ವಿರೂಪಾಕ್ಷಿ ದೇಗುಲದಲ್ಲಿ ಜಿಲ್ಲೆ, ತಾ. ಅಧಿಕಾರಿಗಳಿಂದ ಸ್ವಚ್ಛತಾ ಕಾರ್ಯ
Team Udayavani, Dec 8, 2020, 3:06 PM IST
ಮುಳಬಾಗಿಲು: ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಯಾವುದೇ ರೀತಿಯ ಮೇಲು ಕೀಳು ಮನೋಭಾವನೆಯಿಂದ ಇತರೆ ಸಿಬ್ಬಂದಿ ವರ್ಗದವರನ್ನು ಕಾಣದೆ ಸಮಾನ ರೀತಿಯಲ್ಲಿ ಕಂಡಾಗ ಪ್ರತಿ ಕಾರ್ಯ ಸುಲಭವಾಗಿ ನಡೆಯುತ್ತದೆ ಎಂದು ಜಿಲ್ಲಾಧಿಕಾರಿ ಸತ್ಯಭಾಮ ತಿಳಿಸಿದರು.
ತಾಲೂಕಿನ ವಿರೂಪಾಕ್ಷಿ ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿದೇವಾಲಯದಲ್ಲಿ ಏರ್ಪಡಿಸಲಾಗಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸ್ನೇಹ ಸಂಬಂಧವಿರಲಿ: ಅಧಿಕಾರದಿಂದ ದರ್ಪ ತೋರಿಸಿದರೆ ಯಾವುದೇ ರೀತಿಯ ಪ್ರಯೋಜನ ಆಗುವುದಿಲ್ಲ, ಬದಲಿಗೆ ನಮ್ಮ ಸಿಬ್ಬಂದಿ ಜತೆಗೆ ಸ್ನೇಹ ಸಂಬಂಧ ಬೆಳೆಸಿಕೊಂಡು ಕೆಲಸ ನಿರ್ವಹಿಸಿದರೆ ಎಂತಹ ಕಠಿಣ ಸಮಸ್ಯೆ ಬಂದರೂ ಸುಲಭವಾಗಿ ಎದುರಿಸಬಹುದು ಎಂದರು.
ಗಾಂಧೀಜಿ ಕಂಡಂತಹ ಸ್ವಚ್ಛ ಭಾರತ ಕನಸು ನನಸಾಗಿಸಲು ಮತ್ತು ಉತ್ತಮ ಪರಿಸರಕ್ಕಾಗಿ, ಕಸ ರಹಿತ ಮಾಲಿನ್ಯ ರಹಿತ ಸ್ವಚ್ಛ ಗ್ರಾಮಗಳನ್ನಾಗಿ ರೂಪಿಸಲು ಪ್ರತಿಯೊಬ್ಬರೂ ಪಣತೊಡಬೇಕೆಂದರು.
ಒಗ್ಗಟ್ಟಿರಲಿ: ತಹಶೀಲ್ದಾರ್ ರಾಜಶೇಖರ್ ಮಾತ ನಾಡಿ, ತಾಲೂಕು ಆಡಳಿತದೊಂದಿಗೆತಾಲೂ ಕು ಮಟ್ಟದ ಎಲ್ಲಾ ಇಲಾಖೆ ಅಧಿಕಾರಿಗಳು ಉತ್ತಮ ಬಾಂಧವ್ಯ ಹೊಂದಿದ್ದಾರೆ. ಈಗಾಗಲೇ ಕೊರೊನಾ ಹರಡುವಿಕೆ ತಡೆಗಟ್ಟಲು ತುಂಬಾ ಅನುಕೂಲವಾಗಿ ತಾಲೂಕಿನ ಒಗ್ಗಟ್ಟನ್ನು ಪ್ರದರ್ಶಿಸಲಾಗಿದೆ ಎಂದರು.
ತಾಪಂ ಇಒ ಶ್ರೀನಿವಾಸ್ ಮಾತನಾಡಿ, ತಾಲೂಕಿನ 30 ಗ್ರಾಪಂಗಳ ಪಿಡಿಒ ಮತ್ತು ಜಲಗಾರರನ್ನು ವಿರೂಪಾಕ್ಷೇಶ್ವರ ಸ್ವಾಮಿ ದೇವಾಲಯ ಶ್ರಮದಾನಕ್ಕೆ ಕರೆಸಿ ಕೊಳ್ಳಲಾಗಿದೆ. ಈ ಕಾರ್ಯಕ್ರಮದಿಂದ ಮುಂದಿನ ದಿನಗಳಲ್ಲಿ ಎಲ್ಲರಲ್ಲಿಯೂಐಕ್ಯತಾ ಮನೋಭಾವ ಬೆಳೆದು ಸರ್ಕಾರಿ ಕೆಲಸ ಕಾರ್ಯ ಮಾಡಲು ಒಬ್ಬರಿಂದ ಮತ್ತೂಬ್ಬರಲ್ಲಿ ಉತ್ತಮ ಒಡಂಬಡಿಕೆ ಮಾಡಲು ಅನುಕೂಲವಾಯಿತು ಎಂದರು.
ಜಿಪಂ ಉಪ ಕಾರ್ಯದರ್ಶಿ ಹನುಮಂತಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ವಿಜಯಕುಮಾರ್, ಸಿಪಿಐ ಗಣೇಶ ನಾಯ್ಕ,ಪೌರಾಯುಕ್ತ ಶ್ರೀನಿವಾಸಮೂರ್ತಿ, ಬಿಇಒ ಗಿರಿಜೇಶ್ವರಿ ದೇವಿ, ಪಿಎಸ್‌ಐ ಪ್ರದೀಪ್‌ಸಿಂಗ್, ಡಾ. ವರ್ಣಶ್ರೀ, ರಾಜಸ್ವ ನಿರೀಕ್ಷಕ ಸುಬ್ರಮಣಿ, ತಾಪಂ ಎಡಿ ನರೇಗಾ ಎ.ಡಿ.ರವಿಚಂದ್ರ, ಇ.ಚಂದ್ರಪ್ಪ, ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದ ಎಲ್ಲಾ ಇಲಾಖೆ, ಪೊಲೀಸ್, ನಗರಸಭೆ ಅಧಿಕಾರಿಗಳು ಶ್ರಮದಾನ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಸ್ ನೊಳಗೆ ಯುವತಿಗೆ ಕಿರುಕುಳ: ಘಟನೆ ಬಗ್ಗೆ ಯುವತಿ ಹೇಳಿದ್ದೇನು?
ಬಸ್ ನಲ್ಲಿ ಕಿರುಕುಳ ಪೋಸ್ಟ್: ಆರೋಪಿಯ ಬಂಧನ, ಪೊಲೀಸರೆದುರೇ ಕಪಾಳ ಮೋಕ್ಷ ಮಾಡಿದ ಯುವತಿ
PLASTIC ನಿಂದ ತಯಾರಾದ ECHO BRICKS ನ ಉಪಯೋಗಗಳು ಹಾಗೂ ಪ್ರಯೋಜನಗಳು
Manipalದ Auto Rickshaw ಚಾಲಕನಿಂದ Battery ಚಾಲಿತ Yamaha R15 ನೂತನ ಆವಿಷ್ಕಾರ
ಸರ್ವಿಸ್ ಆನ್ ವೀಲ್ಸ್ : ಮನೆ ಬಾಗಿಲಿಗೆ ಸರಕಾರಿ ಸೇವೆ
ಹೊಸ ಸೇರ್ಪಡೆ
ಸಚಿವರ ಅಸಮಾಧಾನಕ್ಕೆ ಮಣಿದ ಸಿಎಂ ಬಿಎಸ್ ವೈ: ಮತ್ತೆ ಖಾತೆ ಬದಲಾವಣೆ, ಎಂಟಿಬಿಗೆ ಸಕ್ಕರೆ ಸಿಹಿ
ಅತೃಪ್ತಿ ಮುಂದುವರಿಸಿದರೆ ಸಚಿವರ ಮನೆಮುಂದೆ ಧರಣಿ ಮಾಡುತ್ತೇವೆ: ಬಿಜೆಪಿ ಶಾಸಕರ ವಾರ್ನಿಂಗ್
ಗ್ರಾಹಕರ ಗಮನಕ್ಕೆ: ರಾತ್ರಿ 1ರಿಂದ 3ರವರೆಗೆ ಹಣ ವರ್ಗಾವಣೆಗೆ ಯುಪಿಐ ಬಳಸಬೇಡಿ: NPCI
ಇನ್ಸ್ಟಾಗ್ರಾಂ ಪರಿಚಯ: ಅಪ್ರಾಪ್ತೆಯ ಮೇಲೆ ಅತ್ಯಾಚಾರಗೈದ ಐವರ ಬಂಧನ!
ಕಾಂಗ್ರೆಸ್ ಮುಖಂಡ ಉಮ್ಮರ್ ಪಜೀರು ಹೃದಯಾಘಾತದಿಂದ ನಿಧನ