ಪ್ರಸಿದ್ಧಆವಣಿ ಬ್ರಹ್ಮರಥೋತ್ಸವಕ್ಕೆ ಭಕ್ತಸಾಗರ

Team Udayavani, Mar 14, 2021, 12:25 PM IST

ಪ್ರಸಿದ್ಧಆವಣಿ ಬ್ರಹ್ಮರಥೋತ್ಸವಕ್ಕೆ ಭಕ್ತಸಾಗರ

ಮುಳಬಾಗಿಲು: ತಾಲೂಕಿನ ಪುರಾಣ ಪ್ರಸಿದ್ಧ ಆವನಿ ಶ್ರೀ ಕಾಮಾಕ್ಷಿದೇವಿ ಸಮೇತ ಪ್ರಸನ್ನ ಶ್ರೀರಾಮಲಿಂಗೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ವಿಜೃಂಭಣೆಯಿಂದ ನಡೆಯಿತು.

ಸರ್ಕಾರದ ವತಿಯಿಂದ ನಡೆದ ಕಾಮಾಕ್ಷಿದೇವಿ ಸಮೇತ ಪ್ರಸನ್ನ ರಾಮಲಿಂಗೇಶ್ವರಸ್ವಾಮಿ ಬ್ರಹ್ಮರ ಥೋತ್ಸ ವಕ್ಕೆ ಶಾಸಕ ಎಚ್‌.ನಾಗೇಶ್‌, ಎ.ಸಿ.ಸೋಮಶೇಖರ್‌ಸಮ್ಮುಖದಲ್ಲಿ ತಹಶೀಲ್ದಾರ್‌ ರಾಜಶೇಖರ್‌ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ಬ್ರಹ್ಮರಥೋತ್ಸವದ ಅಂಗವಾಗಿ 17 ದಿನಗಳ ಕಾಲ ದೇವಾಲಯದಲ್ಲಿ ದೇವರಿಗೆ ಅಂಕುರಾರ್ಪಣೆ,ಧ್ವಜಾರೋಹಣ, ಮಂಟಪೋತ್ಸವ, ಮಹಾಶಿವರಾತ್ರಿ ಏಕ ದಶವಾರ ರುದ್ರಾಭಿಷೇಕ ಕಲ್ಯಾಣೋತ್ಸವ, ಗಜ ವಾಹನೋತ್ಸವ ಪೂಜಾ ಕೈಂಕರ್ಯ ಏರ್ಪಡಿಸಲಾಗಿದೆ. ಪ್ರಧಾನ ಅರ್ಚಕ ರಮಣಮೂರ್ತಿ ದೀಕ್ಷಿತ್‌ ದೇವರ ಉತ್ಸವ ಮೂರ್ತಿಗಳನ್ನು ವೇದಘೋಷಗಳೊಂದಿಗೆ ವಾದ್ಯಗೋಷ್ಠಿಗಳ ನಡುವೆ ದೇವಾಲಯದಿಂದ ತಂದುಸಿಂಗರಿಸಲಾಗಿದ್ದ ಬ್ರಹ್ಮರಥದಲ್ಲಿ ಪ್ರತಿಷ್ಠಾಪಿಸಿದರು.ಕೀಲುಹೊಳಲಿ ಗ್ರಾಮದೇವತೆ ಮಾತೆ ಸಲ್ಲಾಪುರಮ್ಮ ದೇವರ ಉತ್ಸವ ಮೂರ್ತಿಯ ಮೆರವಣಿಗೆಯುಬ್ರಹ್ಮರಥದ ಮುಂದೆ ಸಾಗುತ್ತಿದ್ದು ರಥೋತ್ಸವಕ್ಕೆ ಮತ್ತಷ್ಟು ಮೆರುಗು ತುಂಬಿತ್ತು.

ರಾಮಾಯಣದ ಕುರುಹು ವೀಕ್ಷಣೆ: ಭಕ್ತಾದಿಗಳು ಉರಿ ಬಿಸಿಲಿನಲ್ಲಿಯೇ ಶ್ರೀರಾಮಲಿಂಗೇಶ್ವರಸ್ವಾಮಿಹಾಗೂ ಬೆಟ್ಟದ ಮೇಲಿರುವ ಸೀತಾಮಾತೆದೇವಾಲಯ, ಸೀತಾಮಾತೆ ವಾಸವಾಗಿದ್ದ ಸ್ಥಳ,ಅಶ್ವಮೇಧಯಾಗದ ಕುದುರೆಯನ್ನು ಕಟ್ಟಿಹಾಕಿದಲವಕುಶರ ಜನ್ಮಸ್ಥಳ ಹಾಗೂ ವಾಸದ ಮನೆ ಸೇರಿದಂತೆರಾಮಾಯಣಕ್ಕೆ ಪೂರಕವಾದ ಕುರುಹುಗಳು ಹಾಗೂಬೆಟ್ಟದ ತಪ್ಪಲಿನ ದಕ್ಷಿಣಕ ಅಂತರಗಂಗೆ, ಆದಿಜಾಂಭವ ದೇಗುಲ ದರ್ಶನಕ್ಕಾಗಿ ಜನರು ಸಾಲಾಗಿ ಸಾಗುತ್ತಿದ್ದ ದೃಶ್ಯ ವಿಶೇಷವಾಗಿತ್ತು.

ಅನ್ನಸಂತರ್ಪಣೆ: ಯುವ ನಾಯಕ ಕಲ್ಲುಪಲ್ಲಿ ಪ್ರಕಾಶ್‌ ಕುಟುಂಬದಿಂದ ಈ ವರ್ಷವೂ ಸಾವಿರಾರು ಜನರಿಗೆ ಅನ್ನ ಸಂತರ್ಪಣೆ ಏರ್ಪಡಿಸಿದ್ದರು‌ . ತಾಲೂಕಿನ ಪರಶುರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಕೀಲುಹೊಳಲಿ ಸತೀಶ್‌ ತಂಡ ಹಲವಾರು ಕಲಾವಿದರೊಂದಿಗೆ ಸೇರಿ ಪಂಚವಾರ್ಷಿಕ ಗೀತೆ ಗಾಯನ ಏರ್ಪಡಿಸಿದ್ದರು.

ಜಾನುವಾರುಗಳ ಜಾತ್ರೆ: ಪ್ರಸಿದ್ಧಿಯಾದ ಆವಣಿ ಜಾತ್ರೆಗೆ 10-15 ದಿನ ಕರ್ನಾಟಕ, ಹಾವೇರಿ,ಗಂಗಾವತಿ, ಆಂಧ್ರದ ಬೆಜವಾಡಾ, ಕಡಪ, ಕರೂ°ಲ್‌,ಒಂಗೋಲ್‌, ನಲ್ಲೂರು, ತಮಿಳುನಾಡು, ಒರಿಸ್ಸಾಹಾಗೂ ಗೋವಾ ರಾಜ್ಯಗಳಿಂದ ರಾಸುಗಳನ್ನು ಖರೀದಿಸಲು ವ್ಯಾಪಾರಿಗಳು ಆಗಮಿಸಿದ್ದರು.

ಹೊರ ರಾಜ್ಯಗಳ ಸ್ಪರ್ಧೆಗೆ ಆವಣಿ ಎತ್ತುಗಳು: ಕಳೆದ ವರ್ಷಕ್ಕಿಂತಲೂ ಈ ಬಾರಿ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಸಾಕಷ್ಟು ಜಾನುವಾರುಗಳು ಹೆಚ್ಚಾಗಿ ಜಮಾವಣೆಗೊಂಡಿದ್ದು, ಆಂಧ್ರದ ನಲ್ಲೂರು, ಕಡಪ, ಕರೂಲು, ಗುಂಟೂರು, ರಾಜಮಂಡ್ರಿ, ಒಂಗೋಲ್‌, ಬೈರೆಡ್ಡಿಪಲ್ಲಿ, ಚಿತ್ತೂರು, ತಮಿಳುನಾಡಿನ ಹೊಸೂರು ಕಡೆಗಳಿಂದ ಬಂದಿರುವ ಮಾರಾಟಗಾರರು ಎತ್ತಿನಗಾಡಿ ಓಟದ ಸ್ಪರ್ಧೆಗೆ ಅಗತ್ಯವಿರುವ 1 ಲಕ್ಷಕ್ಕಿಂತ ಹೆಚ್ಚಿನ ಮೊತ್ತವುಳ್ಳ ಹಲವಾರು ಜೊತೆ ಎತ್ತುಗಳನ್ನು ಕೊಂಡು ಲಾರಿಗಳಲ್ಲಿ ಸಾಗಾಣಿಕೆ ಮಾಡುತ್ತಿದ್ದರು.

ಸೆಲ್ಫಿ ತಾಣ: ದೇವರ ದರ್ಶನಕ್ಕೆ ಬರುವ ಭಕ್ತರು ಪ್ರಮುಖವಾಗಿ ಯುವಕ/ಯವತಿಯರಿಗೆ ಆವಣಿ ಶ್ರೀರಾಮಲಿಂಗೇಶ್ವರ ದೇಗುಲ, ಸೀತಾಪಾರ್ವತಿ ಬೆಟ್ಟ,ಪಂಚಲಿಂಗಗಳು ಚಾರಣಾ ಪ್ರದೇಶವಾಗಿರುವುದರಿಂದಸದಾ ಅವುಗಳನ್ನು ನೆನಪಿನಲ್ಲಿ ಉಳಿಸಿಕೊಳ್ಳಲು ಬೆಟ್ಟದ ಕಲ್ಲುಬಂಡೆಗಳ ಮೇಲೆ ಹತ್ತಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದದ್ದು ಸಾಮಾನ್ಯವಾಗಿತ್ತು.

ರಥೋತ್ಸವದಲ್ಲಿ ಪಾಲ್ಗೊಂಡ ಪ್ರಮುಖರು: ಸಂಸದ ಮುನಿಸ್ವಾಮಿ, ಸಹಾಯಕ ಕಮೀಷನರ್‌ ಸೋಮಶೇಖರ್‌, ಮಾಜಿ ಶಾಸಕ ಜಿ.ಮಂಜುನಾಥ್‌, ತಾಪಂ ಅಧ್ಯಕ್ಷ ಎ.ವಿ.ಶ್ರೀನಿವಾಸ್‌, ಜಿಪಂ ಸದಸ್ಯ ಕೃಷ್ಣಪ್ಪ, ತಾಪಂ ಸದಸ್ಯ ರವಿಕುಮಾರ್‌, ಯುವ ನಾಯಕ ಕಲ್ಲುಪಲ್ಲಿ ಪ್ರಕಾಶ್‌, ರಾಜಸ್ವ ನಿರೀಕ್ಷಕ ಸುಬ್ರಹ್ಮಣ್ಯಂ, ದೇಗುಲ ಕಾರ್ಯನಿರ್ವಾಹಕ ಅಧಿಕಾರಿ ಸಿ. ಚಲುವಸ್ವಾಮಿ, ಹೋಬಳಿಯ ಎಲ್ಲಾ ಗ್ರಾಮ ಲೆಕ್ಕಿಗರು,ಎಲ್ಲಾ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಲಕ್ಷಾಂತರ ಜನರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ಕಳ್ಳತನ ತಡೆಗೆ ಸಿಸಿ ಕ್ಯಾಮೆರಾ ಅಳವಡಿಕೆ :

ಕಾನೂನು ಸುವ್ಯವಸ್ಥೆಗಾಗಿ ಡಿವೈಎಸ್‌ಪಿ ಕೆ.ಸಿ.ಗಿರಿ, ಸಿಪಿಐ ಗೋಪಾಲ್‌ನಾಯಕ್‌, ಪಿಎಸ್‌ಐಗಳಾದ ಪ್ರದೀಪ್‌ ಸಿಂಗ್‌ ಮತ್ತು ಶ್ರೀನಿವಾಸ್‌, ವರಲಕ್ಷ್ಮಮ್ಮ ಮತ್ತು ಚೌಡಪ್ಪ ಸೇರಿದಂತೆ ಹಲವಾರು ಪೊಲೀಸ್‌ ಅಧಿಕಾರಿಗಳು ಹಾಜರಿದ್ದರು. ಜಾತ್ರೆಯಲ್ಲಿ ಮತ್ತು ಬೆಟ್ಟದ ಮೇಲಿನ ದೇಗುಲಕ್ಕೆ ತೆರಳುವ ಭಕ್ತರ ‌ ರಕ್ಷಣೆಗಾಗಿ ಪೊಲೀಸ್‌ ತಂಡಗಳನ್ನು ರಚಿಸಿ ಕಳವು ಪ್ರಕರಣ ನಡೆಯದಂತೆ ಸಿಸಿ ಕ್ಯಾಮೆರಾ ಅಳವಡಿಸಿದ್ದರು. ಅಲ್ಲದೇ 350 ಪೊಲೀಸರನ್ನು ಬಂದೋಬಸ್ತ್ಗೆ ನಿಯೋಜಿಸಿದ್ದರು.

ಒಣ ಹುಲ್ಲು, ಜೋಳದ ಮೇವು ಮಾರಾಟ :

ಜಾನುವಾರುಗಳೊಂದಿಗೆ ತಕ್ಕಮಟ್ಟಿಗೆ ಮೇವನ್ನು ತಂದರೂ ಒಂದೆರಡು ದಿನಗಳಲ್ಲಿ ಎತ್ತುಗಳುಮಾರಾಟವಾಗದೇ ಇದ್ದಾಗ ಮೇವಿನ ಸಮಸ್ಯೆಉಂಟಾಗದೇ ಇರದು. ಅದಕ್ಕಾಗಿ ತಾವು ಪ್ರತಿವರ್ಷದಂತೆ ಈ ಬಾರಿ ಒಣ ಹುಲ್ಲನ್ನು ತಂದುಮಾರಾಟ ಮಾಡಲಾಗುತ್ತಿದೆ ಎಂದು ವಿಕೋಟೆ ರೈತನಾರಾಯಣಸ್ವಾಮಿ ತಿಳಿಸಿದರು. ಜಾತ್ರೆಯಲ್ಲಿಮಾರಾಟಕ್ಕೆ ಬಂದಿದ್ದ ಕೋಲಾರ ತಾಲೂಕು ತಂಬಿಹಳ್ಳಿ ಮುನಿಯಪ್ಪ ಕುಟುಂಬಸ್ಥರು ಜಾನುವಾರುಗಳನ್ನುಮೆರವಣಿಗೆ ಮಾಡಿದರು.

ಶಾಸಕರ ಅಭಿಮಾನಿ ಬಳಗದಿಂದ ಶುಲ್ಕ  ಪಾವತಿ :

ವ್ಯಾಪಾರಸ್ಥರು ವ್ಯಾಪಾರ ವಹಿವಾಟು ಆರಂಭಿ ಸಿದ್ದು, ಒಂದು ಜೊತೆ ಎತ್ತಿನ ಬೆಲೆ ಕನಿಷ್ಠ 1 ಲಕ್ಷದಿಂದ 2.75 ಲಕ್ಷ ವರೆಗೆ ಮಾರಾಟವಾಗುತ್ತಿದೆ.ಜಾತ್ರೆಯಲ್ಲಿ ಪಾಲ್ಗೊಳ್ಳುವ ಜಾನುವಾರುಗಳು ಮತ್ತು ಅಂಗಡಿಗಳ ಶುಲ್ಕ ವಸೂಲಿಗಾಗಿ ಸರ್ಕಾರದಿಂದ ಇತ್ತೀಚಿಗೆ ನಡೆದ ಹರಾಜು ಪ್ರಕ್ರಿಯೆಯಲ್ಲಿಅಂಗಡಿಗಳ ಶುಲ್ಕವನ್ನು ಶಾಸಕ ಎಚ್‌.ನಾಗೇಶ್‌ ಅಭಿಮಾನಿ ಬಳಗದಿಂದ ಪಾವತಿಸಿದ್ದರು. ಜಾತ್ರೆಯಲ್ಲಿ ಎತ್ತು,ಗಾಡಿಗಳ ಶುಲ್ಕವನ್ನು ಆವಣಿ ಗ್ರಾಪಂ ಸದಸ್ಯೆ ಜಿ.ಲಕ್ಷ್ಮೀಪ್ರಿಯ ಪಾವತಿಸಿ ಶುಲ್ಕಮುಕ್ತ ಜಾತ್ರೆಯಾಗಿ ಮಾಡಿರುತ್ತಾರೆ. ಜಾತ್ರೆಗೆಆಗಮಿಸುವ ಎಲ್ಲಾ ರಸ್ತೆಗಳಲ್ಲೂ ಗ್ರಾಮಸ್ಥರುಹಲವಾರು ಕಡೆ ಪಾನಕ, ಮಜ್ಜಿಗೆ ವಿತರಿಸುತ್ತಾ ಮಾನವೀಯತೆ ಮೆರೆದಿದ್ದರು.

ಟಾಪ್ ನ್ಯೂಸ್

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

Kolar; ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

DR SUDHA

Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್‌

jameer

H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.