150 ಮಂದಿ ಅಂತ್ಯ ಸಂಸ್ಕಾರ ಮಾಡಿ ಮಾನವೀಯತೆ


Team Udayavani, Jun 14, 2021, 8:30 PM IST

covid news

 ಕೆಜಿಎಫ್: ಕೊರೊನಾ ಸೋಂಕಿನಿಂದ ಮೃತಪಟ್ಟ150 ಮೃತದೇಹಗಳ ಅಂತ್ಯ ಸಂಸ್ಕಾರ ಮಾಡುವಮೂಲಕ ಆ್ಯಂಬುಲೆನ್ಸ್‌ ಚಾಲಕ ದಿನೇಶ್‌ ಮತ್ತುಸಂಗಡಿಗರು ಮಾನವೀಯತೆ ಮೆರೆದಿದ್ದಾರೆ.ಕೋವಿಡ್‌ ಎರಡನೇ ಅಲೆ ಭೀತಿಯನ್ನುಸೃಷ್ಟಿಸಿತ್ತು. ಕಣ್ಣ ಮುಂದೆಯೇ ನಿನ್ನೆ ಇದ್ದವರು ಇಂದು ಇಲ್ಲ ಎಂಬ ರೀತಿಯಲ್ಲಿ ಸಾವನ್ನಪ್ಪುತ್ತಿದ್ದರು.ಆಸ್ಪತ್ರೆಗೆ ಬಂದರೆ ಸಾವು ಬರುವುದು ಶತಸಿದ್ಧ ಎಂಬಭಾವನೆ ಸೋಂಕಿತರಲ್ಲಿ ಮೂಡಿತ್ತು.

ಕೋವಿಡ್‌ನಿಂದ ಮೃತಪಡುವವರ ಸಂಖ್ಯೆ ದಿನೇ ದಿನೆಹೆಚ್ಚುತ್ತಿತ್ತು.ಸರ್ಕಾರದ ಮಾರ್ಗಸೂಚಿಯಂತೆ ಮೃತದೇಹದ ಅಂತ್ಯಸಂಸ್ಕಾರ ನಡೆಸಬೇಕಿತ್ತು. ಕೋವಿಡ್‌ಕೇರ್‌ ಸೆಂಟರ್‌ನಲ್ಲಿ ಹೋಗಲು ವೈದ್ಯರು ಕೂಡಹಿಂದೇಟು ಹಾಕುತ್ತಿದ್ದರು. ನರ್ಸ್‌ಗಳಿಗೆ ಎಲ್ಲಾಆರೈಕೆಯ ಜವಾಬ್ದಾರಿ ನೀಡುತ್ತಿದ್ದರು.

ಈ ವೇಳೆಸಂದರ್ಭದಲ್ಲಿ ಕೇರ್‌ ಸೆಂಟರ್‌ನಲ್ಲಿ ಮೃತಪಟ್ಟವರನ್ನು ಶವಗಾರಕ್ಕೆ ತೆಗೆದುಕೊಂಡು ಹೋಗಿ, ಅಲ್ಲಿ ಮಾರ್ಗಸೂಚಿಯಂತೆ ಬಟ್ಟೆ ಸುತ್ತುವಜವಾಬ್ದಾರಿಯನ್ನು ದಿನೇಶ್‌ ಮತ್ತು ಸಂಗಡಿಗರುನಡೆಸುತ್ತಿದ್ದರು.ಮತ್ತೂಂದು ತಂಡ ಸಿದ್ಧ: ಇಲ್ಲಿನ ಆಸ್ಪತ್ರೆಯಲ್ಲಿದಾಖಲಾದ ಸೋಂಕಿತರಿಗೆ ರೋಗ ಉಲ½ಣಗೊಂಡಾಗ ಅವರನ್ನು ಕೋಲಾರ ಇಲ್ಲವೇ ಬೆಂಗಳೂರಿಗೆ ಕರೆದುಕೊಂಡು ಹೋಗಬೇಕಿತ್ತು.

ಮಾರ್ಗಮಧ್ಯದಲ್ಲಿ ಮೃತಪಟ್ಟವರನ್ನು ಪುನಃವಾಪಸ್‌ ಕರೆದುಕೊಂಡು ಬರಬೇಕಿತ್ತು. ಪ್ರತಿದಿನಕೋವಿಡ್‌, ಇತರೆ ಕಾಯಿಲೆಯಿಂದ ಮೃತಪಟ್ಟವರಸಂಖ್ಯೆ 10 ಮೀರುತ್ತಿತ್ತು. ಆಗ ಹಗಲು ರಾತ್ರಿ ಎನ್ನದೆಈ ತಂಡ ಕಾರ್ಯೋನ್ಮುಖರಾಗುತ್ತಿತ್ತು. ಮತ್ತೂಂದುತಂಡ ಸ್ಮಶಾನದಲ್ಲಿಯೇ ಜೆಸಿಬಿ ಸಿದ್ಧ ಮಾಡಿಕೊಂಡು, ಸಂದೇಶ ಬಂದ ತಕ್ಷಣ ಹಳ್ಳ ತೋಡಿ,ಶವದ ಅಂತ್ಯಸಂಸ್ಕಾರಕ್ಕೆ ಅನುವು ಮಾಡಿಕೊಡುತ್ತಿತ್ತು.

ಭಯ ಎಂದೂ ಬರಲಿಲ್ಲ: ಕೆಜಿಎಫ್ ನಗರದಸಾವಿನ ಜೊತೆಗೆ ಬಂಗಾರಪೇಟೆ, ಮಾಲೂರುಮತ್ತು ರಾಜಪೇಟೆ ರೋಡ್‌ವರೆಗೂ ಸಂಚರಿಸಿ,ಕೋವಿಡ್‌ ಮೃತರ ಅಂತ್ಯಸಂಸ್ಕಾರ ಮಾಡಿದಪುಣ್ಯವನ್ನು ಈ ತಂಡ ಕಟ್ಟಿಕೊಂಡಿದೆ. ನನಗೆಕೋವಿಡ್‌ ಮೃತರನ್ನು ಸಾಗಿಸಲು ಭಯ ಎಂದೂಬರಲಿಲ್ಲ. ಜೊತೆಗೆ ನನಗೆ ಉತ್ತಮ ಜೊತೆಗಾರರುಸಿಕ್ಕಿದರು. ಅವರ ಸಹಕಾರದಿಂದ ಯಾವ ಕೋವಿಡ್‌ಮೃತರ ಕುಟುಂಬದವರಿಗೂ ತೊಂದರೆಯಾಗದಂತೆಕಾರ್ಯನಿರ್ವಹಿಸಲಾಯಿತು ಎಂದು ತಂಡದ ಪ್ರಮುಖ ದಿನೇಶ್‌ ಹೇಳುತ್ತಾರೆ.

ಬೆಮಲ್‌ ಸಂಸ್ಥೆ ಶವಸಾಗಿಸುವ ವಾಹನವನ್ನುನಮಗೆ ನೀಡಿತು. ಇದರಿಂದಾಗಿ ಎರಡು ಶವಗಳನ್ನುಒಟ್ಟೊಟ್ಟಿಗೆ ತೆಗೆದುಕೊಂಡು ಹೋಗಲುಸಾಧ್ಯವಾಯಿತು ಎಂದು ಅವರು ಹೇಳಿದರು.ಸಂಘ ಸಂಸ್ಥೆಗಳಿಂದ ಗೌರವ: ತಂಡದ ಸದಸ್ಯರಾದರಾಮಬಾಬು, ಅಪ್ಪು, ಜಯರಾಜ್‌, ನಾಗಮ್ಮ,ಜೆಸಿಬಿ ಚಾಲಕ ಪರಮೇಶ್‌ ಮತ್ತು ಮುನಿಸ್ವಾಮಿಎಲ್ಲರೂ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ.ಅವರ ಕಾರ್ಯನಿರ್ವಹಣೆ ನಗರದ ಜನತೆಯಮೆಚ್ಚುಗೆಗೆ ಪಾತ್ರವಾಗಿದ್ದು, ಹಲವಾರು ಸಂಘಸಂಸ್ಥೆಗಳು ಅವರಿಗೆ ಸನ್ಮಾನ ಮಾಡಿ ಋಣ ತೀರಿಸಿಕೊಳ್ಳುತ್ತಿದ್ದಾರೆ.

ಬಿ.ಆರ್‌.ಗೋಪಿನಾಥ್‌

ಟಾಪ್ ನ್ಯೂಸ್

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

Kolar; ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

DR SUDHA

Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್‌

jameer

H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.