ತಿಂಗಳಿಂದ ದುರಸ್ತಿಯಾಗದ ಎಟಿಎಂ ಯಂತ್ರ

Team Udayavani, Aug 9, 2019, 3:21 PM IST

ಮಾಸ್ತಿ ಗ್ರಾಮದ ಹಸಾಂಡಹಳ್ಳಿ ರಸ್ತೆಯಲ್ಲಿ ರುವ ಸ್ಟೇಟ್ ಬ್ಯಾಂಕ್‌ ಆಫ್ ಇಂಡಿಯಾದ ಎಟಿಎಂ ಯಂತ್ರ ದುರಸ್ತಿಯಾಗಿ ತಿಂಗಳಾದ್ರೂ ಸರಿಪಡಿಸಿಲ್ಲ

ಮಾಸ್ತಿ: ಗ್ರಾಮದಲ್ಲಿರುವ ಸ್ಟೇಟ್ ಬ್ಯಾಂಕ್‌ ಆಫ್ ಇಂಡಿಯಾ ಎಟಿಎಂ ಯಂತ್ರ ಕೆಟ್ಟು ತಿಂಗಳಿಂದ ಗ್ರಾಹಕರು ಪರದಾಡುವಂತಾಗಿದೆ.

ತಮಿಳುನಾಡು ಗಡಿ ಭಾಗಕ್ಕೆ ಹೊಂದಿಕೊಂಡಿರುವ ಮಾಸ್ತಿ ಗ್ರಾಮವು ಅತಿ ಹೆಚ್ಚು ಹಳ್ಳಿಗಳನ್ನು ಹೊಂದಿರುವ ಹೋಬಳಿ. ಬಹುತೇಕ ಮಂದಿ ಕೃಷಿ, ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಾರೆ. ವ್ಯಾಪಾರ, ವಹಿವಾಟು, ಪ್ರತಿ ವ್ಯವಹಾರಗಳಿಗಾಗಿ ಮಾಸ್ತಿ ಗ್ರಾಮಕ್ಕೆ ಆಗಮಿಸುತ್ತಾರೆ. ಆದರೆ, ಮಾಸ್ತಿ ಗ್ರಾಮದಲ್ಲಿ 3 ರಾಷ್ಟ್ರೀಕೃತ ಬ್ಯಾಂಕ್‌ಗಳು ಇದ್ದು, ಕೆಲವೊಂದು ಎಟಿಎಂಗಳ ಸೌಲಭ್ಯಗಳು ಸಮರ್ಪಕವಾಗಿ ಗ್ರಾಹಕರಿಗೆ ಸಿಗದ ಕಾರಣ ಪರದಾಡುವಂತಾಗಿದೆ.

ತಮ್ಮ ಖಾತೆಗಳಿಗೆ ಹಣ ಮಾಡಲು, ಹಿಂತೆಗೆಯಲು ಬ್ಯಾಂಕ್‌ನಲ್ಲಿ ಸಾಲುಗಟ್ಟಿ ಗಂಟೆಗಟ್ಟಲೆ ನಿಲ್ಲಬೇಕು. ಕೆಲವೊಮ್ಮೆ ಗ್ರಾಹಕರ ಜಾಸ್ತಿ ಇದ್ದರೆ ವಾಪಸ್‌ ಹೋಗಬೇಕಿದೆ. ಇದನ್ನು ತಪ್ಪಿಸಲು ಎಟಿಎಂ ಅಳವಡಿಸಲಾಗಿದೆ. ಆದರೆ, ಆ ಸೌಲಭ್ಯವೂ ಸಮರ್ಪಕವಾಗಿ ಗ್ರಾಹಕರಿಗೆ ಸಿಗುತ್ತಿಲ್ಲ.

ಮಾಸ್ತಿ ಗ್ರಾಮದ ಹಸಾಂಡಹಳ್ಳಿ ಮುಖ್ಯ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್‌ ಆಫ್ ಇಂಡಿಯಾ ಇದ್ದು, ಗ್ರಾಹಕರ ಅನುಕೂಲಕ್ಕಾಗಿ ನಿರ್ಮಿಸಲಾಗಿರುವ ಎಟಿಎಂ ಕೆಟ್ಟು ಹೋಗಿರುವುದರಿಂದ ತಿಂಗಳಿಂದ ಎಟಿಎಂ ಬಾಗಿಲು ಮುಚ್ಚಲಾಗಿದೆ. ಹಣ ಪಡೆಯಲು ಗ್ರಾಹಕರು ಪರದಾಡುವಂತಾಗಿದೆ. ಕೂಡಲೇ ಎಟಿಎಂ ದುರಸ್ತಿ ಮಾಡಿ ಗ್ರಾಹಕರಿಗೆ ಅನುಕೂಲ ಕಲ್ಪಿಸಬೇಕಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ