Udayavni Special

ಆಸ್ಪತ್ರೆ, ಆರೋಗ್ಯ ಕೇಂದ್ರಕ್ಕೆ ಕಾಯಕಲ್ಪ ಪ್ರಶಸ್ತಿ ಗರಿ

ಬೂದಿಕೋಟೆ, ತೊಪ್ಪನಹಳ್ಳಿ ಪ್ರಾ.ಆರೋಗ್ಯ ಕೇಂದ್ರ, ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ‌ಪ್ರಶಸ್ತಿ

Team Udayavani, Mar 21, 2021, 7:19 PM IST

uo

ಬಂಗಾರಪೇಟೆ: ಖಾಸಗಿ ಆಸ್ಪತ್ರೆಗಿಂತ ಹೆಚ್ಚಿನ ಗುಣಮಟ್ಟದಲ್ಲಿ ರೋಗಿಗಳಿಗೆ ಮೂಲಭೂತ ಸೌಕರ್ಯಗಳನ್ನು ಪೂರೈಸುವುದರ ಜೊತೆಗೆ ಸಮರ್ಪಕ ರೀತಿಯಲ್ಲಿ ಸ್ವತ್ಛತೆ ಕಾಪಾಡಿಕೊಂಡು, ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ಸೇವೆ ಒದಗಿಸುತ್ತಾ ಬರುತ್ತಿರುವ ತಾಲೂಕಿನ ಬೂದಿಕೋಟೆ ಹಾಗೂ ತೊಪ್ಪನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಪಟ್ಟಣದ ಸರ್ಕಾರಿ ಆಸ್ಪತ್ರೆ ಕಾಯಕಲ್ಪ ಯೋಜನೆಯ ಪ್ರಶಸ್ತಿಗೆ ಭಾಜನವಾಗಿದೆ.

ತಾಲೂಕಿನ ಬೂದಿಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪ್ರಶಸ್ತಿಯಲ್ಲಿ ಕಳೆದ ವರ್ಷ 2019-20ನೇ ಸಾಲಿನ ಪ್ರಶಸ್ತಿಯನ್ನು ಕೊರೊನಾ ಲಾಕ್‌ಡೌನ್‌ ವೇಳೆಯಲ್ಲಿ ಘೋಷಣೆ ಮಾಡಿದ್ದರೂ ಸಹ ಪ್ರಶಸ್ತಿ ನೀಡಲಾಗದೇ ನಿಲ್ಲಿಸಿದ್ದರು. ವಾರದ ಹಿಂದೆ ಪ್ರಶಸ್ತಿ ಪ್ರಕಟಿಸಿದ್ದು, ಬೂದಿಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಜೊತೆಗೆ ತೊಪ್ಪನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಬಂಗಾರಪೇಟೆ ಪಟ್ಟಣದ ಸರ್ಕಾರಿ ಆಸ್ಪತ್ರೆಯು ಸಹ ಕಾಯಕಲ್ಪ ಪ್ರಶಸ್ತಿಗೆ ಆಯ್ಕೆಯಾಗಿದೆ.ಕಾಯಕಲ್ಪ ಪ್ರಶಸ್ತಿ ಸಿಕ್ಕಿರುವುದು ಒಂದೆಡೆಯಾದರೆ, ಕೇಂದ್ರಗಳಲ್ಲಿ ಹಲವು ನ್ಯೂನತೆಗಳಿದ್ದು, ಹಲವು ಸೌಲಭ್ಯಗಳನ್ನು ಕಲ್ಪಿಸಬೇಕಿದೆ.

10 ಕೇಂದ್ರಗಳಿಗೆ ಪ್ರಶಸ್ತಿ: ಸರ್ಕಾರ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಿಗಿಂತ ಗುಣಮಟ್ಟದ ಸೇವೆ ನೀಡಬೇಕು. ಬಾಹ್ಯ ಮತ್ತು ಆಂತರಿಕ ಸ್ವತ್ಛತೆಯನ್ನು ಬಲಪಡಿಸುವುದರ ಜೊತೆಗೆ ಖಾಸಗಿ ಆಸ್ಪತ್ರೆಗಳಿಗೆ ಸೆಡ್ಡು ಹೊಡೆಯುವಂತೆ ಸರ್ಕಾರಿ ಆಸ್ಪತ್ರೆಗಳು ಅಭಿವೃದ್ಧಿ ಹೊಂದಬೇಕೆಂಬ ದೃಷ್ಟಿಯಿಂದ ಕಾಯಕಲ್ಪ ಯೋಜನೆ ಆರಂಭಿಸಿದೆ. ಈ ಯೋಜನೆಯಲ್ಲಿ ಕೋಲಾರ ಜಿಲ್ಲೆಯ 10 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಪ್ರಶಸ್ತಿ ಪಡೆದಿದ್ದು, ಈ ಪೈಕಿ ತಾಲೂಕಿನ ಬೂದಿಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರವೂ ಸಹ ಒಂದಾಗಿದೆ.

ಅತೀ ಹೆಚ್ಚು ಜನಸಂಖ್ಯೆ: ತಾಲೂಕಿನ ಬೂದಿಕೋಟೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವು ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಜನಸಂಖ್ಯೆ ಹಾಗೂ ವ್ಯಾಪ್ತಿ ಹೊಂದಿದೆ. ಕೇಂದ್ರದ ವ್ಯಾಪ್ತಿಯಲ್ಲಿ ಸುಮಾರು 58,000 ಜನಸಂಖ್ಯೆ ಇದ್ದು, ಇಷ್ಟೂ ಜನರಿಗೆ ಸಮರ್ಪಕ ವೈದ್ಯಕೀಯ ಸೇವೆಯನ್ನು ಕಲ್ಪಿಸಲು 9 ಉಪ ಆರೋಗ್ಯ ಕೇಂದ್ರಗಳನ್ನು ತೆರೆಯಲಾಗಿದೆ. ಹಲವು ವರ್ಷಗಳ ಕಾಲ ಆರೋಗ್ಯ ಸಿಬ್ಬಂದಿಗಳು ಹಾಗೂ ಖಾಯಂ ವೈದ್ಯರು ಇಲ್ಲದೆ ಸ್ವಚ್ಛತೆ ಮರೀಚಿಕೆಯಾಗಿತ್ತು. ಕಳೆದ ಎರಡು ವರ್ಷಗಳಿಂದ ಆಸ್ಪತ್ರೆಯು ಸ್ವತ್ಛತೆಯಿಂದ ಕೂಡಿ ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ ನೀಡಲಾಗುತ್ತಿದೆ.

ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ: ಆಸ್ಪತ್ರೆಯಲ್ಲಿ ಸಿಗುವ ಸೇವೆಗಳ ಜೊತೆಗೆ ಆಯುಷ್ಮಾನ್‌ ಭಾರತ ಯೋಜನೆಯಿಂದ ಹಲವು ರೋಗಗಳಿಗೆ ಚಿಕಿತ್ಸೆ ದೊರೆಯುತ್ತಿದೆ. ಪ್ರತಿ ವಾರ 35ಕ್ಕೂ ಮೇಲ್ಪಟ್ಟ ಗರ್ಭಿಣಿಯರು ತಪಾಸಣೆಗೆ ಒಳಗಾಗುತ್ತಾ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಕಾಯಕಲ್ಪ ತಂಡದ ಸದಸ್ಯರು ಆಸ್ಪತ್ರೆಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿ ಕಾಯಕಲ್ಪ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.

  • ಎಂ.ಸಿ.ಮಂಜುನಾಥ್‌

ಟಾಪ್ ನ್ಯೂಸ್

್ಗ್ಗ್ಗ್ಗ

ವಿವಾಹ ಆಮಂತ್ರಣದಲ್ಲಿ ಕೋವಿಡ್ ಜಾಗೃತಿ : ನೆಗೆಟಿವ್ ವರದಿಯೊಂದಿಗೆ ಮದುವೆಗೆ ಬರಲು ಆಹ್ವಾನ

Book Review On Huli Kadjila by Shreeraj Vakwady , Authoured by Harish T G

ಪುಸ್ತಕ ವಿಮರ್ಶೆ : ‘ಹುಲಿ ಕಡ್ಜಿಳ’ದ ಖಾರ ಕಡಿತ..!

gdfgdfg

ಕೆಮಿಕಲ್ ಕಾರ್ಖಾನೆಯಲ್ಲಿ ಅಗ್ನಿ ದುರಂತ : ಮೂರು ಜನ ಕಾರ್ಮಿಕರು ಸ್ಥಳದಲ್ಲೇ ಸಾವು

ಹೊಸ ‘ಹೋಪ್‌’ನಲ್ಲಿ ಶ್ವೇತಾ: ಕೆಎಎಸ್‌ ಆಫೀಸರ್‌ ಆಗಿ ನಟನೆ

ಹೊಸ ‘ಹೋಪ್‌’ನಲ್ಲಿ ಶ್ವೇತಾ: ಕೆಎಎಸ್‌ ಆಫೀಸರ್‌ ಆಗಿ ನಟನೆ

ಹ್ಯಾಟ್ರಿಕ್ ಜಯದ ಕಾತರದಲ್ಲಿ ಆರ್ ಸಿಬಿ: ಟಾಸ್ ಗೆದ್ದ ವಿರಾಟ್ ಮಾರ್ಗನ್

ಹ್ಯಾಟ್ರಿಕ್ ಜಯದ ಕಾತರದಲ್ಲಿ RCB: ಟಾಸ್ ಗೆದ್ದ ವಿರಾಟ್, 3 ವಿದೇಶಿ ಆಟಗಾರರೊಂದಿಗೆ ಕಣಕ್ಕೆ

ಮಾಸ್ಕ್ ಹಾಕದೆ ವಾಗ್ವಾದ ಮಾಡಿದ ವ್ಯಾಪಾರಿಗೆ ಕಪಾಳಮೋಕ್ಷ ಮಾಡಿದ ದಾವಣಗೆರೆ ಎಸ್ ಪಿ     

ಮಾಸ್ಕ್ ಹಾಕದೆ ವಾಗ್ವಾದ ಮಾಡಿದ ವ್ಯಾಪಾರಿಗೆ ಕಪಾಳಮೋಕ್ಷ ಮಾಡಿದ ದಾವಣಗೆರೆ ಎಸ್ ಪಿ     

Didi Demoralised As BJP Much Ahead After 5 Phases Of Polls: Amit Shah

ಐದು ಹಂತಗಳ ಚುನಾವಣೆಯಲ್ಲಿ 122 ಸ್ಥಾನಗಳು ಬಿಜೆಪಿಗೆ ಖಚಿತ : ಅಮಿತ್ ಶಾಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Foot Path Clearance in KGF

ಕೆಜಿಎಫ್ ನಲ್ಲಿ ಫ‌ುಟ್‌ ಪಾತ್‌ ತೆರವು

ಮಾಸ್ಕ್ ಹಾಕದೆ ವಾಗ್ವಾದ ಮಾಡಿದ ವ್ಯಾಪಾರಿಗೆ ಕಪಾಳಮೋಕ್ಷ ಮಾಡಿದ ದಾವಣಗೆರೆ ಎಸ್ ಪಿ     

ಮಾಸ್ಕ್ ಹಾಕದೆ ವಾಗ್ವಾದ ಮಾಡಿದ ವ್ಯಾಪಾರಿಗೆ ಕಪಾಳಮೋಕ್ಷ ಮಾಡಿದ ದಾವಣಗೆರೆ ಎಸ್ ಪಿ     

Awarding of awards to 10 journalists

10 ಮಂದಿ ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ

Fire if gas is refilling

ಗ್ಯಾಸ್‌ ರೀಪೀಲ್ಲಿಂಗ್‌ ವೇಳೆ ಬೆಂಕಿ: ಆಟೋ ಭಸ್ಮ

Complete ban on fairs and festivals in the district

ಜಿಲ್ಲೆಯಲ್ಲಿ ಜಾತ್ರೆ, ಉತ್ಸವಗಳಿಗೆ ಸಂಪೂರ್ಣ ನಿರ್ಬಂಧ

MUST WATCH

udayavani youtube

ಮಾಸ್ಕ್ ಹಾಕದೆ ವಾಗ್ವಾದ ಮಾಡಿದ ವ್ಯಾಪಾರಿಗೆ ಕಪಾಳಮೋಕ್ಷ

udayavani youtube

ಕಡಿಮೆ ಭೂಮಿಯಲ್ಲಿ ಲಾಭದಾಯಕ ಕೈತೋಟ

udayavani youtube

ಕುಂಭಮೇಳ ಈಗ ಸಾಂಕೇತಿಕವಾಗಿರಲಿ: ಪ್ರಧಾನಿ ಮೋದಿ

udayavani youtube

COVID 2ನೇ ಅಲೆ ಎಚ್ಚರ ತಪ್ಪಬೇಡಿ

udayavani youtube

ಮನೆಯಂಗಳದಲ್ಲಿ ವೀಳ್ಯದೆಲೆ ಬೆಳೆದು ಯಶಸ್ಸು ಕಂಡ ನಿವೃತ ಅಧ್ಯಾಪಕ

ಹೊಸ ಸೇರ್ಪಡೆ

್ಗ್ಗ್ಗ್ಗ

ವಿವಾಹ ಆಮಂತ್ರಣದಲ್ಲಿ ಕೋವಿಡ್ ಜಾಗೃತಿ : ನೆಗೆಟಿವ್ ವರದಿಯೊಂದಿಗೆ ಮದುವೆಗೆ ಬರಲು ಆಹ್ವಾನ

Book Review On Huli Kadjila by Shreeraj Vakwady , Authoured by Harish T G

ಪುಸ್ತಕ ವಿಮರ್ಶೆ : ‘ಹುಲಿ ಕಡ್ಜಿಳ’ದ ಖಾರ ಕಡಿತ..!

gdfgdfg

ಕೆಮಿಕಲ್ ಕಾರ್ಖಾನೆಯಲ್ಲಿ ಅಗ್ನಿ ದುರಂತ : ಮೂರು ಜನ ಕಾರ್ಮಿಕರು ಸ್ಥಳದಲ್ಲೇ ಸಾವು

ಕೋವಿಡ್ ಕಾರಣದಿಂದ ಜಾನಪದ ಕಲಾವಿದರ ಮಾಸಾಶನ ಸಂದರ್ಶನ ಮುಂದೂಡಿಕೆ

ಕೋವಿಡ್ ಕಾರಣದಿಂದ ಜಾನಪದ ಕಲಾವಿದರ ಮಾಸಾಶನ ಸಂದರ್ಶನ ಮುಂದೂಡಿಕೆ

ಹೊಸ ‘ಹೋಪ್‌’ನಲ್ಲಿ ಶ್ವೇತಾ: ಕೆಎಎಸ್‌ ಆಫೀಸರ್‌ ಆಗಿ ನಟನೆ

ಹೊಸ ‘ಹೋಪ್‌’ನಲ್ಲಿ ಶ್ವೇತಾ: ಕೆಎಎಸ್‌ ಆಫೀಸರ್‌ ಆಗಿ ನಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.