಳಿದ ಕಾರ್ಮಿಕರು

ಊಟವಿಲ್ಲದೇ ನರಳಿದ ಕಾರ್ಮಿಕರು

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

ಬಿಟ್‌ಸಾಂಗ್‌ನಲ್ಲೇ ಲವ್‌, ಮದುವೆ, ಮಕ್ಕಳು…

ಬಿಟ್‌ಸಾಂಗ್‌ನಲ್ಲೇ ಲವ್‌, ಮದುವೆ, ಮಕ್ಕಳು…

07-April-01

ಹೋಂ ಕ್ವಾರಂಟೈನ್‌ಗಳ ಸೇವೆಯಲ್ಲಿ ಆಶಾ ಕಾರ್ಯಕರ್ತೆಯರು

ಪ್ಲಾಸ್ಮಾವನ್ನು ದಾನ ಮಾಡಿದ ಕೋವಿಡ್-19 ಸೋಂಕಿತ

ಪ್ಲಾಸ್ಮಾವನ್ನು ದಾನ ಮಾಡಿದ ಕೋವಿಡ್-19 ಸೋಂಕಿತ

ಕೋವಿಡ್-19 ವಿರುದ್ಧ ಹೋರಾಟಕ್ಕೆ ಕೊಡುಗೈ ದಾನಿಯಾದ ಗೌತಮ್ ಗಂಭೀರ್

ಕೋವಿಡ್-19 ವಿರುದ್ಧ ಹೋರಾಟಕ್ಕೆ ಕೊಡುಗೈ ದಾನಿಯಾದ ಗೌತಮ್ ಗಂಭೀರ್

ಸುಳ್ಳು ಸುದ್ದಿಗೆ ಗರಂ

ಸುಳ್ಳು ಸುದ್ದಿಗೆ ಗರಂ