ಕ್ಷೇತ್ರದ ಎಲ್ಲ ರೀತಿಯ ಅಭಿವೃದ್ಧಿಗೆ ಬದ್ಧ: ನಾಗೇಶ್‌


Team Udayavani, Oct 1, 2022, 4:03 PM IST

ಕ್ಷೇತ್ರದ ಎಲ್ಲ ರೀತಿಯ ಅಭಿವೃದ್ಧಿಗೆ ಬದ್ಧ: ನಾಗೇಶ್‌

ಮುಳಬಾಗಿಲು: ಕ್ಷೇತ್ರದಲ್ಲಿ ಯಾರು ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳು ಮಾಡಿಲ್ಲ, ಆದ್ದರಿಂದ ತಮ್ಮ ಅವಧಿಯಲ್ಲಿ ಎಲ್ಲಾ ರೀತಿ ಯಲ್ಲೂ ಅಭಿವೃದ್ಧಿ ಮಾಡಲು ಮುಂದಾಗಿದ್ದೇನೆ ಎಂದು ಶಾಸಕ ಎಚ್‌.ನಾಗೇಶ್‌ ಹೇಳಿದರು.

ತಾಲೂಕಿನ ಆವಣಿ ಹೋಬಳಿ ಊ.ಮಿಟ್ಟೂರು ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ 4 ಕೋಟಿ ವೆಚ್ಚದಲ್ಲಿ ನಡೆದಿರುವ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.

ಪಿಚ್ಚಗುಂಟ್ಲಹಳ್ಳಿ ಗ್ರಾಮ ದಲ್ಲಿ 80 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ, ಊ.ಮಿಟ್ಟೂರು ಗ್ರಾಮದಲ್ಲಿ 1 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ, ಎಂ.ಕೊತ್ತೂರು ಗ್ರಾಮದಲ್ಲಿ 10 ಲಕ್ಷ ವೆಚ್ಚದ ಶುದ್ಧ ಕುಡಿವ ನೀರಿನ ಘಟಕ, ಬಟ್ಲಬಾವನಹಳ್ಳಿ ಗ್ರಾಮ ದಲ್ಲಿ 5 ಲಕ್ಷದಲ್ಲಿ ಹೈಮಾಸ್ಟ್‌ ದೀಪ, 10 ಲಕ್ಷ ವೆಚ್ಚದಲ್ಲಿ ಕುಡಿವ ನೀರಿನ ಘಟಕ, ಬಟ್ಲಬಾವನಹಳ್ಳಿಯಿಂದ ಮುಖ್ಯರಸ್ತೆ ವರೆಗೂ 1 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆಯನ್ನು ಮಾಡಿದರು. ಇಲ್ಲಿನ ಗ್ರಾಮಗಳು ಗಡಿ ಭಾಗಕ್ಕೆ ಹೊಂದಿಕೊಂಡಿರುವೆ, ಇಲ್ಲಿ ಯಾರು ಸಹ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳು ಮಾಡಿಲ್ಲ, ಆದ್ದರಿಂದ ನನ್ನ ಅವಧಿಯಲ್ಲಿ ಎಲ್ಲಾ ರೀತಿಯಲ್ಲೂ ಸಹ ಅಭಿವೃದ್ಧಿ ಮಾಡಲು ಮುಂದಾಗಿದ್ದೇನೆ, ಇದು ವರೆಗೂ ತಾಪಂ ಹಾಗೂ ಲೋಕೋಪಯೋಗಿ ಇಲಾಖೆಗಳು ರಸ್ತೆಗಳನ್ನು ಸರಿ ಪಡಿಸಲು ಏಕೆ ಮುಂದಾಗಿಲ್ಲ ಎಂದು ಗರಂ ಆದರು.

ತಾಲೂಕಿನಲ್ಲಿ ಇದುವರೆಗೂ ಯಾವುದೇ ರೀತಿ ಯ ವಿದ್ಯುತ್‌ ಸಮಸ್ಯೆ ಉಂಟಾಗದಂತೆ ನೋಡಿ ಕೊಳ್ಳಲಾಗಿದೆ. ಇತ್ತೀಚಿನ ದಿನಗಳಲ್ಲಿ ಉತ್ತಮ ಮಳೆಯಾಗಿ ಕೆರೆ-ಕುಂಟೆಗಳು ತುಂಬಿ ತುಳುಕುತ್ತಿವೆ. ಅದಲ್ಲದೆ ಕೆಸಿ ವ್ಯಾಲಿ ನೀರು ಸಹ ತಾಲೂಕಿನ ಕೆರೆಗಳಿಗೆ ಬರುತ್ತಿರುವುದರಿಂದ ತಾಲೂಕಿನಲ್ಲಿ ನೀರಿನ ಸಮಸ್ಯೆ ಇಲ್ಲ ಎಂದರು.

ಎಂ.ಕೊತ್ತೂರು ಗ್ರಾಮದ ಬಳಿ ಕೆರೆ ಕೋಡಿ ಹರಿಯುತ್ತಿದೆ, ಇದರಿಂದ ವಿದ್ಯಾರ್ಥಿಗಳು ಪ್ರತಿ ದಿನ ಶಾಲೆಗೆ ಹೋಗಬೇಕಾಗಿತ್ತು, ಇದನ್ನು ನನ್ನ ಅವಧಿಯಲ್ಲಿ ಸರಿ ಪಡಿಸಲಾಗುವುದು, ಇಲ್ಲಿ ಮೋರಿ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.

ನರೇಗಾ ಯೋಜನೆ ಅಡಿಯಲ್ಲಿ ಜೆಸಿಬಿ ಮೂಲಕ ಕೆಲಸ ನಡೆಯುತ್ತಿದೆ ಎಂಬ ಆರೋಪಗಳು ಕಡಿಮೆಯಾಗಲಿ ದೂರು ಗಳು ಬಂದರೆ ಅಂತಹ ಕಾಮಗಾರಿಗಳಿಗೆ ಯಾವುದೇ ರೀತಿಯ ಬಿಲ್ಲುಗಳು ಮಾಡದಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗುವುದು ಎಂದರು.

ಕೆಲವರು ನಾನೇ ಎಂದವನು ಗ್ರಾಪಂನಲ್ಲಿ ಗೆದ್ದಿಲ್ಲ, ನಾನೇ ದೊಡ್ಡವನು ಎನ್ನವರು ಮೊದಲು ಗ್ರಾಪಂ ಸದಸ್ಯನಾಗಲಿ ಎಂದರು.

ಒಬ್ಬರು ಮತ್ತೂಬ್ಬರಿಂದ ಮತ್ತೂಬ್ಬರಿಗೆ ಚಾಡಿ ಹೇಳುವ ಅವರೊಂದಿಗೆ ವಿವಿಧ ರೀತಿಯ ಹೇಳಿಕೆಗಳನ್ನು ಪದ್ಧತಿಗಳು ಬಿಡಬೇಕು, ಮೊದಲು ಗಾಪಂ ನಲ್ಲಿ ಗೆದ್ದು ಬರಲಿ, ಅದು ಬಿಟ್ಟು ತಾಲೂಕು ಮಟ್ಟದಲ್ಲಿ ರಾಜಕೀಯಕ್ಕೆ ಬರುತ್ತಾರೆ ಯಾರೋ ಮಾತು ಕೇಳಿ ಮಾತನಾಡುವುದನ್ನು ಮೊದಲಿಗೆ ಕೈ ಬಿಡಬೇಕು ಅವರ ಸ್ವಂತ ಬುದ್ಧಿಯಿಂದ ಮಾತನಾಡುವುದನ್ನು ಕಲಿಯಬೇಕು ಎಂದರು.

ತಾಪಂ ಇಒ ಸರ್ವೇಶ್‌, ಲೋಕೋಪಯೋಗಿ ಎಇಇ ಶೇಷಾದ್ರಿ, ಗಣೇಶ್‌, ಎಂಜಿನಿಯರ್‌ ರವಿ, ಮುಖಂಡ ರಾಜೇಂದ್ರ ಪ್ರಸಾದ್‌, ಚಲಪತಿ, ಆವಣಿ ವಿಜಯಕುಮಾರ್‌, ಗೊಲ್ಲಹಳ್ಳಿ ಜಗದೀಶ್‌, ಪೆದ್ದಪ್ಪಯ್ಯ, ಬೈರಪ್ಪ, ಗಂಜಿಗುಂಟೆ ಈಶ್ವರ್‌, ಅಂಬ್ಲಿಕಲ್‌ ವೆಂಕಟಾ ಚಲಪತಿ, ಹೊಸಕೆರೆ ರಘು ಇತರರಿದ್ದರು.

ಟಾಪ್ ನ್ಯೂಸ್

ವಿಜಯಪುರ: ಅನಾಮಧೇಯನಿಂದ ನಗರದ ಮತದಾರರ ಮಾಹಿತಿ ಸಂಗ್ರಹ

ವಿಜಯಪುರ: ಅನಾಮಧೇಯನಿಂದ ನಗರದ ಮತದಾರರ ಮಾಹಿತಿ ಸಂಗ್ರಹ

1–adasdasd

ಕೇಂದ್ರ ಜಲಶಕ್ತಿ ಸಚಿವ ಶೇಖಾವತ್ ರನ್ನು ಭೇಟಿಯಾದ ಸಿಎಂ ಬೊಮ್ಮಾಯಿ

ಮುದ್ದೇಬಿಹಾಳ: ಬಾವಿಯಲ್ಲಿ ಯುವತಿಯ ಶವ ಪತ್ತೆ; ಕೊಲೆ ಆರೋಪ

ಮುದ್ದೇಬಿಹಾಳ: ಬಾವಿಯಲ್ಲಿ ಯುವತಿಯ ಶವ ಪತ್ತೆ; ಕೊಲೆ ಆರೋಪ

1-fdfadad

ಅಂಜನಾದ್ರಿ: ಸ್ವಪ್ರೇರಣೆಯಿಂದ ಅನ್ಯಕೋಮಿನ ವ್ಯಾಪಾರಿಗಳ ಅಂಗಡಿಗಳು ಬಂದ್

ಚೀನ ಮಾಜಿ ಅಧ್ಯಕ್ಷ ಜಿಯಾಂಗ್‌ ಜೆಮಿನ್‌ ನಿಧನ

ಚೀನ ಮಾಜಿ ಅಧ್ಯಕ್ಷ ಜಿಯಾಂಗ್‌ ಜೆಮಿನ್‌ ನಿಧನ

1-sadadasd

ಅಫ್ಘಾನ್ ಧಾರ್ಮಿಕ ಕೇಂದ್ರಕ್ಕೆ ಉಗ್ರ ದಾಳಿ : 10 ವಿದ್ಯಾರ್ಥಿಗಳು ಬಲಿ

tdy-20

ಮದುವೆಯಾದ ಕೆಲವೇ ಗಂಟೆಗಳಲ್ಲಿ ಉಸಿರು ನಿಲ್ಲಿಸಿದ ಖ್ಯಾತ ಗಾಯಕ: ಸಾವಿರಾರು ಮಂದಿ ಕಂಬನಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

TDY-16

ಅಕ್ರಮ ಮತದಾನ ತಡೆಗೆ ಆಧಾರ್‌ ಲಿಂಕ್‌

ಚರ್ಮಗಂಟು ರೋಗಕ್ಕೆ 22 ಜಾನುವಾರು ಬಲಿ

ಚರ್ಮಗಂಟು ರೋಗಕ್ಕೆ 22 ಜಾನುವಾರು ಬಲಿ

ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ

ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ

ಜೆಡಿಎಸ್‌ ಬಣ ರಾಜಕೀಯ ಬಿಕ್ಕಟ್ಟು ಉಲ್ಬಣ; 27ಕ್ಕೆ ಭಿನ್ನಮತಿಯರ ಸಭೆ

ಜೆಡಿಎಸ್‌ ಬಣ ರಾಜಕೀಯ ಬಿಕ್ಕಟ್ಟು ಉಲ್ಬಣ; 27ಕ್ಕೆ ಭಿನ್ನಮತಿಯರ ಸಭೆ

14

ರೈತರ ಸಾಲ ಮನ್ನಾ ಜನಕ ಕುಮಾರಸ್ವಾಮಿ ಅಲ್ಲ: ಎಂಎಲ್ಸಿ ಅನಿಲ್‌ಕುಮಾರ್

MUST WATCH

udayavani youtube

Oxygen Cylinder ಇಲ್ಲದಿದ್ದರೂ ಉಪಯೋಗಕ್ಕೆ ಬರುತ್ತದೆ ಈ machine ! | Girija Surgicals

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

udayavani youtube

ಅಸ್ತಮಾ ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆಯುವುದು ಹೇಗೆ ? |Girija Surgicals

udayavani youtube

ಕುಕ್ಕೆ ಸುಬ್ರಹ್ಮಣ್ಯಕ್ಕೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ

udayavani youtube

ಶಾರೀಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ಪೊಲೀಸ್ ಆಯುಕ್ತರು ಹೇಳಿದ್ದೇನು..

ಹೊಸ ಸೇರ್ಪಡೆ

ವಿಜಯಪುರ: ಅನಾಮಧೇಯನಿಂದ ನಗರದ ಮತದಾರರ ಮಾಹಿತಿ ಸಂಗ್ರಹ

ವಿಜಯಪುರ: ಅನಾಮಧೇಯನಿಂದ ನಗರದ ಮತದಾರರ ಮಾಹಿತಿ ಸಂಗ್ರಹ

1–adasdasd

ಕೇಂದ್ರ ಜಲಶಕ್ತಿ ಸಚಿವ ಶೇಖಾವತ್ ರನ್ನು ಭೇಟಿಯಾದ ಸಿಎಂ ಬೊಮ್ಮಾಯಿ

1-aweqwewq

ಶಾಲೆಯ ನೀರಿನ ಟ್ಯಾಂಕ್ ನಲ್ಲಿ ನಾಗರಹಾವು; ಆತಂಕಗೊಂಡ ವಿದ್ಯಾರ್ಥಿಗಳು

ಮುದ್ದೇಬಿಹಾಳ: ಬಾವಿಯಲ್ಲಿ ಯುವತಿಯ ಶವ ಪತ್ತೆ; ಕೊಲೆ ಆರೋಪ

ಮುದ್ದೇಬಿಹಾಳ: ಬಾವಿಯಲ್ಲಿ ಯುವತಿಯ ಶವ ಪತ್ತೆ; ಕೊಲೆ ಆರೋಪ

1-fdfadad

ಅಂಜನಾದ್ರಿ: ಸ್ವಪ್ರೇರಣೆಯಿಂದ ಅನ್ಯಕೋಮಿನ ವ್ಯಾಪಾರಿಗಳ ಅಂಗಡಿಗಳು ಬಂದ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.