ವ್ಯಾಪಾರದ ಜೊತೆ ಶೈಕ್ಷಣಿಕವಾಗಿ ಮುಂದೆ ಬನ್ನಿ


Team Udayavani, Sep 23, 2019, 2:51 PM IST

kolara-tdy-1

ಕೋಲಾರ: ಆರ್ಯವೈಶ್ಯ ಸಮುದಾಯ ವ್ಯಾಪಾರದ ಜೊತೆಗೆ ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಮುಂಚೂಣಿಗೆ ಬಂದು ಆಡಳಿತ ನಡೆಸುವಂತಾಗಬೇಕೆಂದು ಕೇಂದ್ರ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ ಆಶಿಸಿದರು.

ಕರ್ನಾಟಕ ಆರ್ಯವೈಶ್ಯ ಮಹಾಸಭಾ ಭಾನುವಾರ ಆಯೋಜಿಸಿದ್ದ 10ನೇ ವರ್ಷದ ರಾಜ್ಯ ಮಟ್ಟದ ಪ್ರತಿಭೋತ್ಸವದ ಮೆರವಣಿಗೆಗೆ ಕಠಾರಿಪಾಳ್ಯದ ಸರ್ಕಾರಿ ಶಾಲೆ ಆವರಣ ದಲ್ಲಿ ಚಾಲನೆ ನೀಡಿ ಮಾತನಾಡಿ, ಆರ್ಯವೈಶ್ಯ ಸಮುದಾಯ ವ್ಯಾಪಾರದ ಕಡೆ ನೀಡುವ ಒತ್ತನ್ನು ಮಕ್ಕಳ ಶಿಕ್ಷಣಕ್ಕೆ ನೀಡಿಲಿ. ಐಎಎಸ್‌, ಐಪಿಎಸ್‌, ಕೆಎಎಸ್‌ ಅಧಿಕಾರಿಗಳನ್ನಾಗಿಸಿ ಆಡಳಿತ ದಲ್ಲಿ ಭಾಗಿದಾರರನ್ನಾಗಿಸಿ, ಅಂತೆಯೇ ರಾಜಕೀಯವಾಗಿಯೂ ಮುನ್ನಲೆಗೆ ಬರಬೇಕು ಎಂದು ಹೇಳಿದರು.

ಶನಿವಾರ ನಡೆದ ಶ್ರೀನಿವಾಸ ಕಲ್ಯಾಣೋತ್ಸವದ ವೇಳೆ ಜಿಲ್ಲಾದ್ಯಂತ ಉತ್ತಮ ಮಳೆಯಾಗಿದೆ. ನಿಮ್ಮ ಸೇವೆ ಭಗವಂತನಿಗೆ ತಲುಪಿದೆ. ಭಗವಂತನ ಸೇವೆ ಮುಂದುವರಿಸಿ ಎಂದು ನುಡಿದರು.

ಉತ್ತಮ ಮಳೆ: ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಮಾತನಾಡಿ, ಜಿಲ್ಲೆ ಸತತ ಬರಗಾಲ ಎದುರಿಸುತ್ತಿದೆ. ಈ ವರ್ಷವೂ ಮಳೆಯಾಗಿರಲಿಲ್ಲ. ಕಲ್ಯಾಣೋತ್ಸವದ ವೇಳೆ ಭಾರೀ ಮಳೆಯಾಗಿ 65 ರಿಂದ 75 ಮಿಮೀ ಮಳೆ ದಾಖಲಾಗಿದೆ. ಜಿಲ್ಲಾದ್ಯಂತ ಮಳೆಯಾಗಿರುವುದರಿಂದ ಜಿಲ್ಲಾಡಳಿತದ ಪರವಾಗಿ ಧನ್ಯವಾದ ಸಲ್ಲಿಸುವುದಾಗಿ ಹೇಳಿದರು. ಜಿಲ್ಲಾ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ ಆರ್ಯವೈಶ್ಯ ಮಹಾಸಭಾದ ರಾಜ್ಯಾಧ್ಯಕ್ಷ ಆರ್‌.ಪಿ.ರವಿಶಂಕರ್‌, ಸಮಿತಿ ಅಧ್ಯಕ್ಷ ಕೆ.ವಿ.ರಾಮಪ್ರಸಾದ್‌, ಮಹಾಸಭಾದ ಜಿಲ್ಲಾಧ್ಯಕ್ಷ ವೈ.ಆರ್‌. ಶಿವಪ್ರಕಾಶ್‌ ಇತರರಿದ್ದರು.

ಅದ್ಧೂರಿ ಮೆರವಣಿಗೆ: ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಸ್ನಾತಕೋ ತ್ತರ, ಉನ್ನತ ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿ ಗಳನ್ನು 10ಕ್ಕೂ ಹೆಚ್ಚು ಬೆಳ್ಳಿ ಪಲ್ಲಕಿ, ಕುದುರೆ ಸಾರೋಟು, ಕುದುರೆಗಳ ಮೇಲೆ ಕುಳ್ಳಿರಿಸಿ ನಗರದಾದ್ಯಂತ ಮೆರವಣಿಗೆ ನಡೆಸಲಾಯಿತು. ಸುಮಾರು 850ಕ್ಕೂ ಹೆಚ್ಚು ಪ್ರತಿಭಾ ಪುರಸ್ಕೃತರು ಶೋಭಾ ಯಾತ್ರೆಯಲ್ಲಿ ಸಾಗುತ್ತಿದ್ದಂತೆ ವಿವಿಧೆಡೆ ಪುಷ್ಪವೃಷ್ಟಿ ಸುರಿಸ ಲಾಯಿತು. ಡೊಳ್ಳುಕುಣಿತ, ದೇವರುಗಳ ದ್ವಿಪಾತ್ರ ಪ್ರದರ್ಶನ, ವೀರಗಾಸೆ, ಡೊಳ್ಳುಕುಣಿತ ವಿವಿಧ ಜಾನಪದ ಕಲಾ ಪ್ರಕಾರಗಳು ಗಮನ ಸೆಳೆಯಿತು.

ಅಂಬಾರಿ ಮೆರವಣಿಗೆ: ಶ್ರೀವಾಸವಿ ಕನ್ನಿಕಾ ಪರಮೇಶ್ವರಿ ದೇವಿಯನ್ನು ಅಂಬಾರಿಯಲ್ಲಿಟ್ಟು, ಮೆರವಣಿಗೆ ನಡೆಸಲಾಯಿತು. ಸಾರ್ವಜನಿಕರನ್ನು ಕಂಡು ಆನೆ ಬೆದರದಂತೆ ಎರಡು ಸುತ್ತಿನ ರಕ್ಷಣಾ ಕೋಟೆಯಲ್ಲಿ ಕರೆದೊಯ್ಯಲಾಯಿತು. ಸಮುದಾಯದ ಸಾವಿರಾರು ಮಂದಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಟಾಪ್ ನ್ಯೂಸ್

ಮಹಿಳಾ ಡೆಲಿವರಿ ಏಜೆಂಟ್‌ಗಳ ಮನ ಮುಟ್ಟಿದ ಸ್ವಿಗ್ಗಿ

ಮಹಿಳಾ ಡೆಲಿವರಿ ಏಜೆಂಟ್‌ಗಳ ಮನ ಮುಟ್ಟಿದ ಸ್ವಿಗ್ಗಿ

8 ವರ್ಷಗಳ ಬಳಿಕ ರಸ್ತೆಗಳಲ್ಲಿ ಭದ್ರತಾ ಬಂಕರ್‌!

8 ವರ್ಷಗಳ ಬಳಿಕ ರಸ್ತೆಗಳಲ್ಲಿ ಭದ್ರತಾ ಬಂಕರ್‌!

ಉದ್ಯೋಗಸ್ಥರ ಸಂಖ್ಯೆಯಲ್ಲಿ ಭಾರೀ ಏರಿಕೆ

ಉದ್ಯೋಗಸ್ಥರ ಸಂಖ್ಯೆಯಲ್ಲಿ ಭಾರೀ ಏರಿಕೆ

katapadi news

ಕಟಪಾಡಿ : ಏಣಗುಡ್ಡೆ ಬ್ರಹ್ಮ ಬೈದೇರುಗಳ ಗರಡಿಯ ನಿಧಿ ಕುಂಭ ಯೋಗನಾಳದಲ್ಲಿ ತೀರ್ಥೋದ್ಭವ!

siddaramaiah

ಸಿದ್ದರಾಮಯ್ಯ, ನಿಮಗೂ 2 ಡೋಸ್ ಲಸಿಕೆ ಸಿಕ್ಕಿದೆಯಲ್ಲವೇ? : ಬಿಜೆಪಿ ಪ್ರಶ್ನೆ

“ಅಭ್ಯಾಸ್‌’ ಪ್ರಯೋಗಾರ್ಥ ಉಡಾವಣೆ ಯಶಸ್ವಿ

“ಅಭ್ಯಾಸ್‌’ ಪ್ರಯೋಗಾರ್ಥ ಉಡಾವಣೆ ಯಶಸ್ವಿ

bengalore news

ಚೇತರಿಕೆಯತ್ತ ಪ್ರವಾಸೋದ್ಯಮ; ಆನಂದ್ ಸಿಂಗ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

chinthamani news

ನಗರಸಭೆ ಜೆ.ಇ ಪ್ರಸಾದ್ ವಿರುದ್ಧ ಗರಂ ಆದ ಸದಸ್ಯ ಜೈ ಭೀಮ್ ಮುರಳಿ

Protest against cancellation of BPL card

ಬಿಪಿಎಲ್‌ ಕಾರ್ಡ್‌ ರದ್ದು ಮಾಡಿದ್ದಕ್ಕೆ  ಪ್ರತಿಭಟನೆ

ಹಳೆ ದ್ವೇಷದ ಹಿನ್ನೆಲೆ: ಆಸ್ಪತ್ರೆಯ ಐಸಿಯು ಘಟಕದಲ್ಲೇ ಎರಡು ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ: ಆಸ್ಪತ್ರೆಯ ಐಸಿಯು ಘಟಕದಲ್ಲೇ ಎರಡು ಗುಂಪುಗಳ ನಡುವೆ ಮಾರಾಮಾರಿ

ಗಾಳಿಯಲಿ ಗುಂಡು ಹಾರಿಸಿ ಉತ್ಸವಕ್ಕೆ ಚಾಲನೆ

ಗಾಳಿಯಲ್ಲಿ ಗುಂಡು ಹಾರಿಸಿ ಉತ್ಸವಕ್ಕೆ ಚಾಲನೆ

ಕೋಲಾರ ದಸರಾ

ಕೋಲಾರದಲ್ಲಿ ಸಂಭ್ರಮದ ವಿಜಯದಶಮಿ

MUST WATCH

udayavani youtube

ಆಟೋ ಚಾಲಕನ ನತದೃಷ್ಟ ಕಥೆಯಿದು

udayavani youtube

ನಮ್ಮ ದೇಶ ಕರ್ತವ್ಯ ಪಾಲಿಸಿದೆ : ಪ್ರಧಾನಿ ನರೇಂದ್ರ ಮೋದಿ

udayavani youtube

ಶೆಟ್ಟಿ ನೀನು ಹುಡುಗಿ ತರ ಮಾತಾಡ್ತೀಯ

udayavani youtube

POLYHOUSE ನಲ್ಲಿ ಸೌತೆಕಾಯಿ ತರಕಾರಿ ಕೃಷಿ; ಇಲ್ಲಿದೆ ಸಂಪೂರ್ಣ ಮಾಹಿತಿ…

udayavani youtube

ನೂರು ಕೋಟಿ ಡೋಸ್‌ ಲಸಿಕಾ ಗುರಿ ತಲುಪಿದ ಸಂಭ್ರಮ

ಹೊಸ ಸೇರ್ಪಡೆ

ಮಹಿಳಾ ಡೆಲಿವರಿ ಏಜೆಂಟ್‌ಗಳ ಮನ ಮುಟ್ಟಿದ ಸ್ವಿಗ್ಗಿ

ಮಹಿಳಾ ಡೆಲಿವರಿ ಏಜೆಂಟ್‌ಗಳ ಮನ ಮುಟ್ಟಿದ ಸ್ವಿಗ್ಗಿ

8 ವರ್ಷಗಳ ಬಳಿಕ ರಸ್ತೆಗಳಲ್ಲಿ ಭದ್ರತಾ ಬಂಕರ್‌!

8 ವರ್ಷಗಳ ಬಳಿಕ ರಸ್ತೆಗಳಲ್ಲಿ ಭದ್ರತಾ ಬಂಕರ್‌!

ಉದ್ಯೋಗಸ್ಥರ ಸಂಖ್ಯೆಯಲ್ಲಿ ಭಾರೀ ಏರಿಕೆ

ಉದ್ಯೋಗಸ್ಥರ ಸಂಖ್ಯೆಯಲ್ಲಿ ಭಾರೀ ಏರಿಕೆ

katapadi news

ಕಟಪಾಡಿ : ಏಣಗುಡ್ಡೆ ಬ್ರಹ್ಮ ಬೈದೇರುಗಳ ಗರಡಿಯ ನಿಧಿ ಕುಂಭ ಯೋಗನಾಳದಲ್ಲಿ ತೀರ್ಥೋದ್ಭವ!

siddaramaiah

ಸಿದ್ದರಾಮಯ್ಯ, ನಿಮಗೂ 2 ಡೋಸ್ ಲಸಿಕೆ ಸಿಕ್ಕಿದೆಯಲ್ಲವೇ? : ಬಿಜೆಪಿ ಪ್ರಶ್ನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.