ಸರ್ಕಾರಿ ಶಾಲಾ ಬಾಗಿಲಿಗೆ ಪುಸ್ತಕ ರವಾನೆ


Team Udayavani, May 23, 2019, 10:50 AM IST

KOLAR-TDY-1..

ಕೋಲಾರದಲ್ಲಿ ಖಾಸಗಿ ಶಾಲೆಗಳಿಗೆ ಪಠ್ಯಪುಸ್ತಕ ವಿತರಣೆ ಮಾಡುವ ಕಾರ್ಯಕ್ಕೆ ಡಿಡಿಪಿಐ ಕೆ.ರತ್ನಯ್ಯ ಚಾಲನೆ ನೀಡಿದರು. ಖಾಸಗಿ ಶಾಲೆಗಳ ಸಂಘದ ಅಧ್ಯಕ್ಷ ಸದಾನಂದ್‌ ಇತರರಿದ್ದರು.

ಕೋಲಾರ: ಸರ್ಕಾರಿ ಶಾಲೆ ಆರಂಭಕ್ಕೆ ಮುನ್ನವೇ ಶಿಕ್ಷಕರಿಗೆ ಹೊರೆಯಾಗದ ರೀತಿ ಶಾಲೆ ಬಾಗಿಲಿಗೆ ಪುಸ್ತಕ ಪೂರೈಕೆ ಮಾಡುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಪ್ರಯತ್ನವನ್ನು ಡಿಡಿಪಿಐ ಕೆ.ರತ್ನಯ್ಯ ಶ್ಲಾಘಿಸಿದರು.

ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ಖಾಸಗಿ ಶಾಲೆಗಳಿಗೆ ಪಠ್ಯಪುಸ್ತಕ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಶಿಕ್ಷಣ ಇಲಾಖೆಯೇ ಸಮಯಕ್ಕೆ ಪಠ್ಯಪುಸ್ತಕಗಳನ್ನು ತಲುಪಿಸುವ ಕೆಲಸವನ್ನು ಮಾಡುವ ಮೂಲಕ ಶಿಕ್ಷಕರು ತರಗತಿ ಬಿಟ್ಟು, ಪುಸ್ತಕಗಳನ್ನು ಹೊತ್ತೂಯ್ಯುವ ಕೆಲಸಕ್ಕೆ ಕಡಿವಾಣ ಹಾಕುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ವಿವರಿಸಿದರು.

ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಗೆ 8ನೇ ಸ್ಥಾನ ಬರುವ ಮೂಲಕ ಗೌರವ ಬಂದಿದೆ. ಇದಕ್ಕೆ ಚ್ಯುತಿ ಬಾರದಂತೆ ಶೈಕ್ಷಣಿಕ ವರ್ಷದ ಆರಂಭದಲ್ಲೇ ಕ್ರಿಯಾಯೋಜನೆ ತಯಾರಿಸಿಕೊಂಡು ಮುಂದಿನ ಬಾರಿಯ ಉತ್ತಮ ಫಲಿತಾಂಶಕ್ಕೆ ಕಾರ್ಯೋನ್ಮುಖರಾಗುವಂತೆ ಶಿಕ್ಷಕರಿಗೆ ಸೂಕ್ತ ಮಾರ್ಗದರ್ಶನ ನೀಡಲು ಸಲಹೆ ನೀಡಿದರು.

ಈ ಬಾರಿ ಖಾಸಗಿ ಶಾಲೆಗಳವರು ಆನ್‌ಲೈನ್‌ನಲ್ಲಿ ಮಾತ್ರವೇ ಪುಸ್ತಕಗಳ ಹಣ ಪಾವತಿಸಿದ್ದು, ನಗದು ವ್ಯವಹಾರಕ್ಕೆ ಅವಕಾಶವೇ ಇಲ್ಲದಂತೆ ಪಾರದರ್ಶಕ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ವಾಹನದಲ್ಲಿಯೇ ಶಾಲೆಗೆ ಪುಸ್ತಕ: ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್‌.ನಾಗರಾಜಗೌಡ, ಈ ಬಾರಿ ಪಠ್ಯಪುಸ್ತಕಗಳನ್ನು ಮೇ 28ಕ್ಕೆ ಮುನ್ನವೇ ಶಾಲೆಗಳಿಗೆ ತಲುಪಿಸಲು ಎಲ್ಲಾ ಕ್ರಮ ಕೈಗೊಳ್ಳಲಾಗಿದೆ. 24 ರಿಂದ 28ರವರೆಗೂ ನಿರಂತರ ಐದು ದಿನ ಕ್ಲಸ್ಟರ್‌ ಸಂಪನ್ಮೂಲ ವ್ಯಕ್ತಿಗಳ ನೇತೃತ್ವದಲ್ಲಿ ಪುಸ್ತಕಗಳು ಶಾಲೆ ಬಾಗಿಲಿಗೆ ತಲುಪಲಿವೆ ಎಂದು ವಿವರಿಸಿದರು.

ಸೂಚಿಸಿರುವ ದಿನಾಂಕಗಳಂದು ಶಾಲೆಗಳಲ್ಲಿ ಶಿಕ್ಷಕರು, ಮುಖ್ಯ ಶಿಕ್ಷಕರು ಹಾಜರಿದ್ದು ಪಠ್ಯಪುಸ್ತಕ ಪಡೆದುಕೊಳ್ಳಲು ಸೂಚಿಸಿದ ಅವರು, ಶಾಲಾ ಪ್ರಾರಂಭೋತ್ಸವದಂದೇ ಮಕ್ಕಳಿಗೆ ಪಠ್ಯಪುಸ್ತಕ ವಿತರಿಸಬೇಕು ಎಂದರು.

24ರಿಂದಲೇ ಕ್ಲಸ್ಟರ್‌ವಾರು ಸಾಗಣೆ: ಕ್ಲಸ್ಟರ್‌ ಸಂಪನ್ಮೂಲ ವ್ಯಕ್ತಿಗಳಿಗೆ ಆಯಾ ಶಾಲೆಗಳ ಮುಖ್ಯ ಶಿಕ್ಷಕರು ಸಹಕಾರ ನೀಡುವಂತೆ ಕೋರಿರುವ ಅವರು, ನಿಮ್ಮ ಶಾಲೆಗೆ ಪುಸ್ತಕ ಬರುವ ಮುನ್ನಾದಿನ ಬಿಇಒ ಕಚೇರಿ ಆವರಣದಲ್ಲಿನ ಉಗ್ರಾಣದಲ್ಲಿ ಪುಸ್ತಕಗಳನ್ನು ಸಿಆರ್‌ಪಿಗಳ ನೇತೃತ್ವದಲ್ಲಿ ಡಿ ದರ್ಜೆ ನೌಕರರು ಬಂಡೆಲ್ ಮಾಡಲು ಸೂಚಿಸಲಾಗಿದೆ ಎಂದು ಹೇಳಿದರು.

ಈ ಬಂಡೆಲ್ಗಳನ್ನು ಕ್ಲಸ್ಟರ್‌ ಸಂಪನ್ಮೂಲ ವ್ಯಕ್ತಿಗಳು ಆಯಾ ದಿನಗಳಂದು ಶಾಲೆಗಳಿಗೆ ಸಾಗಾಣೆ ವಾಹನದ ಮೂಲಕ ತಲುಪಿಸಲು ವ್ಯವಸ್ಥೆಯಾಗಿದೆ. ಎಸ್‌ಟಿಎಸ್‌ನಲ್ಲಿ ಅಳವಡಿಕೆಯಾಗಿರುವ ಸಂಖ್ಯೆಗೆ ಅನುಗುಣವಾಗಿ ಪುಸ್ತಕಗಳನ್ನು ಶಾಲೆಗಳಿಗೆ ಪೂರೈಕೆ ಮಾಡಲಾಗುತ್ತಿದ್ದು, ಸಿಆರ್‌ಪಿಗಳು ನೀಡುವ ಪಟ್ಟಿಯನ್ನು ಇದರೊಂದಿಗೆ ತಾಳೆ ನೋಡಿ ಪುಸ್ತಕ ಪೂರೈಕೆ ಮಾಡಲು ಕ್ರಮವಹಿಸಲಾಗಿದೆ ಎಂದರು.

ಮೇ 24ರಂದು ಬೆಳಗ್ಗೆ 9.30ರಿಂದ 1 ಗಂಟೆಯವರೆಗೂ ಪಿ.ಸಿ.ಹಳ್ಳಿ, ಕಮಲಮಹಡಿ, ಕೊಂಡರಾಜನಹಳ್ಳಿ, ಮಧ್ಯಾಹ್ನ 2 ಗಂಟೆಯಿಂದ 5.30ರವರೆಗೂ ಬೆಗ್ಲಿಹೊಸಹಳ್ಳಿ, ವಕ್ಕಲೇರಿ, ಮುದುವತ್ತಿ ಕ್ಲಸ್ಟರ್‌ಗಳಿಗೆ ಪುಸ್ತಕ ರವಾನೆಯಾಗುವುದು. 25 ರಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 1 ಗಂಟೆಯವರೆಗೂ ಹರಟಿ, ಅಬ್ಬಣಿ, ಹುತ್ತೂರು, ವಡಗೂರು ಕ್ಲಸ್ಟರ್‌ಗಳಿಗೆ, ಮಧ್ಯಾಹ್ನ 2 ಗಂಟೆಯಿಂದ 5.30ರವರೆಗೂ ಅಣ್ಣಿಹಳ್ಳಿ, ಐತರಾಸನಹಳ್ಳಿ, ಹೋಳೂರು, ಶಾಲೆಗಳಿಗೆ ತಲುಪಿಸಲಾಗುವದು.

26 ರಂದು ತಾಲೂಕಿನ ಎಲ್ಲಾ ಅನುದಾನಿತ ಶಾಲೆಗಳಿಗೆ ಪುಸ್ತಕ ಪೂರೈಕೆ ಮಾಡಲಾಗುವುದು. 27ರಂದು ಬೆಳಗ್ಗೆ 9.30 ರಿಂದ 1 ಗಂಟೆಯವರೆಗೂ ಟಿ.ಡಿ.ಹಳ್ಳಿ, ಮುದುವಾಡಿ, ಸುಗಟೂರು, ಮದನಹಳ್ಳಿ, ಕೋಡಿಕಣ್ಣೂರು ಕ್ಲಸ್ಟರ್‌ಗಳಿಗೆ, ಮಧ್ಯಾಹ್ನ 2 ರಿಂದ 5.30 ರವರೆಗೂ ವೇಮಗಲ್, ಕುರಗಲ್, ಕ್ಯಾಳನೂರು, ಬೆಳಮಾರನಹಳ್ಳಿ ಕ್ಲಸ್ಟರ್‌ಗಳಿಗೆ ಪುಸ್ತಕ ತಲುಪಲಿದೆ ಎಂದು ವಿವರಿಸಿದರು.

28 ರಂದು ಬೆಳಗ್ಗೆ 9.30 ರಿಂದ 1ಗಂಟೆಯವರೆಗೆ ಸೂಲೂರು, ಅರಾಭಿಕೊತ್ತನೂರು, ನರಸಾಪುರ ಕ್ಲಸ್ಟರ್‌ಗಳು ಹಾಗೂ ಮಧ್ಯಾಹ್ನ 2 ರಿಂದ 5 ಗಂಟೆಯವರೆಗೆ ಮದ್ದೇರಿ, ಕಾಡಹಳ್ಳಿ, ಮೇಡಿಹಾಳ ಕ್ಲಸ್ಟರ್‌ಗಳಿಗೆ ಪುಸ್ತಕಗಳು ತಲುಪಲು ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಖಾಸಗಿ ಶಾಲೆಗಳ ಸಂಘದ ಅಧ್ಯಕ್ಷ ಸದಾನಂದ್‌, ಮುಳಬಾಗಿಲು ಬಿಇಒ ಕೆಂಪರಾಮು, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಎ.ಬಿ. ರಾಮಕೃಷ್ಣಪ್ಪ,ವಿಷಯ ಪರಿವೀಕ್ಷಕ ಶಶಿವಧನ, ಗಾಯತ್ರಿ, ಕೃಷ್ಣಪ್ಪ, ಶಿಕ್ಷಣ ಸಂಯೋಜಕರಾದ ವೆಂಕಟಾ ಚಲಪತಿ, ಮುನಿರತ್ನಯ್ಯಶೆಟ್ಟಿ, ಆರ್‌.ಶ್ರೀನಿವಾಸನ್‌, ರಾಘವೇಂದ್ರ, ಬೈರರೆಡ್ಡಿ, ಮುಖ್ಯಶಿಕ್ಷಕ ಹುತ್ತೂರು ನಾರಾಯಣಸ್ವಾಮಿ, ಖಾಸಗಿ ಶಾಲೆಗಳ ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

Kolar; ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

DR SUDHA

Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್‌

jameer

H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

Electric shock: ಯುವಕನ ಸಾವು

Electric shock: ಯುವಕನ ಸಾವು

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.