Udayavni Special

ಡಿಸಿಸಿ ಬ್ಯಾಂಕ್‌ನಲ್ಲೇ ಠೇವಣಿ ಇಡಿ

Team Udayavani, Nov 12, 2020, 8:55 PM IST

ಡಿಸಿಸಿ ಬ್ಯಾಂಕ್‌ನಲ್ಲೇ ಠೇವಣಿ ಇಡಿ

ಕೋಲಾರ: ತಾಯಂದಿರು ಸಾಲ ಮರುಪಾವತಿಯಲ್ಲಿ ತೋರುತ್ತಿರುವ ಪ್ರಾಮಾಣಿಕತೆಯಿಂದಲೇ ಡಿಸಿಸಿ ಬ್ಯಾಂಕ್‌ ರಾಜ್ಯಮಟ್ಟದ ಗೌರವಕ್ಕೆ ಪಾತ್ರವಾಗಿದ್ದು, ಮಹಿಳೆಯರು ತಮ್ಮ ಉಳಿತಾಯ ಹಣವನ್ನು ಇಲ್ಲೇ ಠೇವಣಿ ಇಡುವ ಮೂಲಕ ಮತ್ತಷ್ಟು ಶಕ್ತಿ ತುಂಬಬೇಕು ಎಂದು ಶಾಸಕ ಕೆ.ಶ್ರೀನಿವಾಸಗೌಡ ತಿಳಿಸಿದರು.

ತಾಲೂಕಿನಕ್ಯಾಲನೂರು ರೇಷ್ಮೆಬೆಳೆಗಾರರ ಹಾಗೂ ರೈತ ಸೇವಾ ಸಹಕಾರದಿಂದ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಾಲ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ, ಸಾಲ ವಿತರಿಸಿ ಮಾತನಾಡಿದರು. ಡಿಸಿಸಿ ಬ್ಯಾಂಕಿನಲ್ಲಿ ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ಸಾಲ ಸಿಗುತ್ತದೆ, ಇದಕ್ಕೆ ಅವರಲ್ಲಿನ ಪ್ರಾಮಾಣಿಕತೆ, ಸಾಲ ಪಡೆಯಲು ತೋರುವ ಉತ್ಸಾಹವನ್ನೇ ಸಾಲ ಮರುಪಾವತಿಯಲ್ಲಿ ತೋರುತ್ತಿರುವುದರಿಂದ ಬ್ಯಾಂಕ್‌ ಉನ್ನತಿ ಸಾಸಲುಕಾರಣ ಎಂದರು. ತಾಯಂದಿರೇ ಶಕ್ತಿ: ಅಧ್ಯಕ್ಷತೆ ವಹಿಸಿದ್ದ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಬ್ಯಾಂಕನ್ನು ದೇವಾಲಯ ಎಂದು ತಿಳಿದು ಅತ್ಯಂತ ಪ್ರಾಮಾಣಿಕತೆಯಿಂದ ನಡೆದುಕೊಳ್ಳುತ್ತಿರುವ ಮಹಿಳೆಯರೇ ಬ್ಯಾಂಕಿಗೆ ಶಕ್ತಿಯಾಗಿದ್ದಾರೆ ಎಂದರು.

ಮಹಿಳೆಯರಿಗೆ ಅತಿ ಹೆಚ್ಚು ಸಾಲ ನೀಡಿದ ರಾಜ್ಯದ ಮೊದಲ ಬ್ಯಾಂಕ್‌ ನಮ್ಮದಾಗಿದೆ. ಇದಕ್ಕೆ ನಿಮ್ಮಲ್ಲಿನ ಸಾಲ ಮರು ಪಾವತಿಯಲ್ಲಿನ ಕಾಳಜಿಯೇ ಕಾರಣ. ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಿನ ಸಾಲ ನೀಡುವ ಆಶಯತನಗಿದೆ. ನೀವು ನಿಮ್ಮ ಉಳಿತಾಯವನ್ನು ಡಿಸಿಸಿ ಬ್ಯಾಂಕಿನಲ್ಲೇ ಇಟ್ಟು ಶಕ್ತಿ ತುಂಬಿದರೆ ಅದರಿಂದ ನಿಮಗೆ ಪ್ರಯೋಜನವಾಗಲಿದೆ. ಸತ್ತು ಹೋಗಿದ್ದ ಬ್ಯಾಂಕಿಗೆ ಮರು ಜೀವ ನೀಡಿ ಇಷ್ಟು ಎತ್ತರಕ್ಕೆ ತಂದಿದ್ದೇವೆ. ಈ ಗೌರವ ಉಳಿಯಲು ಹಗಲಿರಳು ಶ್ರಮಿಸುತ್ತಿದ್ದೇವೆ. ಮಹಿಳೆಯರು ನಮ್ಮ ಈ ಕಾರ್ಯಕ್ಕೆ ಕೈಜೋಡಿಸಿ ಎಂದು ಮನವಿ ಮಾಡಿದರು. ಬ್ಯಾಂಕ್‌ ನಿರ್ದೇಶಕ ನಾಗನಾಳ ಸೋಮಣ್ಣ, ಕಳೆದ 10 ವರ್ಷಗಳ ಹಿಂದೆತಾನು ಜಿಪಂ ಸದಸ್ಯನಾಗಿದ್ದಾಗ ಮಾಡಿದ್ದ ಅಭಿವೃದ್ಧಿ ಬಿಟ್ಟರೆ ನಂತರ ಏನೂ ಸಾಧನೆಯಾಗಿಲ್ಲ. ಇದೀಗ ಶಾಸಕರು ಮನಸು ಮಾಡಿದ್ದಾರೆ. ಕೋವಿಡ್‌ ನಡುವೆಯೂ ಅಭಿವೃದ್ಧಿಗೆ ಶ್ರೀಕಾರ ಹಾಕಿದ್ದಾರೆ ಎಂದರು.

ಡಿಸಿಸಿ ಬ್ಯಾಂಕ್‌ ಸಂಕಷ್ಟದಲ್ಲಿದ್ದಾಗ ಕೈಹಿಡಿಯದವರು ಈಗ ಏನೇನೋ ಮಾತನಾಡುತ್ತಾರೆ. ಆಗ ಮಹಿಳೆಯರು, ರೈತರು ಶೂನ್ಯಬಡ್ಡಿ,ಕಡಿಮೆ ಬಡ್ಡಿ ಸಾಲ, ಸಾಲ ಮನ್ನಾ ಸೌಲಭ್ಯದಿಂದ ವಂಚಿತರಾದಾಗ ಇವರೆಲ್ಲಿಗೆ ಹೋಗಿದ್ದರು ಎಂದು ಪ್ರಶ್ನಿಸಿದರು.

ನಮ್ಮ ಮಂಡಳಿ ಕಾರಣ: ನಿರ್ದೇಶಕ ಕೆ.ವಿ.ದಯಾನಂದ್‌, ಸೊಸೈಟಿ ಗಳು ದಿವಾಳಿಯಾಗಿ ಪಡಿತರ ವಿತರಣೆಗೆ ಸೀಮಿತವಾಗಿ ದ್ದವು. ಆದರೆ ಇಂದು ಒಂ ದೊಂದು ಸೊಸೈಟಿ 20 ಕೋಟಿಗೂ ಅಧಿಕ ಸಾಲ ವಿತರಿಸುವ ಶಕ್ತಿ ಪಡೆದುಕೊಂಡಿದೆ. ಇದಕ್ಕೆ ನಮ್ಮ ಆಡಳಿತ ಮಂಡಳಿಯೇಕಾರಣ ಎಂದರು.

ಸೊಸೈಟಿಆಡಳಿತಮಂಡಳಿ ಕೇವಲ ಸಾಲಕ್ಕೆ ಬ್ಯಾಂಕಿಗೆಬಾರದಿರಿ.ನಿಮ್ಮಎಲ್ಲಾನಿರ್ದೇಶಕರ ಉಳಿತಾಯ ಖಾತೆ ಡಿಸಿಸಿ ಬ್ಯಾಂಕಿನಲ್ಲೇ ತೆರೆಯಿರಿ.ಇಲ್ಲವಾದಲ್ಲಿಮುಂದಿನದಿನಗಳಲ್ಲಿ ಸಾಲ ಸಿಗೋದಿಲ್ಲ ಎಂದು ಎಚ್ಚರಿಸಿದರು. ಕ್ಯಾಲನೂರು ಎಸ್‌ಎಫ್‌ಸಿಎಸ್‌ ಅಧ್ಯಕ್ಷ ರಾಮಾಂಜಿನಪ್ಪ, ನಿರ್ದೇಶಕರಾದಆಂಜಿನಪ್ಪ, ಪ್ರಕಾಶ್‌, ವೆಂಕಟೇಶ್‌, ಈರಪ್ಪ, ಚನ್ನಸಂದ್ರ ಪಿಳ್ಳಪ್ಪ, ಮುನೇಗೌಡ, ಕಸಬಾ ಸೊಸೈಟಿ ಅಧ್ಯಕ್ಷ ಚೋಳಘಟ್ಟ ಶ್ರೀನಿವಾಸಪ್ಪ, ಸೊಸೈಟಿ ಸಿಇಒ ನವೀನ್‌ ಮತ್ತಿತರರಿದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ರಾಜ್ಯದಲ್ಲಿ ನೈಟ್ ಕರ್ಫ್ಯೂ ಮಾಡಲ್ಲ, ಆದರೆ ಕಠಿಣ ಕ್ರಮಗಳ ಜಾರಿ: ಸಚಿವ ಸುಧಾಕರ್

ರಾಜ್ಯದಲ್ಲಿ ನೈಟ್ ಕರ್ಫ್ಯೂ ಮಾಡಲ್ಲ, ಆದರೆ ಕಠಿಣ ಕ್ರಮಗಳ ಜಾರಿ: ಸಚಿವ ಸುಧಾಕರ್

ಆರ್ಥಿಕ ಉತ್ತೇಜನಕ್ಕೆ ಹೆಚ್ಚಿನ ಆದ್ಯತೆ: ರೆಪೋ ದರ ಯಥಾಸ್ಥಿತಿಗೆ ಆರ್ ಬಿಐ ನಿರ್ಧಾರ

ಆರ್ಥಿಕ ಉತ್ತೇಜನಕ್ಕೆ ಹೆಚ್ಚಿನ ಆದ್ಯತೆ: ರೆಪೋ ದರ ಯಥಾಸ್ಥಿತಿಗೆ ಆರ್ ಬಿಐ ನಿರ್ಧಾರ

ಶಿವಮೊಗ್ಗ ಗಲಭೆ ಪ್ರಕರಣ: 62 ಜನರ ಬಂಧನ, ಡಿ.5ರವರೆಗೆ ಕರ್ಫ್ಯೂ ಮುಂದುವರಿಕೆ

ಶಿವಮೊಗ್ಗ ಗಲಭೆ ಪ್ರಕರಣ: 62 ಜನರ ಬಂಧನ, ಡಿ.5ರವರೆಗೆ ಕರ್ಫ್ಯೂ ಮುಂದುವರಿಕೆ

ಐಪಿಎಲ್‌ಗೆ ಇನ್ನೆರಡು ತಂಡಗಳ ಸೇರ್ಪಡೆ: ಇಬ್ಬರು ಉದ್ಯಮಿಗಳ ಆಸಕ್ತಿ

ಐಪಿಎಲ್‌ಗೆ ಇನ್ನೆರಡು ತಂಡಗಳ ಸೇರ್ಪಡೆ: ಇಬ್ಬರು ಉದ್ಯಮಿಗಳ ಆಸಕ್ತಿ

ಸಂಸದರೇ ನಿಮ್ಮ ಸಾಧನೆ ಏನು? ಪ್ರತಾಪ ಸಿಂಹಗೆ ಶಾಸಕ ಎಚ್.ಪಿ.ಮಂಜುನಾಥ್ ಪ್ರಶ್ನೆ

ಸಂಸದರೇ ನಿಮ್ಮ ಸಾಧನೆ ಏನು? ಪ್ರತಾಪ ಸಿಂಹಗೆ ಶಾಸಕ ಎಚ್.ಪಿ.ಮಂಜುನಾಥ್ ಪ್ರಶ್ನೆ

ಹಳೇ ಹುಬ್ಬಳ್ಳಿಯ ಬೈಪಾಸ್ ಬಳಿ ಯುವಕನ ಕೊಲೆ: ಹಣಕಾಸು ವೈಷಮ್ಯ ಶಂಕೆ

ಹಳೇ ಹುಬ್ಬಳ್ಳಿಯ ಬೈಪಾಸ್ ಬಳಿ ಯುವಕನ ಕೊಲೆ: ಹಣಕಾಸು ವೈಷಮ್ಯ ಶಂಕೆ

ಹೈದರಾಬಾದ್ ಪಾಲಿಕೆ ಫಲಿತಾಂಶ:ಬಿಜೆಪಿ ಭರ್ಜರಿ ಮುನ್ನಡೆ,ಟಿಆರ್ ಎಸ್ ಗೆ ಗದ್ದುಗೆ ತಪ್ಪಲಿದೆಯಾ?

ಹೈದರಾಬಾದ್ ಪಾಲಿಕೆ ಫಲಿತಾಂಶ:ಬಿಜೆಪಿ ಭರ್ಜರಿ ಮುನ್ನಡೆ,ಟಿಆರ್ ಎಸ್ ಗೆ ಗದ್ದುಗೆ ತಪ್ಪಲಿದೆಯಾ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅನಾಥ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಿ: ಡಾ.ಶಾಂತಾ

ಅನಾಥ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಿ: ಡಾ.ಶಾಂತಾ

ನಗರಸಭೆ ಅಧ್ಯಕ್ಷೆ, ಉಪಾಧ್ಯಕ್ಷರಿಂದ ಅಧಿಕಾರ ಸ್ವೀಕಾರ

ನಗರಸಭೆ ಅಧ್ಯಕ್ಷೆ, ಉಪಾಧ್ಯಕ್ಷರಿಂದ ಅಧಿಕಾರ ಸ್ವೀಕಾರ

ಎಚ್‌ಐವಿ ಸೋಂಕಿತರಿಗೆ ಸರ್ಕಾರಿ ಸೌಲಭ್ಯ ತಲುಪಿಸಿ

ಎಚ್‌ಐವಿ ಸೋಂಕಿತರಿಗೆ ಸರ್ಕಾರಿ ಸೌಲಭ್ಯ ತಲುಪಿಸಿ

ದೆಹಲಿ ರೈತರ ಹೋರಾಟಕ್ಕೆ ಸಂಘಟನೆಗಳ ಬೆಂಬಲ

ದೆಹಲಿ ರೈತರ ಹೋರಾಟಕ್ಕೆ ಸಂಘಟನೆಗಳ ಬೆಂಬಲ

ಕೋಲಾರ: 156 ಗ್ರಾಪಂಗಳ ಸ್ಪರ್ಧೆ

ಕೋಲಾರ: 156 ಗ್ರಾಪಂಗಳ ಸ್ಪರ್ಧೆ

MUST WATCH

udayavani youtube

ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾರಂಭವಾಗಿರುವ ದೇಶಿ ಉತ್ಪನ್ನಗಳ ಮಳಿಗೆ

udayavani youtube

ಉಗ್ರಪರ ಗೋಡೆ ಬರಹ ಪ್ರಕರಣದ ಆರೋಪಿಗಳ ಶೀಘ್ರ ಬಂಧನ: ಗೃಹ ಸಚಿವ ಬೊಮ್ಮಾಯಿ

udayavani youtube

Meal of Bakasur | ತುಳುನಾಡಿನ 14ಖಾದ್ಯಗಳನ್ನು ಉಣಬಡಿಸುವ ಬಕಾಸುರನ ಬಾಡೂಟ | FishCampus

udayavani youtube

ಸ್ವಂತ ಉದ್ಯಮ ಪ್ರಾರಂಭಿಸುವ ಮುನ್ನ ಇಲ್ಲೊಮ್ಮೆ ನೋಡಿ

udayavani youtube

ಸರಕಾರ ನಿಮ್ಮ ಜೊತೆಯಿದೆ: ಮೀನುಗಾರರ ಕುಟುಂಬಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಯ

ಹೊಸ ಸೇರ್ಪಡೆ

ರೈತರ ಮೇಲೆ ಕೇಂದ್ರದ ದೌರ್ಜನ್ಯಕ್ಕೆ ಖಂಡನೆ

ರೈತರ ಮೇಲೆ ಕೇಂದ್ರದ ದೌರ್ಜನ್ಯಕ್ಕೆ ಖಂಡನೆ

ಸೂಪರ್‌ ಮಾರ್ಕೆಟ್‌ಗಿಲ್ಲ ಸ್ಮಾರ್ಟ್‌ ಭಾಗ್ಯ

ಸೂಪರ್‌ ಮಾರ್ಕೆಟ್‌ಗಿಲ್ಲ ಸ್ಮಾರ್ಟ್‌ ಭಾಗ್ಯ

ಖಾಸಗಿ ಶಾಲಾ ಶಿಕ್ಷಕರಿಗೆ ಪ್ಯಾಕೇಜ್‌ ನೀಡಿ

ಖಾಸಗಿ ಶಾಲಾ ಶಿಕ್ಷಕರಿಗೆ ಪ್ಯಾಕೇಜ್‌ ನೀಡಿ

ರಾಜ್ಯದಲ್ಲಿ ನೈಟ್ ಕರ್ಫ್ಯೂ ಮಾಡಲ್ಲ, ಆದರೆ ಕಠಿಣ ಕ್ರಮಗಳ ಜಾರಿ: ಸಚಿವ ಸುಧಾಕರ್

ರಾಜ್ಯದಲ್ಲಿ ನೈಟ್ ಕರ್ಫ್ಯೂ ಮಾಡಲ್ಲ, ಆದರೆ ಕಠಿಣ ಕ್ರಮಗಳ ಜಾರಿ: ಸಚಿವ ಸುಧಾಕರ್

ನಫೆಡ್‌ಗೆ ಕೊಬ್ಬರಿ ಕೊಟ್ಟ ಬಳಿಕ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳ

ನಫೆಡ್‌ಗೆ ಕೊಬ್ಬರಿ ಕೊಟ್ಟ ಬಳಿಕ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.