Udayavni Special

ಜಲಮೂಲಗಳ ಸಂರಕ್ಷಣೆ ಮಾಡಿದ್ರೆ ಅಭಿವೃದ್ಧಿ

ಹೂಳೆತ್ತುವ ಕಾರ್ಯಕ್ಕೆ ಡಿವೈಎಫ್ಐ ಕಾರ್ಯದರ್ಶಿ ವಾಸುದೇವರೆಡ್ಡಿ ಚಾಲನೆ

Team Udayavani, May 25, 2019, 4:17 PM IST

KOLAR-TDY-4..

ಮುಳಬಾಗಿಲು ತಾಲೂಕಿನ ಮುದಿಗೆರೆ ಮ.ಗಡ್ಡೂರು ಗ್ರಾಪಂ ವ್ಯಾಪ್ತಿಯ ಚಿಕ್ಕಗೊ ಲ್ಲಹಳ್ಳಿಯ ಸಿಂಗಮಾನ್‌ ಕೆರೆಯಲ್ಲಿ ಹೂಳೆತ್ತುವ ಕಾರ್ಯಕ್ರಮಕ್ಕೆ ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ವಾಸುದೇವರೆಡ್ಡಿ ಚಾಲನೆ ನೀಡಿದರು.

ಮುಳಬಾಗಿಲು: ಸರ್ಕಾರ ತಾಲೂಕಿನ ಜಲಮೂಲಗಳ ಸಂರಕ್ಷಣೆ ಮಾಡಿದಾಗಲೇ ಜನಸಾಮಾನ್ಯರ ಅಭಿವೃದ್ಧಿ ಸಾಧ್ಯ ಎಂದು ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ವಾಸುದೇವರೆಡ್ಡಿ ತಿಳಿಸಿದರು.

ತಾಲೂಕಿನ ಮುದಿಗೆರೆ ಮ.ಗಡ್ಡೂರು ಗ್ರಾಪಂ ವ್ಯಾಪ್ತಿಯ ಚಿಕ್ಕಗೊಲ್ಲಹಳ್ಳಿಯ ಸಿಂಗಮಾನ್‌ ಕೆರೆಯಲ್ಲಿ ಹೂಳೆತ್ತುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿನ ಹಲವು ಗ್ರಾಮಗಳ ಕೆರೆಗಳಲ್ಲಿ ಹೂಳು ಎತ್ತುವ ಕಾಮಗಾರಿಗಳನ್ನು ನಡೆಸಲು ಯುವಜನರು, ಮಹಿಳೆಯರು ಹಾಗೂ ಕೂಲಿಕಾರರನ್ನು ಸಂಘಟಿಸಲಾಗುತ್ತಿದೆ. ಇದರಿಂದ ಗ್ರಾಮಗಳ ಜಲಮೂಲಗಳನ್ನು ಅಭಿವೃದ್ಧಿ ಪಡಿಸುವುದರ ಜೊತೆಗೆ ಜನರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಮೂಲಕ ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸಲಾಗುತ್ತಿದೆ ಎಂದು ವಿವರಿಸಿದರು.

ಸಮರ್ಪಕ ಜಾರಿ ಅಗತ್ಯ: ಅಲ್ಲದೇ, ನರೇಗಾ ಯೋಜನೆಯಡಿ ಕೆಲಸ ಮಾಡುವ ಕೂಲಿಗಾರರಿಗೆ ದಿನಕ್ಕೆ 259 ರೂ. ಹಣ ಸಿಗಲಿದೆ. ಇದರಿಂದ ಗ್ರಾಮಗಳಲ್ಲಿ ಜನರು ಉಳಿದುಕೊಳ್ಳಲು ಸಾಧ್ಯವಾಗುತ್ತದೆ. ಆದ್ದ ರಿಂದ ಗ್ರಾಪಂ ಅಧಿಕಾರಿಗಳು ಈ ಯೋಜನೆ ಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಮತ್ತು ಕೂಲಿ ಮಾಡಿದ ಕೂಲಿಕಾರರಿಗೆ ನಿಗದಿತ ಸಮಯದೊಳಗೆ ಹಣ ಪಾವತಿ ಮಾಡಬೇಕು ಎಂದು ವಿವರಿಸಿದರು.

ಸಂಕಷ್ಟ: ಜಿಲ್ಲೆಯಲ್ಲಿ ಐದಾರು ವರ್ಷಗಳಿಂದ ತೀವ್ರ ಬರಗಾಲ ಪೀಡಿತವಾಗಿದ್ದು, ಕುಡಿಯಲು ಮತ್ತು ಕೃಷಿಗೆ ನೀರಿನ ಅಭಾವ ಉಂಟಾಗಿದೆ, ಇದರಿಂದಾಗಿ ಜಿಲ್ಲೆಯಲ್ಲಿ ರೈತರು, ಗ್ರಾಮೀಣ ಕೂಲಿಕಾರರು, ನಿರುದ್ಯೋಗಿ ಯುವಕರು ಉದ್ಯೋಗವಿಲ್ಲದೆ ತೀವ್ರ ಆರ್ಥಿಕ ಸಂಷ್ಟಗಳನ್ನು ಎದುರಿಸುತ್ತಿದ್ದಾರೆ ಎಂದರು. ಸ್ಥಳೀಯ ಜಲ ಮೂಲಗಳಾದ ಕೆರೆ ಕಾಲುವೆಗಳ ಉಳಿಸಲು ಸಾಧ್ಯ, ಕೆರೆಗಳಲ್ಲಿ ಈ ರೀತಿ ಹೂಳೆತ್ತುವುದರಿಂದ ನೀರಿನ ಸಂಗ್ರಹ ಪ್ರಮಾಣ ಜಾಸ್ತಿಯಾಗಿ ಅಂತರ್ಜಲ ಮಟ್ಟ ವೃದ್ಧಿಯಾಗುತ್ತದೆ. ಅಲ್ಲದೇ, ವಿಷಕಾರಿಯಾದ ಫ್ಲೋರೈಡ್‌ಗಳಿಂದ ಕೂಡಿದ ರಾಸಾಯನಿಕ ನೀರನ್ನು ಕುಡಿಯುವುದು ತಪ್ಪುತ್ತದೆ ಮತ್ತು ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆಗಳ ಜಾರಿಗಾಗಿ ಹೋರಾಡುವುದರ ಜೊತೆಗೆ ಸ್ಥಳೀಯ ಜಲ ಮೂಲಗಳನ್ನು ಸಂರಕ್ಷಣೆ ಮಾಡಿಕೊಳ್ಳಲು ಸರ್ಕಾರ ಹಾಗೂ ಸಂಘ- ಸಂಸ್ಥೆಗಳು ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದರು. ನರೇಗಾ ಉಪ ನಿರ್ದೇಶಕ ಆನಂದ್‌, ಪಿಡಿಒ ವಿಜಯಮ್ಮ, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಶಿವಪ್ಪ, ಚಿಕ್ಕ ಗೊಲ್ಲಹಳ್ಳಿ ಗ್ರಾಮ ಡಿವೈಎಫ್ಐ ಘಟಕದ ಅಧ್ಯಕ್ಷ ಶ್ರೀನಿವಾಸ್‌, ಕಾರ್ಯದರ್ಶಿ ಹೇಮಂತ್‌, ಉಪಾ ಧ್ಯಕ್ಷ ಗಂಗಾಧರ್‌, ಉಪೇಂದ್ರ, ಜನವಾದಿ ಮಹಿಳಾ ಸಂಘದ ಪದ್ಮಾ, ಗಿರಿಜಾ ಇದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

Supreme-Court-Of-India-3-726

 ಹೈಕೋರ್ಟ್ ಗಳಲ್ಲಿ ಪ್ರಕರಣಗಳ ವಿಚಾರಣೆಗೆ ವಿಡಿಯೋ ಕಾನ್ಫರೆನ್ಸ್‌ ಬಳಸಲು ಸುಪ್ರೀಂ ನಿರ್ದೇಶನ

ಕೋವಿಡ್ ವೈರಸ್ ಮಹಾಮಾರಿಗೆ ಸೋಲುತ್ತಿದೆಯೇಕೆ ಅಮೆರಿಕ ?

ಕೋವಿಡ್ ವೈರಸ್ ಮಹಾಮಾರಿಗೆ ಸೋಲುತ್ತಿದೆಯೇಕೆ ಅಮೆರಿಕ ?

ಮೃತ ವೃದ್ಧನ ಪತ್ನಿ, ಸಹೋದರನಿಗೂ  ಸೋಂಕು ; ಬಾಗಲಕೋಟೆಯಲ್ಲಿ ಸೋಂಕಿತ ಸಂಖ್ಯೆ ಮೂರಕ್ಕೆ ಏರಿಕೆ

ಮೃತ ವೃದ್ಧನ ಪತ್ನಿ, ಸಹೋದರನಿಗೂ  ಸೋಂಕು ; ಬಾಗಲಕೋಟೆಯಲ್ಲಿ ಸೋಂಕಿತ ಸಂಖ್ಯೆ ಮೂರಕ್ಕೆ ಏರಿಕೆ

ಕೋವಿಡ್ 19 ವಿರುದ್ಧ ಹೋರಾಡಲು ಲಾಕ್ ಡೌನ್ ಮುಂದುವರಿಸಿ: ಪ್ರಧಾನಿಗೆ ಸಿಎಂ ಕೆಸಿಆರ್

ಕೋವಿಡ್ 19 ವಿರುದ್ಧ ಹೋರಾಡಲು ಲಾಕ್ ಡೌನ್ ಮುಂದುವರಿಸಿ: ಪ್ರಧಾನಿಗೆ ಸಿಎಂ ಕೆಸಿಆರ್

ವೃದ್ಧನ ಕುಟುಂಬಕ್ಕೆ ಕೋವಿಡ್ ಸೋಂಕಿಗೆ ಕಲಬುರಗಿಯ ನಂಟು ; ಡಿಸಿಎಂ ಕಾರಜೋಳ ಸಂಶಯ

ವೃದ್ಧನ ಕುಟುಂಬಕ್ಕೆ ಕೋವಿಡ್ ಸೋಂಕಿಗೆ ಕಲಬುರಗಿಯ ನಂಟು ; ಡಿಸಿಎಂ ಕಾರಜೋಳ ಸಂಶಯ

ಗುಡ್ಡದಲ್ಲಿ ಅವಿತು ಕುಳಿತಿದ್ದ ಶಂಕಿತ ತಬ್ಲಿಘಿಗಳು ಪರಾರಿ: ಸಿಕ್ಕಿದ ಬ್ಯಾಗ್ ಸುಟ್ಟ ಪೊಲೀಸರು

ಗುಡ್ಡದಲ್ಲಿ ಅವಿತು ಕುಳಿತಿದ್ದ ಶಂಕಿತ ತಬ್ಲಿಘಿಗಳು ಪರಾರಿ: ಸಿಕ್ಕಿದ ಬ್ಯಾಗ್ ಸುಟ್ಟ ಪೊಲೀಸರು

ಚೀನದಲ್ಲಿ ಮತ್ತೆ 30 ಕೋವಿಡ್ 19 ಸೋಂಕು ಕೇಸ್‌

ಚೀನದಲ್ಲಿ ಮತ್ತೆ 30 ಕೋವಿಡ್ 19 ಸೋಂಕು ಕೇಸ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Water is a problem in Channakallu village

ಚನ್ನಕಲ್ಲು ಗ್ರಾಮದಲ್ಲಿ ನೀರಿಗೆ ಸಮಸ್ಯೆ

ಲಾಠಿ ಹಿಡಿದ ಕೈಯಲ್ಲಿ ಹೊಲಿಗೆ ಯಂತ್ರ

ಲಾಠಿ ಹಿಡಿದ ಕೈಯಲ್ಲಿ ಹೊಲಿಗೆ ಯಂತ್ರ

ಕೋರ್ಟ್‌ನಿಂದ ಕೋವಿಡ್ 19 ಬಗ್ಗೆ  ಜಾಗೃತಿ ಅಭಿಯಾನ

ಕೋರ್ಟ್‌ನಿಂದ ಕೋವಿಡ್ 19 ಬಗ್ಗೆ ಜಾಗೃತಿ ಅಭಿಯಾನ

ರಾಮನವಮಿಗೂ ಕೋವಿಡ್ 19 ಭೀತಿ

ರಾಮನವಮಿಗೂ ಕೋವಿಡ್ 19 ಭೀತಿ

ಊಟವಿಲ್ಲದೇ ನರಳಿದ ಕಾರ್ಮಿಕರು

ಊಟವಿಲ್ಲದೇ ನರಳಿದ ಕಾರ್ಮಿಕರು

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

Supreme-Court-Of-India-3-726

 ಹೈಕೋರ್ಟ್ ಗಳಲ್ಲಿ ಪ್ರಕರಣಗಳ ವಿಚಾರಣೆಗೆ ವಿಡಿಯೋ ಕಾನ್ಫರೆನ್ಸ್‌ ಬಳಸಲು ಸುಪ್ರೀಂ ನಿರ್ದೇಶನ

14 ತಿಂಗಳ ಮಗುವಿಗೆ ಕೋವಿಡ್ 19 ಸೋಂಕು

14 ತಿಂಗಳ ಮಗುವಿಗೆ ಕೋವಿಡ್ 19 ಸೋಂಕು

ಕೋವಿಡ್ ಕಳವಳ: ಏಕತಾ ಪ್ರತಿಮೆಯನ್ನೇ ಹರಾಜಿಗಿಟ್ಟ OLX

ಕೋವಿಡ್ ಕಳವಳ: ಏಕತಾ ಪ್ರತಿಮೆಯನ್ನೇ ಹರಾಜಿಗಿಟ್ಟ OLX!