ಸಾಧನೆಗೆ ಆತ್ಮವಿಶ್ವಾಸ ಮುಖ್ಯ

ಅರಿವಿಲ್ಲದೆ ಕೆಲವರಿಗೆ ಅವಕಾಶ ಸಿಗುತ್ತಿಲ್ಲ: ಶಾರದಮ್ಮ

Team Udayavani, May 20, 2019, 12:52 PM IST

ಕೋಲಾರ ಸರಕಾರಿ ಕಾಲೇಜಿನಲ್ಲಿ ನಡೆದ 'ಉನ್ನತ ಶಿಕ್ಷಣದ ನಂತರ ಮುಂದೇನು?' ಕಾರ್ಯಾಗಾರವನ್ನು ಕುಪ್ಪಂನ ದ್ರಾವಿಡ ವಿವಿ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಕೆ.ಶಾರದಮ್ಮ ಉದ್ಘಾಟಿಸಿದರು.

ಕೋಲಾರ: ವಿದ್ಯಾರ್ಥಿಗಳಿಗೆ ಉದ್ಯೋಗದ ಜೊತೆಗೆ ಸಾಧನೆ ಮಾಡಲು ಆತ್ಮವಿಶ್ವಾಸ ಬಹಳ ಮುಖ್ಯವಾಗಿದೆ ಎಂದು ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಕೆ.ಶಾರದಮ್ಮ ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಲಾ ವಿಭಾಗದಿಂದ ನಡೆದ ‘ಉನ್ನತ ಶಿಕ್ಷಣದ ನಂತರ ಮುಂದೇನು?’ ಎಂಬ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಪದವಿ ಮತ್ತು ಉನ್ನತ ವಿದ್ಯಾಭ್ಯಾಸ ಮುಗಿಸಿದ ನಂತರ ವಿದ್ಯಾರ್ಥಿಗಳು ಉತ್ತಮ ಜೀವನ ರೂಪಿಸಿಕೊಳ್ಳಲು ಅನೇಕ ಅವಕಾಶಗಳು ಇದ್ದರೂ ಅರಿವಿನ ಕೊರತೆಯಿಂದ ಹಿಂದುಳಿಯುತ್ತಿದ್ದಾರೆ ಎಂದು ವಿಷಾದಿಸಿದರು.

ಮೀರಿ ಬೆಳೆಯಬೇಕು: ಜೀವನೋಪಾಯಕ್ಕಾಗಿ ಓದು ವುದು ಆಗಬಾರದು. ಪ್ರಸ್ತುತ ಓದುವುದಕ್ಕೂ ದುಡಿಯು ವುದಕ್ಕೂ ಸಂಬಂಧವಿಲ್ಲದಂತಾಗಿದೆ. ಜೀವನದಲ್ಲಿ ಸಾಧನೆ ಮಾಡಲು ದೃಢ ಸಂಕಲ್ಪ ಅಗತ್ಯವಾಗಿದೆ. ಎಲ್ಲವನ್ನು ಮೀರಿ ಬೆಳೆದಾಗ ಮಾತ್ರ ಜೀವನದಲ್ಲಿ ಏನಾದರೂ ಮಾಡಲು ಸಾಧ್ಯ ಎಂದು ಹೇಳಿದರು.

ಅನುದಾನ ಬಳಕೆ ಇಲ್ಲ: ಶೂನ್ಯ ಸಂಪಾದನೆಗಳ ಮೇಲೆ ಅಧ್ಯಯನ ಮಾಡಿ ದೇಶ ಮತ್ತು ವಿದೇಶಗಳ ನಡುವಿನ ವ್ಯತ್ಯಾಸಗಳನ್ನು ಸಂಶೋಧ‌ನೆಗಳ ಮೂಲಕ ಅರ್ಥೈಸಿಕೊಳ್ಳಬೇಕು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕ ಮೇಲೆ ಭಾಷೆಗೆ ಅನುದಾನವು ಕೇಂದ್ರದಲ್ಲಿ ಸಾಕಷ್ಟು ಇದ್ದರೂ ಅದನ್ನು ಬಳಸಿಕೊಳ್ಳುತ್ತಿಲ್ಲ ಎಂದು ತಿಳಿಸಿದರು.

ಕನ್ನಡದಲ್ಲೂ ಉನ್ನತ ಮಟ್ಟದ ಸ್ಪರ್ಧೆಗಳನ್ನು ಎದುರಿಸಬಹುದಾಗಿದೆ. ಅನೇಕ ಮಂದಿ ಕನ್ನಡದಲ್ಲಿ ಐಎಎಸ್‌, ಐಪಿಎಸ್‌, ಕೆಎಎಸ್‌, ಕೆಪಿಎಸ್‌ ಮಾಡಬಹುದು. ನಮ್ಮಲ್ಲಿ ದೃಢವಾದ ಸಂಕಲ್ಪ ಹಾಗೂ ಮನಸ್ಸಿರಬೇಕು ಎಂದು ಹೇಳಿದರು. ಸಹ ಪ್ರಾಧ್ಯಾಪಕ ಪ್ರೊ.ರುದ್ರೇಶ್‌ ಅದರಂಗಿ ಮಾತನಾಡಿ, ಯಾವುದೇ ವಿಷಯ ಕಲಿಯಬೇ ಕಾದರೆ ಛಲ ಧೃಡ ಸಂಕಲ್ಪ ಅಗತ್ಯ. ಕೆಲಸ ಮಾಡಲು ಯಾವುದೇ ಕೊರತೆಯಿಲ್ಲ. ಅನೇಕ ಅಧ್ಯಾಯ ನಗಳಿಗೂ ಶಿಷ್ಯ ವೇತನವನ್ನು ನೀಡಲಾಗುವುದು. ಜತೆಗೆ ಜನಪದ, ರಂಗಭೂಮಿ, ಕರಕುಶಲ ಸೇರಿ ಹಲವು ಇಲಾಖೆಗಳಲ್ಲಿ ಅನೇಕ ಯೋಜನೆಗಳು ಇದೆ. ಅವುಗಳನ್ನು ಅರಿಯುವಂತಾದರೆ ಮುಂದಿನ ಹಾದಿ ಸುಗಮವಾಗಲಿದೆ ಎಂದು ವಿವರಿಸಿದರು. ಕಾಲೇಜಿನ ಅಧ್ಯಾಪಕ ಸಿ.ರಮೇಶ್‌ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕನ್ನಡದ ಬಗ್ಗೆ ಕೀಳಿರಿಮೆ ಸಲ್ಲದು. ದಿನೇ ದಿನೆ ಕನ್ನಡದ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿರುವುದು ಅಘಾತಕಾರಿ ಎಂದು ವಿಷಾಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಜೇಂದ್ರ ಕುಮಾರ್‌, ದ್ರಾವಿಡ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ.ಜಯಲಲಿತ, ಸಹಾಯಕ ಪ್ರಾಧ್ಯಪಕಿ ಕೌಸಲ್ಯ ಹಾಜರಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಶ್ರೀನಿವಾಸ ಪುರ: 18 ವರ್ಷ ತುಂಬಿದ ಪ್ರತಿ ವ್ಯಕ್ತಿ ತಮ್ಮ ಮೊಬೈಲ್‌ ಮೂಲಕವೇತ ಮದಾನ ಪಟ್ಟಿಗೆ ನೋಂದಣಿ ಮಾಡಿಕೊಳ್ಳಬಹುದು ಎಂದು ತಾಲೂಕು ಕಾರ್ಯನಿರ್ವಹಣಾಧಿಕಾರಿ...

  • ಮುಳಬಾಗಿಲು: ತಾಲೂಕಿನ ದೇವರಾಯಸಮುದ್ರ ಗ್ರಾಮದಲ್ಲಿ ನಿರ್ಮಿಸುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕಟ್ಟಡ ಕಾಮಗಾರಿ ಅಧಿಕಾರಿಗಳು ಮತ್ತು ಗುತ್ತಿಗೆದಾರನ...

  • ಬೇತಮಂಗಲ: ಗ್ರಾಮ ವಿಕಾಸ ಯೋಜನೆಯಡಿ ಕೈಗೊಂಡಿರುವ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಕಳಪೆಯಾಗಿದೆ ಎಂದು ಕಳ್ಳಿಕುಪ್ಪ ಗ್ರಾಮಸ್ಥರು ಆರೋಪಿಸಿದರು. ಟಿ.ಗೊಲ್ಲಹಳ್ಳಿ...

  • ಕೋಲಾರ: ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಜಿಲ್ಲಾದ್ಯಂತ ನರೇಗಾ ಪ್ರಚಾರ ಯೋಜನೆಯ ರೋಜ್‌ಗಾರ್‌ ವಾಹಿನಿ ಸಂಚರಿಸಲಿದೆ ಎಂದು ಜಿಪಂ...

  • ● ಎಂ.ಸಿ.ಮಂಜುನಾಥ್‌ ಬಂಗಾರಪೇಟೆ: ಆಧುನಿಕತೆ ಮುಂದುವರಿದಂತೆ ಗ್ರಾಮೀಣ ಭಾಗದಲ್ಲಿದ್ದ ಕೆಲವು ಪದ್ಧತಿಗಳು ನಿಧನವಾಗಿ ನೇಪತ್ಯಕ್ಕೆ ಸರಿಯುತ್ತಿವೆ. ಅದರಲ್ಲಿ...

ಹೊಸ ಸೇರ್ಪಡೆ