ಸರ್ಕಾರಿ ಪ್ರೌಢಶಾಲೆಯಲಿ ಕಾನ್ವೆಂಟ್‌ ಆಡಳಿತ

Team Udayavani, May 24, 2022, 6:02 PM IST

ಸರ್ಕಾರಿ ಪ್ರೌಢಶಾಲೆಯಲಿ ಕಾನ್ವೆಂಟ್‌ ಆಡಳಿತ

ಮುಳಬಾಗಿಲು: ಇನ್ಫೋಸಿಸ್‌ ಪ್ರತಿಷ್ಠಾನ ಸುಮಾರು 2 ಕೋಟಿ ವೆಚ್ಚದಲ್ಲಿ ನಂಗಲಿ ಗ್ರಾಮದ ಶ್ರೀ ವರಸಿದ್ಧಿ ವಿನಾಯಕ ಅನುದಾನಿತ ಪ್ರೌಢಶಾಲೆ ನಿರ್ಮಿಸಿಕೊಟ್ಟಿದೆ. ಈ ಕಟ್ಟಡದಲ್ಲಿ 3 ವರ್ಷಗಳಿಂದ ನಡೆಯು ತ್ತಿರುವ ಆಂಗ್ಲ ಮಾಧ್ಯಮ ಶಾಲೆ (ಕಾನ್ವೆಂಟ್‌ ಶಾಲೆ) ಅಧಿಕೃತವೋ ? ಅಥವಾ ಅನಧೀಕೃತವೋ? ಎಂಬುದು ತಿಳಿಯದಾಗಿದೆ. ಇದರಿಂದ ಶಿಕ್ಷಣಇಲಾಖೆ ಅಧಿಕಾರಿಗಳು ಶಾಲೆಗೆ ನೋಟಿಸ್‌ ನೀಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

1962ರಲ್ಲಿ ನಂಗಲಿಯಲ್ಲಿ ಖಾಸಗಿ ಆಡಳಿತ ಮಂಡಳಿ ಯೊಂದು ಶ್ರೀ ವರಸಿದ್ಧಿ ವಿನಾಯಕ ಪ್ರೌಢ ಶಾಲೆಯನ್ನು ಪ್ರಾರಂಭಿಸಿದ್ದು, ಶಾಲೆಯಲ್ಲಿ 8, 9 ಮತ್ತು 10ನೇ ತರಗತಿ 200ಕ್ಕೂ ಹೆಚ್ಚು ಮಂದಿ ಓದುತ್ತಿದ್ದಾರೆ. ಇದು ಸರ್ಕಾರಿ ಅನುದಾನಿತ ಶಾಲೆಯಾಗಿದ್ದು,ಇನ್ಫೋಸಿಸ್‌ ಪ್ರತಿಷ್ಠಾನ ಸುಮಾರು 2 ಕೋಟಿ ವೆಚ್ಚದಲ್ಲಿಗುಣಮಟ್ಟದ 10 ಶಾಲಾ ಕೊಠಡಿಗಳು,ಬಾಲಕರು-ಬಾಲಕಿಯರಿಗೆ ತಲಾ ಒಂದು ಪ್ರತ್ಯೇಕಶೌಚಾಲಯ, ಶಿಕ್ಷಕ ಶಿಕ್ಷಕಿಯರಿಗೆ ತಲಾ ಒಂದುಶೌಚಾಲಯ ಸೈಕಲ್‌ ನಿಲ್ದಾಣ, ನೀರಿನ ಶುದ್ಧೀಕರಣ ಘಟಕ ಸ್ಥಾಪಿಸಿ ಸೌಕರ್ಯ ಕಲ್ಪಿಸಿದ್ದಾರೆ.

ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಕಂಪ್ಯೂಟರ್‌ ಶಿಕ್ಷಣ ನೀಡುವ ಉದ್ದೇಶದಿಂದ 35 ಕಂಪ್ಯೂಟರ್‌ಗಳನ್ನುಸಹ ಇನ್ಫೋಸಿಸ್‌ ನಿಂದ ನೀಡಲಾಗಿದೆ. ಕಂಪ್ಯೂಟರ್‌ಗಳನ್ನು ಇದುವರೆಗೂ ಶಾಲೆಯಲ್ಲಿ ಅಳವಡಿಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿಲ್ಲ.

ಶಾಲೆ ಐದು ಕೊಠಡಿಗಳಲ್ಲಿ ಕಾನ್ವೆಂಟ್‌: ಇನ್ಫೋಸಿಸ್‌ಪ್ರತಿಷ್ಠಾನವು ಶಾಲಾ ಆವರಣದಲ್ಲಿ ನಿರ್ಮಿಸಿರುವ 10ಕೊಠಡಿಗಳ ಪೈಕಿ ಮೇಲಿನ ಅಂತಸ್ತಿನಲ್ಲಿರುವ ಐದುಕೊಠಡಿಗಳಲ್ಲಿ ಮಾತ್ರ ಪ್ರೌಢ ಶಾಲೆ ವಿದ್ಯಾರ್ಥಿಗಳುವ್ಯಾಸಾಂಗ ಮಾಡುತ್ತಿದ್ದು, ಇವು ಮಾತ್ರ ಮುಖ್ಯಶಿಕ್ಷಕರ ವಶದಲ್ಲಿದೆ. ಆದರೆ, ಕೆಳ ಭಾಗದ 5ಕೊಠಡಿಗಳಲ್ಲಿ 2019ರ ಸಾಲಿನಿಂದ ಆಂಗ್ಲ ಮಾದ್ಯಮ(ಕಾನ್ವೆಂಟ್‌) ಶಾಲೆಯನ್ನು ಆಗಿನ ಪ್ರೌಢ ಶಾಲೆ ಮುಖ್ಯ ಶಿಕ್ಷಕ ಮಧುಸೂದನ್‌ ಪ್ರಾರಂಭಿಸಿದ್ದಾರೆ. ಅವರು 2020ರ ಅಕ್ಟೋಬರ್‌ನಲ್ಲಿ ನಿವೃತ್ತಿಯಾಗಿದ್ದಾರೆ.

ಇನ್ಫೋಸಿಸ್‌ ನಿರ್ಮಿಸಿರುವ 5 ಕೊಠಡಿಗಳನ್ನುಮುಖ್ಯ ಶಿಕ್ಷಕ ಮಧುಸೂದನ್‌ ನಿವೃತ್ತಿಯಾದರೂ ಪ್ರೌಢ ಶಾಲೆಗೆ ನೀಡದೇ ತಮ್ಮ ವಶದಲ್ಲಿ ಕಾನ್ವೆಂಟ್‌ ನಡೆಸುತ್ತಿದ್ದು, ಕಳೆದ ವರ್ಷ ಸುಮಾರು 70-80ಮಕ್ಕಳು ವ್ಯಾಸಾಂಗ ಮಾಡುತ್ತಿದ್ದರು, ಆದರೆ ಪ್ರಸಕ್ತಸಾಲಿನಲ್ಲಿ ಇನ್ನು ಕಾನ್ವೆಂಟ್‌ ಶಾಲೆ ಆರಂಭವಾಗಿಲ್ಲ.ಈ ಕುರಿತು ಕ್ಷೇತ್ರ ಸಮನ್ವಯಾಧಿಕಾರಿಪಿ.ಸೋಮೇಶ್‌ ಅನುದಾನಿತ ಪ್ರೌಢಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರೌಢ ಶಾಲೆಯ 5 ಕೊಠಡಿಗಳಲ್ಲಿ ಕಾನ್ವೆಂಟ್‌ ಶಾಲೆನಡೆಸುತ್ತಿರುವ ಕುರಿತು ಮುಖ್ಯ ಶಿಕ್ಷಕ ಶ್ರೀನಿವಾಸ್‌ಗೆ ದಾಖಲೆ ಕೇಳಿದಾಗ ಈ ಕುರಿತು ದಾಖಲೆಗಳು ಲಭ್ಯವಿಲ್ಲ ಎಂದು ತಿಳಿಸಿದ್ದು, ಕ್ಷೇತ್ರ ಸಮನ್ವಯಾಧಿಕಾರಿಗಳು, ಮುಖ್ಯ ಶಿಕ್ಷಕರಿಗೆ ನೋಟಿಸ್‌ ಜಾರಿ ಮಾಡಿದ್ದಾರೆ. ಕಾನ್ವೆಂಟ್‌ ಶಾಲೆಗೆಸರ್ಕಾರ ಅನುಮತಿ ನೀಡಿದೆಯೇ ? ಇನ್ಫೋಸಿಸ್‌ಅನುಮತಿ ನೀಡಿದೆಯೇ ? ಈ ಕುರಿತಾದ ಮಾಹಿ ತಿ ಯನ್ನು 7 ದಿನಗಳ ಒಳಗಾಗಿ ಬಿಇಒ ಕಚೇರಿಗೆಸಲ್ಲಿಸಲು ಸೂಚಿಸಿದ್ದರು, ಆದರೆ ಇದುವರೆಗೂ ಬಿಇಒ ಕಚೇರಿಗೆ ಮಾಹಿತಿ ನೀಡಿಲ್ಲ.

ನಂಗಲಿ ಶ್ರೀ ವರಸಿದ್ಧಿ ವಿನಾಯಕ ಅನುದಾನಿತ ಪ್ರೌಢಶಾಲೆಯಲ್ಲಿಕಾನ್ವೆಂಟ್‌ ಪ್ರಾರಂಭ ಕುರಿತಂತೆ 7 ದಿನಗಳಒಳಗಾಗಿ ಸಲ್ಲಿಸುವಂತೆ ಸೂಚಿಸಿದ್ದರೂಇದುವರೆಗೂ ಮಾಹಿತಿ ನೀಡದೇಇರುವುದರಿಂದ ಕ್ರಮವಹಿಸಲುಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು. – ಪಿ.ಸೋಮೇಶ್‌, ಕ್ಷೇತ್ರ ಸಮನ್ವಯಾಧಿಕಾರಿ ಮುಳಬಾಗಿಲು

ಕ್ಷೇತ್ರ ಸಮನ್ವಯಾಧಿಕಾರಿಗಳು ನಮಗೆ ನೀಡಿರುವ ನೋಟಿಸ್‌ಗೆ ಮಾಹಿತಿ ಒದಗಿಸಲು ಅಗತ್ಯವುಳ್ಳ ದಾಖಲೆಗಳನ್ನು ನೀಡುವಂತೆ ನಮ್ಮ ಶಾಲೆಯ ಆಡಳಿತ ಮಂಡಳಿಗೆ ಕೇಳಿದ್ದೇನೆ.ಆದರೆ. ಅವರು ಇದುವರೆಗೂ ದಾಖಲೆಗಳನ್ನು ನೀಡಿಲ್ಲ -ಎನ್‌.ಎಲ್‌.ಶ್ರೀನಿವಾಸ್‌, ಮುಖ್ಯಶಿಕ್ಷಕ, ಶ್ರೀ ವರಸಿದ್ದಿ ವಿನಾಯಕ ಅನುದಾನಿತ ಪ್ರೌಢಶಾಲೆ

ಕಾನ್ವೆಂಟ್‌ ನಡೆಸುತ್ತಿರುವ ಕುರಿತು ನಮಗೆ ಮಾಹಿತಿ ಇಲ್ಲ. ಕ್ಷೇತ್ರ ಸಮನ್ವಯಾಧಿಕಾರಿ ಪಿ. ಸೋಮೇಶ್‌ರೊಂದಿಗೆ ಚರ್ಚಿಸಿ ಮತ್ತೂಮ್ಮೆ ಶಾಲೆಗೆ ಭೇಟಿ ನೀಡಿ ಪರಿಶೀಲಿಸಲಾಗುವುದು. – ಚಂದ್ರಶೇಖರ್‌, ಕ್ಷೇತ್ರ ಶಿಕ್ಷಣಾಧಿಕಾರಿ

– ಎಂ.ನಾಗರಾಜಯ್ಯ

ಟಾಪ್ ನ್ಯೂಸ್

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

Kolar; ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

DR SUDHA

Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್‌

jameer

H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.