Udayavni Special

ಅಪಾಯ ಸಂಭವಿಸುವ ಮುನ್ನವೇ ಕಾಂಪೌಂಡ್‌ ಸರಿಪಡಿಸಿ

ಶಿಥಿಲಗೊಂಡಿರುವ ಪಶು ವೈದ್ಯ ಆಸ್ಪತ್ರೆ ಕಾಂಪೌಂಡು

Team Udayavani, Aug 3, 2019, 4:26 PM IST

kolar-tdy-4

ಮುಳಬಾಗಿಲು ನಗರದ ಪಶು ವೈದ್ಯ ಆಸ್ಪತ್ರೆ ಕಾಂಪೌಂಡ್‌ ಬಿರುಕು ಬಿಟ್ಟಿರುವುದು.

ಮುಳಬಾಗಿಲು: ನಗರದಲ್ಲಿರುವ ಪಶು ವೈದ್ಯ ಆಸ್ಪತ್ರೆ ಮತ್ತು ಸಹಾಯಕ ನಿರ್ದೇಶಕರ ಕಚೇರಿಗೆ ಹಾಕಿರುವ ಕಾಂಪೌಂಡ್‌ ಸಂಪೂರ್ಣ ಶಿಥಿಲಗೊಂಡಿದ್ದು, ಅವಘಡ ಸಂಭವಿಸುವ ಮುನ್ನಾ ತೆರವು ಮಾಡಿ ಹೊಸದಾಗಿ ನಿರ್ಮಿಸಬೇಕಿದೆ.

ನಗರದಲ್ಲಿ ಆಲಂಗೂರು ಪಿ.ಚಂಗೇಗೌಡರು ದಾನ ಮಾಡಿದ್ದ ಸ್ಥಳದಲ್ಲಿ 1940ರಲ್ಲಿ ಪಶು ವೈದ್ಯ ಆಸ್ಪತ್ರೆ ನಿರ್ಮಿಸಲಾಗಿತ್ತು. ಸದ್ಯ ಸಹಾಯಕ ನಿರ್ದೇಶಕರು, ನಾಲ್ವರು ಪಶು ವೈದ್ಯರು ಹಾಗೂ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ತಾಲೂಕಿನ ರೈತರು, ನಗರದಲ್ಲಿ ಸಾಕಿರುವ ಪ್ರಾಣಿಗಳಿಗೆ ಚಿಕಿತ್ಸೆ ಕೊಡಿಸಲು ಸಾಕಷ್ಟು ಅನುಕೂಲವಾಗಿದೆ. ಹಳೇಯದಾದ ಕಟ್ಟಡಕ್ಕೆ ಹಾಕಿದ್ದ ನಾಮಫ‌ಲಕ ಕಿತ್ತುಹೋಗಿತ್ತು. 5 ವರ್ಷಗಳ ಹಿಂದೆ ಅಂದಿನ ಸಹಾಯಕ ನಿರ್ದೇಶಕ ಡಾ.ರಮಾನಂದ್‌ ಹೊಸದಾಗಿ ಹಾಕಿಸಿದ್ದರು. ಆದರೆ, ಶಿಥಿಲಗೊಂಡಿರುವ ಗೋಡೆ ಯಾರೂ ಸರಿಪಡಿಸುವ ಗೋಜಿಗೆ ಹೋಗಿಲ್ಲ.

ಕಲ್ಲು ತೆಗೆದರೆ ಬೀಳುತ್ತದೆ: ಕಚೇರಿ ರಕ್ಷಣೆ ದೃಷ್ಟಿಯಿಂದ ಹಾಕಿದ್ದ ಕಾಂಪೌಂಡ್‌ ಗೋಡೆ ಹಲವು ವರ್ಷಗಳಿಂದ ಬಿರುಕುಬಿಟ್ಟು, ಬಿದ್ದು ಹೋಗುವಂತಿದೆ. ಅಧಿಕಾರಿಗಳು ಅದನ್ನು ಸರಿಪಡಿಸುವ ಬದಲು, ಕಲ್ಲು ಚಪ್ಪಡಿ ಇಟ್ಟು ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ. ಅನಾರೋಗ್ಯ, ವಿಮೆ ಹೀಗೆ ಹಲವು ಕಾರಣಗಳಿಗಾಗಿ ಜಾನುವಾರುಗಳನ್ನು ಇಲ್ಲಿಗೆ ರೈತರು ಕರೆದುಕೊಂಡು ಬರುತ್ತಾರೆ. ಒಂದು ವೇಳೆ ಕಾಂಪೌಂಡು ಪಕ್ಕದಲ್ಲಿ ನಡೆದು ಹೋಗಬೇಕಾದ್ರೆ, ಒರಗಿನಿಂತಾದ ಗೋಡೆ ಕುಸಿದರೆ ಅಪಾಯ ಕಟ್ಟಿಟ್ಟ ಬುತ್ತಿ.

ಗೇಟ್ ಅಳವಡಿಸಿರುವ ಜಾಗದಲ್ಲೇ ಗೋಡೆ ಸಂಪೂರ್ಣ ಶಿಥಿಲಗೊಂಡಿದೆ. ಕಲ್ಲು ಚಪ್ಪಡಿ ತೆಗೆದರೆ ಗೋಡೆ ಕೆಳಗೆ ಬೀಳುತ್ತದೆ. ಇದನ್ನು ನೋಡಿಕೊಂಡು ಓಡಾಡುವ ಪಶು ವೈದ್ಯರಾಗಲಿ, ಅಧಿಕಾರಿಗಳಾಗಲಿ ಗಮನ ಹರಿಸದಿರುವುದು ವಿಪರ್ಯಾಸ.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಬೆಂಗಳೂರಿನಲ್ಲಿ ವರುಣನ ಅಬ್ಬರ: ಸಂತೃಸ್ಥ ಕುಟುಂಬಗಳಿಗೆ ಪರಿಹಾರ ಘೋಷಿಸಿದ ಸಿಎಂ ಬಿಎಸ್ ವೈ

ಬೆಂಗಳೂರಿನಲ್ಲಿ ವರುಣನ ಅಬ್ಬರ: ಸಂತೃಸ್ಥ ಕುಟುಂಬಗಳಿಗೆ ಪರಿಹಾರ ಘೋಷಿಸಿದ ಸಿಎಂ ಬಿಎಸ್ ವೈ

ನಟ ಧನ್ವೀರ್ ರಾತ್ರಿ ಸಫಾರಿ ಮಾಡಿಲ್ಲ: ಬಂಡೀಪುರ ವಲಯ ಅರಣ್ಯಾಧಿಕಾರಿ ಸ್ಪಷ್ಟನೆ

ನಟ ಧನ್ವೀರ್ ರಾತ್ರಿ ಸಫಾರಿ ಮಾಡಿಲ್ಲ: ಬಂಡೀಪುರ ವಲಯ ಅರಣ್ಯಾಧಿಕಾರಿ ಸ್ಪಷ್ಟನೆ

ಪರಿಷತ್ ಚುನಾವಣಾ ಅಭ್ಯರ್ಥಿ, ಶಾಸಕಿ ಪೂರ್ಣಿಮಾ ಪತಿ ಶ್ರೀನಿವಾಸ್ ಬಿಜೆಪಿಯಿಂದ ಉಚ್ಛಾಟನೆ

ಪರಿಷತ್ ಚುನಾವಣಾ ಅಭ್ಯರ್ಥಿ, ಶಾಸಕಿ ಪೂರ್ಣಿಮಾ ಪತಿ ಶ್ರೀನಿವಾಸ್ ಬಿಜೆಪಿಯಿಂದ ಉಚ್ಛಾಟನೆ

ಧರ್ಮಸ್ಥಳದಲ್ಲಿ ಹೆಗ್ಗಡೆಯವರ ಪಟ್ಟಾಭಿಷೇಕದ 53ನೇ ವರ್ಷದ ವರ್ಧಂತ್ಯುತ್ಸವ ಸರಳ‌ ಸಮಾರಂಭ

ಧರ್ಮಸ್ಥಳದಲ್ಲಿ ಹೆಗ್ಗಡೆಯವರ ಪಟ್ಟಾಭಿಷೇಕದ 53ನೇ ವರ್ಷದ ವರ್ಧಂತ್ಯುತ್ಸವ ಸರಳ‌ ಸಮಾರಂಭ

ಬಿಹಾರ ಚುನಾವಣೆ2020: ಹತ್ತು ಲಕ್ಷ ಉದ್ಯೋಗ,ನಿರುದ್ಯೋಗಿಗಳಿಗೆ 1,500 ಭತ್ಯೆ: RJD ಪ್ರಣಾಳಿಕೆ

ಬಿಹಾರ ಚುನಾವಣೆ2020: ಹತ್ತು ಲಕ್ಷ ಉದ್ಯೋಗ,ನಿರುದ್ಯೋಗಿಗಳಿಗೆ 1,500 ಭತ್ಯೆ: RJD ಪ್ರಣಾಳಿಕೆ

ಮಹಾನಗರದಲ್ಲಿ ಅಬ್ಬರಿಸಿದ ಮಳೆರಾಯ

ಮಹಾನಗರದಲ್ಲಿ ಅಬ್ಬರಿಸಿದ ಮಳೆರಾಯ

ಕಾಡಾನೆ ದಾಳಿ: ಸಕ್ರೆಬೈಲು ಬಿಡಾರದ ‘ರಂಗ’ ಆನೆ ಸಾವು

ಕಾಡಾನೆ ದಾಳಿ: ಸಕ್ರೆಬೈಲು ಬಿಡಾರದ ‘ರಂಗ’ ಆನೆ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kolar-tdy-1

ಮುಳಬಾಗಿಲು ತಾಲೂಕಲ್ಲಿ ವ್ಯಾಪಕ ಭ್ರಷ್ಟಾಚಾರ

KOLAR-TDY-2

ಮರು ಮೌಲ್ಯ ಮಾಪನ: 135 ಶಾಲೆಗೆ ಶೇ.100 ಫ‌ಲಿತಾಂಶ

KOLAR-TDY-1

ಕೋವಿಡ್ ಸಾವಿನ ಪ್ರಮಾಣ ತಗ್ಗಿಸಲು ಪರೀಕ್ಷೆ ಹೆಚ್ಚಿಸಿ

kolar-tdy-2

ಸಬ್ಸಿಡಿ ಪಡೆದು ಕಟ್ಟಿದ ಪಾಲಿಹೌಸ್‌ ಪತ್ತೆಗೆ ಒತ್ತಾಯ

kolar-tdy-1

ಅಮಾನತು ಆದೇಶಕ್ಕೆ ಇಲ್ಲಿ ಬೆಲೆನೇ ಇಲ್ಲ!

MUST WATCH

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!

udayavani youtube

The Sharada statue embodied in the artist’s finesse | Navaratri Special

udayavani youtube

ಮಲ್ಪೆ: ಬಲೆಗೆ ಬಿತ್ತು ಭಾರಿ ಗಾತ್ರದ ಎರಡು ಕೊಂಬು ತೊರಕೆ ಮೀನು

udayavani youtube

ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾರಂಭವಾಗಿರುವ ದೇಶಿ ಉತ್ಪನ್ನಗಳ ಮಳಿಗೆ

udayavani youtube

ಸ್ವಾಮಿತ್ವ: ಹೊಸ ಯೋಜನೆಯಿಂದ ನಮಗೆ ಏನು ಲಾಭ ?ಹೊಸ ಸೇರ್ಪಡೆ

hv-tdy-1

ಪ್ರೊ| ಸಂಕನೂರಗೆ ಮತ ನೀಡಿ ಗೆಲ್ಲಿಸಿ

Gadaga-tdy-1

ನೆರೆ ಪರಿಹಾರಕ್ಕೆ ಸಚಿವ ಪಾಟೀಲ ಯತ್ನ

ಕಿತ್ತೂರು ಉತ್ಸವ ಸರಳ ಆಚರಣೆ

ಕಿತ್ತೂರು ಉತ್ಸವ ಸರಳ ಆಚರಣೆ

ಬೆಂಗಳೂರಿನಲ್ಲಿ ವರುಣನ ಅಬ್ಬರ: ಸಂತೃಸ್ಥ ಕುಟುಂಬಗಳಿಗೆ ಪರಿಹಾರ ಘೋಷಿಸಿದ ಸಿಎಂ ಬಿಎಸ್ ವೈ

ಬೆಂಗಳೂರಿನಲ್ಲಿ ವರುಣನ ಅಬ್ಬರ: ಸಂತೃಸ್ಥ ಕುಟುಂಬಗಳಿಗೆ ಪರಿಹಾರ ಘೋಷಿಸಿದ ಸಿಎಂ ಬಿಎಸ್ ವೈ

bk-tdy-1

ಬೀಳಗಿ ಪಪಂಗೆ ಸಿದ್ಲಿಂಗೇಶ ಅಧ್ಯಕ್ಷ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.