ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಗ್ರಾಮಸ್ಥರ ನೆರವು

Team Udayavani, Jan 24, 2020, 1:20 PM IST

ಮುಳಬಾಗಿಲು: ಗ್ರಾಮಗಳಲ್ಲಿರುವ ಸರ್ಕಾರಿ ಶಾಲೆ ಗಳಲ್ಲಿ ವ್ಯಾಸಂಗ ಮಾಡಿ ಉನ್ನತ ಸ್ಥಾನಗಳಲ್ಲಿದ್ದರೂ ತಾವು ಓದಿದ ಶಾಲೆಯನ್ನು ಮರೆಯದೆ ಅಭಿವೃದ್ಧಿ ಪಡಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದು ಕೊಲ ದೇವಿ ಚೌಡೇಶ್ವರಿ ವಿದ್ಯಾಸಂಸ್ಥೆಯ ಅದ್ಯಕ್ಷ ಎಂ.ಶ್ರೀನಿವಾಸ್‌ ಹೇಳಿದರು.

ತಾಲೂಕಿನ ಎಚ್‌.ಗೊಲ್ಲಹಳ್ಳಿ ಸ್ವಾಮಿ ವಿವೇಕಾನಂದ ಅನುದಾನಿತ ಪ್ರೌಢ ಶಾಲೆಯಲ್ಲಿ ಏರ್ಪಡಿಸ ಲಾಗಿದ್ದ ಸ್ವಾಮಿ ವಿವೇಕಾನಂದರ 157ನೇ ಜನ್ಮ ದಿನಾಚರಣೆ ಹಾಗೂ ಶಾಲಾ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಹಿಂದಿನ ದಿನಗಳಲ್ಲಿ ಶಿಕ್ಷಣವೆಂಬುದು ಕೆಲವು ವರ್ಗಗಳಿಗೆ ಮಾತ್ರ ಸೀಮಿತವಾಗಿದ್ದ ಸಮಯ ದಲ್ಲಿ ಶಿಕ್ಷಣ ಪಡೆಯುವುದು ಮರೀಚಿಕೆಯಾಗಿತ್ತು.

ಆದರೆ ಕಾಲ ಕ್ರಮೇಣ ಪ್ರತಿಯೊಬ್ಬರು ಶಿಕ್ಷಣ ಪಡೆಯುವ ಅವಕಾಶ ಸಿಕ್ಕಿದ ಮೇಲೆ ಜ್ಞಾನದ ಅರಿವು ಮೂಡುವಂತಾಗಿ ತಾವು ಓದುತ್ತಿದ್ದ ಶಾಲೆಗಳನ್ನು ದೇವಾಲಯಗಳಂತೆ ಕಂಡು ಗುರುಗಳಿಗೆ ಗೌರವ ನೀಡುತ್ತಿದ್ದರು, ಆದರೆ ಪ್ರಸ್ತುತ ಅಂತಹ ಮೌಲ್ಯಗಳು ಕಡಿಮೆಯಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು. ಶಾಲೆಯ ಕಾರ್ಯದರ್ಶಿ ಬಿ.ಸಿ.ಶ್ರೀನಿವಾಸ್‌ ಮಾತನಾಡಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದ ಶಾಲೆಗಳನ್ನು ಮರೆಯಬಾರದು. ನಾವು ಪಡೆದಂತಹ ಶಿಕ್ಷಣ ಮುಂಬರುವ ಪೀಳಿಗೆಗೆ ಸಿಗುವಂತೆ ಮಾಡಲು ಹಳೆ ವಿದ್ಯಾರ್ಥಿಗಳು ಶಾಲಾಭಿವೃದ್ಧಿಯಲ್ಲಿ ತೊಡಗಿದ್ದರಿಂದ ಗುಡ್ಡಗಾಡಿನಲ್ಲಿ ಪ್ರಾರಂಭವಾದ ಶಾಲೆ ಪ್ರಸ್ತುತ ಸಾವಿರಾರು ಜನರಿಗೆ ಶಿಕ್ಷಣ ನೀಡಿದೆ ಎಂದರು.

ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಮುಖ್ಯ ಶಿಕ್ಷಕ ಎನ್‌. ವೆಂಕಟರವಣಪ್ಪ ಸ್ವಾಮಿ ವಿವೇಕಾನಂದರ ಆದರ್ಶಗಳು ಮತ್ತು ಅವರ ಬದುಕಿನ ಸಾರವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಶಾಲೆ ಅಧ್ಯಕ್ಷ ಡಿ.ವೆಂಕಟರಾಮಪ್ಪ, ನೊಂದಣಾಧಿಕಾರಿ ಜನಾರ್ಧನ್‌, ಎಪಿಎಂಸಿ ನಿರ್ದೇಶಕ ಗೊಲ್ಲಹಳ್ಳಿ ಜಗದೀಶ್‌, ನಿವೃತ್ತ ಸಿಆರ್‌ಪಿ ಜಿ.ಕೆ. ಶಂಕರ್‌, ಗ್ರಾಪಂ ಮಾಜಿ ಅಧ್ಯಕ್ಷ ಜಿ.ಎನ್‌.ಶ್ರೀನಿವಾಸ್‌, ಜನಾರ್ದನಗೌಡ, ತಾಪಂ ಮಾಜಿ ಸದಸ್ಯೆ ಲಕ್ಷ್ಮೀದೇವಮ್ಮ, ಪುಟ್ಟೆಗೌಡ, ಸುನೀಲ್‌, ಶಾಲಾ ಮುಖ್ಯ ಶಿಕ್ಷಕ ಎಂ.ನಾರಾಯಣಸ್ವಾಮಿ, ಶಿಕ್ಷಕರಾದ ರಾಮ ಕೃಷ್ಣಪ್ಪ, ವೆಂಕಟರವಣ, ಸುಬ್ಬರಾಯಪ್ಪ, ಮುನಿರತ್ನಮ್ಮ ಇತರರು ಇದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ