ನರಸಾಪುರದಲ್ಲಿ ಮೊದಲನೇ ಬಾರಿಗೆ ಕೋವಿಡ್ ಲಸಿಕೆಗೆ ಚಾಲನೆ
Team Udayavani, Mar 13, 2021, 1:42 PM IST
ಕೋಲಾರ: ತಾಲೂಕಿನ ನರಸಾಪುರ ಗ್ರಾಮದಲ್ಲಿ ಮೊದಲನೇ ಬಾರಿಗೆ ಕೋವಿಡ್-19 ಲಸಿಕೆ ಕಾರ್ಯಕ್ರಮ ನಡೆಯಿತು. ತಾಲೂಕಿನ ನರಸಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 30ಕ್ಕೂ ಹೆಚ್ಚು ಜನ ಲಸಿಕೆ ಪಡೆದರು.
ಇದೇ ವೇಳೆ ತಾಲೂಕು ವೈದ್ಯಾಧಿಕಾರಿಗಳಾದ ಡಾ.ರಮ್ಯ ದೀಪಿಕಾ ಮಾತನಾಡಿ, ಕೋವಿಡ್-19 ಲಸಿಕೆಯನ್ನು 45ವರ್ಷ ಮೇಲ್ಪಟ್ಟವರು ಮತ್ತು 60ವರ್ಷ ಮೇಲ್ಪಟ್ಟವರುಹಾಗೂ ಅನಾರೋಗ್ಯಕ್ಕೆ ಒಳಪಟ್ಟವರು ಪಡೆದುಕೊಂಡರು.ಮುಂದಿನ ವಾರದಿಂದ 3ದಿನ ಮಾತ್ರ ಕೋವಿಡ್-19ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಅಂದರೆಸೋಮವಾರ, ಮಂಗಳವಾರ ಮತ್ತು ಬುಧವಾರ ಮಾತ್ರ ಲಸಿಕೆ ನೀಡಲಾಗುತ್ತದೆ. ಬಿಪಿ, ಸಕ್ಕರೆ ಕಾಯಿಲೆ, ಹೃದಯಕ್ಕೆಸಂಬಂಧಿಸಿದ ಕಾಯಿಲೆ, ಕಿಡ್ನಿ ವೈಫಲ್ಯ, ಹಾಗೂ ಇನ್ನಿತರೆ ಕಾಯಿಲೆ ಇರುವವರು ಸ್ವಯಂ ಪ್ರೇರಿತವಾಗಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಪ್ಪದೆ ಲಸಿಕೆ ಪಡೆದುಕೊಳ್ಳಬೇಕೆಂದರು.
ಲಸಿಕೆ ಪಡೆದು ಕೊಳ್ಳಲು ಬರುವವರು ತಪ್ಪದೇ ಆಧಾರ್ ಕಾರ್ಡ್, ರೇಷನ್ ಕಾರ್ಡ್ ತೆಗೆದುಕೊಂಡು ಬರಬೇಕು ಎಂದು ತಿಳಿಸಿದರು. ಈ ಲಸಿಕೆಯಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ. ಯಾವುದೇ ಶುಲ್ಕವಿಲ್ಲ ಉಚಿತ ಹಾಗೂ ಸುರಕ್ಷಿತ. ಈ ಸಂದೇಶಗಳನ್ನು ಪೋಷಕರಿಗೆ ಹಾಗೂ ಹಿರಿಯ ನಾಗರಿಕರಿಗೆ ತಲುಪಿಸಲು ಆಶಾ ಕಾರ್ಯಕರ್ತೆಯರಿಗೆ, ಸಿಬ್ಬಂದಿಗೆ ತಿಳಿಸಿಕೊಟ್ಟರು.
ನರಸಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಫಾತಿಮಾ. ತಾಲೂಕು ವೈದ್ಯಾಧಿಕಾರಿ ರಮ್ಯಾ ದೀಪಿಕಾ. ಕೋಲಾರ ತಾಲೂಕು ಉಪ ಅರೋಗ್ಯ ಶಿಕ್ಷಣಾಧಿಕಾರಿ ಸಿ.ಗೀತಾ, ರೇಣುಕಾ. ನರಸಾಪುರ ಗ್ರಾಪಂ ನೂತನ ಸದಸ್ಯರಾದ ಕೆಇಬಿ ಚಂದ್ರು,ಟಿ.ಮಂಜುನಾಥ್, ಮಾಜಿ ಅಧ್ಯಕ್ಷರಾದ ಬಸವರಾಜ್, ಆಸ್ಪತ್ರೆ ಸಿಬ್ಬಂದಿ, ಗ್ರಾಪಂ ಸದಸ್ಯರು ಇದ್ದರು.